Skip to main content

Posts

Showing posts with the label Kannada

ಅರಳಿದ ಹೂ

 ಅಂಗಳದಿ ಅರಳಿದ ಹೂ ಚಂದ ಗುಯಿಗುಟ್ಟುತ್ತಾ  ಅತ್ತಣಿಂದ ಇತ್ತ ಹಾರುತ್ತ  ದುಂಬಿಯು ಬಂದಿದೆ ಅದರತ್ತ  ಅಂಗಳದಿ ಅರಳಿದ ಹೂ ಚಂದ  ಅಂದವ ಸವಿಯುತ್ತಾ  ಬಿಂಕದಿಂದ ಬಂದಿಹಳು ಹಾಡುತ  ಹೂವಾಡಗಿತ್ತಿ ಅದರತ್ತ ಅಂಗಳದಿ ಅರಳಿದ ಹೂ ಚಂದ ಸುವಾಸನೆ ಬೀರುತ  ಗಾಳಿಯಲ್ಲಿ ನಲಿಯುತ  ಇರುವೆ ನೀ ಎಲ್ಲರ ಮನ ಸೆಳೆಯುತ  

ರಂಗೋಲಿ!

ತಂಪಾದ ಮುಂಜಾನೆ ಮಂಜು ಬೀಳೋ ಸದ್ದಿನಲಿ ಕೇಳಿಸಿದೆ ನನ್ನಯ ಹೆಸರು ನಿನ್ನದೇ ದನಿಯಲಿ ಪಿಸುಗುಡುತ ಮಾತೊಂದ ಕಿವಿಯ ಮೇಲೆ ಇಟ್ಟ ಹಾಗೆ ಇಬ್ಬನಿಯ ಒಂದು ಹನಿ ಎಲೆಯ ಮಡಿಲ ಸೇರಿದೆ ಮಲ್ಲಿಗೆಯ ಗಿಡದಲ್ಲಿ ಬಿಳಿ ಹಾಸಿಗೆ ಚೆಲ್ಲಿದ ಹಾಗೆ ಮನವು ಶುಬ್ರ ಬಿಳಿಯ ಹಾಳೆಯಾಗಿದೆ ರಂಗು ರಂಗಿನ ರಂಗೋಲಿ ದಿನಕರನಿಗೆ ಉದಯ ಹಾಡಿರಲು ಹಕ್ಕಿಯ ಗುನುಗಿನ ಚಿಲಿಪಿಲಿಯಲಿ ಹೊಸ ರಾಗ ಹುಟ್ಟಿದೆ ಭತ್ತದ ತೆನೆ ಮೇಲೆ ಚಿನ್ನದ ಕಿರಣ ನಲಿಯುತಿರಲು ನನ್ನ ಕಣ್ಣು ತೆರೆದಾಗ ಸಂತೋಷದ ಸಾಗರ ಹರಿದಿದೆ - ಅಶ್ವಿನಿ

ಕ್ಷಮೆ ಇರಲಿ! ಸವಿ ಇರಲಿ !

ಅದೆಲ್ಲೋ ಮುಳುಗಿದ ಹಾಗೆ ನೆನಪು  ಸಂತಸ ಸಂಭ್ರಮ ಸಡಗರ  ಇದರ ನಡುವೆ ನಿನ್ನ ಮರೆತೆ  ಕ್ಷಮೆ ಇರಲಿ  ಈಜಿ ಹೊರಬಂದ ಹರುಷ  ಹೊಸ ಲೋಕ ಹೊಸ ಪ್ರಪಂಚ  ಖುಷಿಯಲಿ ಸಾಗುವೆ ಈ ಪಯಣದಿ  ಸವಿ ಇರಲಿ 

ಟಾಂಗ/ಜಟಕಾ ಗಾಡಿ!

ಜಟಕಾ ಗಾಡಿಗಳು ಇನ್ನೂ ನಮ್ಮ ರಸ್ತೆಗಳಲ್ಲಿ ಓಡಾಡ್ತಾ ಇದ್ದಾವೆ ಅಂದ್ರೆ ಅದು ಒಂದು ಆಶ್ಚರ್ಯದ ಸಂಗತಿ ಅಂತಾನೆ ಹೇಳಬಹುದು . "ಚಕ್ರ/ಗಾಲಿ" ಕಂಡು ಹಿಡಿದ ನಂತರ, ಮನುಷ್ಯ ಹಿಂತಿರುಗಿ ನೋಡಿಲ್ಲ. ಗಾಡಿಗಳ ಅನ್ವೇಷಣೆ/ಆವಿಷ್ಕಾರಗಳು ದಿನೇ ದಿನೇ ಹೆಚ್ಚುತ್ತಲೇ ಇದೆ. ಈಗಂತೂ ಮಂಗಳ ಗ್ರಹಕ್ಕೂ ಗಾಡಿ ಕಳುಹಿಸಿ ಬಿಟ್ಟಿದ್ದಾರೆ. ನನಗೆ ಟಾಂಗ/ಜಟಕಾ ಗಾಡಿಯಲ್ಲಿ ಹೋದ ಅನುಭವ ಇಲ್ವೇ ಇಲ್ಲ. ಒಮ್ಮೆ ಹೋಗಬೇಕೆಂಬ ಆಸೆಯಂತೂ ಇದೆ.ಅದ್ಯಾವಾಗ ಕುಲಾಯಿಸತ್ತೋ ನೋಡೋಣ. ಈಗಿನ ಇಂಧನಗಳಿಂದ ಚಾಲಿತ ವಾಹನಗಳ ಸವಾರಿಗಿಂತ ಟುಕ್ಕುಟುಕ್ಕು ಅಂತ ನಿಧಾನವಾಗಿ ಸಾಗೋ ಜಟಕಾ ಬಂಡಿಯಲ್ಲಿ ಹೋಗೋ ಮಜಾ ಸವಿಯಲು ಕಾತುರದಿಂದ ಕಾಯುತಿರುವೆ .ಸಧ್ಯಕ್ಕೆ ಈ ಆಸೆ ಯಾಕೆ ಬಂತು ಅಂದ್ರೆ, ಇವತ್ತು ನಾನು ಆಫೀಸಿಗೆ ಬರೋವಾಗ ರಸ್ತೆಯಲ್ಲಿ ನಮ್ಮ ಟಾಟಾ ಇ೦ಡಿಕಾ ಗಾಡಿಯ ಮುಂದೆ ಸಾಗುತಿದ್ದ ಜಟಕಾ ಬಂಡಿಯೇ ಕಾರಣ. ಅಲ್ಲೇ ನನ್ನ ಸೆಲ್ ಫೋನ್ ನಲ್ಲಿ ಕ್ಲಿಕ್ ಮಾಡಿದ ಫೋಟೋ ಇಲ್ಲಿ ಇದೆ. ನಿಮಗೆ ಟಾಂಗಾದಲ್ಲಿ ಸವಾರಿ ಮಾಡಿದ ಅನುಭವ ಇದ್ರೆ ಹಂಚಿಕೊಳ್ಳಿ.   Gist: I want to know how it feels to get a ride in a "Tanga". I have not had an opportunity to sit in one of them all these years. I'd want to do this sometime in the future. That picture was clicked today on the way to my office. Yeah we s...

ಗೆಳತಿ!

ಅದೊಂದು ದಿನ, ಹೀಗೆ ಕುಳಿತು ಮನಸಿಗೆ ಬಂದಂತೆ ನಾಲ್ಕಾರು ಸಾಲುಗಳನ್ನು ಗೀಚಿದ್ದೆ. ಇಂದು ಅದು ನನ್ನ ಕಣ್ಣಿಗೆ ಬಿತ್ತು . ಕಾರಣವೇನೆ ಇರಲಿ   ನೀ ನನ್ನಿಂದ ದೂರವಾಗದಿರು ಗೆಳತಿ ಬಿರುಗಾಳಿಯೇ ಬರಲಿ ನೀ ನನ್ನ ಕೈಯ ಹಿಡಿದು ನಿಲ್ಲು ಗೆಳತಿ  - ಅಶ್ವಿನಿ

ಒಂದು ಜೋಡಿ - ಆಸೆಯೋ ನಿರಾಸೆಯೋ ! ಅ೦ತಿಮ ಭಾಗ ೮

ಈ ಧಾರಾವಾಹಿಯ ಎಲ್ಲಾ ಕಂತುಗಳು ಕೇವಲ ಕಾಲ್ಪನಿಕ.ಇದರಲ್ಲಿ ಬರುವ ಪಾತ್ರಗಳು ಸನ್ನಿವೇಶಗಳು ಕೇವಲ ಕಾಲ್ಪನಿಕ. ಪ್ರಭವ್ ಸ್ವಾತಿ ಮತ್ತು ಕ್ರಿಶನ್ ರನ್ನು ಪ್ರಿಯ ಇದ್ದ ವಾರ್ಡಿಗೆ ಕರೆದುಕೊಂಡು ಬಂದನು . ಅಲ್ಲಿ ಪ್ರಿಯಾಳಿಗೆ ಆಕ್ಸಿಜೆನ್ ಮಾಸ್ಕ್ ಹಾಕಿದ್ದರು . ಅವಳು ಜೋರಾಗಿ ಉಸಿರಾಡುತಿದ್ದಳು. ಅವಳ ತಂದೆ ಪಕ್ಕದಲ್ಲೇ ನಿಂತಿದ್ದರು .ಡಾಕ್ಟರ್ ಹಾರ್ಟ್ ಬೀಟ್ ಚೆಕ್ ಮಾಡ್ತಾ ಇದ್ರು. ಕ್ರಿಶನ್ ಗೆ ಪ್ರಿಯಾಳನ್ನು ಈ ಸ್ಥಿತಿಯಲ್ಲಿ ನೋಡಿ ಕಣ್ಣಲ್ಲಿ ನೀರು ತುಂಬಿತು. ಸದಾ ನಗುಮುಖದಿಂದ ಹಾರಡಿಕೊಂಡಿದ್ದವಳು ಇವತ್ತು ಈ ರೀತಿಯಲ್ಲಿ ಶಾಂತವಾಗಿ ಹಾಸಿಗೆಯಲ್ಲಿ ನೋಡಲು ಕ್ರಿಶನ್ ನ ಹೃದಯ ತುಂಬಿ ಬಂತು. ಸ್ವಾತಿ ಅವನ ಕೈ ಹಿಡಿದು ಸಮಾಧಾನಿಸಿದಳು. ಪ್ರಿಯಾಳ ಹತ್ತಿರ ಹೋಗಿ ಕ್ರಿಶನ್ ಒಮ್ಮೆ ಅವಳೊಡನೆ ಮಾತಾಡಬೇಕೆಂದು ಬಯಸಿದ. ಕ್ರಿಶನ್: "ಪ್ರಭವ್ ಏನಾಯಿತು ಪ್ರಿಯಾಳಿಗೆ?" ಎಂದು ಅಳುತ್ತಲೇ ಕೇಳಿದ ಪ್ರಭವ್: "ಕ್ರಿಶನ್ ಸಾರೀ, ನಂಗೆ ವಿಷ್ಯ ಮೊದಲಿಂದಲೂ ತಿಳಿದಿತ್ತು. ಆದ್ರೆ ಪ್ರಿಯಾ ನನ್ನ ಹತ್ರ ಮಾತು ತೊಗೊಂಡಿದ್ಲು, ನಿನಗೆ ಏನೂ ಹೇಳಬಾರದು ಅಂತ ..." ಕ್ರಿಶನ್ : "ಏನು ಅಂತ ಈಗಲಾದರು ಹೇಳೋ . ಪ್ಲೀಸ್ ..." ಪ್ರಭವ್ : "ಏಕ್ಷಾಮ್ಸಿನ ಕಡೇ ಪೇಪರ್ ಹಿಂದಿನ ದಿನ .. ಅವತ್ತು ಪ್ರಿಯಾ ಹಾಸ್ಟೆಲ್ ನಲ್ಲಿ ಓದ್ತಾ ಕೂತಿದ್ದಾಗ ಇದ್ದಿಕಿದ್ದಹಾಗೆ ಎದೆ ನೋವು ಸ್ಟಾರ್ಟ್ ಆಯಿತು . ಏನೋ ಗಾಸ್ಟ್ರಿಕ್ ಇರಬೇಕ...

ಒಂದು ಜೋಡಿ - ಕೊನೆಯಲ್ಲಿ ! ಭಾಗ ೭

ಈ ಫ್ಲಾಶ್ ಬ್ಯಾಕ್ ನೆನಪಾಗುವಷ್ಟರಲ್ಲಿ ಸ್ವಾತಿಯ ಕೈಯನ್ನು ಚಿಕ್ಕ ಮಗುವಿನ ಹಾಗೆ ಹಿಡಿದು ತನ್ನ ತಲೆಯನ್ನು ಅವಳ ಮೇಲೆ ಇಟ್ಟು ಮಲಗಿದ್ದ ಕ್ರಿಶ್. ರಾತ್ರಿ ಬಹಳ ಆಗಿತ್ತು, ನಿದಿರೆ ಕಣ್ಣಿಗೆ ಹತ್ತಿತ್ತು  ಅವಳು ಅಲ್ಲೇ ಮುದುಡಿ ಮಲಗಿದಳು. ಮರುದಿನ ಬೆಳಿಗ್ಗೆ ಎಂದಿನಂತೆ ಇಬ್ಬರು ಆಫೀಸಿಗೆ ಹೊರಡಲು ತಯಾರಿ ನಡೆಸುತಿದ್ದರೂ, ಆಗ ಮೇಜಿನ ಮೇಲಿದ್ದ ಕ್ರಿಶನ್ ಫೋನಿಗೆ ಒಂದು ಎಸ್.ಎಂ.ಎಸ್ ಬಂತು . ಕ್ರಿಶನ್ : "ಸ್ವಾತಿ ನೋಡು ನನ್ನ ಮೊಬೈಲಿಗೆ ಯಾರು ಮೆಸೇಜ್ ಮಾಡಿದ್ದು ಅಂತ ." ಸ್ವಾತಿ : "ಒಹ್  ಪ್ರಭವ್   ಮೆಸೇಜ್ ಮಾಡಿರೋದು . "ಪ್ರಿಯ ಇಸ್ ಹೋಸ್ಪಿಟಲೈಸಡ್ . ಶೀ ಇಸ್ ಸೀರಿಯಸ್. ಪ್ಲೀಸ್ ಕಂ ಟು ಸಾನ್ವಿ ಹೋಸ್ಪಿಟಲ್ ." ಎಂದು ಓದುತ್ತ ನಡುಗಿದಳು . ಕ್ರಿಶನ್ : "ವಾಟ್ ? ಪ್ರಿಯ .. ಹೋಸ್ಪಿಟಲ್ .. ಸೀರಿಯಸ್ . ಏನ್ ಹೇಳ್ತಾ ಇದ್ದೀಯ ?" ಸ್ವಾತಿ : " ಕ್ರಿಶ್ ಗಾಡಿ ತೆಗಿರಿ ಮೊದಲು ಅಲ್ಲಿಗೆ ಹೋಗೋಣ .. ಆಮೇಲೆ ಏನು ಅಂತ ವಿಚಾರಿಸೋಣ ." ಕ್ರಿಶನ್ : " ಸರಿ ನಡಿ ". ........... ಆಸ್ಪತ್ರೆಯಲ್ಲಿ : ಪ್ರಭವ್: " ಸ್ವಾತಿ ನೀವು ? ಕ್ರಿಶನ್ .." ಸ್ವಾತಿ : " ಪ್ರಿಯ ಎಲ್ಲಿದ್ದಾಳೆ ? ವಾಟ್ ಹಪ್ಪೆಂಡ್?" ಕ್ರಿಶನ್ ಮಾತಾಡುವ ಸ್ತಿತಿಯಲ್ಲಿರಲಿಲ್ಲ .

ಒಂದು ಜೋಡಿ - ಫ್ಲಾಶ್ ಬ್ಯಾಕ್ ! ಭಾಗ ೬

ಕ್ರಿಶನ್ : ನೋಡು ನಿನಗೆ ನನ್ನ ಬಗ್ಗೆ ಏನ್ ಅಭಿಪ್ರಾಯ ಇದ್ಯೋ ನಂಗೆ ಗೊತ್ತಿಲ್ಲ . ನನಗೆ ನೀನು ತುಂಬಾ ಇಷ್ಟ ಆಗಿದ್ಯ . ಐ ಫೀಲ್ ಗುಡ್ ವಿಥ್ ಯೂ. ನಿಮ್ಮ ತಂದೆ ತಾಯಿಗೆ ನನ್ನ ಒಪ್ಪಿಗೆ ತಿಳಿಸುವ ಮೊದಲು ನಾನು ನಿನ್ನ ಹತ್ರ ಒಂದು ವಿಷ್ಯ ಹಂಚಿಕೊಳ್ಳಲು ಇಷ್ಟ ಪಡ್ತೀನಿ . ನಾನು ಕಾಲೇಜಿನಲ್ಲಿ ಇದ್ದಾಗ ಪ್ರಿಯ ಅಂತ  ಒಂದು ಹುಡುಗಿಯನ್ನ ತುಂಬಾ ಪ್ರೀತಿಸಿದ್ದೆ .ಅದು ಪ್ರೀತಿಯೋ ಆಕರ್ಷಣೆಯೋ .. ಅವ್ಳು ಸಹ ನನ್ನ ಭಾವನೆಗೆ  ಸ್ಪಂದಿಸುತ್ತಾ ಹೊರಟಳು . ಕಾಲೇಜ್ ಮುಗಿಯಲು ಅವಳು ನನ್ನಿಂದ ದೂರವಗುತ್ತಾಳೇನೋ ಅನ್ನೋ ಭಯ ಕಾಡುತಿತ್ತು. ಅಂದು ಕಾಲೇಜಿನ ಕಡೇ ದಿನ . ಪರೀಕ್ಷೆ ಮುಗಿದಿತ್ತು . ಅವಳಿಗೆ ಬೇರೊಂದು ಊರಿನಲ್ಲಿ ನೌಕರಿ ಖಾತ್ರಿಯಾಗಿತ್ತು. ಓದಿನಲ್ಲಿ ಎಲ್ಲರಿಗಿಂತ ಚುರುಕಾಗಿದ್ದಳು, ನಮ್ಮ ಕ್ಲಾಸ್ನಲ್ಲಿ ಅವಳದ್ದೇ ಲೀಡಿಂಗ್ ಸ್ಕೋರ್ ಪ್ರತಿ ಸೆಮಿಸ್ಟರಿನಲ್ಲು ..ಅವತ್ತು ನಾನು ಪರೀಕ್ಷೆ ಮುಗಿಸಿ ಹೊರಕ್ಕೆ ಬಂದವನೇ ಪ್ರಿಯಾಳನ್ನು ಹುಡುಕುತ್ತಾ ಹೊರಟೆ . ಆದರೆ ಅವಳು ಆಗಲೇ ಮನೆಗಿ ಹಿಂತಿರುಗಿ ಹೋಗಿದ್ದ ವಿಷಯ ತಿಳಿದು ಬಂದಿತು.  ಮೊಬೈಲ್ ಫೋನ್ ಕರೆಗಳು ದುಬಾರಿ ಇದ್ದ ಸಮಯ ಅದು. ನನ್ನ ಕೈನಲ್ಲಿ ಫೋನ್ ಇರಲಿಲ್ಲ ಆದರೆ ಪ್ರಿಯಾಳ ತಂದೆ ಮಲೆನಾಡಲ್ಲಿ ಶ್ರೀಮಂತ ಮನೆತನದವರು . ಅವಳೊಂದಿಗೆ ದಿನಕ್ಕೊಮ್ಮೆ ಮಾತಾಡಲು ಮೊಬೈಲ್ ಕೊಡಿಸಿದ್ದರು . ಸರಿ ಕಾಲೇಜ್ ಪಕ್ಕದಲ್ಲೇ ಇದ್ದ ಕಾಯಿನ್ ಬೂತ್ ಒಂದರಿಂದ ನಂಬರ್ ಡಯಲ್ ...

ಒಂದು ಜೋಡಿ - ಸಮಾಗಮ! ಭಾಗ ೫

ಗೋಪಿನಾಥ್: "ಎಲ್ಲಿ ನಿಮ್ಮ ಮಗಳು ಸ್ವಾತಿ.ಮನೆಯಲ್ಲೇ ಇದ್ದಾಳೆ ಅಲ್ವ.ಕರೀರಿ. ಫಾರ್ಮಾಲಿಟೀಸ್ ಎಲ್ಲಾ ಏನೂ ಬೇಡ." ಸಂಪತ್ ರಾವ್: "ಒಹ್ ಮನೆಯಲ್ಲೇ ಇದ್ದಾಳೆ. ಕೌಸಲ್ಯ ಸ್ವಾತಿನ ಕರ್ಕೊಂಡು ಬಾ." ಕೌಸಲ್ಯ ಸ್ವಾತಿಯ ಕೋಣೆಗೆ ಹೋಗಿ "ಬಾರೆ, ಹೊರಗೆ ಗೋಪಿ ಮಾವ, ಕ್ರಿಶನ್ ಬಂದಿದ್ದಾರೆ. ಹುಚ್ಚುಚ್ಚಾಗಿ ಆಡಬೇಡ" ಅಂತ ಬುದ್ದಿ ಹೇಳುತ್ತಾ ಸ್ವತಿಯನ್ನ ನಡುಮನೆಯಲ್ಲಿದ್ದ ಸೋಫಾದ ಮೇಲೆ ಕೂರಿಸಿದರು . ನವಿಲಿನ ಬಣ್ಣದ ನೀಲಿಯ ಸೀರೆ ಅವಳ ಬಿಳಿ ಮೈ ಬಣ್ಣಕ್ಕೆ ಒಪ್ಪುವಂತೆ , ಉದ್ದ ಜಡೆಯ ತುಂಬಾ ಮಲ್ಲಿಗೆ ಸುತ್ತಿರಲು ಆಗಲೇ ಮದುವೆಗೆ ಸಿದ್ದವಾಗಿ ಕುಳಿತಂತಿತ್ತು . ಕ್ರಿಶನ್ ಅವಳ ಸೌಂದರ್ಯಕ್ಕೆ ಮರುಳಾಗಿ ಕುಳಿತಿದ್ದ . ಪ್ರಿಯಾಳ ಕಥೆಯ ನಂತರ  ಅವನ ಜೀವನದಲ್ಲಿ ಒಂದು ಹುಡುಗಿಯ ಬಗ್ಗೆ ಈ ರೀತಿಯ ಭಾವನೆ ಮನಸಲ್ಲಿ ಹುಟ್ಟಿದ್ದು ಇದೆ ಮೊದಲಾಗಿತ್ತು . ೫ ವರ್ಷ ಕಳೆದರು ಪ್ರಿಯಾಳ ಛಾಯೆ ಅವನ ಹೃದಯದಿಂದ ಬಿಚ್ಚಿ ಎಸೆಯಲಾಗಿರಲಿಲ್ಲ . ಆದರೆ ಆ ಕಹಿಯು ಅವನ ಮುಂದಿನ ಸಿಹಿ ಗೆ ಅಡ್ಡಿಯಾಗಲು ಅವಕಾಶ ಕೊಡಬಾರದೆಂದು ನಿರ್ಧರಿಸಿದ್ದನು . ಗೋಪಿನಾಥ್ : "ನೋಡೋ ಕ್ರಿಶನ್ ಇವಳೇ ಸ್ವಾತಿ . ಸಂಪತ್ ರಾಯರ ಒಬ್ಬಳೇ ಪುತ್ರಿ . ನೀನು ಶೋಲಾಪುರ್ ಗೆ ಬಂದಾಗ ಇವಳು  ನಾಲ್ಕೋ ಐದನೆಯೋ ತರಗತಿಯಲ್ಲಿ ಓದುತ್ತಿದ್ದಳು . ಪುಟ ಪುಟ ಅಂತ ನಮ್ಮ ಮನೆಗೆ ಬೆಳಿಗ್ಗೆ ಹಾಲು ತೆಗೆದುಕೊಂಡು ಹೋಗಲು ಬರುತಿದ್ದಳು . ನೆನಪಾಯಿತಾ ಯಾರು ಅಂತ ....

ಒಂದು ಜೋಡಿ - ಮೊದಲ ನೋಟ! - ಭಾಗ ೪

ಅಂದು ಭಾನುವಾರ. ಮುಂಜಾನೆ ಎದ್ದೊಡನೆ ಮನೆಯೆಲ್ಲಾ ಸುಳಿದಾಡುವಂತೆ ಅಗರಬತ್ತಿಯ ಸುವಾಸನೆ ಹರಡಿತ್ತು. ದೇವರ ಕೋಣೆಯಲ್ಲಿ ಮಲ್ಲಿಗೆಯ ಕಂಪು ಸೂಸುತಿತ್ತು. ಬಾಗಿಲನ್ನು ಮಾವಿನ ತೋರಣ ಅಲಂಕರಿಸಿತ್ತು, ಅಡುಗೆ ಮನೆ ವಿವಿಧ ಭಕ್ಷ್ಯಗಳಿಂದ ತುಂಬಿತ್ತು. " ವರನ ಕಡೆಯವರು ೧೧ ಘಂಟೆ ಹೊತ್ತಿಗೆ ಬರ್ತಾರಂತೆ. ಎಲ್ಲಾ ಸಿದ್ಧ ಆಯಿತೇನೆ ಕೌಸಲ್ಯಾ?" ಅಂತ ಹಣ್ಣು ತರಲು ಮಾರುಕಟ್ಟೆಗೆ ಹೋಗಿದ್ದ ಸಂಪತ್ ರಾಯರು ಕೇಳುತ್ತಲೇ ಮನೆಯೊಳಕ್ಕೆ ಕಾಲಿಟ್ಟರು. "ಹ್ಞೂ ರೀ ಎಲ್ಲಾ ರೆಡಿ ಆಗಿದೆ. ನಿಮ್ಮ ಮುದ್ದಿನ ಮಗಳು ಸ್ವಾತಿ ತಯಾರಾಗಿದ್ದಾಳಾ ಅಂತ ನೋಡಿ ಸ್ವಲ್ಪ." - ಎಣ್ಣೆ ಬಾಂಡ್ಲೆಯಿಂದ ಜಿಲೇಬಿ ತೆಗೆಯುತ್ತಿದ್ದ ಕೌಸಲ್ಯ ಉತ್ತರಿಸಿದರು. ಕೋಣೆಯಲ್ಲಿ ಕಷ್ಟ ಪಟ್ಟು ಸೀರೆ ಉಡುತಿದ್ದ ಸ್ವಾತಿಗೆ ಇದು ಮೊದಲ ವಧು ಪರೀಕ್ಷೆ. ಸಮಯ ೧೦:೩೦ ಆಗಿತ್ತು. ಚಿನ್ನದಲ್ಲಿ ಮುಳುಗಿದ್ದ ಸ್ವಾತಿ ತನ್ನನ್ನು ಕನ್ನಡಿಯಲ್ಲಿ ನೋಡಿಕೊಂಡಾಗ "ನಾನು ಇಷ್ಟು ಸುಂದರವಾಗಿದ್ದೀನಿ ಅಂತ ಈ ದಿನವೇ ನನಗೆ ತಿಳಿದಿದ್ದು" ಎಂದು ಮನದಲ್ಲಿ ಅಂದುಕೊಂಡಳು. ತನ್ನ ಸೌಂದರ್ಯವನ್ನು ಹೊಗಳುತ್ತಾ ಹಣೆ ಮೇಲಿದ್ದ ಬೈತಲೆ ಬೊಟ್ಟನ್ನು ಸರಿಪಡಿಸುತಿದ್ದಳು. ಮನೆಯ ಬಾಗಿಲಲ್ಲಿ ನಿಂತು ಯಾರೋ "ಸಂಪತ್ ರಾಯರೇ .. ಸಂಪತ್ ರಾಯರೇ .. ಮನೆಯಲ್ಲಿ ಇದ್ದೀರಾ ?? " ಅಂತ ಕರೆದ ದ್ವನಿ ಸ್ವಾತಿಯ ಕಿವಿಗೆ ಬಿತ್ತು. ರಾಯರು ಬಾಗಿಲ ತೆಗೆದು ಬಂದ ಅತಿಥಿಯರನ್ನು ಮನೆಯೊ...

ಒಂದು ಜೋಡಿ - ನೊಂದ ಮನಸು! ಭಾಗ ೩

ಕ್ರಿಶನ್ ದಿನ ನಿತ್ಯದಂತೆ ಅಂದು ಮನೆಗೆ ಬಂದ ಕೂಡಲೇ ಟಿ.ವಿ. ಆನ್ ಮಾಡಲಿಲ್ಲ. ಶೂ ಬಿಚ್ಚಿಡಲಿಲ್ಲ. ಸ್ವಾತಿ ರೂಂ ಗೆ ಹೋಗಿ ಫ್ರೆಶ್ ಆಗಿ ವಾಟರ್ ಬಾಟಲ್ ಗೆ ನೀರು ತುಂಬಿಸಲು ಅಡಿಗೆ ಮನೆಯತ್ತ ಹೊರಟಿದ್ದಳು. ಆಗ ಸೋಫಾದ ಮೇಲೆ ಕ್ರಿಶನ್ ಗಾಂಭೀರ್ಯದಿಂದ ಕುಳಿತಿರುವುದನ್ನು ಕಂಡು ಅಚ್ಚರಿಗೊಂಡಳು. ಮದುವೆಯಾದ ಈ ಒಂದು ವರ್ಷದಲ್ಲಿ ಮೊದಲ ಬಾರಿಗೆ ಕ್ರಿಶನ್ ಮುಖದಲ್ಲಿದ್ದ ಹೊಳಪು ಮಾಯವಾದ೦ತನಿಸಿತು ಸ್ವಾತಿಗೆ. ಮತ್ತೊಮ್ಮೆ ಕ್ರಿಶನ್ ನ ಹತ್ತಿರ ಬಂದು ಅವನ ಭುಜದ ಮೇಲೆ ಕೈ ಇರಿಸಿ " ಡಿಯರ್ ಏನ್ ಪ್ರಾಬ್ಲೆಮ್ಮು ? ಹುಷಾರಿಲ್ವಾ ?" ಅಂತ ಕೇಳಿದಳು. ಕ್ರಿಶನ್ ಮಾತಾಡಲಿಲ್ಲ. ಕಣ್ಣೀರು ಕೆನ್ನೆ ಮೇಲೆ ಉರುಳಿತು. ಸ್ವಾತಿಯ ತೋಳಿನಲ್ಲಿ ಪುಟ್ಟ ಮಗುವಿನಂತೆ ಅಳಲು ಅವನಿಗೆ ಸ್ವಲ್ಪ ಸಮಾಧಾನವಾಯಿತು. ಸ್ವಾತಿ: " ಕ್ರಿಶನ್ ಏನಾಯಿತು ಅಂತ ಹೇಳು ಪರವಾಗಿಲ್ಲ . ನಾನು ಅರ್ಥ ಮಾಡ್ಕೋಳ್ತೀನಿ." ಹೀಗೆ ಸಮಾಧಾನಿಸುತಿದ್ದ ಸ್ವಾತಿ ಫ್ಲಾಶ್ ಬ್ಯಾಕ್ ಗೆ ಹೋದಳು..... ಕ್ರಿಶನ್ ಸ್ವಾತಿಯನ್ನು ಮದುವೆ ಮಾಡಿಕೊಳ್ಳುವ ಮೊದಲು ಒಂದು ಹುಡುಗಿಯನ್ನು ತಾನು ಮನಸಾರೆ ಇಷ್ಟ ಪಟ್ಟಿದ್ದಾಗಿಯೂ, ಆದರೆ ಕಾರಣಾಂತರದಿಂದ ಅವಳ ಮರೆತು ಜೀವನದಲ್ಲಿ ಮುಂದೆ ಸಾಗಬೇಕಾಗಿದ್ದಾಗಿಯೂ ಹೇಳಿಕೊಂಡಿದ್ದನು. ಸ್ವಾತಿಯ ಮನೆಗೆ ಮೊದಲ ಬಾರಿಗೆ ಕ್ರಿಶನ್ ತನ್ನ ಸೋದರ ಮಾವನೊಂದಿಗೆ ಬಂದ್ದಿದ್ದನು. ಹೆಣ್ಣು ನೋಡುವ ಶಾಸ್ತ್ರದ ಬಗ್ಗೆ ಈ ಕರುನಾಡಿನಲ್ಲಿ ಹೇಗಿರತ್ತೆ ಅಂತ...

ಒಂದು ಜೋಡಿ - ಲೋಫ್ ಆಫ್ ಕ್ರಿಸ್ಪ್ಸ್! ಭಾಗ ೨

ಹೋಟೆಲ್ ಒಳಗೆ : ಜೇಮ್ಸ್: ವೆಲ್ಕಮ್ ಟು " ಲೋಫ್ ಆಫ್ ಕ್ರಿಸ್ಪ್ಸ್" .  ಡು ಯು ಹ್ಯಾವ್ ದ ರೆಸರ್ವೇಶನ್? ಕ್ರಿಶನ್: ನೋ ವಾಕಿನ್. ಟೇಬಲ್ ಫಾರ್ ಟೂ. ಜೇಮ್ಸ್: "ಜಸ್ಟ್ ಅ ಮೊಮೆಂಟ್ ಸರ್. ವಿಲ್ ಗೆಟ್ ಬ್ಯಾಕ್ ಟು ಯು. ಪ್ಲೀಸ್ ಬಿ ಸೀಟೆಡ್" ಅಂತ ಹೇಳಿ ಮೆತ್ತನೆಯ ಸೋಫಾದೆಡೆಗೆ ಕೈ ತೋರಿಸಿದ. ಸ್ವಾತಿ ಬೆನ್ನಿಗೆ  ತಗಲು ಹಾಕಿಕೊಂಡಿದ್ದ ಬ್ಯಾಗನ್ನು ಕೆಳಕ್ಕೆ ಇಳಿಸಿ ಸೋಫಾದ ಮೇಲೆ ಕುಳಿತಳು. ಪಕ್ಕದಲ್ಲಿ ಮೇಜಿನ ಮೇಲೆ ಇದ್ದ ನ್ಯೂಸ್ ಪೇಪರ್  ಎತ್ತಿಕೊಂಡು ಕ್ರಿಶನ್ ಸ್ವಾತಿಯ ಬಳಿ ಕುಳಿತ. ಎದುರು ಸೀಟ್ ನಲ್ಲಿ ತನ್ನ ಸರಧಿಗಾಗಿ ಕಾಯುತಿದ್ದ ಪ್ರಭವ್ ಕ್ರಿಶನ್ನನ್ನು ನೋಡಿದ. ಪ್ರಭವ್, ಕ್ರಿಶನಿನ ಕಾಲೇಜ್ ಫ್ರೆಂಡ್. ಅವನು ಕ್ರಿಶನ್ ಹತ್ತಿರ ಬಂದು ಹಲೋ ಎಂದಾಗ ಕ್ರಿಶನ್ ಸರ್ಪ್ರೈಸ್ ಇಂದ ಎದ್ದು " ಹೇ ಪ್ರಭವ್ ಹೇಗಿದ್ದೀಯ ?" ಎಂದು ಕೇಳಿದ. ಇಂಟ್ರೋಡಕ್ಶನ್ ಸೆಶನ್ ಆಗೋಷ್ಟ್ರಲ್ಲಿ ಜೇಮ್ಸ್ ಬಂದು ಸೀಟ್ ರೆಡಿ ಆಗಿದೆ ಅಂತ ಹೇಳಿದ . ಕ್ರಿಶನ್ ಜೇಮ್ಸ್ ಹತ್ರ ಇನ್ನೊಂದು ಸೀಟ್ ಅರೇ೦ಜ್ ಮಾಡೋಕ್ಕೆ ಕೇಳಿಕೊಂಡ . ಮೂವರು ಡಿನ್ನರ್ ಆರ್ಡರ್ ಮಾಡಿ ಹಾಗೆ ಜೀವನ ಹೆಂಗಿದೆ , ಏನ್ ಮಾಡ್ತಾ ಇದ್ದಾರೆ ಅ೦ತೆಲ್ಲಾ ಮಾತಾಡೋಕೆ ಶುರು ಮಾಡಿದರು. ಪ್ರಭವ್: ಹೇ ಮಗ. ಕಾಲೇಜ್ ಮುಗಿದ ಮೇಲೆ ಸಿಕ್ಕೆ ಇರ್ಲಿಲ್ಲ ಅಲ್ವೇನೋ? ಆಲ್ಮೋಸ್ಟ್ 8 ವರ್ಷ ಆಯಿತು. ಗಿಡ್ಡ, ಪಾಯಲ್, ಚಿಂಟು, ಮೇಘನ ಎಲ್ಲಾ...

ಒಂದು ಜೋಡಿ - ಕಾರ್ಪೋರೇಟ್ ದುನಿಯಾ! - ಭಾಗ ೧

ಈ ಧಾರಾವಾಹಿಯ ಎಲ್ಲಾ ಕಂತುಗಳು ಕೇವಲ ಕಾಲ್ಪನಿಕ.ಇದರಲ್ಲಿ ಬರುವ ಪಾತ್ರಗಳು ಸನ್ನಿವೇಶಗಳು ಕೇವಲ ಕಾಲ್ಪನಿಕ. ಅಂದು ಮಾಮೂಲಿನಂತೆ ಕ್ರಿಶನ್ ನೊಂದಿಗೆ ಸ್ವಾತಿ ಕೆಲಸ ಮುಗಿಸಿ ಹೊರಟಿದ್ದಳು. ಸಂಜೆ  7 ಆಗಿತ್ತು. ಕಾರ್ನಲ್ಲಿ  ಸ್ಟೇರಿಂಗ್  ಹಿಡಿದು  ಇಂಜಿನ್ ಸ್ಟಾರ್ಟ್ ಮಾಡಿ ಒಂದೆರಡು ಕಿಲೋಮೀಟರು ಹೋಗಿದ್ದರು. ರೇಡಿಯೋದಲ್ಲಿ ಅದ್ಯಾವನೋ ಒಬ್ಬಕೇಳುಗಾರಕ ನಿದ್ದೆ ಬರೋ ಹಾಡನ್ನು ರಿಕ್ವೆಸ್ಟ್ ಮಾಡಿದ್ದ. ವೂಯ್  ವೂಯ್ ಅಂತ ಹಾಡು ಪ್ರಾರಂಭ ಆಯಿತು. ಸ್ವಾತಿ  ರೇಡಿಯೋ  ಸೌಂಡನ್ನು  ಕಡಿಮೆ ಮಾಡಿ ಕ್ರಿಶನ್ ಕಡೆ ತಿರುಗಿದಳು. ಸ್ವಾತಿ: ಕ್ರಿಶನ್ ಇವತ್ತು ಪೂರ್ತಿ ದಿನ ಬೋರಿಂಗ್ ಆಗಿತ್ತು. ಅದೇ ಮೊನೋಟನಸ್ ಕೆಲಸ ಮಾಡಿ ಮಾಡಿ ಸಾಕಾಗಿದೆ ನಂಗೆ. ಕ್ರಿಶನ್: ಹೇ ಅದೇನು ಹೊಸದಲ್ಲ ಬಿಡು. ನೀನು ಒಂದು ತಿಂಗಳಿಂದ ಹೀಗೆ ಹೇಳ್ತಾ ಇದ್ದೀಯ. ಐ.ಟಿ. ಇಂಡಸ್ಟ್ರಿ ಅಲ್ಲಿ ಇರುವವರ ಹಣೆ ಬರಹನೇ ಇದು. ಅದೇ ರಾಗ ಅದೇ ತಾಳ . ಸ್ವಾತಿ: ಹ್ಞೂ ಕಣೋ. ನೀನು ಹೇಳ್ತಾ ಇರೋದ್ರಲ್ಲೂ ಸತ್ಯ ಇದೆ. ಆದ್ರೆ ಇವತ್ತು ಸ್ವಲ್ಪ ವಿಪರೀತಾನೆ ಅಂತಿಟ್ಕೋ. ಕ್ರಿಶನ್: ಅಯ್ಯೋ ಡಿಯರ್.. ಎನಾಯಿತು .. ಚಿಯರ್ ಅಪ್ ! ಇದು ಈ...

ಹಸಿರೆಲೆ!

A couple of months ago I had posted a comment on a photo clicked by a blog friend Siddeshwar from Life at Dharwad and here is what it said in Kannada: The link to the post is Leaves ಚಿಗುರೊಡೆದು ಎದ್ದಿರುವ ನೀ ಹಸಿರೆಲೆಯೆ ನಿನ್ನೊಂದಿಗೆ ಬಂದು ಸೇರುವ ನಿನ್ನವನೆಲ್ಲೇ ? ಎಳೆ ಹಸುಳೆಯಲ್ಲ ನೀನಿನ್ನು ಮಳೆಯಲ್ಲಿ ನಲಿದಾಡುವ ಆಸೆ ಬಂತೇನು ಬಾನೆಡೆಗೆ ತಲೆ ಹಾಕಿ ನೆಟ್ಟಗೆ ನಿಂತಿರುವೆ ನೀ ಏಕೆ? ಮುನಿಸೆ ? ಏಕೆ ಎಲೆಯೇ ನಿನ್ನವ ಬರಲೊಲ್ಲನೆ೦ದನೆ ? ಬರಲಿ ಬಾರದಿರಲಿ ನಿನ್ನ ನಗು ಮಾಸದಿರಲಿ ಸದಾ ಹೀಗೆ ಇರಲಿ ನಿನ್ನ ಹುರುಪು ಎದೆಯಲ್ಲಿ Gist: I am talking to the leaf that is proud of its youth. As you sprout and grow strong, you indulge in a feeling of loneliness. Is it the same case with you dear green leaf? Whatever may come please keep the smiles , stand high and be cheerful.

@ the Mill

Last weekend I had to make a visit to the flour mill. Hmmm we at home have been following the tradition of sun drying the grains and pulses even to this day. Then have it taken to the mill in order to get a flour that is completely free from adulteration is followed. It was a bright sunny afternoon.While me and mom wait for our turn, a lady (Oops! a Granny) dropped by with a box full of Ragi(a pulse). I was taken aback by her enthusiasm at her age. Mom and me were amazed to see her attire. She was plain and simple, yet charming. The following lines in kannada describes granny at the mill and the zest of her life. ಹಿಟ್ಟಿನ ಗಿರಣಿಯಲ್ಲಿ ಇಳಿ ವಯಸ ತರುಣಿ ಗಟ್ಟಿತನದ ವರ್ಚಸ್ಸು ನೋಡಿರಿ ವಯ್ಯಾರದಿ ನುಲಿಯುತಿಹ ಈ ಸುಂದರಿ ರಾಗಿಯ ಬೀಸಿಕೊಂಡು ಹೋಗ ಬಂದಿಹಳು ತನ್ನ ಸರದಿಗೆ ಕಾಯುತ ನಿಂತಿಹಳು ವಯಸಿಗೆ ಮಿತಿಯಿಲ್ಲ ಸಿ೦ಗಾರಕೆ ಕಮ್ಮಿ ಇಲ್ಲ ಮುತ್ತೈದೆಯ ಭಾಗ್ಯವಿದೆ ದೇಹದಲಿ ಶಕ್ತಿ ಇದೆ ಮನದಲಿ ಸಂತಸ ಮೊಗದಲಿ ಮಂದಹಾಸ ಪುಟ್ಟದಾದ ತುಟಿಗಳರಳಿ ನುಡಿಮುತ್ತುಗಳುರುಳಿ "ಮಗಳೇ , ನಾ ಮೊದಲು ಹಾಕಲೇ " - ಎಂದಾಗ , ಸಿಟ್ಟಿಗೆದ್ದಿದ್ದ ನನ್ನ ಮನ, ಕರಗಿತಾಗ For the Non-Kannada Read...

ಕಡಲರವಿ!

ಕನ್ಯಾಕುಮಾರಿ! ಭಾರತ ದೇಶದ ತುತ್ತ ತುದಿಯಲ್ಲಿ ನಿಂತು ಸೂರ್ಯಾಸ್ತ ಅಥವಾ ಸೂರ್ಯೋದಯವನ್ನು ನೋಡುವುದು ಒಂದು ಅನರ್ಘ್ಯ ಅನುಭವ. ಈ ಅವಕಾಶ ೨೦೧೧ ರ ಕಡೆಯ ವಾರ ನನಗೆ ದೊರೆಯಿತು. ಆ ಕಡಲ ತೀರದಲಿ ನಿಂತು ನನ್ನ ನಾ ಮರೆತಿದ್ದಾಗ ಮನದಲಿ ಮೂಡಿದ ನಾಲ್ಕು ಸಾಲುಗಳು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಕೆಂಪಾದ ಆಗಸದಿ ತಕದಿಮಿ ಕೇಳುತಿರಲು ಕಲ್ಲು-ನೀರ ಸ್ಪರ್ಶದಿ, ಸಂಗೀತ ಸ್ವರವು ಮೂಡಿ ಕಡಲ ಅಲೆಯ ನಾದಕೆ ಸಂಜೆಯ ರವಿ ನಲಿಯುತಿರಲು ಬಲು ಚೆಂದ ನೋಡಲು ಮುತ್ತಿಟ್ಟ ಆ ಕಡಲರವಿಯ ಜೋಡಿ - ಅಶ್ವಿನಿ Note: I have described the lines that lingered in my mind as I stood watching the sunset at Kanyakumari.

ಕಾದಿರುವೆ!

ಹಾಡಿನ ಪದದಲಿ ಮೂಡಿದೆ ಒಲವು ಇಣುಕಿದೆ ಮನದಲಿ ತಿಳಿಯದೆ ಛಲವು ಬರಲೇ ಎಂದೆ ಧೈರ್ಯದಿ ನಾನು ಬೇಡ ಎನುತ ಸರಿದಳು ಬಾನು ಹಾಡು ನಿಂತಿತು, ಸ್ಫೂರ್ತಿ ಇಂಗಿತು ಆದರು ಮನ ಕರಗಲಿಲ್ಲವೇ ಚೆಲುವೆ ? ಹಗಲಿರುಳು ನಿನದೆ ಚಿಂತೆ ನಿನಗಾಗಿ ಕಾಯುವ ಕೆಲಸವಾಗಿದೆ ನನಗೆ ಮಳೆ ಹನಿಯ ಅರಿವಿಲ್ಲ ಸುಡುಬಿಸಿಲ ಪರಿವಿಲ್ಲ ಹಸಿರು ಮರದ ಮೇಲೊಂದು ಚಿನ್ನದ ಗರಿ ಕಂಡ ಹಾಗೆ ನೀ ನಿಂತೆ ನನ್ನ ಎದೆಯ ಬಾಗಿಲ ಮೇಲೆ ಕಾರ್ಮೋಡ ಸುರಿದು ನೀರಾದ ಹಾಗೆ ಇಂಪಿನ ಕಂಪನು ಸೂಸಿದ ಹಾಗೆ ಎಲ್ಲವ ಮರೆತು ನೀ ಬರುವೆಯಾ ? ಗೆಳತಿ ನೀ ಬಂದು, ಇನಿಯ ಎಂದು ಹಾಡುವೆಯಾ? Gist: An attempt to describe a man's wait for his loved one through these few lines. Just a random thought..

Fun filled evening.

Our locality which comprised of 30 homes or less 2 decades ago has turned into a full-fledged layout with over 200 homes and families. Back then, a group of young , energetic and enthusiatic minds churned out an idea - A youth Association. Basically we (the entire locality folks) meet once a year and spend a day with lots of fun.A lot many faces have come and gone in these years, but the enthusiasm remains. This post is all about the cultural activities we organize every year in our locality. Ahhh!This year the day started off with the routine pooja followed by the games for elders - Uncles and Aunties (as we refer them as), concurrently running painting and essay writing competitions for kids. Dumb charades followed by Antakshari for youngsters. There was fun everywhere. A stress free day between the stressful life was what I had been waiting for and la here it was. Lunch was a balance of masalas - Bisi bele Bath , curd rice and the special delight - mysore pak . Evening was a mix o...

ಮರೆತೆ ನಾ ನನ್ನನೆ.

Note : This is for Kannada readers only. This weekend I visited the green part of karnataka - Theerthahalli. Its no less than heaven and I have described the beauty of the land and my memories with it through this small poem. ಮಳೆಯ ಸವಿ ತಂದ ಮಲೆನಾಡ ಸಿರಿ ಚೆಂದ ಆ ಹಸಿರ ನಡುವಲಿ ಚಿಲಿಪಿಲಿಯ ಗುಂಗಲಿ ಮರೆತೆ ನಾ ನನ್ನನೆ ಕಣ್ಣರಳಿತು ಹಾಗೆ ಸುಮ್ಮನೆ ನಗುತ ನಲಿದ ಕ್ಷಣಗಳ ಮೆಲುಕು ಹಾಕುತ್ತಾ ಮುಂದೆ ನಡೆದೆ ಮಲ್ಲಿಗೆಯ ಕಂಪು ಸೂಸುತಿರಲು ನೇರಳೆ ಹಣ್ಣು ಅಲ್ಲಲ್ಲಿ ಚೆಲ್ಲಿರಲು ಮಾವಿನ ಮರದ ಮೇಲೆ ಕುಳಿತು ಕೋಗಿಲೆ ಕೂಗುತಿರಲು ಮೋಡಗಳು ಮಂದಹಾಸ ಬೀರಿ ನಲಿಯುತಿರಲು ಮರೆತೆ ನಾ ನನ್ನನೆ ಕಣ್ಣರಳಿತು ಹಾಗೆ ಸುಮ್ಮನೆ ನಗುತ ನಲಿದ ಕ್ಷಣಗಳ ಮೆಲುಕು ಹಾಕುತ್ತಾ ಮುಂದೆ ನಡೆದೆ ಆ ದಿನದ ನೆನಪಾಯಿತಿಂದು ಎಂದರೆ ತಪ್ಪಾಗಲಾರದು ಮುಂಜಾನೆಯ ಭಾಸ್ಕರನಿಗೆ ನಮಸ್ಕಾರ ಮಾಡಿ ಕೆಂಪು ಲಂಗ ನನ್ನ ಸಿಂಗರಿಸಿ ಗೊರಟೆ ಹೂವ ಮಾಲೆ ಧರಿಸಿ ಕೈನಲ್ಲಿ ಚೀಲವ ಹಿಡಿದು ಪುಟುಪುಟು ಓಡುತ ಬಂದ ಛಾಯೆ ಇನ್ನು ಕಣ್ಣಲಿ ಚಾಪಿ ನಿಂತಿದೆ ಮರೆತೆ ನಾ ನನ್ನನೆ ಕಣ್ಣರಳಿತು ಹಾಗೆ ಸುಮ್ಮನೆ ನಗುತ ನಲಿದ ಕ್ಷಣಗಳ ಮೆಲುಕು ಹಾಕುತ್ತಾ ಮುಂದೆ ನಡೆದೆ ಹಿಂತುರುಗೋ ಮನಸಿಲ್ಲ ಆದರೆ ನೌಕರಿ ಇದೆಯಲ್ಲಾ ಮರುದಿನ ಬೆಳಿಗ್ಗೆ ದಿನಚರಿ ಪ್ರಾರಂಭ ಅದೇ ರಾಮಾಯಣ ಅದೇ ರಂಪ :(

ಅ೦ದು ಸಂಜೆ ..

Disclaimer: For Non Kannada readers this post is about an evening travel back home in a city bus and the experience with a little imagination. However a gist is at the bottom of this post on popular demand. ಅಂದು ಸಂಜೆ ಬಸ್ಸಿನಲ್ಲಿ ಮನೆಗೆ ತೆರಳುವ ಸಂಭವ ಮೂಡಿ ಬಂದಿದ್ದು ಒಂದು ತರಹ ಒಳ್ಳೇದೆ ಆಯಿತು ಅಂತ ಈಗ ಅನಿಸುತ್ತಾ ಇದೆ. ಹೋಗಿರಲಿಲ್ಲ ನಿಮಗೆ ಈಗ ಈ ಲೇಖನವನ್ನು ಓದುವ ಅವಕಾಶವಿರುತ್ತಿರಲಿಲ್ಲವಲ್ಲ :) ಅದ್ರಲ್ಲಿ ಹೊಸದು ಏನಿದ್ಯಪ್ಪಾ ಅಂತ ಕೇಳ್ತಾ ಇದ್ದೀರಾ? ಆಫೀಸ್ ಮುಗಿಸಿ ಬಸ್ ಸ್ಟಾಪ್ ಗೆ ಬರೋಷ್ಟರಲ್ಲಿ ನನ್ನ ಕಣ್ಣ ಮುಂದೇನೆ ೩ ಕೆಂಪು ವಜ್ರ AC ಗಾಡಿಗಳು ವ್ರೂಂ ವ್ರೂಂ ಅಂತ ಹೋಗಿಯೇ ಬಿಟ್ಟವು. ರೋಡಿನ ಈ ಬದಿಯಿಂದ ಆ ಬದಿಗೆ ದಾಟುವಷ್ಟರಲ್ಲಿ ನನ್ನ ಅವಸ್ಥೆ ಕೇಳಬೇಡಿ. ಆಗ ತಾನೇ ಹೈದು ಹೋದ ಬಸ್ಸಿನ ಕೊನೆಯ ಸೀಟ್ನಲ್ಲಿ ಕೂತಿದ್ದ ಮಗು ನನ್ನ ಅವಸ್ತೆಯನ್ನ ನೋಡಿ ನಗುತಿದ್ದಂತೆ ಇತ್ತು. ಹಾಗೋ ಹೀಗೋ ರೋಡ್ ದಾಟಿ ಮುಂದಿನ ಬಸ್ಸಿಗಾಗಿ ಕಾದೆ. ಎದುರಿಗೆ ಬಂದಿದ್ದು ಮಾರ್ಕೆಟ್ ಗೆ ಹೋಗೋ ಒಂದು ಸಾಧಾರಣ ಬಸ್. ಅದ್ರಲ್ಲಿ AC ಇಲ್ದೆ ಇದ್ರೂ ಕೂರಲು ಸೀಟ್ ಇದ್ದಿದ್ದು ನನಗೆ ಕುಷಿ ತಂದಿತು. ಬಸ್ ಹತ್ತಿ ಎರಡನೇ ಸೀಟಿನ ಕಿಟಕಿಯ ಪಕ್ಕ ಕೂತೆ. ಒಮ್ಮೆ ಹಾಗೆ ನನ್ನ ಕತ್ತನ್ನು ಸುತ್ತ ಗೂಬೆಯಂತೆ ತಿರುಗಿಸಿ ಜೊತೆ ಪಯಣಿಸುತ್ತಿರುವ ಪ್ರಯಾಣಿಕರನ್ನು ವೀಕ್ಷಿಸಿದೆ. ಮುಂದೆ ಕುಳಿತಿದ್ದ ಯುವತಿಯರಿಬ್ಬರು ...