ಅರಳಿದ ಹೂ

 ಅಂಗಳದಿ ಅರಳಿದ ಹೂ ಚಂದ

ಗುಯಿಗುಟ್ಟುತ್ತಾ 

ಅತ್ತಣಿಂದ ಇತ್ತ ಹಾರುತ್ತ 

ದುಂಬಿಯು ಬಂದಿದೆ ಅದರತ್ತ 


ಅಂಗಳದಿ ಅರಳಿದ ಹೂ ಚಂದ 

ಅಂದವ ಸವಿಯುತ್ತಾ 

ಬಿಂಕದಿಂದ ಬಂದಿಹಳು ಹಾಡುತ 

ಹೂವಾಡಗಿತ್ತಿ ಅದರತ್ತ


ಅಂಗಳದಿ ಅರಳಿದ ಹೂ ಚಂದ

ಸುವಾಸನೆ ಬೀರುತ 

ಗಾಳಿಯಲ್ಲಿ ನಲಿಯುತ 

ಇರುವೆ ನೀ ಎಲ್ಲರ ಮನ ಸೆಳೆಯುತ







 


Comments

Popular Posts