Wishing you all a very happy Ugadi/Gudi Padva[Lunisolar New year]. ಚೈತ್ರ ಮಾಸದ ಮೊಟ್ಟ ಮೊದಲ ದಿನ ಚೈತ್ರ ಪಾಡ್ಯಮಿ ಬಂದಿದೆ ಹೊಸ ಚಿಗುರು,ಹೊಸ ಚೈತನ್ಯ ಹೊಸತನ ಎಲ್ಲೆಡೆ ತುಂಬಿದೆ ! ಮನೆ ಮನೆಯಲ್ಲಿ ಸಂಭ್ರಮ ಸಡಗರ, ಹಸಿರು ತೋರಣದಲಂಕಾರ,ರಂಗು ರಂಗಿನ ರಂಗವಲ್ಲಿಯ ಮೆರಗು,ಅಭ್ಯಂಜನ ಸ್ನಾನ, ಬೇವು ಬೆಲ್ಲ ಸೇವನೆ,ಹೊಸ ವರ್ಷದ ಪಂಚಾ೦ಗ ಶ್ರವಣ - ಇವುಗಳೇ ಈ ಹಬ್ಬದ ಮುಖ್ಯ ಅಂಶಗಳು. ಮುಂಬರುವ ದಿನಗಳಲ್ಲಿ ಸುಖ ದು:ಖಗಳನ್ನು ಸಮನಾಗಿ ಸ್ವೀಕರಿಸುತ್ತೇವೆನ್ನುವುದೇ - ಬೇವು ಬೆಲ್ಲ ಮಿಶ್ರಣವನ್ನು ಹಂಚಿ ಸವಿಯುವ ಸಂಪ್ರದಾಯದ ಸಂಕೇತ. ತರಹ ತರಹದ ಒಬ್ಬಟ್ಟು, ರುಚಿ ರುಚಿಯಾದ ಅಡಿಗೆ - ಅದರಲ್ಲೂ ಯುಗಾದಿ ಹಬ್ಬದ ವಿಶೇಷ ಭಕ್ಷ್ಯ ಬೇಳೆ ಒಬ್ಬಟ್ಟು ಸವಿಯುವುದೇ ಒಂದು ಗಮ್ಮತ್ತು. ಮಾವು ಚಿಗುರಿದೆ,ಕೋಗಿಲೆ ಕೂಗಿದೆ - ಯುಗಾದಿ ಸಂಭ್ರಮ ತುಂಬಿದೆ. ಖರ ಸಂವತ್ಸರ ಕಳೆದು "ನಂದನ" ಸಂವತ್ಸರಕ್ಕೆ ಕಾಲಿಡುತ್ತಿರುವ ನಿಮ್ಮೆಲ್ಲರಿಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು . "ಈ ಜೀವನ ಬೇವು ಬೆಲ್ಲ ಬಲ್ಲತಗೆ ನೋವೆ ಇಲ್ಲ "
Lot of Inspiration and a childhood dream has turned into this piece of web content that helps me share my mind to all of those who crave to read and fantasize, learn and factuate, study and enhance. I guarantee that my ramblings cater to all age groups, if anyone finds a miss please do drop your thought which would inspire me yet again and something nice would blossom for sure :-)