ಹೊಸಬೆಳಕು - ನಾಟಕ! Yes ನಾಟಕ ...

ಈ ಕನ್ನಡ ಚಲನ ಚಿತ್ರ ನೋಡಿರಬೇಕಲ್ವಾ? ಹೌದ್ರಿ ಅದೇ ನಮ್ಮರಾಜಕುಮಾರ್ -ಸರಿತಾ ಜೋಡಿ ಅಭಿನಯದ್ದು. ಈಗ್ಯಾಕೆ ಇವ್ಳು ಆ ಹಳೇ ಚಿತ್ರದ ಬಗ್ಗೆ ಕೇಳ್ತಾ ಇದ್ದಾಳೆ ಅಂತ ಯೋಚಿಸ್ತಾ ಇದ್ರೆ ಅಲ್ಲೇ ಇರೋದು ಒಂದು ಟ್ವಿಸ್ಟ್. ಹಳೇ ರೆಕಾರ್ಡ್ ನ ಹೊಸ ರಾಗದಲ್ಲಿ ಹಾಡಿದ್ದೆ ಆದ್ರೆ ಮಜಾ ಸಿಗೋದು ಡಬಲ್ ಅಲ್ವಾ? ನಂಗೆ ಆಗಿದ್ದು ಅದೇ. ಜಾಸ್ತಿ ಏನ್ ಆಂಟಿಸಿಪೇಶನನ್ನ ಇಟ್ಕೊಂಡು ಹೋಗಿರಲಿಲ್ಲ ನಾನು. ನಾಟಕ ಅಂದ್ರೆ ಹಿಂದೆ ನೋಡಿರುವಂತ ಸೀರಿಯಸ್ ಟೈಪ್ ನಲ್ಲೆ ಇದು ಇರುತ್ತೆ ಅಂತ ಅರೆ ಮನಸ್ಸಿನಿಂದಾನೆ ಕಲಾಸೌಧದೊಳಗೆ ಕಾಲಿಟ್ಟೆ. ನನ್ನ ತಂಗಿ ಹಾಗೂ ಪಕ್ಕದ ಮನೆ ಹುಡುಗಿ ಇಬ್ಬರು ಇದ್ರೂ ನೋಡ್ರಿ ಬಲ್ಲಿ ಕ ಬಕ್ರಾ ಆಗೋಕೆ ನನ್ ಜೊತೆಗೆ. ಆದರಲ್ಲಿ ಆದದ್ದು ಏನು ಎ೦ದು ತಿಳಿಯಲು ಕಾತುರವಿದ್ದರೆ ಮುಂದೆ ಓದಿ. . .

ಕಲಾಸೌಧವನ್ನು ಹುಡುಕಿದ ಪ್ರಸಂಗ ಮೊದಲು ನಿಮಗೆ ತಿಳಿಸಬೇಕು. ಅಂದು ಶನಿವಾರ - ಮೊದಲೇ ಆಲಸ್ಯ. ಮಧ್ಯಾಹ್ನದ ಬಿಸಿಲು, ಏನ್ ಮಾಡೋದು - ಮನೆಯಲ್ಲಿ ಬೇಜಾರು, ಹಾಗೆ ಸೋಫಾ ಮೇಲೆ ಕೂತ್ಕೊಂಡು ಚಾನೆಲ್ ಬದಲಾಯಿಸುತ್ತಿರುವಾಗ ಈ ಟೀವಿಯಲ್ಲಿ ದೇವಸ್ಥಾನಗಳನ್ನ ತೋರಿಸ್ತಾರಲ್ಲ ಆ ಕಾರ್ಯಕ್ರಮ ಕಣ್ಣಿಗೆ ಬಿತ್ತು. ಅವತ್ತು ರಾಗಿ ಗುಡ್ಡದ ಹನುಮಂತಪ್ಪ ನಮ್ಮ ಮನೆ ಅತಿಥಿಯಾಗಿದ್ದ. ನನ್ನ ತಂಗಿ ಹೇಳಿದ್ಲು - "ನಾನು ರಾಗಿ ಗುಡ್ಡಾನೆ ನೋಡಿಲ್ಲ ಕಣೆ , ಬೆ೦ಗಳೂರಿನಲ್ಲಿ ಇಷ್ಟು ವರ್ಷದಿಂದ ಇದ್ದರೂನು " ಅ೦ತ . ಸರಿ ಹಾಗಿದ್ರೆ ಸಂಜೆ ೭ ಕೆ ಹನುಮಂತನಗರಕ್ಕೆ ಬಂದರೆ ಸಾಕು ತಾನೇ, ಕಾಫಿ ಕುಡಿದು ರಾಗಿ ಗುಡ್ಡಕ್ಕೆ ಹೋಗೋಣ . ಅಲ್ಲಿಂದ ನೇರವಾಗಿ ಕಲಾಸೌಧಾಗೆ ನಾಟಕದ ಟೈಮ್ ಗೆ ಸೇರೋಣ ಅಂತ ಪ್ಲಾನ್ ಮಾಡಿದ್ವಿ.

ನಾಲ್ಕು ಕಾಲಿರಬೇಕು ಸಮಯ ನಾವು ಮೂವರು ಹೊರಟ್ವಿ ಮಾರುತಿರಾಯನ ನೋಡಲಿಕ್ಕೆ. ನಮ್ಮೀ ಬೆಂಗಳೂರಿನ ಟ್ರಾಫಿಕ್ ಬಗ್ಗೆ ನಿಮಗೇನು ಹೊಸದಾಗಿ ತಿಳಿಸಬೇಕಾಗಿಲ್ಲ. ದಿನಬೆಳಗಾದ್ರೆ ತಪ್ಪದೆ ಇರೋ ಗೋಳು ಅಂದ್ರೆ ಇದೊಂದೇ ಅಂತ ಆಗ್ಬಿಟ್ಟಿದೆ ನಮ್ಮ ಜೀವನದಲ್ಲಿ. ಅದರಲ್ಲೂ ಶನಿವಾರ ಸಾಯಂಕಾಲ, ಇಮಾಜಿನ್ ಮಾಡಿ , ಕಾರ್ ನಲ್ಲಿ   ಬೇರೆ ಹೊರಟಿದ್ವಿ . ಹೇಗೋ ನಮ್ಮ ಸೂಪರ್ ಲೇಡಿ ಎಕ್ಸ್ಪರ್ಟ್ ಇದ್ದಿದ್ರಿ೦ದ ಐದು ಇಪತ್ತಕ್ಕೆಲ್ಲಾ ರಾಗಿ ಗುಡ್ಡದಲ್ಲಿ ಹಾಜರ್. ನಾನು ರೆಗ್ಯುಲರ್ ಆಗಿ ಇಲ್ಲಿಗೆ ಬರೋದ್ರಿಂದ ದೇವಸ್ಥಾನದಲ್ಲಿ ಯಾವ ಕೌಂಟರಿನಲ್ಲಿ ಅರ್ಚನೆ ಟಿಕೆಟ್ ತೊಗೋಬೇಕು, ಯಾವ ಕಡೆ ಎಂಟ್ರಿ ಕೊಡ್ಬೇಕು ಅ೦ತೆಲ್ಲಾ ತಿಳಿದಿತ್ತು . ಹನುಮ೦ತಪ್ಪನ ದರ್ಶನವ೦ತು ಆಯಿತು. ಟೈಮ್ ನೋಡಿದ್ವಿ ೬ ಕಾಲು ಹೊಡ್ದಿತ್ತು. ಈಗ ಹೊರಟರೆ ಸರಿ ಹೋಗತ್ತೆ ಅ೦ತ ನಾನು ನೆನಪಿಸಿದೆ. ಚಿತ್ರಾನ್ನ ಪ್ರಸಾದ ತಿನ್ಕೊಂಡು ಹಾಗೆ ನಡೆದುಕೊಂಡು ಬಂದು ಕಾರ್ ಹತ್ತಿದ್ವಿ. ಈಗ ಮಜಾ ಇದ್ದಿದ್ದು. ಹನುಮ೦ತನಗರಕ್ಕೆ ದಾರಿ ? ಅಯ್ಯೋ ಗೊತ್ತು ಆದ್ರೆ ಗೊತ್ತಿಲ್ಲ ಅನ್ನೋ ಪರಿಸ್ಥಿತಿ. ಬಾಯಿ ಇದ್ರೆ ಬೊ೦ಬಾಯಿನೆ ಸುತ್ತಬಹುದೂ ಅನ್ನೋ ಧರ್ಯ ದಿಂದ ಒಂದು ದಿಕ್ಕಿನಲ್ಲಿ ಪ್ರಯಾಣ ಶುರು ಆಯಿತು. ಗಾಂಧಿ ಬಜಾರ್ ಕಡೆಗೆ ದಾರಿ ತೋರಿಸೋ ಫಲಕ ಕಾಣಿಸ್ತು , ಸರಿ ದಿಕ್ಕಿನಲ್ಲಿರೋದು ಖಚಿತವಾಯಿತು. ಆದ್ರೆ ಅಲ್ಲಿ೦ದ ರಾಮಾ೦ಜನೇಯ ದೇವಸ್ಥಾನದೆಡೆಗೆ ಹೋಗೋದಾದ್ರೂ ಹೇಗೆ. ನೋಡೋಣ ಅನ್ಕೊಳ್ತಾ ಒಂದು ಕಡೆ ನಿಲ್ಸಿ ಒಬ್ರು ಆಂಟಿ ಗೆ ಕೇಳಿದ್ವಿ - "ಹೀಗೆ ಸ್ಟ್ರೈಟ್ ಹೋಗ್ರಮ್ಮ .. ದೊಡ್ಡ ರೋಡ್ ಒಂದು ಸಿಗತ್ತೆ ಅಲ್ಲಿ ಲೆಫ್ಟ್ ಹೋಗಬೇಕು , ಯಾರನ್ನಾದ್ರು ಅಲ್ಲಿ ಗೆ ಹೋಗಿ ಕೇಳಿ" ಅಂತಂದ್ರು.

ಅಷ್ಟು ಡೈರೆಕ್ಶನನ್ನು ಚಾಚು ತಪ್ಪದೆ ಪಾಲಿಸಿದ್ದಾಯಿತು.. ೭ ಆಗ್ತಾ ಬಂತು ಬೇಗ ತಲುಪಬೇಕು ಅನ್ನೋದು ತಲೆಯಲ್ಲಿ ಓಡೋಕೆ ಸ್ಟಾರ್ಟ್ ಆಯಿತು. ಈಗ ಆಪರೇಷನ್ ರಾಮಾ೦ಜನೆಯ ಫುಲ್ ಫಾರಂ ನಲ್ಲಿ ಪ್ರಾರಂಭ. ಪ್ರತಿಯೊಂದು ರಸ್ತೆ ಕೊನೆಯಲ್ಲಿ ಕಾರ್ ನಿಲ್ಲಿಸಿ ಕೇಳೋಕ್ಕೆ ಶುರು ಮಡ್ಕೊಂಡ್ವಿ ಹೇಗೆ ಹೋಗಬೇಕು ಅ೦ತ . ಒಬ್ರು ರೈಟ್ ಅಂದ್ರೆ ,ಇನ್ನೊಬ್ರು ಹೀಗೂ ಹೋಗಬಹುದು. . ಹಾಗು ಹೋಗಬಹುದು. . . ನಾವೇನಾದ್ರು ಟ್ರೈಯಲ್ ಅಂಡ್ ಎರರ್ ಪ್ರೋಗ್ರಾಮ್ ಮಾಡ್ತಿದ್ದಿವೇನೋ ಅಂತ ಅನ್ಸೋಕ್ಕೆ ಆರಂಭವಾಯಿತು. ಒಂದು ಹಣ್ಣು ತಲೆ ತಾತಂಗೆ ಕೇಳಿದ್ರೆ "ನೋಡಮ್ಮ ಹೀಗೇ ಹೋಗಿ ಸ್ಟ್ರೈಟಾಗಿ, ಅಲ್ಲಿ ವಿಜಯ ಬ್ಯಾಂಕ್ ಬರತ್ತೆ , ಅಲ್ಲೇ ಲೆಫ್ಟ್ ತೊಗೋಬೇಕು" ಸರಿ ಥ್ಯಾಂಕ್ಸ್ ಅಂತ ಅಕ್ನಾಲೆಡ್ಜ್ ಮಾಡಿದ್ದೆ ತಡ ನಾವು ಮು೦ದೆ ಹೋಗೋಕ್ಕೆ ಸ್ಟಾರ್ಟ್ ಮಾಡಿದ್ವಿ. ಕಾರ್ ಹತ್ತಡಿ ಮುಂದೆ ಹೋಗೋಷ್ಟ್ರಲ್ಲಿ , ತಾತನ ಜೊತೆಗಿದ್ದ ಮತ್ತೊಬ್ಬ ವೃದ್ಧರು " ಅಯ್ಯೋ ಅದೇ ತಬ್ಕೊಂಡಿರೋ ರಮಾ೦ಜನೆಯ ದೇವಸ್ಥಾನ ಆದ್ರೆ ನಂಗು ಅಲ್ಲೇ ಹೋಗಬೇಕಿತ್ತು" ಅಂತ ಹೇಳೋದು ಕೇಳಿಸ್ತು . ಆದ್ರೆ ನಾವು ಟ್ರಾಫ್ಫಿಕಿನಲ್ಲಿ ಆಗಲೇ ಮುಂದೆ ಬಂದ್ಬಿಟ್ಟಿದ್ವಿ ಪಾಪ. ಹತ್ತು ನಿಮಿಷ ಇದೆ ಅನ್ನೋವಾಗ ರಮಾ೦ಜನೆಯನ ದರ್ಶನವಾಯಿತು. ಅಬ್ಬಾ ಫೈನಲ್ಲಿ ಕಲಾಸೌಧದ ಮೆಟ್ಟಿಲನ್ನು ಹತ್ತುತ್ತಾ ಗಡಿಯಾರ ನೋಡಿದೆ. ಇನ್ನು ೫ ನಿಮಿಷ ಇದೆ ಅಂತ ಡಿಕ್ಲೇರ್ ಮಾಡಿದೆ. ನನ್ನ ತಂಗಿ ಮುಖ ಕೆಂಪಾಗಿತ್ತು. ಹೌದೂ ಕೋಪಾನೆ. ದಾರಿ ಗೊತ್ತು ಅಂತ ಹೇಳಿ ಕರ್ಕೊಂಡು ಹೊರಟಿದ್ದು ನಾನಲ್ವ. ಇಷ್ಟು ಸರ್ಕಸ್ ಮಾಡಬೇಕಾಯಿತು. ನಾವಿಬ್ಬರು ದಾರಿ ಹುಡೋಕ್ದ್ರಲ್ಲಿ ಸ್ವಲ್ಪ ವೀಕ್ ಅಂತ ಇಬ್ರಿಗೂ ಗೊತ್ತು . ಹಾಗಾಗಿ ಏನೂ ಹೆಚ್ಚು ಮಾತಾಡದೆ ಟಿಕೆಟ್ ಕೌಂಟರ್ ಕಡೆಗೆ ಹೊರಟ್ವಿ.

ಟಿಕೆಟ್ ತೊಗೊಂಡು ಬಾಲ್ಕನಿ ಸೀಟ್ಸ್ಗೆ ಹೋಗಿ ಸೆಟಲ್ ಆದ್ವಿ. ಸುಮಾರು ವರ್ಷಗಳೇ ಆಗಿತ್ತು ನಾನು ನಾಟಕ ನೋಡಿ. ಶಾರ್ಪ್ ಏಳು ಮೊವತ್ತಕ್ಕೆ ನಾಟಕ ಪ್ರಾರಂಭ ಆಗತ್ತೆ ಅಂತ ಮೊದಲೇ ತಿಳಿಸಿದ್ಲು ನನ್ನ ಕಸಿನ್. ಹೊಸಬೆಳಕು ಚಿತ್ರದಲ್ಲಿ ರಾಜಕುಮಾರ್ ದು ಗಯ್ಯಾಳಿ ಅಕ್ಕ ಇದ್ದಾಳಲ್ಲ .. ಹೂನ್ರಿ ಅದೇ ಸರಿತಾನ ಯಾವಾಗಲು ಗೋಳು ಹೊಯಿಕೊಳ್ತಾಳಲ್ಲ, ಆ ಪಾತ್ರ ವಹಿಸ್ತಾ ಇದ್ಲು ನನ್ನ ಕಸಿನ್. ನೆನಪಾಗಲಿಲ್ವಾ? ಅಶ್ವತ್ದು ಎರಡನೇ ಹೆಂಡ್ತಿ , ಅವಳಿಗೆ ಇನ್ನೊಂದು ಮಗಳು... ಈಗ ಗೊತ್ತಾಯಿತು ತಾನೇ. ಮೊದಲನೇ ದ್ರುಶ್ಯ - ಇವ್ಳು ಹಾಗು ಅಶ್ವತ್ ಪಾತ್ರ ವಹಿಸುತ್ತಿದ್ದ ಮತ್ತೊಬ್ಬ ನಟ ಸ್ಟೇಜ್ ಮೇಲೆ ಕಂಡರು. ಮಾಮೂಲಿ ತರಹ ಸರಿತಾಗೆ ಬೈತಾ ಇರೋ ಸೀನು ನಡಿಯಿತು . ರವಿ(ರಾಜಕುಮಾರ್) ಎಂಟ್ರಿ ತೊಗೊಂಡ. ಪ೦ಚ್ ಲೈನ್ಸ್ ಮಾತ್ರ ಸೂಪೆರೋ ಸೂಪರ್. ಒಬ್ರಿಗಿಂತ ಒಬ್ರ ಡೈಲಾಗ್ಸ್ ಮಸ್ತಾಗಿತ್ತು, ಸ್ಕ್ರೀನ್ಪ್ಲೇಯ್ ತುಂಬಾ ಚೆನ್ನಾಗಿದೆ. ಅಯ್ಯೋ "ಹೊಸಬೆಳಕು ಮೂಡುತಿದೆ.." ಹಾಡಿಗೆ ಡಾನ್ಸ್ ಎಲ್ಲಾ ಇತ್ರಿ. ಅದೇ ಸ್ಟೆಪ್ಸ್ ಅದೇ ನಗು .. ಸ್ಲೋ ಮೋಶನ್ ಅಬ್ಬಬ್ಬಾ.. ನಗು ಅಂತು ಎಲ್ಲೆಡೆ ತುಂಬಿತ್ತು.

ಚಲನಚಿತ್ರಾನಾ ನಾನು ಏನಿಲ್ಲ ಅಂದ್ರು ಒಂದು ೨೦ ಸರ್ತಿ ನೋಡಿರಬಹುದು. ನೆನಪಿದ್ಯಾ ಮಮತಾ ರಾವ್ ದೆಹಲಿನಲ್ಲಿ ರಾಜಕುಮಾರ್ ಗೆ ಸಿಕಿದ್ದು. ಆ ಸನ್ನಿವೇಶಾನೂ ಅಳವಡಿಸಿಕೊಂಡಿದ್ದಾರೆ. ರವಿಗೆ ಒಬ್ಬ ಗೆಳೆಯ ನಮ್ಮ ಶ್ರೀನಿವಾಸಮೂರ್ತಿ ಕಣ್ರೀ... ಅದೇ ತರಾ ಇರೋ ಒಬ್ರನ್ನ ಇಲ್ಲಿ ತಗಲು ಹಾಕಿಕೊಂಡಿದ್ದಾರೆ. ಸಕತ್ತಾಗಿ ನಟಿಸ್ತಾರೆ. ಏನೇ ಬರಿಯೋದನ್ನ ಮರೆತರೂ ನಂಗೆ ಫೈಟ್ ಸೀನ್ ಮಾತ್ರ ವರ್ಣನೆ ಮಾಡದೆ ಇರೋಕೆ ಆಗೋಲ್ಲ. ಆ ಜುಟ್ಟು ಪೈಲ್ವಾನ್ ಏನ್ರೀ ಅವ್ನ ಗ೦ಟಲೂ? ಅವನ ಶಿಷ್ಯರೋ ಅವ್ರ ಫೈಟಿ೦ಗೋ - ಹಳೇಕಾಲದ ಸ್ಲೋ ಮೋಶನ್ ಫೈಟ್ ಸೀಕ್ವೆನ್ಸನ ಹೇಗ್ರಿ ಮರೆಯೋಕೆ ಆಗತ್ತೆ . ಅದನ್ನ ಮತ್ತೆ ನಮ್ಮ ಕಣ್ಮುಂದೆ ತಂದಿಡುವ ಪ್ರಯತ್ನ ಮಾಡಿದ್ದಾರೆ. ನಿಜವಾಗ್ಲೂ ಪ್ರಶಂಸೆ ಗೆ ಪಾತ್ರವಾಗಿದೆ ಪೂರ್ಣ ಸನ್ನಿವೇಶ.

ಇದೆಲ್ಲಾ ಹಾಗಿರಲಿ ನಮ್ಮ ರವಿ ಅಂಡ್ ವತ್ಸಲದು ಡ್ಯುಯೆಟ ಸಾಂಗ್ "ರವಿ ನೀನು ಆಗಸದಿ೦ದ ಮರೆಯಾಗಿ . . " , ವತ್ಸಲ ಸಂಗೀತ ಪಾಠದ "ತೆರೆದಿದೆ ಮನೆ ಓ ಬಾ ಅತಿಥಿ" ನನ್ನನ್ನು ಸಿನಿಮಾ ಲೋಕಕ್ಕೆ ಕರೆದೊಯ್ದಿತು . ವಾಸು ಬಗ್ಗೆ ಏನು ಹೇಳಲೇ ಇಲ್ಲ ಅಲ್ವಾ ನಾನು. ಈ ಸಾಫ್ಟ್ವೇರ್ ಇಂಜಿನಿಯರ್ ವತ್ಸಲನ್ನ ಮದುವೆ ಆಗೋಕ್ಕೆ ನೋಡಲು ಬಂದ ವರ. ಇಂಜಿನಿಯರ್ ಲಕ್ಷಣ ಕಡಿಮೆ ಇದ್ರೂ ವತ್ಸಲನ್ನ ಮೆಚ್ಚಿ ಹೋದ ಹುಡುಗ ಇವ್ನು. ರವಿಯ ಅಕ್ಕ ರಾಜಿ ಮಾಡಿದ್ದ ಉಪ್ಪಿಟ್ಟು ತಿಂದು ಪೊಂಗಲ್ ಚೆನ್ನಾಗಿದೆ ಅಂತ ಫ್ರಾಂಕ್ ಆಗಿ ಹೇಳಿ ಹೋದವ ಇವ್ನು. ರಾಜಿಗೂ ಅದೇ ಬೇಕಾಗಿದ್ದುದ್ದು. ವತ್ಸಲನ್ನ ಮನೆಯಿ೦ದ ಸಾಗಹಾಕಿದ್ರೆ ಸಾಕು ಅ೦ತಿದ್ದವ್ಳು ಇವ್ಳು. ಯಾಕೆ ಹೇಳಿ ? ಹೌದ್ರಿ ತನ್ನ ಮಗಳನ್ನ ರವಿಗೆ ಕೊಟ್ಟು ಮದುವೆ ಮಾಡಬಹುದಲ್ವಾ ಅದಕ್ಕೇನೆ. ಆದ್ರೆ ರವಿ ಮತ್ತು ವತ್ಸಲ ನಡುವೆ ಇದ್ದ ಪ್ರೀತಿ ಇದಕ್ಕೆ ಅವಕಾಶ ಕೊಡ್ತಾ ಇರ್ಲಿಲ್ಲ . ಮಾತಿನ ಚಕಮಕಿ ನಡೆಯಿತು. ರವಿ ಜೋರಾಗಿ ಕಿರುಚಿ ಹೊರಕ್ಕೆ ಹೋದ . ಹಿ೦ದೆನೇ ವತ್ಸಲ ಸ್ಟೇಜಿ೦ದ ಹೊರಕ್ಕೆ ಓಡಿ ಹೋದಳು.

ನಮ್ಮ ಸಿನಿಮಾದಲ್ಲಿ ರವಿಗೆ ಅಲ್ವೆ ಕಣ್ಣು ಹೋಗೋದು ಆಕ್ಸಿಡೆ೦ಟಾಗಿ . ಇಲ್ಲಿ ರೆವೆರ್ಸ್ ರೀ ಕಣ್ಣು ಹೋಗಿ ಕುರುಡಿ ಆಗೋದು ವತ್ಸಲ.
ಹಾಸ್ಪಿಟಲ್ ದೃಶ್ಯ :ವತ್ಸಲಳ ತಾಯಿ ಅವಳಿಗಾಗಿಟ್ಟಿರುವ ಹತ್ತು ಲಕ್ಷ ರೂಪಾಯಿ ಹಣವನ್ನು ತಾನು ದಾನ ಮಾಡುವುದಾಗಿ ಒಬ್ಬಬ್ಬರಿಗೂ ತಿಳಿಸುವಳು, ವಾಸುಗೆ ತನ್ನ ಸಾಫ್ಟ್ವೇರ್ ಕಂಪನಿ ಉದ್ದಾರಕ್ಕೆ ಸಾಲವಾಗಿ ಹಣ ಸಹಾಯ ಮಾಡುವಳೆ೦ದು, ಚಿಕಮ್ಮ೦ಗೆ ತನ್ನ ತ೦ಗಿಯ ಮದುವೆಗೆ ಉಪಯೋಗವಾಗಲೆಂದು, ರವಿ ಗೆ ಸಂಗೀತ ಶಾಲೆ ಪ್ರಾರ೦ಭಿಸಲೆ೦ದು. ಇದನೆಲ್ಲಾ ಕೇಳಿ ಎಲ್ಲರ ಮನ ಕರಗುವುದು. ವತ್ಸಲನ ತ೦ದೆ ಎಲ್ಲರಿಗೂ ವತ್ಸಲ ಹಾಗು ತಾನು ರೂಪಿಸಿದ ನಾಟಕ ಇದು ಅಂತ ತಿಳಿಸುವನು.
ಅವಳು ಹಾಗೆ ನಟನೆ ಮಾಡಿ ಅ೦ತು ಎಲ್ಲರ ಕಣ್ಣು ತೆರೆಸಿದಳು ಅ೦ತ ಒ೦ದು ದಯಾಲೋಗ್ ಹೊಡಿತಾರೆ.

ಒಟ್ಟಿನಲ್ಲಿ ನಮ್ಮ ಸರ್ಕಸ್ಗೆ ಪೂರ್ತಿ ಪೈಸಾ ವಸೂಲ್ ಆಯಿತು ನೋಡ್ರಿ ಈ ಒ೦ದೂವರೆ ಘ೦ಟೆಯ ನಾಟಕ. ರೆಕಮ್ಮೆಂಡ್ ಮಾಡ್ತಿದ್ದೀನಿ ಮುಂದೆನಾದ್ರು ಇದರ ಪ್ರದರ್ಶನ ಮತ್ತೆ ಇರುವಲ್ಲಿ ನೀವು ಖಂಡಿತ ಹೋಗಿ ನೋಡಿ.

ನೆಕ್ಸ್ಟ್ ತಲೆ ಬಿಸಿ ಆಗಿದ್ದು ವಾಪಾಸ್ ಮನೆಗೆ ಹೇಗೆ ಹೋಗೋದು ಅ೦ತ. ಅಗೈನ್ ಡೈರೆಕ್ಶನ್ ಪ್ರಾಬ್ಲಮ್. ಬಟ್ ಈ ಸರ್ತಿ ಒಂದು ಕಡೆ ಮಾತ್ರ ಮಿಸ್ ಆಗಿದ್ದು , ಹೇಗೋ ಗಾಂಧಿ ಬಜಾರ್ ತಲುಪಿದ್ವಿ , ಅಲ್ಲಿ೦ದ ನಮ್ಮ ಮಾಮೂಲಿನ ರೂಟ್ ಹಿಡಿದ್ವಿ.
ಹೀಗಿರತ್ತೆ ನಮ್ಮ ಸಾಟರ್ಡೇಸ್ ಮತ್ತು ಸ೦ಡೇಸ್ ಒನ್ಸ್ ಇನ್ ಅ ವೈಲ್ - ಅ ಲಿಟಲ್ ಅಡ್ವೆಂಚರ್ ಅಂಡ್ ಅ ಲಿಟಲ್ ಲೈಟ್ ಮೊಮೆಂಟ್ಸ್ ಟು ಶೇರ್ ವಿಥ್ .ಅದಕ್ಕಾಗೆ ಈ ಅ೦ಕಣಕ್ಕೆ ಆಗಾಗ್ಗೆ ಭೇಟಿ ಮಾಡ್ತಾ ಇರಿ. ಇನ್ನೊಂದು ಹೊಸ ಪುಟ ದೊ೦ದಿಗೆ ಮತ್ತೆ ಬರ್ತೀನಿ.
ಅಲ್ಲಿಯವರೆಗೂ ಹ್ಯಾಪಿ ರೀಡಿ೦ಗ್!
ಅಶ್ವಿನಿ

ಏನ್ಮಾಡಲಿ?

ಮುತ್ತು ರತ್ನ ವಜ್ರ ವೈಢೂರ್ಯ
ನಾಚಿದವು ಕಂಡು ನಿನ್ನೀ ಸರಳ ಸೌಂದರ್ಯ
ಚೆಂದದ ಗೆಳತಿ ತಿಳಿಸುವೆಯಾ
ಏನಿದರ ಗುಟ್ಟಿನ ಒಳ ರಹಸ್ಯ

ಕನ್ನಡಿಯೇ ಬಾಗಿಲ೦ಚಲಿ ಮರೆಯಾಗಿ ನಿಂತಿದೆ
ಪ್ರಜ್ವಲಿಸುತ್ತಿರುವ ನಿನ್ನೀ ಮಿ೦ಚಿನ ನೋಟದಿಂದ
ಅದರಲ್ಲೇನಿದೆ ಆಶ್ಚರ್ಯವೆಂದು ಕೇಳುವೆಯ ಗೆಳೆಯ
ತಿಳಿಯದಾಗಿದೆ ಹೇಗೆ ಪಾಡಲಿ ಮೆಚ್ಚುಗೆಯ ಸಾಲ

ಅರಳಿದೀ ಸೊಗಸಾದ ಮೊಗದಿ
ಏಕೋ ಹುಸಿ ಮುನಿಸು ಮೂಡಿ ಬಂದಿದೆ
ಅರಿಯಲಾಗದೆ ಒಗಟಾಗೆ ಉಳಿದಿದೆ
ಎಲ್ಲಾ ಪ್ರಶ್ನೆಗಳಾಗಿ ಮನದಲಿ

ಆದರೇನಂತೆ, ತುಟಿಯಂಚಿನ ಅ ತುಂಟ ಕಿರುನಗೆ
ಕರೆಯುತಿದೆ ನಿನ್ನೆಡೆಗೆ
ಬರಲೇ? ಇಲ್ಲೇ ಬೆರಗಾಗಿ ನಿಲ್ಲಲೇ?
ಏನ್ಮಾಡಲಿ ಏನ್ಮಾಡಲಿ ಏನ್ಮಾಡಲಿ?

- ಅಶ್ವಿನಿ

RiceaayaNa

Why is the title named so? Little bit of rambling into the below piece of writing helps you know more. . .



Mom,dad and aunt were on a 3 day schedule of visiting relatives. Saturday afternoon - already headed to attend a house warming ceremony at Shimoga - a town about 6 and odd hours travel distance away on road from the Busy Bangalore. The weekend of Sankranti was so gloomy altogether, everone at home had flu and it had got onto us with a weirdest symptom I could think of. No nostrils blocking ,no head ache but kept everyone busy with the sneezing act.
Amidst all this,Sis and me tried to keep the kitchen routine going on as usual for the next 2 days making sure we have things right when the real time owners of the Kitchen return.


Sundays are usually the relaxing morning we have but this was an exception. My sweet saturday night had already gone for a toss. Guessing why? It was the water-day (hmm rather water night). Our locality has gotten into this odd hours for water schedules. Thanks to BWSSB(Water supply board). Midnight is when the filling of overhead water tanks or the sumps need to take place in order to quench the thirstof all water related activities for the following day and the one after that. I wonder how dad performs this routine activity with less or no hick-ups.I really admire him for doing this without much of a fuss every alternate day. Dad is now in Shimoga and we had to get this task accomplished. I Managed to fight "The always winning sleep" and "The sneezing" syndrome(remember the weird flu I had caught) , finally achieved victory of getting it done at quarter past 1!


Next thing I remember is that I hit back bed to catch some sleep before its time to wake up. I dont know why the sun does not like to rest even a second more than what is on his planner. He pops out promptly as the day sets in. Duty obidiently followed. But what about poor chaps like me and sis who crave to sleep a little more? while thats the way it is , we got up by the usual time even though we cribbed of less sleep for the rest of the day.


Breakfast idea was on mind previous night. The garbanzo pea was soaked overnight for the curry to be made. The chapatis were ready almost matching the shape of circles. Sis actioned out the plans and we had our tummys rejoicing in less than an hours time. What about lunch?? - to keep it simple I cooked some plain veggie rice and some dal tadka. Chinese menu filled our stomachs for dinner. Now thats it for sunday!


Here starts the real story. The trio were returning back to Bangalore from their short hectic vacation on Monday. They were expected at dinner time. I usually reach home late after the days work. So called up sis to cook some rice for all of us. I gave her the directions to be followed and let her do the rest of the task.



I enter home with a cheerful smile on face, happy to see mom back in kitchen. Darling Sis had finished cooking rice for dinner but it was undone. Could still feel rawness in rice. I was definite on the fact that there was some miss on what I had guided and the way she executed it. When inquired we found out that sis had cooked 4 cups of rice instead of 2. Rest all was fine. She was cooking rice in our fantastic rice cooker (pun intended - its automatic but needs manual intervention to have it whistle) for the first time and to add to this chaos , sis had also taken a piece of advise from our loving neighbour aunt. Now that the rice had to be cooked properly before consumption, remedial measures and ideas started pouring in to clear the damage. The rice went in for the second round of cooking and this time it was mom who took over the task. without any doubt, 20 min later the dining table was ready for dinner to be served.


Consequence of this cooking rice trial:


Sis says cooking rice without a cooker is far more easier and tension free - no hassles of waiting for the first whistle, no need to keep the count on them later on. Thats how she will cook rice going forward:) - the typical sis ways! Is the title apt for this complete episode? I hope you are in agreement with me.


Ashwini


ಸಂಕ್ರಾಂತಿ

Makara Sankranti

First festival of the year 2011. Definitely some freshness and a feel of joy!
From my childhood, the only things I have got to know about this festival are:
- It marks the beginning of the transmigration of Sun in his celestial path along northwards direction. - UttarayaNa- The harvest festival known better as "Suggi" in Karnataka, "Pongal" in Tamil Nadu ,"Tilgul" in Maharashtra
- eLLu bella , sakkare acchu shared and exchanged among the households.
- kichuchu haisodu - The cattle is made to cross the pyre.

Is this all this festival has to do with?

My thirst for reading and gaining more facts led me to the path of discovering something I had not thought about earlier. Wonder why this did not strike to me when I was an enthusiastic school kid.

An excerpt from the Wikipedia:
" According to western astronomy the festival SANKRANTI takes place around 21 days after the tropical winter solstice (between December 20 and 23rd) that marks the start of Uttarayana, which means northward journey of the Sun.
The winter solstice marks the beginning of the gradual increase of the duration of the day. The shortest day of the year is around December 21–22, after which the days begin to get longer. The winter Solstice is on December 21 or December 22, when the tropical sun enters Makara rashi. Therefore the date of Uttarayana is December 21. This was the actual date of Makar Sakranti too. But because of the Earth's tilt of 23.45 degrees and the precession of the Equinoxes , Ayanamasha occurs. This has caused Makara Sankranti to slide further over the ages. A thousand years ago, Makar Sankranti was on December 31 and is now on January 14. Five thousand years later, it shall be by the end of February, while in 9000 years it shall come in June
"

Curious freaks like me also might get to a state of wow when they read the below facts.

* PuraNas say that this is the day when "Sun visits his son" ( Surya rests in Shani's house who is the Lord of Makar rashi/Zodiac) .Irrespective of the fact they did net get along well,Surya made it a point to visit his son on this day. Hence this auspicious day symbolizes the relationship between father and son.

* It marks the start of the DAY for the Devataas - UttarayaNa /DevaayaNa, The DakshiNayaNa/PitrayaNa is said to be the Night of the Devatas( Gods )

* Bhishma chose this day to leave his mortal coil on this day.(he used "Icha mrityu" boon from his father). It is believed that the person who dies during the UttarayaNa period will become free from rebirth/transmigration.

* Lord Vishnu ended the ever increasing power of the demons[Asuras] by finishing them off and burying their heads under the Mandara Parvata. - Marks the end of negativities and beginning of the era filled with positivity.

* Latin American findings prove that the Mayans celebrated something similar to Sankranti - a Spring festival. The celebration of this auspicious festival dates back to 6000 years.

If you guys know more please do let me know.
I am filled with wholesome zeal and fervor , all ready for the celebrations coming by!

ಹಬ್ಬದ ಹೊಸ್ತಿಲ್ಲಲ್ಲಿ ಈ ಒಂದು ಪುಟ್ಟ ಕವನ ....

ಧನು ಇಂದ ಮಕರಕ್ಕೆ ಜಿಗಿದು
ಸೂರ್ಯ ತನ್ನ ಪಥವ ಬದಲಾಯಿಸಿದನು

ದಕ್ಷಿಣಾಯಣ ಮುಗಿದು
ಉತ್ತರಾಯಣ ಶುರು ಆಯಿತು

ಚಳಿಯು ಮಾಸಿತು
ಹೊಸ ಬೆಳೆ ಬಂದಿತು

ಸುಗ್ಗಿಯು ಬಂತು
ಹರುಷವ ತಂತು

ಎಳ್ಳು ಬೆಲ್ಲ ತಿಂದು
ಒಳ್ಳೆ ಮಾತಾ ನುಡಿದು

ಹೊಸ ಬಟ್ಟೆ ತೊಟ್ಟು
ಸಂತಸದಿ ಕುಣಿದು
ಬನ್ನಿ ನಲಿಯೋಣ ನಲಿದಾಡೋಣ
ಈ ಸಂಕ್ರಾಂತಿಯಂದು


- ಅಶ್ವಿನಿ

ಹೊಸ ಚಿಗುರು..

ಬಿದಿರು ಬೊಂಬೆಯಂತೆ ತೂಗಾಡಿ
ಮಲ್ಲಿಗೆಯ ಕಂಪಲ್ಲಿ ತೇಲಾಡಿ
ಬಣ್ಣದ ನವಿಲಂತೆ ಜಿಗಿದಾಡಿ
ನಲಿದು ಕುಣಿಯುವ ಆಸೆ ನನ್ನಲ್ಲಿ

ಅಕ್ಷರದ ದುಂಡಿನ ಗೆರೆಯಾಗಿ
ಪದಗಳಿಗೆ ಅರ್ಥವನು ತುಂಬಿ
ಹಾಡಿನ ಪಲ್ಲವಿಯ ಜೊತೆಯಾಗಿ
ಚರಣದ ಇಂಪಿಗೆ ತಲೆದೂಗಿ
ಪಂಜರದಿಂದ ಹೊರ ಹಾರುವ ಆಸೆ ನನ್ನಲ್ಲಿ

ಮಳೆಯ ಹನಿಯಲಿ ಮೊಗವ ಕಂಡು
ಹೆಣ್ಣಿನ ಚೆಂದದ ಸೌಂದರ್ಯದಿ ಮಿಂದು
ತಂಗಾಳಿಯಲಿ ಅಲೆಯಾಗಿ ಬಂದು
ಚಂದಿರನೆಡೆಗೆ ಎಗರುವ ಯತ್ನವಿಂದು
ಆಸೆಯಾಗಿ ಮೂಡಿದೆ ನನ್ನಲ್ಲಿ

ಶುಭ್ರ ನೀಲಾಗಸದಿ
ಮುದ್ದಾದ ಮೋಡದ ಮರೆಯಲಿ
ನಾಚಿ ನಿಂತು ,ಇಣುಕಿ
ಮುತ್ತಿನಂತ ನಗೆಯ ಬೀರಿ
ಪನ್ನೀರ ಸೂಸಿ
ಹಸಿರ ಹೆಚ್ಚಿಸುವಾಸೆ ನನ್ನಲ್ಲಿ

ದುಂಬಿಯ ನಾದಕೆ ಗುನುಗುನಿಸಿ
ಬೆಳಗಿನ ರವಿಯ ಕಿರಣದಿ
ಚಿಗುರಿದ ಎಲೆಯ ತುದಿಯಲಿ
ಕುಸುಮದ ಪರಾಗ ಸ್ಪರ್ಶದಿ
ಮೊಳಕೆ ಒಡೆದು ಕಣ್ಬಿಡುವಾಸೆ ನನ್ನಲ್ಲಿ

- ಅಶ್ವಿನಿ

Journey of Love: Chapter 8: Love in Full Bloom

As the train neared Bangalore, Arjun and Latha found themselves lost in each other's gaze, their hearts overflowing with love and gratit...