ಒಂದು ಜೋಡಿ - ಲೋಫ್ ಆಫ್ ಕ್ರಿಸ್ಪ್ಸ್! ಭಾಗ ೨
ಹೋಟೆಲ್ ಒಳಗೆ :
ಜೇಮ್ಸ್: ವೆಲ್ಕಮ್ ಟು "ಲೋಫ್ ಆಫ್ ಕ್ರಿಸ್ಪ್ಸ್". ಡು ಯು ಹ್ಯಾವ್ ದ ರೆಸರ್ವೇಶನ್?
ಕ್ರಿಶನ್: ನೋ ವಾಕಿನ್. ಟೇಬಲ್ ಫಾರ್ ಟೂ.
ಜೇಮ್ಸ್: "ಜಸ್ಟ್ ಅ ಮೊಮೆಂಟ್ ಸರ್. ವಿಲ್ ಗೆಟ್ ಬ್ಯಾಕ್ ಟು ಯು. ಪ್ಲೀಸ್ ಬಿ ಸೀಟೆಡ್" ಅಂತ ಹೇಳಿ ಮೆತ್ತನೆಯ ಸೋಫಾದೆಡೆಗೆ ಕೈ ತೋರಿಸಿದ.
ಮೂವರು ಡಿನ್ನರ್ ಆರ್ಡರ್ ಮಾಡಿ ಹಾಗೆ ಜೀವನ ಹೆಂಗಿದೆ , ಏನ್ ಮಾಡ್ತಾ ಇದ್ದಾರೆ ಅ೦ತೆಲ್ಲಾ ಮಾತಾಡೋಕೆ ಶುರು ಮಾಡಿದರು.
ಪ್ರಭವ್: ಹೇ ಮಗ. ಕಾಲೇಜ್ ಮುಗಿದ ಮೇಲೆ ಸಿಕ್ಕೆ ಇರ್ಲಿಲ್ಲ ಅಲ್ವೇನೋ? ಆಲ್ಮೋಸ್ಟ್ 8 ವರ್ಷ ಆಯಿತು. ಗಿಡ್ಡ, ಪಾಯಲ್, ಚಿಂಟು, ಮೇಘನ ಎಲ್ಲಾ ನಂಗೆ ಸಿಗ್ತಾ ಇರ್ತಾರೆ. ನೀನು ಮತ್ತೆ ಪಂಚೆ ನೆ ನೋಡಪ್ಪ ಕಾಲೇಜ್ ಮುಗಿದ ಮೇಲೆ ಒಂದೆರಡು ಸರ್ತಿ ಸಿಕ್ಕಿದ್ರಿ. ಆಮೇಲೆ ಕೆಲಸ ಅಂತ ಪಂಚೆ ಆನ್ಸೈಟ್ಗೆ ಹೋದ, ನೀನೋ ಹೈಅರ್ ಸ್ಟಡೀಸ್ ಅಂತ UK ಗೆ ಹೋಗ್ಬಿಟ್ಟೆ. ಅದಾದ ಮೇಲೆ ಟಚ್ ಅಲ್ಲೇ ಇಲ್ಲ.
ಸ್ವಾತಿ: ಎಲ್ಲ ನಿಂತರ ಇರೋಲ್ಲ ಕ್ರಿಶನ್. ಅಜ್ಜಪ್ಪ ತರಹ ಎಣ್ಣೆ ಹಚ್ಕೊಂಡು, ಯಾವಾಗ್ಲೂ ಫಾರ್ಮಲ್ಸ್ ಹಾಕೊಂಡು ... :)
ಪ್ರಭವ್: ಸ್ವಾತಿ ಇವ್ನು ಮೊದಲು ಹೀಗಿರಲಿಲ್ಲ. ಆ ಬ್ರಿಟಿಶ್ ನಾಡಿಗೆ ಹೋಗಿ ಬಂದ ಪ್ರಭಾವ ಇರಬೇಕು ನೋಡಿ.
ಕ್ರಿಶನ್: ಏನಿಲ್ಲಪ್ಪಾ .. ನಮ್ಮ ಆಫೀಸ್ ಕಸ್ಟಂ ಅಂಡ್ ಪೋಲಿಸಿ ನ ಶಿಸ್ತಿನಿ೦ದ ಫಾಲ್ಲೋ ಮಾಡ್ತಾ ಇದ್ದೀನಿ ಅಷ್ಟೇ. :)
ಪ್ರಭವ್: ಸರಿ ಸರಿ. ಮದುವೆ ಯಾವಾಗಾಯಿತು, ಏನ್ ಲವ್ವೋ ? ಅರ್ರೇ೦ಜ್ಡೊ ?
ಸ್ವಾತಿ: ಅಯ್ಯೋ ಶಾಸ್ತ್ರೋಕ್ತವಾಗಿ ಮದುವೆ ಆಗಿದ್ದೀವಿ .. ಅರ್ರೇ೦ಜ್ಡು.
ಕ್ರಿಶನ್: ಹ್ಞೂ.. ನೀನು ಏನು? ಇನ್ನು ಬ್ರಹ್ಮಚಾರಿ ನಾ? ..
ಪ್ರಭವ್: ಆ ದೇವರ ಕೃಪೆ ಇನ್ನು ನನ್ನ ಮೇಲೆ ಇದೆ .. ಸಧ್ಯಕ್ಕೆ ಫ್ರೀ ಹಕ್ಕಿ ಹಾಗೆ ಹಾರ್ಕೊ೦ಡು ಇದ್ದೀನಿ. ಮನೆಯಲ್ಲಿ ಹುಡುಗಿ ಹುಡುಕೋಕ್ಕೆ ಶುರು ಮಾಡಿದ್ದಾರಪ್ಪಾ.
ಅಷ್ಟರಲ್ಲಿ ಜೇಮ್ಸ್ ಆರ್ಡರ್ ಮಾಡಿದ್ದ ಸ್ಟಾರ್ಟರ್ಸ್ ಮತ್ತು ಸೂಪನ್ನು ತಂದು ಟೇಬಲ್ ಮೇಲೆ ಇಟ್ಟು "ಎಂಜಾಯ್" ಎಂದು ಹೊರಟ.
ನಗು, ಮಾತು , ಸಂತಸದಿಂದ ಕೂಡಿತ್ತು ಆ ರಾತ್ರಿಯ ಡಿನ್ನರ್. ಊಟ ಮುಗಿಸಿ ಪ್ರಭವ್ ಗೆ ಬೈ ಹೇಳುತ್ತಾ ಕಾರ್ ಹತ್ತಿರ ಬರುವಾಗ ಕ್ರಿಶನ್ ಸ್ವಾತಿ ಗೆ "5 ನಿಮಿಷ ಇಲ್ಲೇ ಇರು. ಪ್ರಭವ್ ಹತ್ರ ಬೇರೆ ಫ್ರೆಂಡ್ಸ್ ಫೋನ್ ನ೦ಬರ್ಸನ ತೊಗೊಂಡು ಬರ್ತೀನಿ" ಅಂತ ಹೇಳಿ ಪ್ರಭವ್ ನಿಲ್ಲಿಸಿದ್ದ ಅವೆ೦ಜರ್ ಬೈಕ್ ಕಡೆಗೆ ನಡೆದನು.
ಕ್ರಿಶನ್: ಪ್ರಭವ್ , ಪ್ರಿಯಾ ಹೇಗಿದ್ದಾಳೆ ? ಅವಳ ಬಗ್ಗೆ ನಿಂಗೆನಾದ್ರು ಗೊತ್ತಾ . ಬೇರೆ ಎಲ್ಲಾ ಫ್ರೆಂಡ್ಸ್ ಬಗ್ಗೆ ನೀನು ಹೇಳ್ದೆ ಆದರೆ..
ಪ್ರಭವ್: ಒಹ್ .. ಇನ್ನು ನೆನಪಿನಲ್ಲಿ ಇದ್ದಾಳೆ ಅಂತ ಆಯಿತು. ಎಲ್ಲಿ ಸಂಪೂರ್ಣವಾಗಿ ಪ್ರಿಯಾಳನ್ನ ಮರೆತು ಹೋಗಿದ್ಯೋ ಏನೋ ಅಂತ ಅನ್ಕೊಂಡಿದ್ದೆ. ಪ್ರಿಯಾಳ ಮದುವೆ ಆಯಿತು ರೀಸೆಂಟಾಗಿ ಅಂತ ಸುದ್ದಿ ಕೇಳ್ದೆ. ಆದ್ರೆ ಸ೦ತೋಷವಾಗಿದ್ದಾಳೋ ಇಲ್ವೋ
ಅನ್ನೋದು ನಂಗೆ ಗೊತ್ತಿಲ್ಲ.
ಕ್ರಿಶನ್: ನೀನು ನಂಗೆ ಈ ವೀಕೆಂಡ್ನಲ್ಲಿ ಸಿಗ್ತೀಯಾ, ಸ್ವಲ್ಪ ಮಾತಾಡಬೇಕು. ಫೋನ್ ನಂಬರ್ ಕೊಡು ನಿಂದು.
ಪ್ರಭವ್: "ಹ್ಞೂ ಆಯಿತು. ತೊಗೋ ನಂಬರ್. 98******** . ಓಕೆ ಬೈ ಕಣೋ. ಲೇಟ್ ಆಯಿತು ರೂಂಮೇಟ್ ವೈಟ್ ಮಾಡ್ತಾ ಇರ್ತಾನೆ. " ಎಂದು ಹೇಳಿ, ಬೈಕ್ ಸ್ಟಾರ್ಟ್ ಮಾಡಿ ಹೊರಟೆ ಬಿಟ್ಟ.
ಎಕ್ಸಿಟ್ ಹತ್ತಿರ ನಿಲ್ಲಿಸಿದ್ದ ಕಾರ್ ಬಳಿ ಬಂದ ಕ್ರಿಶನಿನ ಮುಖದಲ್ಲಿದ್ದ ಹುರುಪು ಇಂಗಿತ್ತು. ಏನೋ ಯೋಚನೆಯಲ್ಲಿ ಮುಳುಗಿದ್ದ ಹಾಗಿತ್ತು. ಇದನ್ನು ಗಮನಿಸಿದ ಸ್ವಾತಿ "ಇಸ್ ಎವ್ರಿಥಿಂಗ್ ಓಕೆ? ಕ್ರಿಶನ್ ಏನಾಯಿತು" ಅಂತ ಪ್ರಶ್ನಿಸಿದಳು.
ಕ್ರಿಶನ್: "ಏನಿಲ್ಲ ಸ್ವಾತಿ. ಹಾಗೆ ಕಾಲೇಜ್ ದಿನಗಳ ಬಗ್ಗೆ ಯೋಚಿಸುತ್ತಾ ಬಂದೆ." ಎಂದು ಹುಸಿನಗು ಬೀರುತ್ತಾ ನುಡಿದ.
ಸ್ವಾತಿ: "ಒಹ್ ಕಮಾನ್ ಡಿಯರ್ .. ಚೀರ್ ಅಪ್. ಹೊರೊಡೋ೦ಣ್ವಾ?"
ಕ್ರಿಶನ್: "ಹ್ಞೂ ಗಾಡಿ ಹತ್ತು."
ಮುಂದಿನ ಸಂಚಿಕೆಯಲ್ಲಿ ...

ಸ್ವಾತಿ ಬೆನ್ನಿಗೆ ತಗಲು ಹಾಕಿಕೊಂಡಿದ್ದ ಬ್ಯಾಗನ್ನು ಕೆಳಕ್ಕೆ ಇಳಿಸಿ ಸೋಫಾದ ಮೇಲೆ ಕುಳಿತಳು. ಪಕ್ಕದಲ್ಲಿ ಮೇಜಿನ ಮೇಲೆ ಇದ್ದ ನ್ಯೂಸ್ ಪೇಪರ್ ಎತ್ತಿಕೊಂಡು ಕ್ರಿಶನ್ ಸ್ವಾತಿಯ ಬಳಿ ಕುಳಿತ. ಎದುರು ಸೀಟ್ ನಲ್ಲಿ ತನ್ನ ಸರಧಿಗಾಗಿ ಕಾಯುತಿದ್ದ ಪ್ರಭವ್ ಕ್ರಿಶನ್ನನ್ನು ನೋಡಿದ. ಪ್ರಭವ್, ಕ್ರಿಶನಿನ ಕಾಲೇಜ್ ಫ್ರೆಂಡ್. ಅವನು ಕ್ರಿಶನ್ ಹತ್ತಿರ ಬಂದು ಹಲೋ ಎಂದಾಗ ಕ್ರಿಶನ್ ಸರ್ಪ್ರೈಸ್ ಇಂದ ಎದ್ದು "ಹೇ ಪ್ರಭವ್ ಹೇಗಿದ್ದೀಯ ?" ಎಂದು ಕೇಳಿದ. ಇಂಟ್ರೋಡಕ್ಶನ್ ಸೆಶನ್ ಆಗೋಷ್ಟ್ರಲ್ಲಿ ಜೇಮ್ಸ್ ಬಂದು ಸೀಟ್ ರೆಡಿ ಆಗಿದೆ ಅಂತ ಹೇಳಿದ . ಕ್ರಿಶನ್ ಜೇಮ್ಸ್ ಹತ್ರ ಇನ್ನೊಂದು ಸೀಟ್ ಅರೇ೦ಜ್ ಮಾಡೋಕ್ಕೆ ಕೇಳಿಕೊಂಡ .
ಮೂವರು ಡಿನ್ನರ್ ಆರ್ಡರ್ ಮಾಡಿ ಹಾಗೆ ಜೀವನ ಹೆಂಗಿದೆ , ಏನ್ ಮಾಡ್ತಾ ಇದ್ದಾರೆ ಅ೦ತೆಲ್ಲಾ ಮಾತಾಡೋಕೆ ಶುರು ಮಾಡಿದರು.
ಪ್ರಭವ್: ಹೇ ಮಗ. ಕಾಲೇಜ್ ಮುಗಿದ ಮೇಲೆ ಸಿಕ್ಕೆ ಇರ್ಲಿಲ್ಲ ಅಲ್ವೇನೋ? ಆಲ್ಮೋಸ್ಟ್ 8 ವರ್ಷ ಆಯಿತು. ಗಿಡ್ಡ, ಪಾಯಲ್, ಚಿಂಟು, ಮೇಘನ ಎಲ್ಲಾ ನಂಗೆ ಸಿಗ್ತಾ ಇರ್ತಾರೆ. ನೀನು ಮತ್ತೆ ಪಂಚೆ ನೆ ನೋಡಪ್ಪ ಕಾಲೇಜ್ ಮುಗಿದ ಮೇಲೆ ಒಂದೆರಡು ಸರ್ತಿ ಸಿಕ್ಕಿದ್ರಿ. ಆಮೇಲೆ ಕೆಲಸ ಅಂತ ಪಂಚೆ ಆನ್ಸೈಟ್ಗೆ ಹೋದ, ನೀನೋ ಹೈಅರ್ ಸ್ಟಡೀಸ್ ಅಂತ UK ಗೆ ಹೋಗ್ಬಿಟ್ಟೆ. ಅದಾದ ಮೇಲೆ ಟಚ್ ಅಲ್ಲೇ ಇಲ್ಲ.
ಕ್ರಿಶನ್: ಒಹ್ ಹೌದು ಕಣೋ. ನಂಗೆ ಕಾಲೇಜ್ ನವರು ಯಾರೂ ಈಗ ಟಚ್ ನಲ್ಲಿ ಇಲ್ಲ. ನೀನೇ ಫಸ್ಟ್ ಸಿಗ್ತಾ ಇರೋದು. ಆಕ್ಚುಯಲಿ ನಿಜ ಹೇಳ್ತೀನಿ.. ನಾನು ನಿನ್ನ ರೆಕಗ್ನೈಸ್ ಮಾಡೋಕೆ ಆಗ್ಲಿಲ್ಲ ಒಂದು ನಿಮಿಷ. ಫ್ರೆಂಚ್ ಬಿಅರ್ಡ್, ಸ್ಪೈಕ್ಸ್... ಲೋ ಏನಪ್ಪಾ ಹುಡುಗೀನ ಪಟಾಯಿಸೋಕ್ಕೆ ಈ ಸ್ಟೈಲಿ೦ಗಾ ?

Comments