ಒಂದು ಜೋಡಿ - ಆಸೆಯೋ ನಿರಾಸೆಯೋ ! ಅ೦ತಿಮ ಭಾಗ ೮

ಈ ಧಾರಾವಾಹಿಯ ಎಲ್ಲಾ ಕಂತುಗಳು ಕೇವಲ ಕಾಲ್ಪನಿಕ.ಇದರಲ್ಲಿ ಬರುವ ಪಾತ್ರಗಳು ಸನ್ನಿವೇಶಗಳು ಕೇವಲ ಕಾಲ್ಪನಿಕ.

ಪ್ರಭವ್ ಸ್ವಾತಿ ಮತ್ತು ಕ್ರಿಶನ್ ರನ್ನು ಪ್ರಿಯ ಇದ್ದ ವಾರ್ಡಿಗೆ ಕರೆದುಕೊಂಡು ಬಂದನು . ಅಲ್ಲಿ ಪ್ರಿಯಾಳಿಗೆ ಆಕ್ಸಿಜೆನ್ ಮಾಸ್ಕ್ ಹಾಕಿದ್ದರು . ಅವಳು ಜೋರಾಗಿ ಉಸಿರಾಡುತಿದ್ದಳು. ಅವಳ ತಂದೆ ಪಕ್ಕದಲ್ಲೇ ನಿಂತಿದ್ದರು .ಡಾಕ್ಟರ್ ಹಾರ್ಟ್ ಬೀಟ್ ಚೆಕ್ ಮಾಡ್ತಾ ಇದ್ರು. ಕ್ರಿಶನ್ ಗೆ ಪ್ರಿಯಾಳನ್ನು ಈ ಸ್ಥಿತಿಯಲ್ಲಿ ನೋಡಿ ಕಣ್ಣಲ್ಲಿ ನೀರು ತುಂಬಿತು. ಸದಾ ನಗುಮುಖದಿಂದ ಹಾರಡಿಕೊಂಡಿದ್ದವಳು ಇವತ್ತು ಈ ರೀತಿಯಲ್ಲಿ ಶಾಂತವಾಗಿ ಹಾಸಿಗೆಯಲ್ಲಿ ನೋಡಲು ಕ್ರಿಶನ್ ನ ಹೃದಯ ತುಂಬಿ ಬಂತು. ಸ್ವಾತಿ ಅವನ ಕೈ ಹಿಡಿದು ಸಮಾಧಾನಿಸಿದಳು. ಪ್ರಿಯಾಳ ಹತ್ತಿರ ಹೋಗಿ ಕ್ರಿಶನ್ ಒಮ್ಮೆ ಅವಳೊಡನೆ ಮಾತಾಡಬೇಕೆಂದು ಬಯಸಿದ.

ಕ್ರಿಶನ್: "ಪ್ರಭವ್ ಏನಾಯಿತು ಪ್ರಿಯಾಳಿಗೆ?" ಎಂದು ಅಳುತ್ತಲೇ ಕೇಳಿದ

ಪ್ರಭವ್: "ಕ್ರಿಶನ್ ಸಾರೀ, ನಂಗೆ ವಿಷ್ಯ ಮೊದಲಿಂದಲೂ ತಿಳಿದಿತ್ತು. ಆದ್ರೆ ಪ್ರಿಯಾ ನನ್ನ ಹತ್ರ ಮಾತು ತೊಗೊಂಡಿದ್ಲು, ನಿನಗೆ ಏನೂ ಹೇಳಬಾರದು ಅಂತ ..."

ಕ್ರಿಶನ್ : "ಏನು ಅಂತ ಈಗಲಾದರು ಹೇಳೋ . ಪ್ಲೀಸ್ ..."

ಪ್ರಭವ್ : "ಏಕ್ಷಾಮ್ಸಿನ ಕಡೇ ಪೇಪರ್ ಹಿಂದಿನ ದಿನ .. ಅವತ್ತು ಪ್ರಿಯಾ ಹಾಸ್ಟೆಲ್ ನಲ್ಲಿ ಓದ್ತಾ ಕೂತಿದ್ದಾಗ ಇದ್ದಿಕಿದ್ದಹಾಗೆ ಎದೆ ನೋವು ಸ್ಟಾರ್ಟ್ ಆಯಿತು . ಏನೋ ಗಾಸ್ಟ್ರಿಕ್ ಇರಬೇಕು ಅಂತ ಅಂದುಕೊಂಡಳು. ಆದರು ಅವಳ ತಂದೆ, ಡಾಕ್ಟರ್ ಗೆ ಒಮ್ಮೆ ತೋರಿಸಿ ಬಾರಮ್ಮ ಎಂದು ಹೇಳಿದರು . ಅದರಂತೆ ಇದೇ ಸಾನ್ವಿ ಹಾಸ್ಪಿಟಲಿಗೆ ಬಂದು ಚೆಕ್ ಅಪ್ ಮಾಡ್ಸಿ ಹೋದಳು. ಕಡೇ ಏಕ್ಸಾಮ್ಸಿನ ದಿನ ಬೆಳಿಗ್ಗೆ ಅವಳು ಕಾಲೇಜಿಗೆ ಇನ್ನೇನು ಹೊರಡಬೇಕೆ೦ದಿದ್ದಾಗ ಡಾಕ್ಟರ್ ಜಿತಿನ್ ಇಂದ ಕಾಲ್ ಬಂತು. ಹೃದಯದಲ್ಲಿ ಒಂದು ಹೋಲ್ ಇದೆ. ಇವಳಿಗೆ ತಕ್ಷಣ ಆಪರೇಷನ್ ಮಾಡಬೇಕು. ಆಪರೇಷನ್ ಮಾಡಿದರೂ ಇವಳು ಸಂಪೂರ್ಣವಾಗಿ ಗುಣವಾಗುತ್ತಾಳೆ ಅನ್ನೋ ಗ್ಯಾರಂಟೀ ಇಲ್ಲ ಅನ್ನೋದು ಇವಳಿಗೆ ತಿಳಿಸಿದರು . ಇವಳು ನಿನ್ನ ಹತ್ರ ತನ್ನ ಪ್ರೀತಿಯ ವಿಷಯ ಹೇಳುವ ಬದಲು ಸುಳ್ಳು ಕಥೆಯನ್ನ ಕಟ್ಟಿ ನಿನ್ನ ಸಂತೋಷಕ್ಕಾಗಿ ನಿನ್ನಿಂದ ಬಲು ದೂರ ಹೋದಳು. ಇವಳಿಗೆ UK ನಲ್ಲಿ ಆಪರೇಷನ್ ಮಾಡಿದರು. ಆದರೆ ಈಗ ..."

ಕ್ರಿಶನ್ : " ಈಗ ಏನೋ .. ಆಪರೇಷನ್ ಸುಕ್ಸೆಸ್ಸ್ ಆಯಿತಲ್ವಾ?"

ಪ್ರಭವ್ : "ಪೂರ್ಣ ಸುಕ್ಸೆಸ್ಸ್ ಆಗಿಲ್ಲ ..  ಈಗ ಅವಳು ಕ್ರಿಟಿಕಲ್ ಕಂಡಿಶನ್ನಲ್ಲಿ ಇದ್ದಾಳೆ. ನೀನು ಹೋಟೆಲ್ ನಲ್ಲಿ ನೆನ್ನೆ ಸಿಕ್ಕಿದ ವಿಷ್ಯ  ರಾತ್ರಿ ಆಸ್ಪತ್ರೆಗೆ ಬಂದು ಅವಳಿಗೆ ಹೇಳಿದ್ದೆ. ತುಂಬಾ ಸಂತೋಷ ಪಟ್ಲು. ನಿನ್ನ ಒಮ್ಮೆ ನೋಡಬೇಕು ಅಂತ ಆಸೆ ಪಟ್ಲು. ನಾನು, ಸರಿ ಶನಿವಾರ ಸಿಗ್ತೀನಿ ಅಂತ ಹೇಳಿದ್ದಾನೆ ಕರ್ಕೊಂಡು ಬರ್ತೀನಿ, ಅಂತ ಹೇಳಿದ್ದೆ .. ಆದ್ರೆ ಬೆಳಿಗ್ಗೆ ಅಂಕಲ್ ಫೋನ್ ಮಾಡಿದ್ರು. ಇಲ್ಲಿ ಬಂದು ನಿಂಗೆ ಮೆಸೇಜ್ ಮಾಡಿದೆ ಕಣೋ."

ಕ್ರಿಶನ್ : "ಒಹ್ ಪ್ರಿಯಾ. ಯು ನೆವರ್ ಚೇ೦ಜ್ಡ. ಯಾವಾಗಲು ಬೇರೆಯವರ ಸುಖದ ಚಿಂತೆ ಮಾಡ್ತಾ ಇದ್ದೆ."


ಪ್ರಿಯಾಳ ಕೈ ಬೇರೆಳನ್ನ ನಿಧಾನವಾಗಿ ಹಿಡಿದು ಒಮ್ಮೆ ಮೆಲುದನಿಯಲ್ಲಿ "ಯಿಪ್ಪೀ , ಪ್ಲೀಸ್ ಒಂದು ಸರ್ತಿ ನನ್ನ ನೋಡು, ಮಾತಾಡು. ನಿನ್ನ ಕಿಸ್ಸಿ ಬಂದಿದ್ದೀನಿ ."

ಪ್ರಿಯ ಕಣ್ಣು ತೆರೆದಳು. ಕಷ್ಟ ಪಟ್ಟು "ಕಿಸ್ಸಿ. ವಾಟ್ ಅ ಸರ್ಪ್ರೈಸ್ "? ಎಂದಳು

ಕ್ರಿಶನ್ :"ಯಿಪ್ಪೀ .. ಏನ್ ಇದು. ನಾನು ಇಷ್ಟು ನಿನಗೆ ದೂರ ಆಗಿಬಿಟ್ನ.. ಯಾಕೆ ಹೀಗೆ ಮಾಡಿದೆ."

ಪ್ರಿಯ : "ಹೇ ಪ್ರಭವ್, ಎಲ್ಲಾ ಹೇಳ್ಬಿಟ್ಯಾ. ನೀನೊಬ್ಬ.. ಸ್ವಾತಿ ಎಲ್ಲಿ. ಕರ್ಕೊಂಡು ಬಂದಿಲ್ವಾ ಕ್ರಿಶನ್ ?"

ಹಿಂದೆ ನಿಂತಿದ್ದ ಸ್ವಾತಿ ಕ್ರಿಶನಿನ ಪಕ್ಕದಲ್ಲಿ ಬಂದು ನಿಂತಳು. "ಪ್ರಿಯ,  ಸ್ಟ್ರೈನ್ ಮಾಡ್ಕೋಬೇಡಿ. ನಾನು ಇಲ್ಲೇ ಇದ್ದೀನಿ . " ಅಂತ ಹೇಳಿದಳು.

ಪ್ರಿಯ:" ಒಹ್ ಸ್ವಾತಿ. ಯು ಆರ್ ಬ್ಯೂಟಿಫುಲ್ ಅಂಡ್ ಲಕ್ಕಿ ಟೂ ."

ಸ್ವಾತಿ:" ಥಾಂಕ್ ಯು ಪ್ರಿಯಾ. ಐ ಅಂ ಲಕ್ಕಿ ಟು ಮೀಟ್ ಯು"

Dr ಜಿತಿನ್ : " ಪ್ಲೀಸ್ ಪ್ರಿಯಾಳಿಗೆ ಸ್ವಲ್ಪ ರೆಸ್ಟ್ ಬೇಕು. ಎಲ್ಲರೂ ದಯವಿಟ್ಟು ಹೊರಗೆ ಹೋಗಿ. ಲೆಟ್ ಶೀ ಸ್ಲೀಪ್." ಎಂದು ಹೇಳಿದರು .

ಪ್ರಿಯ: "ಡಾಕ್ಟರ್ , ಕ್ರಿಶನ್ ಹತ್ರ ಒಂದೆರಡು ನಿಮಿಷ ಮಾತಾಡಬೇಕು."

Dr ಜಿತಿನ್:"ಓಕೆ ಎರಡೇ ನಿಮಿಷ ಡಿಯರ್. ಇಂಜೆಕ್ಷನ್ ಕೊಟ್ಟಿದ್ದೀನಿ. ಆಮೇಲೆ ಮಲ್ಕೊಬೇಕು."

ಪ್ರಿಯ : "ಶುಅರ್ ಡಾಕ್ಟರ್"

ಎಲ್ಲಾರು ಹೊರಗೆ ಹೋದರು. ಸ್ವಾತಿ ಹೊರಟಾಗ ಪ್ರಿಯಾ ಅವಳ ಕೈ ಹಿಡಿದು ಅಲ್ಲೇ ಇರಲು ಸನ್ನೆ ಮಾಡಿದಳು.

ಪ್ರಿಯ:"ಕ್ರಿಶನ್ ನಾನು ನಿನ್ನ ಇಷ್ಟ ಪಟ್ಟಿದ್ದರೂ ನಿನ್ನ ಜೊತೆ ಬಾಳುವ ಅವಕಾಶ ದೊರೆಯಲಿಲ್ಲ.ನೀನು ಸುಖವಾಗಿರಬೇಕೆಂದು ನಾನು ನಿನ್ನಿಂದ ವಿಷಯ ಮುಚ್ಚಿಡ ಬೇಕಾಯಿತು .ನನ್ನ ಕ್ಷಮಿಸು. ನೀನು ಸ್ವಾತಿಗೆ ಎಲ್ಲಾ ವಿಷಯವನ್ನು ಮದುವೆಗೆ ಮೊದಲೇ ಹೇಳಿರಬೇಕು. ನಿನ್ನ ನಾನು ಅಷ್ಟು ಅರ್ಥ ಮಾಡ್ಕೊಂಡಿದ್ದೀನಿ ಅನ್ಸತ್ತೆ. ನಿಮ್ಮಿಬ್ಬರ ಜೀವನ ಚೆನ್ನಾಗಿರಲಿ. ನಾನು ಇನ್ನು ಹೆಚ್ಚು ಕಾಲ ಬದುಕುವುದಿಲ್ಲ. ಒಮ್ಮೆ ನಿನ್ನ ನೊಡಬೇಕೆ೦ದು ಬಯಸಿದ್ದೆ... " ಎಂದು ಹೇಳುತಿದ್ದಂತೆ ಅವಳ ಉಸಿರಾಟ ಮೇಲೆ ಕೆಳಗೆ ಆಗಲಾರಂಭಿಸಿತು.

ಸ್ವಾತಿ ಜೋರಾಗಿ ಹೊರಗೆ ಹೋಗಿ "ಡಾಕ್ಟರ್ ಜಿತಿನ್. ಡಾಕ್ಟರ್ ಜಿತಿನ್" ಎಂದು ಕೂಗಿದಳು.

ಪ್ರಿಯಾಳ ತಂದೆ ಒಳಗೆ ಬಂದು ತಮ್ಮ ಮಗಳ ತಲೆ ಸವರುತ್ತಾ " ಮಗಳೇ.." ಎಂದಾಗ ಕ್ರಿಶನ್ ನನ್ನು ಒಂದು ಕೈಯಲ್ಲಿ ಇನ್ನೊಂದು ಕೈಯಲ್ಲಿ ತನ್ನ ತಂದೆಯನ್ನು ಹಿಡಿದು ಕೊನೆ ಉಸಿರೆಳೆದಳು.

Comments

Rajalakshmi said…
fantastic, emotionally very strong, never expected the twist. good waiting for more such stories
@Rajalakshmi: Thank you! Glad you liked this. Let me bring out the best and share.Till then happy reading rest of my rants.

Popular Posts