ಒಂದು ಜೋಡಿ - ನೊಂದ ಮನಸು! ಭಾಗ ೩

ಕ್ರಿಶನ್ ದಿನ ನಿತ್ಯದಂತೆ ಅಂದು ಮನೆಗೆ ಬಂದ ಕೂಡಲೇ ಟಿ.ವಿ. ಆನ್ ಮಾಡಲಿಲ್ಲ. ಶೂ ಬಿಚ್ಚಿಡಲಿಲ್ಲ. ಸ್ವಾತಿ ರೂಂ ಗೆ ಹೋಗಿ ಫ್ರೆಶ್ ಆಗಿ ವಾಟರ್ ಬಾಟಲ್ ಗೆ ನೀರು ತುಂಬಿಸಲು ಅಡಿಗೆ ಮನೆಯತ್ತ ಹೊರಟಿದ್ದಳು. ಆಗ ಸೋಫಾದ ಮೇಲೆ ಕ್ರಿಶನ್ ಗಾಂಭೀರ್ಯದಿಂದ ಕುಳಿತಿರುವುದನ್ನು ಕಂಡು ಅಚ್ಚರಿಗೊಂಡಳು. ಮದುವೆಯಾದ ಈ ಒಂದು ವರ್ಷದಲ್ಲಿ ಮೊದಲ ಬಾರಿಗೆ ಕ್ರಿಶನ್ ಮುಖದಲ್ಲಿದ್ದ ಹೊಳಪು ಮಾಯವಾದ೦ತನಿಸಿತು ಸ್ವಾತಿಗೆ. ಮತ್ತೊಮ್ಮೆ ಕ್ರಿಶನ್ ನ ಹತ್ತಿರ ಬಂದು ಅವನ ಭುಜದ ಮೇಲೆ ಕೈ ಇರಿಸಿ "ಡಿಯರ್ ಏನ್ ಪ್ರಾಬ್ಲೆಮ್ಮು? ಹುಷಾರಿಲ್ವಾ?" ಅಂತ ಕೇಳಿದಳು.

ಕ್ರಿಶನ್ ಮಾತಾಡಲಿಲ್ಲ. ಕಣ್ಣೀರು ಕೆನ್ನೆ ಮೇಲೆ ಉರುಳಿತು. ಸ್ವಾತಿಯ ತೋಳಿನಲ್ಲಿ ಪುಟ್ಟ ಮಗುವಿನಂತೆ ಅಳಲು ಅವನಿಗೆ ಸ್ವಲ್ಪ ಸಮಾಧಾನವಾಯಿತು.

ಸ್ವಾತಿ:"ಕ್ರಿಶನ್ ಏನಾಯಿತು ಅಂತ ಹೇಳು ಪರವಾಗಿಲ್ಲ. ನಾನು ಅರ್ಥ ಮಾಡ್ಕೋಳ್ತೀನಿ."

ಹೀಗೆ ಸಮಾಧಾನಿಸುತಿದ್ದ ಸ್ವಾತಿ ಫ್ಲಾಶ್ ಬ್ಯಾಕ್ ಗೆ ಹೋದಳು.....

ಕ್ರಿಶನ್ ಸ್ವಾತಿಯನ್ನು ಮದುವೆ ಮಾಡಿಕೊಳ್ಳುವ ಮೊದಲು ಒಂದು ಹುಡುಗಿಯನ್ನು ತಾನು ಮನಸಾರೆ ಇಷ್ಟ ಪಟ್ಟಿದ್ದಾಗಿಯೂ, ಆದರೆ ಕಾರಣಾಂತರದಿಂದ ಅವಳ ಮರೆತು ಜೀವನದಲ್ಲಿ ಮುಂದೆ ಸಾಗಬೇಕಾಗಿದ್ದಾಗಿಯೂ ಹೇಳಿಕೊಂಡಿದ್ದನು. ಸ್ವಾತಿಯ ಮನೆಗೆ ಮೊದಲ ಬಾರಿಗೆ ಕ್ರಿಶನ್ ತನ್ನ ಸೋದರ ಮಾವನೊಂದಿಗೆ ಬಂದ್ದಿದ್ದನು. ಹೆಣ್ಣು ನೋಡುವ ಶಾಸ್ತ್ರದ ಬಗ್ಗೆ ಈ ಕರುನಾಡಿನಲ್ಲಿ ಹೇಗಿರತ್ತೆ ಅಂತ ನಿಮಗೇನು ಹೊಸದಾಗಿ ಹೇಳಬೇಕೇ. ಆದರು ಒಂದು ಜ್ಹಲಕ್ ನಮ್ಮ ಈ ಒಂದು ಜೋಡಿಯ ಜೀವನದಲ್ಲಿ
ಅದು ಹೇಗಿತ್ತೆಂದು ನೋಡೋಣ ಬನ್ನಿ .
 
 ಮುಂದಿನ ಸಂಚಿಕೆಯಲ್ಲಿ ...

Comments

Hope you like the next few episodes...

Popular Posts