ಮರೆತೆ ನಾ ನನ್ನನೆ.

Note : This is for Kannada readers only. This weekend I visited the green part of karnataka - Theerthahalli. Its no less than heaven and I have described the beauty of the land and my memories with it through this small poem.

ಮಳೆಯ ಸವಿ ತಂದ
ಮಲೆನಾಡ ಸಿರಿ ಚೆಂದ
ಆ ಹಸಿರ ನಡುವಲಿ
ಚಿಲಿಪಿಲಿಯ ಗುಂಗಲಿ

ಮರೆತೆ ನಾ ನನ್ನನೆ
ಕಣ್ಣರಳಿತು ಹಾಗೆ ಸುಮ್ಮನೆ
ನಗುತ ನಲಿದ ಕ್ಷಣಗಳ
ಮೆಲುಕು ಹಾಕುತ್ತಾ ಮುಂದೆ ನಡೆದೆ

ಮಲ್ಲಿಗೆಯ ಕಂಪು ಸೂಸುತಿರಲು
ನೇರಳೆ ಹಣ್ಣು ಅಲ್ಲಲ್ಲಿ ಚೆಲ್ಲಿರಲು
ಮಾವಿನ ಮರದ ಮೇಲೆ ಕುಳಿತು ಕೋಗಿಲೆ ಕೂಗುತಿರಲು
ಮೋಡಗಳು ಮಂದಹಾಸ ಬೀರಿ ನಲಿಯುತಿರಲು

ಮರೆತೆ ನಾ ನನ್ನನೆ
ಕಣ್ಣರಳಿತು ಹಾಗೆ ಸುಮ್ಮನೆ
ನಗುತ ನಲಿದ ಕ್ಷಣಗಳ
ಮೆಲುಕು ಹಾಕುತ್ತಾ ಮುಂದೆ ನಡೆದೆ

ಆ ದಿನದ ನೆನಪಾಯಿತಿಂದು
ಎಂದರೆ ತಪ್ಪಾಗಲಾರದು
ಮುಂಜಾನೆಯ ಭಾಸ್ಕರನಿಗೆ ನಮಸ್ಕಾರ ಮಾಡಿ
ಕೆಂಪು ಲಂಗ ನನ್ನ ಸಿಂಗರಿಸಿ


ಗೊರಟೆ ಹೂವ ಮಾಲೆ ಧರಿಸಿ
ಕೈನಲ್ಲಿ ಚೀಲವ ಹಿಡಿದು
ಪುಟುಪುಟು ಓಡುತ ಬಂದ ಛಾಯೆ
ಇನ್ನು ಕಣ್ಣಲಿ ಚಾಪಿ ನಿಂತಿದೆ

ಮರೆತೆ ನಾ ನನ್ನನೆ
ಕಣ್ಣರಳಿತು ಹಾಗೆ ಸುಮ್ಮನೆ
ನಗುತ ನಲಿದ ಕ್ಷಣಗಳ
ಮೆಲುಕು ಹಾಕುತ್ತಾ ಮುಂದೆ ನಡೆದೆ

ಹಿಂತುರುಗೋ ಮನಸಿಲ್ಲ
ಆದರೆ ನೌಕರಿ ಇದೆಯಲ್ಲಾ
ಮರುದಿನ ಬೆಳಿಗ್ಗೆ ದಿನಚರಿ ಪ್ರಾರಂಭ
ಅದೇ ರಾಮಾಯಣ ಅದೇ ರಂಪ :(

Comments

L KRUPAA said…
Beautifully written! Thirthalli is such wonderful place, nature at its best. Like u said, you hardly get the mind to move from there.
ನಿಮ್ಮ ವರ್ಣನೆಯ ಸಾಲುಗಳು ತುಂಬ ಚೆನ್ನಾಗಿವೆ... ಮಲೆನಾಡ ಹಸಿರು ಎಂದರೆ ಹಾಗೆ ಅಲ್ಲವೇ?
Sahana Rao said…
People who visit to that place are bound to feel every single line u have written Ashwini..:)
Amrit said…
Pictures are awesome even for English readers :))))
Anonymous said…
very nice Ashwini

Roopa
@ L Krupaa: Yeah definitely thats a wonderful place.. Reluctant was I to part from thirthalli last weekend.

@Girsh: Hmmmm absolutely..

@Sahana Rao: I know....

@A: :) :) I'd need to make that a point to be noted.. Glad you loved those greens in the picture.

@Roopa: Thank you!

Popular Posts