ಶ್ಯಾಲ್ ವೀ ಡಾನ್ಸ್ ??? ... ಭಾಗ ೪
ಕೆಲವು ದಿನಗಳಿಂದ ಚಾರೂ ಕೆಲಸದ ಒತ್ತಡದಲ್ಲಿ ವಿಭಾಳಿಗೆ ಹೆಚ್ಚು ಸಮಯ ಕೊಡಲಾಗಿರಲಿಲ್ಲ. ಅವಳ ಸಣ್ಣ ಸಣ್ಣ ಖುಷಿಯಲ್ಲಿ ೩ ವರ್ಷದಿಂದ ಭಾಗಿಯಾಗಿದ್ದವನು ಈ ಕಳೆದ ಎರಡು ತಿಂಗಳಿಂದ ಯಾವುದರಲ್ಲೂ ಆಸಕ್ತಿ ತೋರಿಸುತ್ತಿರಲಿಲ್ಲ. ಏನೆಂದು ವಿಚಾರಿಸಲು ಪ್ರಯತ್ನಿಸಿದ ವಿಭಾಳಿಗೆ ಕಹಿ ಮಾತುಗಳ ಸುರಿಮಳೆಯೇ ಆಗಿತ್ತು. ಕೆಲವು ವಿಪರೀತ ವಾದಗಳು , ಪ್ರತಿವಾದಗಳು ನಡೆದಿದ್ದವು. ಹೀಗೊಮ್ಮೆ ಜಗಳವಾಡುತಿದ್ದಾಗ ಚಾರೂ ಸಿಟ್ಟಿನಲ್ಲಿ "ನಿಂಗೆ ಇದು ಅರ್ಥ ಆಗೋದಿಲ್ಲ. ನಿಂಗೆ ಹೇಳಿದ್ರೂ ಪ್ರಯೋಜನವಿಲ್ಲ. ಯು ಪ್ಲೀಸ್ ಗೋ ಅವೆ " ಅಂತ ಕಿರುಚಿದ. ವಿಭಾ ತುಂಬಾ ಸೆನ್ಸಿಟಿವ್ ಎಂದು ತಿಳಿದು ಕೂಡ ಅವನು ಈ ಮಾತುಗಳನ್ನು ನುಡಿದೆ ಬಿಟ್ಟಿದ್ದ. ವಿಭಾ ಅದನ್ನು ಮನಸಿಗೆ ಹಚ್ಚಿಕೊಂಡು ಚಾರೂವಿನಿಂದ ದೂರ ಹೋಗುವ ನಿರ್ಧಾರ ಮಾಡಿದ್ದಳು. ಹೀಗಿರುವಾಗ, ಚಾರೂಗೆ ಮೊದಲೇ ಇದ್ದ ಕೆಲಸದ ಒತ್ತಡ ಮತ್ತು ಈಗ, ವಿಭಾಳು ದಾಂಪತ್ಯ ಜೀವನದಿಂದ ಹಾಡುತ್ತಿರುವ ವಿದಾಯದ ಸಂಕಟವು ಮಿಶ್ರಣಗೊಂಡಿತು.
ಅವನು ತನ್ನ ನಡವಳಿಕೆಯ ಕುರಿತು ವಿವರಿಸಲು ಮಾಡಿದ ಪ್ರಯತ್ನವೂ ವಿಫಲವಾಗಿತ್ತು. ವಿಭಾಳ ನಿರ್ಧಾರ ಖಚಿತ ಎಂದಿದ್ದಳು. ಸರಿ, ವಿಭಾಳಿಗೆ ಅದರಲ್ಲೇ ಸಂತೋಷವಾದರೆ ನಾನು ಅಡ್ಡಿಯಾಗುವುದಿಲ್ಲ, ಆದರೆ ನನ್ನ ಜೀವನದಲ್ಲಿ ಅವಳೇ ಸರ್ವಸ್ವ ಎಂದು ಅವಳಿಗೆ ಚಾರೂ ತಿಳಿಸಿದನು. ಒಂದು ದಿನದ ಮಟ್ಟಿಗೆ ಅವಳು ಎಲ್ಲಾ ಮರೆತು ಅವನೊಟ್ಟಿಗೆ ಮೊದಲಿನಂತೆ ಕಳೆಯುವಂತೆ ಕೇಳಿಕೊಂಡಿದ್ದನು. ಈಗ ಆ ಒಂದು ದಿನದ ಕಾಲಾವಧಿಯು ಮುಗಿಯಲು ಹತ್ತಿರವಾದಾಗ ಅವಳ ಕಣ್ಣಲ್ಲಿ ನೀರು ಕಂಡು ಚಾರೂವಿಗೆ ಅರಿವಿಲ್ಲದ ಹಾಗೆ ಎರಡು ಕಂಬನಿ ತನ್ನ ಕೆನ್ನೆ ಮೇಲೆ ಉರುಳಿದ್ದವು.
ವಿಭಾಳ ತುಟಿಗಳು ಮಾತಾಡಲು ಹೊರಟಿದ್ದವು, ಆದರೆ ಬಾಯಿಯಿ೦ದ ಶಬ್ದವೇ ಹೊರಡಲಿಲ್ಲ. ಕಣ್ಣುಗಳು ಏನೋ ಹೇಳಲು ಯತ್ನಿಸುತ್ತಿದ್ದವು. ಚಾರೂ ಕಾರನ್ನು ನಿಧಾನಿಸಿ ಅಲ್ಲೇ ಪಕ್ಕದಲ್ಲಿ ಸಿಕ್ಕ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ. ಅವಳನ್ನು ನೋಡುತ್ತಾ "ವಿಭಾ ಐ ಅಂ ರಿಯಲಿ ಸಾರೀ. ನಾನು ನಿನ್ನ ತುಂಬಾ ನೋಯಿಸಿದ್ದೇನೆ. ನನ್ನ ಕೆಲಸದ ಪ್ರೋಬ್ಲೆಮ್ಗಾಗಿ ನಿನ್ನ ಮೇಲೆ ಕಿರುಚಾಡಿದ್ದೇನೆ. ದಯವಿಟ್ಟು ಕ್ಷಮಿಸು" ಎಂದು ಅವಳ ಕೈಯನ್ನು ಗಟ್ಟಿಯಾಗಿ ಹಿಡಿದನು. "ಚಾರೂ ನನ್ನ ಕ್ಷಮಿಸು ನೀನು. ಜೀವನದಲ್ಲಿ ಸದಾ ಸಂತೋಷವೇ ಇರುವುದಿಲ್ಲ. ಏರು ಪೇರು ಸಹಜ. ಇದನ್ನ ಅರಿಯದ ನಾನು ಯಾವುದೋ ಒಂದು ಸಣ್ಣ ವಿಷಯಕ್ಕಾಗಿ ಇಂತಹ ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಹೊರಟಿದ್ದೆ. ನಮ್ಮ ಬಾಂಧವ್ಯ ಈ ಒಂದು ದಿನದ ಪಾಠದಿ೦ದ ಇನ್ನೂ ಗಟ್ಟಿಯಾಗಿದೆ. ತಾ೦ಕ್ಯು ವೆರಿ ಮಚ್ " ಎಂದು ಹೇಳುತ್ತಲೇ ಚಾರೂವಿನ ಭುಜದ ಮೇಲೆ ತಲೆ ಇಟ್ಟಳು. ಅವನು "ಲೇ ಹುಚ್ಚು ಹುಡುಗಿ..ಇನ್ಯಾವತ್ತೂ ಇಂತಹ ನಿರ್ಧಾರ ತೆಗೆದುಕೊಳ್ಳಬೇಡ. ನನ್ನ ಬಿಟ್ಟು ದೂರ ಹೋಗುವ ಮಾತು ಎತ್ತಲೇ ಬೇಡ." ಎಂದು ಹೇಳಿ ತಲೆಯ ಮೇಲೆ ಮೊಟಕಿ, ಹಣೆಯ ಮೇಲೆ ಒಂದು ಸಿಹಿಯಾದ ಮುತ್ತನು ಇಟ್ಟು, ಅವಳನ್ನು ತೋಳಿನಲ್ಲಿ ಹಿಡಿದನು.
ಸಮಯ ರಾತ್ರಿ ಹನ್ನೆರಡುಕಾಲಾಗಿತ್ತು. ಯಾವುದೋ ಒಂದು ಕಾರಿನ ಹೊರ್ನ್ ಕೇಳಿದಾಗ ಎಚ್ಚೆತ್ತು "ಒಹ್ ಸಮಯ ಕಳೆದದ್ದೇ ಗೊತ್ತಾಗಲಿಲ್ಲ, ಮನೆಗೆ ಹೊರಡೊಣ್ವಾ ?? " ಅಂತ ವಿಭಾ ಕೇಳಿದಳು.
ಅಪಾರ್ಟ್ಮೆಂಟಿಗೆ ಬಂದರು ...
ರೆಲೆಯ್ ಹೈಟ್ಸ್ ಗೆ ಬಂದು ಕಾರ್ ಪಾರ್ಕ್ ಮಾಡಿ ಹೊರಬಂದೊಡನೆ ಚಾರೂ "ವಿಭಾ ವೈಟ್ .. " ಎಂದು ಓಡಿ ಅವಳಿದ್ದ ಸೀಟಿನ ಬಾಗಿಲನ್ನು ತೆರೆದು, ಅವಳನ್ನು ಎತ್ತಿಕೊಂಡು ಒಳಗೆ ಹೋಗಿ ಲಿಫ್ಟ್ ನಲ್ಲಿ ೧ನೆ ಮಹಡಿಯಾ ಬಟ್ಟನ್ ಒತ್ತಿದನು . ಮನೆಯೊಳಗೇ ಎತ್ತಿಕೊ೦ಡೆ ಹೋಗಿ ಮೆತ್ತನೆಯ ಹಾಸಿಗೆಯ ಮೇಲೆ ವಿಭಾಳನ್ನು ಇಳಿಸಿದಾಗ ಮೊದಲನೇ ಬಾರಿಗೆ ಅವಳು ಅವನ ಕಿವಿಯಲ್ಲಿ "ಐ ಲವ್ ಯು " ಎಂದು ಪಿಸುಗುಟ್ಟಿದಳು. ಮೊದಲನೇ ಬಾರಿಗೆ ಈ ಶಬ್ದಗಳನ್ನು ವಿಭಾಳ ದ್ವನಿಯಲ್ಲಿ ಕೇಳಿದಾಗ ಚಾರೂ ಖುಷಿಯಲ್ಲಿ ಕರಗಿ ಹಾಸಿಗೆಯ ಮೇಲೆ ಬಿದ್ದು ಬಿಟ್ಟನು.
ಮರುದಿನ ಬೆಳಿಗ್ಗೆ "ಕಾಫಿ ರೆಡಿ" ಅಂತ ವಿಭಾ ಮಾಮೂಲಿನಂತೆ ಕರೆದಾಗ ಚಾರೂವಿನ ತುಟಿಯಂಚಲಿ ಕಿರುನಗು ಮೂಡಿತ್ತು.
ಅವಳನ್ನು ಅನಾವಶ್ಯಕವಾಗಿ ಕಳೆದುಕೊಂಡುಬಿಡುತ್ತಿದ್ದೆ ಎಂಬ ಯೋಚನೆಯೇ ಅವನಿಗೆ ರೋಮ ನೆಟ್ಟಗಾಗಿಸಿತು .. "ಇನ್ನು ಸ್ಲೀಪಿಂಗಾ ? ಏಳು ಬೇಗ... ಕೆಲ್ಸಕ್ಕೆ ಹೋಗೋದಿಲ್ವಾ ?" ಅಂತ ಹುರುಪಿನಿಂದ ಕೇಳಿದಾಗ ಚಾರೂ ವಿಭಾಳನ್ನು ಅಪ್ಪಿಕೊಂಡು, ಅವಳ ಆಗ ತಾನೇ ತೊಳೆದಿದ್ದ ತಲೆ ಕೂದಲಿನಲ್ಲಿ ತನ್ನ ಮುಖವನ್ನು ಹಾಕಿದ. ಅದೇ ಫ್ರೆಶ್ನೆಸ್ಸ್ ಅದೇ ಸುವಾಸನೆ.. ಸೆಲ್ ಫೋನ್ ತೆಗೆದು "ಸರ್, ಐ ಅಂ ನಾಟ್ ಕಾಮಿಂಗ್ ಇನ್ ಟುಡೇ. ಟೇಕಿ೦ಗ್ ಪರ್ಸನಲ್ ಟೈಮ್ ಆಫ್ " ಎಂದು ಬಾಸ್ ಗೆ ವಾಯ್ಸ್ ಮೇಲ್ ಕಳುಹಿಸಿದ.
ಮನೆಯಲ್ಲಿದ್ದ ಮ್ಯೂಸಿಕ್ ಸಿಸ್ಟಮ್ ಆನ್ ಮಾಡಿ ಕೈ ಮುಂದಿಟ್ಟು "ಶ್ಯಾಲ್ ವೀ ಡಾನ್ಸ್ ?" ಎಂದನು.... ವಿಭಾ ನಾಚುತ್ತ "ಎಸ್ ಪ್ಲೀಸ್!" ಎಂದು ಅವನ ಕೈ ಹಿಡಿದು ಹೆಜ್ಜೆ ಹಾಕಿದಳು.
ಈ ಶ್ಯಾಲ್ ವೀ ಡಾನ್ಸ್ ಸಂಚಿಕೆ ಮಾಲೆಯಲ್ಲಿ ಬಂದ ಪಾತ್ರಗಳೆಲ್ಲ ಕೇವಲ ಕಾಲ್ಪನಿಕ.

Comments
But at times, the story was dragged.
Since it is a serial, that license can be given.
@Rajalakshmi: Hmmm more in the making. Will publish when ready to go live..Thanks for those wonderful words..
Geetha