ಶ್ಯಾಲ್ ವೀ ಡಾನ್ಸ್ ??? ... ಭಾಗ ೨
ಚಾರೂ ಸೀ ಔಟ್ ರೆಸ್ಟೋರಂಟ್ ಒಳಗೆ ಒಂದು ಲೇಕ್ ವ್ಯೂ ಇದ್ದಂತಹ ಕಾರ್ನೆರ್ ಟೇಬಲ್ ಬುಕ್ ಮಾಡಿದ. ಇನ್ನು ೧೦ ನಿಮಿಷ ಕಾಯಬೇಕು ಎಂದು ಅಲ್ಲಿದ್ದ ಕರಿ ಕೋಟ್ ಮನುಷ್ಯ ಹೇಳಿದ. ವೈಟಿಂಗ್ ರೂಮ್ ನಲ್ಲೆ ಇದ್ದ ಸೋಫಾ ಮೇಲೆ ಇಬ್ಬರು ಕುಳಿತರು. ಚಾರೂ ಅಲ್ಲೇ ಟೇಬಲ್ ಮೇಲಿದ್ದh ಕ್ಯಾಲಿಫೋರ್ನಿಯಾ ಟೈಮ್ಸ್ ನ್ಯೂಸ್ ಪೇಪರನ್ನು ತಿರುವು ಹಾಕಲು ಶುರು ಮಾಡಿದ. ಇವರ ಮುಂದೆ ಇದ್ದ ಒಂದು ಲವಲವಿಕೆಯ ಜೋಡಿಯನ್ನು ನೋಡಿದ ವಿಭಾ ಯಾವುದೋ ಯೋಚನೆಯಲ್ಲಿ ತೇಲಿ ಹೋದಳು. ೧೫ ನಿಮಿಷಗಳ ನಂತರ "ಮಿಸ್ಟರ್ ಚಾರೂ ಯುವರ್ ಟೇಬಲ್ ಇಸ್ ರೆಡಿ" ಅಂತ ಬಂದು ಜೇಮ್ಸ್ ಇವರಿಬ್ಬರನ್ನು ಕರೆದನು. ಪೇಪರನ್ನು ವಾಪಾಸ್ ಅದರ ಜಾಗದಲ್ಲಿ ಇಡುತ್ತ ಮೇಲೇಳುತ್ತ ವಿಭಾಕಡೆಗೆ ತಿರುಗಿ "ವಿಭಾ, (ಅವಳ ಭುಜದ ಮೇಲೆ ಕೈ ಇಟ್ಟು ಮತ್ತೊಮ್ಮೆ) ವಿಭಾ ಟೇಬಲ್ ರೆಡಿ ಆಯಿತು. ಕಮ್ ಆನ್" ಎಂದನು. ವಿಭಾ ಎದ್ದು ಅವನೊಟ್ಟಿಗೆ ನಡೆದಳು. ಚಾರೂ ಪಕ್ಕದಲ್ಲೇ ವಿಭಾ ನಡೆಯುತ್ತಿದ್ದಾಗ, ಅವನ ಕೈ ಅವಳ ಕೈಯನ್ನು ಹಿಡಿಯಿತು. ಗಟ್ಟಿಯಾಗಿ ಒತ್ತುತ್ತಾ ಚಾರೂ ಸನ್ನೆಯಲ್ಲೇ "ನಾನಿದ್ದೀನಿ ಭಯ ಪಡಬೇಡ" ಎಂದು ತಿಳಿಸಲು ಯತ್ನಿಸಿದ. ವಿಭಾ ಉತ್ತರವಾಗಿ ಅವನ ಹತ್ತಿರ ಸರೆದು ಚಾರೂವಿನ ಸ್ವೆಟರ್ ಎಳೆದಳು.
ಲೇಕ್ ವ್ಯೂ ಸೀಟ್ನಲ್ಲಿ ಎದುರೆದುರು ಕುಳಿತು ಕೊಂಡರು. ವಿಭಾಳ ಕಣ್ಣಲ್ಲಿ ಮತ್ತೆ ಹೊಳಪು ಮೂಡಿತ್ತು, ಚಾರೂ ಮೆನು ಕಾರ್ಡ್ ನತ್ತ ಗಮನ ಹರಿಸಲೇ ಇಲ್ಲ. ಅವನು ನಾಜೂಕಿನಿಂದ ಅವಳ ಹತ್ತಿರ ಬಂದು "ಐ ಲವ್ ಯು" ಎಂದಾಗ ವಿಭಾಳಿಗೆ, ಚಾರೂ ಮೊದಲ ಬಾರಿ ಈ ಮೂರು ಶಬ್ದಗಳನ್ನು ಹೇಳಿದ ಕ್ಷಣ ಕಣ್ಮುಂದೆ ಬಂದಿತು.
ಚಾರೂ ಆಗ ತಾನೇ ವಿಭಾಳನ್ನು ಒಮ್ಮೆ ಒಂದು ನೆಂಟರ ಮದುವೆಯಲ್ಲಿ ವಧುವಿನ ಗೆಳತಿಯರೊಂದಿಗೆ ನೋಡಿದ್ದನು. ಚಾರುಶ್ಚಿತ್ ಅವಳನ್ನು ಹಿಂಬಾಲಿಸುತ್ತಾ ಮಂಟಪದ ಹಿಂದಿದ್ದ ಭಾವಿ ಕಟ್ಟೆ ಹತ್ತಿರ ಹೋಗುತ್ತಿದ್ದಾಗ , ಅವಳು ಅಕಸ್ಮಾತಾಗಿ ವಾಪಾಸ್ ಮಂಟಪದ ಕಡೆಗೆ ತಿರುಗಿದಳು .. ಇಬ್ಬರ ಕಣ್ಣುಗಳು ಸೇರಿದ್ದವು. ಚಾರುಶ್ಚಿತ್ ಅವಳ ಮಾತು , ಅಂದವನ್ನು ಮೆಚ್ಚಿ " ಐ ಲವ್ ಯು " ಎಂದು ನುಡಿದೆ ಬಿಟ್ಟ. ಅಲ್ಲಿದ್ದ ವಿಭಾಳ ಗೆಳತಿಯರೆಲ್ಲಾ "ಓಓಓಹ್ ವಿಭಾ.. ಬಿದ್ದರಮ್ಮಾ ನಂಬರ್ ## " ಎಂದು ತಮಾಷೆ ಮಾಡಲಾರ೦ಭಿಸಿದರು. ಯಾವಾಗಲೂ ಡೈನಮಿಕ್ ಆಗಿರುತ್ತಿದ್ದ ವಿಭಾ ಚಾರೂವಿನ ಪ್ರೀತಿಗೆ ಕರಗಿ ಹೋಗಾಗಿತ್ತು. ಕಣ್ಣನ್ನು ಆ ಕಡೆ ಇಂದ ಈ ಕಡೆಗೆ ಆಡಿಸುತ್ತ ಅಲ್ಲಿಂದ ಮಂಟಪದತ್ತ ಓಡಿದಳು. ನಂತರ ಮದುವೆ ಶಾಸ್ತ್ರಗಳೆಲ್ಲ ಮುಗಿದು ಊಟ ಮುಗಿಯುವ ವರೆಗೂ ಇಬ್ಬರ ಕಣ್ಣ ಮುಚ್ಚಾಲೆ ಆಟ ನಡೆಯಿತು. ಚಾರೂ ಹೊರಡುವ ವೇಳೆಗೆ ಮತ್ತೆ ಅದೇ ಭಾವಿಯ ಹತ್ತಿರ ವಿಭಾಳ ಕೈ ಹಿಡಿದು "ನೀ ನನ್ನ ಬಾಳ ಸಂಗಾತಿ ಆಗಲು ಸಿದ್ಧವಾಗಿರುವೆಯಾ? ಜೀವನದಲ್ಲಿ ಹೂವಿನ ಹಾಸಿಗೆಯನ್ನೇ ಹಾಸುವೆ ,ಸಂತಸವು ನಿನ್ನ ಪಾಲಾಗಿಸುವೆ " ಎಂದು ಡೈಲಾಗ್ ಹೇಳಿದಾಗ , ವಿಭಾ ಜೋರಾಗಿ ನಕ್ಕಳು. ಅವಳ ಗೆಳತಿಯರೆಲ್ಲ ವಿಭಾಳನ್ನು ಅವನೆಡೆಗೆ ತಳ್ಳಿದರು. ವಿಭಾ ಚಾರೂವಿನ ತೋಳಿನಲ್ಲಿ ತನ್ನನ್ನು ತಾನು ನಾಚುತ್ತ ಮುಚ್ಚಿ ಕೊಂಡಳು.
ಇಷ್ಟು ನೆನಪಾಗುವಷ್ಟರಲ್ಲಿ ಚಾರೂ ಮತ್ತೆ ಸ೦ಕೊಚದಲ್ಲಿ " ಐ ಲವ್ ಯು" ಎಂದು ಹೇಳಿದ್ದ. ಮಂದಹಾಸ ಬೀರುತ್ತ ಅವಳು "ಡ್ರಿಂಕ್ಸ್ ಆರ್ ಡಿನ್ನರ್" ಎಂದು ಮೆನು ಕಾರ್ಡ್ ಕಡೆ ತಿರುಗಿದಾಗ ಚಾರು "ಆಸ್ ಯು ಸೇ ಮೈ ಲೇಡಿ" ಅಂತ ಅಂದನು . ವಿಭಾ ವೆಜಿಟೇರಿಯನ್ ಸೆಕ್ಷನ್ ನಲ್ಲಿದ್ದ ವರೈಟಿಯನೆಲ್ಲಾ ನೋಡುತ್ತಾ "ಕ್ರಿಸ್ಪಿ ವೆಜಿಟೆಬಲ್ಸ ಇನ್ ಟೊ೦ ಯ೦ ಗ್ರೇವಿ " ತೊಗೊಳೋಣ್ವ ಅಂತ ಕೇಳಿದಳು , ಜೊತೆಗೆ ಮಲೀಶಿಯನ್ ನೂಡಲ್ಸ್ ಇದ್ರೆ ಚೆನ್ನಾಗಿರುತ್ತೆ ಅಂತ ಚಾರೂ ಸೇರಿಸಿದ. ವೈಟರ್ ಬಂದು "ಯುವರ್ ಆರ್ಡರ್ ಪ್ಲೀಸ್" ಎಂದಾಗ ವಿಭಾ ಮೆನುವಿನಲ್ಲಿ ನಿರ್ಧರಿಸಿದ ಪದಾರ್ಥದ ಪಟ್ಟಿಯನ್ನು ಹೇಳಿದಳು. ವೈಟರ್ ನಗುತ್ತಲೇ " ಶುಅರ್ ಮೇಡಂ , ೧೫ ಮಿನಿಟ್ಸ್ ಪ್ಲೀಸ್. ಲವ್ಲೀ ಕಪಲ್" ಎಂದು ಹೇಳಿ ಕಣ್ಣು ಹೊಡೆದು ಪಾಕಶಾಲೆ ಕಡೆಗೆ ಹೊರಟನು.

Comments