ಶ್ಯಾಲ್ ವೀ ಡಾನ್ಸ್ ??? ... ಭಾಗ ೩

ಊಟ ಬರುವಷ್ಟರಲ್ಲಿ ಮತ್ತೆ ಹಿಂದಿನ ದಿನಗಳ ಮೆಲುಕು ಹಾಕುತ್ತ "ವಿಭಾ ನಿಂಗೆ ದಾವಣಗೆರೆ ಬೆಣ್ಣೆ ದೋಸೆ ತಿನ್ನಬೇಕಾ? ರಾಯರ ಹೋಟೆಲ್ಗೆ ಹೋಗೋಣ್ವಾ ? ಬಿಸಿ ಬಿಸಿ ದೋಸೆ ತಿಂದು ಕಾಫಿ ಕುಡಿಯೋಣ" ಅಂತ ಕರೆದದ್ದು ನೆನಪಾಯಿತು. ಸುಮ್ಮನೆ ಹಾಗೆ ಅವಳ ಮುಖದ ಮೇಲೆ ಅಂದಿನಂತಹ ನಗು ಕಾಣಲು ಹಂಬಲಿಸಿ "ರಾಯರ ಹೋಟೆಲ್ ಬೆಣ್ಣೆ ದೋಸೆ" ಅಂತ ಮೆಲ್ಲನೆ ಹೇಳಿದ. ವಿಭಾ - "ಇಲ್ಲಿ ಆರ್ಡರ್ ಮಾಡ್ಲ ಅದನ್ನ" ಅಂತ ನಗುತ್ತಲೇ ಕೇಳಿದಳು . ಇಬ್ಬರು ಜೋರಾಗಿ ನಗತೊಡಗಿದರು. ವಾತಾವರಣ ಹಸಿಯಾಯಿತು. ಒಂದೊಂದೇ ನೆನಪು, ಕಿಟಕಿಯ ಹೊರಗಡೆ ಬೀಳುತಿದ್ದ ಮಳೆಯಹನಿಯ ಜೊತೆಯಾಗಿತ್ತು . ಕಿಟಕಿಯ ಪರದೆ ಎತ್ತುವಾಗ ವಿಭಾಳಿಗೆ ಚಾರೂ ಕೊಟ್ಟ ಮೊದಲ ಉಡುಗೊರೆ ಹೃದಯದಾಕಾರದ ಚಿನ್ನದ ಉಂಗುರ ಕಣ್ಣಿಗೆ ಬಿತ್ತು.

ಅವಳು ಆ ಸಂಜೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ತುಂತುರು ಶುರುವಾಗಿತ್ತಷ್ಟೇ. ನೀಲಿ ಬಣ್ಣದ ಛತ್ರಿ ತೆಗೆದು ಒಂದು ಮರದ ಕೆಳೆಗೆ ಹೋಗೋವಾಗ ಚಾರೂವಿನ ರಿಂಗ್ ಟೋನ್ "ನೀನೇ ನೀನೇ.. ಮನಸೆಲ್ಲಾ ನೀನೆ" ಎಂದು ಹಾಡಿತು . "ಹಲೋ ಎಲ್ಲಿ ಇದ್ದೀಯಾ ಚಾರೂ ? ಮಳೆ ಶುರು ಆಯಿತು.?" ಎಂದು ವಿಭಾ ಕೇಳಲು, ಅಲ್ಲಿಂದ ಚಾರೂ " ವಿಭಾ ಎರಡು ನಿಮಿಷ ತಾಳು ಬಂದೆ" ಎಂದವನು ಸರಿಯಾಗಿ ಎರಡು ನಿಮಿಷದಲ್ಲಿ ಅವಳ ಎದುರು ನೀಲಿ ಛತ್ರಿಯ ಕೆಳಗೆ ನಿಂತಿದ್ದ. ಜೇಬಿನಿಂದ ಏನೋ ತೆಗೆದು "ವಿಭಾ ಕಣ್ಣು ಮುಚ್ಚು" ಎಂದಾಗ ಅವಳು "ಏನದು ?" ಎಂದು ಕುತೂಹಲದಿಂದ ಕೇಳಿದಳು. ಚಾರೂ ಅವಳ ಕಣ್ಣು ಮುಚ್ಚಿ, ಬಾಯಿ ಮೇಲೆ ಒಂದು ಬೆರಳಿಟ್ಟು, ಮತ್ತೇನೂ ಮಾತಾಡಲು ಅವಕಾಶ ಕೊಡದೆ , ಅವಳ ಬೆರಳಿಗೆ ಉಂಗುರ ತೊಡಿಸಿದನು. ಕಣ್ಣು ತೆರೆದವಳಿಗೆ ಶಬ್ದಗಳಿಲ್ಲ. ರಭಸದ ಮಳೆಯಲ್ಲಿ ತನ್ನ ಆನಂದ ಭಾಷ್ಪವು ಸೇರಿತ್ತು. ಇಬ್ಬರು ಕೈಯಲ್ಲಿ ಕೈಯ್ಯ ಜೋಡಿಸಿ ರೋಡ್ ಕೊನೆಯಲ್ಲಿ ಬಜ್ಜಿ ಮಾಡುತಿದ್ದವನ ಬಳಿ ೧೦ ರುಪಾಯಿಗೆ ಬಿಸಿ ಬಿಸಿ ಈರುಳ್ಳಿ ಬಜ್ಜಿ ಖರೀದಿಸಿ ದಾರಿಯುದ್ದಕ್ಕೂ ತಿನ್ನುತ್ತ ಮನೆ ಸೇರಿದ್ದರು.

ಚಾರೂ ವಿಭಾಳ ಸೌಂದರ್ಯವನ್ನು ತನ್ನ ಕಣ್ಣುಗಳಲ್ಲಿ ಸೆರೆದು ಹಿಡಿಯುವ ಪ್ರಯತ್ನದಲ್ಲಿದ್ದಾಗ ವೈಟರ್ ಬಂದು - "ಕ್ರಿಸ್ಪಿ ವೆಜಿತಬಲ್ಸ್ ಇನ್ ಟೊ೦ ಯ೦ ಗ್ರೇವಿ , ಎಂಜಾಯ್ ಯುವರ್ ಡಿನ್ನರ್" ಎಂದು ಹೇಳಿ ಪಕ್ಕದ ಟೇಬಲ್ನೆಡೆಗೆ ಹೊರಟ. ವಿಭಾ ವೈಟರಿಗೆ "ತಾ೦ಕ್ ಯೂ " ಎನ್ನುತ್ತಾ " ಚಾರೂ ಲೆಟ್ಸ್ ಸ್ಟಾರ್ಟ್ " ಅಂತ ಹೇಳಿ ವೆಜಿಟಬಲ್ಸನ ಬಡಿಸಲು ಹೊರಟಳು . ಅವನು "ಸಾಕು ಜಾಸ್ತಿ ಬೇಡ ನಂಗೆ" ಎಂದಾಗ ವಿಭಾ "ನೀನು ಇಷ್ಟೇ ತಿಂದರೆ ನಿನ್ನ ಹೊಟ್ಟೆ ಇನ್ನು ಅರ್ಧ ಘಂಟೆಯಲ್ಲಿ ಹೊಡ್ಕೊಳ್ಳೋಕ್ಕೆ ಶುರು ಮಾಡತ್ತೆ. ಅದು ಅಲ್ಲದೆ ಹೆಲ್ತ್ ಹಾಳಾಗತ್ತೆ" ಅಂತ ಕಾಳಜಿ ತೋರಿಸಿದಳು.


ಚಾರೂಗೆ ಸಂತೋಷವಾಯಿತು. ಅವಳು ಬಡಸಿದಷ್ಟು ಹ್ಞೂ ಉಹ್ಞೂ ಎನ್ನದೆ ತಿಂದನು. ಬಿಲ್ ಪೇ ಮಾಡಿದ ನಂತರ ಅಲ್ಲಿಂದ ಎದ್ದು ಹೊರಗೆ ಬಂದರು. ಹನಿ ಹನಿ ಮಳೆ ಬೀಳುತಿತ್ತು. ಚಿಕ್ಕ ಮಗುವಿನಂತೆ ಆ ಹನಿಗಳನ್ನು ಕೈಯಲ್ಲಿ ಹಿಡಿದು ಬಾಯಲ್ಲಿ ಊದಿ ಚೆಲ್ಲುವ ಆಟ. ಮೊದಲ ಬಾರಿ ನೋಡಿದಾಗ ಇದ್ದ ಹುಡುಗುತನ ಹಾಗೆ ಇತ್ತು. ಚಾರೂವಿಗೆ ಅವಳ ಮೇಲೆ ಇದ್ದ ಪ್ರೀತಿ ಇನ್ನೂ ಘಾಢವಾಗಿ ಹೆಚ್ಚಿತು. ಈ ಕ್ಷಣ ಇಲ್ಲೇ ನಿಲ್ಲ ಬಾರದೆ? ಎಂದು ಮನಕೆ ಪ್ರಶ್ನಿಸಿದನು. ಯೋಚನೆಯಲ್ಲಿದ್ದ ಚಾರೂವನ್ನು ಬಂದು "ಹೊರೋಡೋಣವೆ? " ಎಂದು ವಿಭಾ ಕೇಳಿದಳು.

ಕಾರಿನಲ್ಲಿ ಕುಳಿತು ಫೋರ್ಡ್ ಸ್ಟ್ರೀಟ್ ನಲ್ಲಿದ್ದ ರೆಲೆಯ್ ಹೈಟ್ಸ್ -

ಅವರ ಅಪಾರ್ಟ್ಮೆಂಟ್ ಕಡೆಗೆ ಪ್ರಯಾಣ ಮಾಡಿದರು . ನಿಶಬ್ದ , ಮಳೆ ಹನಿಯ ಸದ್ದು ಚಾರೂನನ್ನು ಕಾಡುತಿತ್ತು. ಕಾರಿನಲ್ಲಿದ್ದ ಮ್ಯೂಸಿಕ್ ಸಿಸ್ಟಮನ್ನು ಆನ್ ಮಾಡಿದ .. "ಮೇರಾ ಜೀವನ್ ಕೊರಾ ಕಾಗಜ್ ..." ಹಾಡು ಬರಲು ಆರಂಭಿಸಿತು. ವಿಭಾ ಮಾತಿಲ್ಲದೆ ಕಿಟಕಿಯ ಹೊರಗೆ ವೀಕ್ಷಿಸುತ್ತಿದ್ದಳು. ರಭಸದಿ ಬೀಳುತ್ತಿದ್ದ ಅಲೆಗಳ ಶಬ್ದ ಕೇಳಿಸುತಿತ್ತು. ಹಿಂದಿನ ಎರಡು ತಿಂಗಳಿಂದ ಇಬ್ಬರ ನಡುವೆ ನಡೆದ ಎಲ್ಲಾ ಘಟನೆಗಳನ್ನು ಮತ್ತೆ ನೆನಪಿಸಿಕೊಳ್ಳುತ್ತಾ ಬೇ ನಲ್ಲಿ ಕಾಣುತಿದ್ದ ಹಡುಗಿನತ್ತ ತಲೆ ತಿರುಗಿಸಿದಳು. ಅವಳ ಕಣ್ಣಲ್ಲಿ ಹನಿಯೊಂದು ತುಂಬಿತ್ತು. ಚಾರೂ ಅದನ್ನು ಗಮನಿಸಿದೊಡನೆ "ಇಸ್ ಯೆವ್ರಿತಿ೦ಗ್ ಗುಡ್. ಏನಾಯಿತು? ನಾಳೆ ಇಂದ ನೀನು ಆ ಹಡುಗಿನ ಮೇಲೆ ಕುಳಿತಿರುವ ಹಕ್ಕಿಯಂತೆ ವಿಭಾ .. ನನ್ನ ಹಂಗು ಇರುವುದಿಲ್ಲ. ನಿನ್ನ ಇಷ್ಟವೇ ನನ್ನ ಸಂತೋಷ. ನಿನ್ನ ಖುಷಿಯ ಮುಂದೆ ನನಗೇನಿಲ್ಲ. ಆದರೆ ನನಗೆ ವರಿ ಆಗ್ತಿರೋದು ನೀನು ಇಲ್ಲಿ ಒಬ್ಬಳೇ ಹೇಗೆ? ಏನು ಮಾಡ್ತಿಯಾ ? " ಅಂತ ಹೇಳಿದನು.

ನಾಳೆ ಅಂತಿಮ ಭಾಗ .... ಕಾದು ನೋಡಿ ..

3 comments:

R. Ramesh said...

hey friend, thanks 4 passing by..keep the cheers:)

prathima gangadhar said...

hello just blog walking and loved your site do stop by :)

ಅಶ್ವಿನಿ/ Ashwini said...

@ Ramesh: Definitely would keep a check on your blog and frequently hop stop there to check the fresh brews.

@Prathi: Thanks for coming in.. Definitely will drop by and check what "My life in Technicolor " says...

Journey of Love: Chapter 8: Love in Full Bloom

As the train neared Bangalore, Arjun and Latha found themselves lost in each other's gaze, their hearts overflowing with love and gratit...