ನಗು ನಗಿಸು..

ಅಲ್ಲಿದ್ದ ಒಂದು ಊರು
ಅದ್ರಲ್ಲಿ ನೂರು ಸೂರು
ಮಂದಿಗೆಲ್ಲಾ ಕೈ ತುಂಬಾ ಕೆಲಸ
ಕಾಣುತಿತ್ತು ಎಲ್ಲರ ಮೊಗದಲ್ಲಿ ಸಂತಸ

ಹಬ್ಬ ಹರಿದಿನ ಅಲ್ವಲ್ಲಾ
ಆದರು ಲವಲವಿಕೆ ಇಂದ ಇದಾರಲ್ಲಾ
ಮನಸು ತಾಳದೆ ಕೇಳೆ ಬಿಟ್ಟೆ
ಏನ್ರಿ ಲಾಟರಿ ಗೀಟರಿ ಹೊಡಿತಾ ಹೇಗೆ ?

ನಗುತ್ತಾ ಹೇಳಿದನವನು - ನಿಮ್ಮ ಹಾಗೆ ರೀ ನಾವು
ನಮ್ಮಲ್ಲೂ ಇದೆ ಸಾವು ನೋವು
ಹಾಗಂತ ಸದಾ ಅಳ್ತಾ ಕೂತ್ರೆ
ಖಾಲಿನೆ ಉಳಿತಾವೆ ಮನೇಲಿ ಪಾತ್ರೆ

ಕೈಗೆ ಕೆಸರ ಹಚ್ಚಿ ದುಡಿತೀವಿ ನೋಡಿ
ಸಿಕ್ಕಿದ್ರಲ್ಲಿ ಹಂಚಿ ಉಣ್ತೀವಿ ಎಲ್ರೂ ಕೂಡಿ
ನಗುವು ನಮ್ಮ ಬಳಿ ಇದ್ರೆ
ಸಾರುತೀವಿ ಅದನ್ನ ಪ್ರತಿಯೊಬ್ಬರಿಗೆ

ಈ ನುಡಿಯ ಕೇಳಿ , ಅದರೊಳಾರ್ಥವನು
ಅರಿತು , ಹೆಜ್ಜೆಯನು ಮುಂದಿಟ್ಟೆ

ಸರಿ ಎಂದು ಹೊರಟ ನಂಗೆ
ಡಿ ವಿ ಜಿ ಕಗ್ಗ ನೆನಪಾಯಿತು ಹಂಗೆ

"ನಗುವೊಂದು ರಸಪಾಕವಳುವೊಂದು ರಸಪಾಕ
ನಗುವಾತ್ಮ ಪರಿಮಳವ ಪಸರಿಸುವ ಕುಸುಮ
ದುಗುಡವಾತ್ಮವ ಕಡೆದು ಸತ್ತ್ವವೆತ್ತುವಮಂತು
ಬಗೆದೆರಡನು೦ ಭುಜಿಸು - ಮಂಕುತಿಮ್ಮ "

" ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ,
ನಗುವ ಕೇಳುತ ನಗುವುದು ಅತಿಶಯದ ಧರ್ಮ
ನಗುವ ನಗಿಸುವ ನಗಿಸಿ ನಗುತ ಬಾಳುವ
ವರವ ಮಿಗೆ ನೀನು ಬೇಡಿಕೊಳೋ ಮಂಕುತಿಮ್ಮ "

Comments

R. Ramesh said…
aiyo ennama idu? haha dont get scared..i just asked what's this buddy in tamil!!!
ಪ್ರಾಸಗಳನ್ನ ಬಹಳ ಚೆನ್ನಾಗಿ ಉಪಯೋಗಿಸಿದ್ದೀರಿ..... ಕವನವೂ ಸಖ್ಖತ್ತಾಗಿದೆ....
@ Ramesh: :D :D enuku tamil little teriyun.. I am from Bangalore and the post was in kannada.

Gist of the poem : Keep Smiling and spread the smile.

@ ಪ್ರವರ : ಧನ್ಯವಾದಗಳು! ನನ್ನ ಬ್ಲಾಗ್ ಗೆ ಸ್ವಾಗತ. ಹೀಗೆ ಬರುತ್ತಿರಿ.
ಅಶ್ವಿನಿಯವರೇ ನಿಮ್ಮ ಕವನ ತುಂಬ ಅರ್ಥ ಪೂರ್ಣವಾಗಿದೆ... ನಗು ಎಲ್ಲ ನೋವುಗಳನ್ನು ಮರೆಸುವ ಔಷಧಿ :-)
@ ಗಿರೀಶ್ : ಸರಿಯಾದ ಮಾತು ! :)
Sahana Rao said…
ನಗು ಮಾಡೋತ್ತೆ ಮನಸನ್ನು ಲಘು.. ನೋವಲ್ಲು ನಗುವುದ ಬಲ್ಲವ ಎಂದು ಸುಖವಾಗಿರಬಲ್ಲ..

ಡಿ.ವಿ.ಜಿ. ಇಂತ ಮೇಧಾವಿಯ ಕಗ್ಗ ನನ್ನನ್ನು ಸದಾ ಮಂತ್ರ ಮುಗ್ಧ ಮಾಡುತ್ತದೆ..
@ Spicy Sweet: ಹೌದು ನಗುವ ಬಲ್ಲವ ಸದಾ ಸುಖವಾಗಿರಬಲ್ಲ ..

Popular Posts