ಮಳೆ ಬಂದ ರಾತ್ರಿ .. ಭಾಗ ೫ (ಅಂತಿಮ ಭಾಗ )

ಪಟ್ಟಿಯನ್ನು ಹಿಡಿದು ಮೇಲಿಂದ ಕೆಳಗಿನ ವರೆಗೂ ಒಂದೊಂದೇ ಹೆಸರನ್ನು ಓದುತ್ತ ಬಂದಾಗ "ಆರ್.ಜೆ. ಫಾರ್ ಅಫೀಷಿಯಲ್ ಪರ್ಪಸ್ " ಅಂತ ಇದ್ದದ್ದನ್ನು ನೋಡಿದಳು. ಉಳಿದಿದ್ದ ಎಲ್ಲಾ ಹೆಸರುಗಳು ಇವಳಿಗೆ ತಿಳಿದದ್ದಾಗಿತ್ತು, ಆದರೆ ಇದೊಂದು ಹೆಸರು ಯಾರದ್ದು ಎಂದು ಗೊತ್ತಾಗಲಿಲ್ಲ, ಹಾಗಾಗಿ , ರಾಜು ನಿಂಗೆ ಇದು ಯಾರು ಅಂತ ಗೊತ್ತ ಅಂತ ಆರ್.ಜೆ. ಹೆಸರ ಮೇಲೆ ಬೆರಳಿಟ್ಟು ಕೇಳಿದಳು. ರಾಜು ಸ್ವಲ್ಪ ಯೋಚಿಸಿ " ಮೇಡಂ ಇವ್ರು ಪಾಲ್ ಸರ್ ಜೊತೆಗೆ ಹೊರದೇಶಕ್ಕೆ ಹೋದವರು , ಅವರು ಬೆಳಿಗ್ಗೆ ಟಿವಿ ನಲ್ಲಿ ಪಾಲ್ ಸರ್ ಬಗ್ಗೆ ಮತಾಡುತಿದ್ರಲ್ಲ ರೋಶನ್ ಜತಿಂದ್ರ .. ಅವ್ರೆ ಮೇಡಂ ಬಂದಿದ್ದಿದ್ದು." ಕೃಪಾ ಗೆ ಅರ್ಧ ಸತ್ಯ ತಿಳಿಯಿತು ಆದರೆ ರೋಶನ್ ಯಾಕೆ ಹೀಗೆ ಮಾಡಿಯಾರು? ಅನ್ನೋ ಪ್ರಶ್ನೆ ಕಾಡಿತು. ರೋಶನ್ ಇಲ್ಲಿ ಯಾರಿಗೆ ಫಾಕ್ಸ್ ಮಾಡಿದ್ದು ನೆನ್ನೆ ರಾತ್ರಿ? "ಜೀವನ ಇಸ್ ನೋ ಮೋರ್ ಹುರ್ರೇ - ಆರ್.ಜೆ." ಅಂತ ಫಾಕ್ಸ್ ಮಾಡಿದ್ದು ಯಾರಿಗೆ ? ಕೃಪಾ ತನ್ನ ಒಂದು ಡಾಕ್ಯುಮೆಂಟನ್ನು ಪ್ರಿಂಟ್ ಗೆ ಕೊಟ್ಟು, ಪ್ರಿಂಟರ್ ಹತ್ರ ಹೋಗೋವಾಗ ಫಾಕ್ಸ್ ಮಶಿನಿನ ಸದ್ದನ್ನು ಕೇಳಿ ಅಲ್ಲೇ ನಿಂತು ಅದನ್ನು ಓದಿದೊಡನೆ ಅವಳಿಗೆ ಕೈ ಕಾಲೇ ಆಡಲಿಲ್ಲ. ಅದೇ ಗಾಬರಿಯಲ್ಲಿ , ಬೇಜಾರಿನಲ್ಲಿ ಆಕೆ ನೆನ್ನೆಯ ರಾತ್ರಿ ಬೇಗ ಬೇಗ ಮನೆಗೆ ಹೊರಟು ಹೋಗಿದ್ದಳು.


ಕೃಪಾ ಪೋಲಿಸ್ ಹತ್ರ ಹೋಗಿ ತನಗೆ ಗೊತ್ತಿರುವ ವಿಷಯವನೆಲ್ಲಾ ತಿಳಿಸುವುದು ಉತ್ತಮ ಅಂತ ಪೋಲಿಸ್ ಸ್ಟೇಷನ್ ನಡೆಗೆ ಹೊರಟು, ರಾಜುವಿಗೆ ಥ್ಯಾಂಕ್ಸ್ ಎನ್ನುತ್ತಾ ಮೇಜಿನ ಹತ್ತಿರವಿದ್ದ ಕುರ್ಚಿಯಿಂದ ಎದ್ದಳು. ರಾಜು ಮನದ ಆತಂಕ ಕಳವಳ ಇನ್ನು ಕಡಿಮೆ ಆಗಿರಲಿಲ್ಲ . ಅವನು ಅವಳಿಗೆ "ಮೇಡಂ ಪಾಲ್ ಸರ್ ಬಗ್ಗೆ ನಿಮಗೆ ಏನಾದ್ರೂ ಗೊತ್ತಾ?" ಅಂತಂದಾಗ ಅವಳು "ಹೂ ರಾಜು ನಂಗೆ ಗೊತ್ತಿರೋ ವಿಷಯವನ್ನು ಪೋಲಿಸಿಗೆ ಹೇಳೋಕ್ಕೆ ಹೊರಟಿದ್ದೀನಿ" ಎಂದು ಉತ್ತರಿಸಿದಳು. ಆಗ ರಾಜು"ಮೇಡಂ ನೆನ್ನೆ ನೀವು ಹೋದ ಮೇಲೆ ಗಾರ್ಗಿ ಮೇಡಂ ಅವ್ರು ತುಂಬಾ ಹೊತ್ತು ಕೆಲಸ ಮಾಡ್ತಾ ಇದ್ರೂ. ಅವ್ರು ಕ್ಯಾಬ್ ನಲ್ಲಿ ಹೋದರು ಮೇಡಂ ,ಆದ್ರೆ ಅವರೂ ಸ್ವಲ್ಪ ಭಯ ಪಟ್ಟ ಹಾಗೆ ಇತ್ತು ಮೇಡಂ. ಅದಕ್ಕೆ ನಿಮಗೆ ಕೇಳಿದೆ ಏನಾದ್ರು ಪ್ರಾಬ್ಲಮ್ ಇದ್ಯಾ ಅಂತ." "ಒಹ್! ಹೌದಾ ಕೆಲಸ ಇತ್ತೇನೋ ಜಾಸ್ತಿ, ಅದಕ್ಕೆ ಲೇಟಾಗಿ ಹೋಗಿರಬೇಕು" ಅಂತ ಕ್ಯಾಶ್ಯುಲಾಗಿ ಹೇಳಿ ಹೊರೂಡೂ ವೇಳೆಗೆ ಅವಳಿಗೆ ಥಟ್ಟೆಂದು ಏನೋ ಹೊಳೆಯಿತು - "ರಾಜು ಅವತ್ತು ರೋಶನ್ ಬಂದ್ರಲ್ಲ ಪಾಲ್ ನ ಭೇಟಿ ಮಾಡೋಕ್ಕೆ , ಅವ್ರ ಜೊತೆಗೆ ಯಾರಾದ್ರು ಬಂದಿದ್ರಾ ?" ಅಂತ ಪ್ರಶ್ನೆ ಹಾಕಿದಳು . ಸ್ವಲ್ಪ ಯೋಚಿಸಿ "ಗಾರ್ಗಿ ಮೇಡಂ ಜೊತೆಗೆ ಬಂದಿದ್ದು ರೋಶನ್ ಸರ್ ಅವತ್ತು" ಎಂದ.


ಈಗ ಕೃಪಾಳಿಗೆ ಪೂರ್ತಿಯಾಗಿ ಸೀಕ್ವೆನ್ಸ್ ಅರ್ಥ ಆಯಿತು. ಆದ್ರೆ ಪಾಲ್ ಕೊಲೆ ಯಾಕೆ ಆಯಿತು ಅನ್ನೋದು ಇನ್ನು ತಿಳಿಯಲಿಲ್ಲ. ಉದ್ದೇಶ ಅರ್ಥವಾಗಲಿಲ್ಲ. ತಕ್ಷಣ ಕೃಪಾ ಪ್ರೀಥಮ್ ಗೆ ಫೋನ್ ಮಾಡಿ ದಯವಿಟ್ಟು ನೀನು ಈಗಲೇ ಹೊರಟು ಮೇಯರ್ ರೋಡ್ ಹತ್ರ ಇರೋ ಕಾಫಿ ಹೌಸ್ ಗೆ ಬಾ . ನಿನ್ನ ಹತ್ರ ಏನೋ ಮುಖ್ಯವಾದ ವಿಷ್ಯ ಮಾತಾಡಬೇಕು ಅಂತ ಹೇಳಿದಳು. ಪ್ರೀಥಮ್ "ಏನದು?" ಅಂತ ಕೇಳೋಷ್ಟರಲ್ಲಿ ಫೋನ್ ಕಟ್ ಮಾಡಿದವಳೇ ಒಂದು ಆಟೋ ಹಿಡಿದು ಹೊರಟೆಬಿಟ್ಟಳು. ರಾಜುವಿಗೆ ಏನೊಂದು ಅರ್ಥ ವಾಗಲಿಲ್ಲ. ಅವನ ಕೆಲಸ ಮಾಡುತ್ತಾ ರಿಸೆಪ್ಶನ್ ನಲ್ಲಿದ್ದ ದೂರದರ್ಶನದಲ್ಲಿ ನ್ಯೂಸ್ ನೋಡ ತೊಡಗಿದ.


ಕಾಫಿ ಹೌಸ್ ನಲ್ಲಿ ಪ್ರೀಥಮ್ ಕೃಪಾಳಿಗಾಗಿ ಕಾಯುತ್ತಿದ್ದ. ಕೃಪಾ ಬಂದವಳೇ ಪ್ರೀಥಮ್ ಗೆ ಎಲ್ಲಾ ವಿಷಯ ತಿಳಿಸಿದಳು. ಅವನಿಗೆ ಇದೆಲ್ಲ ನಿಂಗೆ ಹೇಗೆ ಗೊತ್ತಾಯಿತು ಅಂತ ಕೇಳಿದ. ಅವಳು ರಾಜುವಿನ ಹತ್ತಿರ ಪಟ್ಟಿ ತೆಗೆಸಿ ನೋಡಿದ್ದು , ಫಾಕ್ಸನ್ನು ಓದಿದ್ದು ಎಲ್ಲವನ್ನು ವಿವರವಾಗಿ ಹೇಳಿದಳು. ರೋಶನ್ ಗಾರ್ಗಿ ಇಬ್ಬರು ಪ್ರೇಮಿಗಳೆಂದು ತಿಳಿದಿದ್ದವರು ಕೆಲವರು ಮಾತ್ರ. ಅದರಲ್ಲಿ ಪ್ರೀಥಮ್ ಒಬ್ಬನಾಗಿದ್ದ. ಪ್ರೀಥಮ್ ಈ ಪ್ರೇಮಿಗಳ ಬಗ್ಗೆ ಕೃಪಾಳಿಗೆ ತಿಳಿಸಿದ. ಆದರೀಗ ಇಬ್ಬರ ಮುಂದಿದ್ದ ಪ್ರಶ್ನೆಯೊಂದೇ - ಪಾಲ್ ನ ಕೊಲೆ ಮಾಡಿದ ಉದ್ದೇಶವೇನು ?


ಮತ್ತೆ ಆಫೀಸಿಗೆ ಹೋಗೋದ್ರಿಂದ ಏನಾದ್ರೂ ಕ್ಲೂ ಸಿಗಬಹುದೇನೋ ಅಂತ ಮತ್ತೆ ಇಬ್ಬರು ಒಟ್ಟುಗೂಡಿ ಆಫೀಸಿಗೆ ಬಂದರು. ರಾಜುವಿಗೆ ೩ ನೆ ಮಹಡಿಯ ಬಾಗಿಲು ತೆರೆದಿದ್ಯಾ ಅಂತ ಕೇಳಿ, ನಮಗೆ ಒಂದು ಸ್ವಲ್ಪ ಕೆಲಸ ಬಾಕಿ ಇತ್ತು ಮುಗಿಸಿ ಹೋಗೋಣ ಅಂತ ಬಂದಿದ್ದೀವೆ೦ದು ಹೇಳಿ ಮೇಲೆ ಹೊರಟರು. ಪ್ರೀಥಮ್ ಕಂಪ್ಯೂಟರ್ ನ ಪಾಸ್ವರ್ಡ್ ಹ್ಯಾಕ್ ಮಾಡೋದ್ರಲ್ಲಿ ನಿಸ್ಸೀಮ. ಈಗ ಅದು ಒಳ್ಳೆಯದೊಂದು ಕಾರ್ಯಕ್ಕಾಗಿ ಉಪಯೋಗವಾಗ್ತಾ ಇದೆ ಅಂದ್ರೆ ಇನ್ನು ಒಳ್ಳೆಯದೇ ಎಂದು ಹೇಳುತ್ತಾ ಗಾರ್ಗಿಯ ಸಿಸ್ಟಮನ್ನು ಅನ್ಲಾಕ್ ಮಾಡಿದ . ಈ - ಮೇಲ್ಸನ್ನೆಲ್ಲ ಒಂದೊಂದಾಗಿ ಚೆಕ್ ಮಾಡ್ತಾ ಹೋದರು. ಏನೂ ಸುಳಿವು ಸಿಗಲಿಲ್ಲ.


ದೆಸ್ಕ್ಟೊಪ್ನಲ್ಲಿದ್ದ ಆಪರೇಶನ್ ಫೋಲ್ಡರ್ ಕಣ್ಣಿಗೆ ಬಿತ್ತು. ಓಪನ್ ಮಾಡಿ ನೋಡಿದಾಗ ಸಂಪೂರ್ಣವಾಗಿ ಮಾಡಿದ ಪ್ಲಾನ್ ಇವರಿಗೆ ಅರಿವಾಯಿತು. ಪಾಲ್ ಗೆ ಗಾರ್ಗಿಯ ಮೇಲೆ ವ್ಯಾಮೋಹ. ಅವಳು ತನ್ನವಳಾಗಬೇಕು ಅನ್ನೋ ಆಸೆ. ಇದು ರೋಶನ್ಗೆ ತಿಳಿದಾಗ -- "ಪಾಲ್ ಬರಿ ನನ್ನ ಬಿಸಿನೆಸ್ ಗೆ ಏಟು ಹಾಕುತ್ತಿಲ್ಲ , ನನ್ನ ಜೀವನದ ಸುಖಕ್ಕೂ ಅಡ್ಡಿಯಾಗ ಹೊರಟಿದ್ದಾನೆ. ಆದ್ದರಿಂದ ಅವನನ್ನು ನಾನು ಹೊರದೇಶದಲ್ಲಿ ಕುಡಿಯುವ ಪಾನೀಯದಲ್ಲಿ ವಿಷವನ್ನು ಬೆರಸಿ ಕೊಲ್ಲುತ್ತೇನೆ. ಅಲ್ಲಿ ಅವನ ಕಥೆ ಮುಗಿದೊಡನೆ ನಿನಗೆ ತಿಳಿಸುತ್ತೇನೆ." ಬರೆದು ಆರ್. ಜೆ ಎಂದು ಸಹಿ ಹಾಕಿದ್ದ ಒಂದು ಪತ್ರದ ಸ್ಕ್ಯಾನ್ ಕಾಪಿ ಗಾರ್ಗಿಗೆ ಕಳುಹಿಸಿದ್ದ. ಅದನ್ನು ಅವಳು ಜೋಪಾನವಾಗಿ ಇಲ್ಲಿ ಸೇವ್ ಮಾಡಿ ಇಟ್ಟಿದ್ದಳು.


ಅಂತು ಸಾಕ್ಷಿ ಸಿಕ್ಕಿತಲ್ಲ ಎಂದು ಸಂತೋಷ ಪಟ್ಟು ಪೋಲಿಸಿಗೆ ಫೋನ್ ಮಾಡಿದರು. ಪೊಲೀಸರು ಬಂದು ಇದ್ದ ಎಲ್ಲಾ ಸಾಕ್ಷಿಗಳನ್ನು ಗ್ರಹಿಸಿಕೊಂಡು ಕೃಪಾ ಮತ್ತು ಪ್ರೀಥಮ್ ಗೆ ಥಾ೦ಕ್ ಯೂ ಎಂದು ಹೇಳಿ ಹೊರಟರು. ಇಷ್ಟು ಬೇಗ ಈ ಕೊಲೆಯ ಕೇಸ್ ಮುಗಿಯುವುದು ಎಂದು ನಾವು ಅನ್ಕೊ೦ಡಿರಲಿಲ್ಲ ಅಂತ ನುಡಿದರು. ಗಾರ್ಗಿ ರೋಶನ್ ಇಬ್ಬರಿಗೂ ತಾವು ಮಾಡಿದಂತಹ ತಪ್ಪಿಗಾಗಿ ಶಿಕ್ಷೆ ಆಯಿತು.ಅವರಿಗೆ ಈ ಎಲ್ಲಾ ಸಾಕ್ಷಿ ಮತ್ತು ಪ್ಲಾನ್ ಬಗ್ಗೆ ಕೃಪಾಳಿಗೆ ತಿಳಿದಿದ್ದು ಹೇಗೆ ಅಂತಾನೆ ಗೊತ್ತಾಗಲಿಲ್ಲ. ಜೀವನ್ ಪಾಲ್ಗೆ ಕೃಪಾ ತನ್ನ ಮನದಲಿದ್ದ ಭಾವನೆಯನ್ನು ತಿಳಿಸುವುದರ ಮೊದಲೇ ಹೀಗೆ ಆಯಿತಲ್ಲಾ ಎ೦ಬ ನೋವು ಕಾಡಿತು . ಕೃಪಾಳ ಮನಸಿಗೆ ನಿರಾಳವಲ್ಲದ ನಿರಾಳವಾಯಿತು.


ಆ ಮಳೆ ಬಂದ ರಾತ್ರಿ ನಡೆದದ್ದು ಈ ಒಂದು ಕಹಿಯಾದ ಘಟನೆ..



(ಈ ಸ೦ಚಿಕೆ ಮಾಲೆಯಲ್ಲಿ ಬಂದ ಪಾತ್ರಗಳು ಕೇವಲ ಕಾಲ್ಪನಿಕ. ಧಾರಾವಾಹಿಯನ್ನು ಬರೆಯುವ ಮೊದಲ ಪ್ರಯತ್ನ. ತಪ್ಪಾಗಿದ್ದಲ್ಲಿ ಕ್ಷಮೆ , ಇಷ್ಟವಾಗಿದ್ದಲ್ಲಿ ನನಗೆ ಸಂತೋಷ. ಓದಿದ್ದಕ್ಕೆ ಧನ್ಯವಾದಗಳು)

Comments

Rajalakshmi said…
Too good, the entire story was really thrilling. Enjoyed the reading. I had never expected gaargi to be involved. congratulation!!!! for the success on the first story. Waiting for more of such fantastic reading experience
Anonymous said…
Hi Ashwini,
really its very good story likes it .............

Roopa
@Rajalakshmi: Thank you for the encouragement.. Waiting for next storyline to pop up in my tiny brain.. keep watching the space for more to come..

@Roopa: Thanks a lot!
Shanth said…
Good story, though I felt that you hurried in revealing the plot in last part and finding evidence so easy and quick :)
But, a bright start to your story writing. Your writing is flawless and fluent.
When is the next coming Ashwini?
@Shanth: Thank you for your thoughts.. Will keep posting out whenever something fresh brews up... Happy reading!
Rags said…
nice ending to ur new beginning.. ;) the readup was what we say.. majavaagittu! :D
@Rags: Glad you liked the ending.. Thank you!
Anonymous said…
Modala praytna aadaru tumba chennagi bandide..:)

- Geetha
@Geetha: Thanks a lot. Check the new series... Shall we dance ??? and get back with your comments...

Popular Posts