ಮುಂಜಾನೆಯ ಸೊಬಗು!

ತಂಪಾದ ಮುಂಜಾನೆ
ಮಂಜು ಬೀಳೋ ಸದ್ದಿನಲಿ
ಕೇಳಿಸಿದೆ ನನ್ನಯ ಹೆಸರು
ನಿನ್ನದೇ ದನಿಯಲಿ.

ಪಿಸುಗೂಡುತ ಮಾತೊಂದ
ಕಿವಿಯ ಮೇಲೆ ಇಟ್ಟ ಹಾಗೆ
ಇಬ್ಬನಿಯ ಒಂದು ಹನಿ
ಎಲೆಯ ಮಡಿಲ ಸೇರಿದೆ.

ಮಲ್ಲಿಗೆಯ ಗಿಡದಲ್ಲಿ
ಬಿಳಿ ಹಾಸಿಗೆ ಚೆಲ್ಲಿದ ಹಾಗೆ
ಮನವು ಶುಭ್ರ ಬಿಳಿಯ
ಹಾಳೆಯಾಗಿದೆ

ರಂಗು ರಂಗಿನ ರಂಗೋಲಿ
ದಿನಕರನಿಗೆ ಉದಯ ಹಾಡಿರಲು
ಹಕ್ಕಿಯ ಗುನುಗಿನ ಚಿಲಿಪಿಲಿಯಲಿ
ಹೊಸ ರಾಗ ಹುಟ್ಟಿದೆ.

ಬತ್ತದ ತೆನೆ ಮೇಲೆ ಚಿನ್ನದ ಕಿರಣ
ನಲಿಯುತಿರಲು
ಮುಂಜಾನೆ ಕಣ್ಣು ತೆರೆದಾಗ
ಮನೋಲ್ಲಾಸವಾಗಿದೆ

- ಅಶ್ವಿನಿ

Comments

prathap said…
very interesting write ups. never thought ur kannada is so good :) i could not read much of it.
@Prathap: Thank you!. I would be glad to read it out for you :)

Popular Posts