ಇದು ಸರಿಯೇ ?

ನೆನ್ನೆ ಸಂಜೆ ನಾನು ಮನೆಗೆ ಹಿ೦ತಿರುಗುವಾಗ ಹತ್ತಿರದ ಮಾರುಕಟ್ಟೆಯಲ್ಲಿ ಸ್ವಲ್ಪ ಖರೀದಿ ಮಾಡೋ ಸಲುವಾಗಿ ನನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿದೆ.ಆಫೀಸಿ೦ದ ಹೊರಟಾಗ ತಂಪಾದ ಗಾಳಿ ಬೀಸುತಿತ್ತು. ತುಂತುರು ಹನಿ ಚೆಲ್ಲಿ ವಾತಾವರಣ ತಿಳಿಯಾಗಿತ್ತು. ಇದನ್ನನುಭವಿಸುತ್ತಾ ಹಾಗೆ ದಟ್ಟ ವಹಾನಗಳ ಮಧ್ಯೆ ತೂರಿಕೊಂಡು ಮಾರುಕಟ್ಟೆಗೆ ಬಂದು ಸೇರಿದ್ದೆ. ಮನಸಿನಲ್ಲಿ ಹಲವಾರು ವಿಚಾರಗಳು, ಅಮ್ಮ ಹೇಳಿದ್ದ ಸಾಮಾನಿನ ಪಟ್ಟಿ, ಆ ವಾಹನಗಳ ಸದ್ದು - ಮಿಶ್ರಿತವಾಗಿ ಒಂದು ಹೊಸ ಶಬ್ದವೇ ನನ್ನ ತಲೆಗೆ ಕುಕ್ಕುತ್ತಿದ್ದಂತಾಗಿತ್ತು. ಅಷ್ಟರಲ್ಲಿ ನಾನು ನನ್ನ ಗೆಳತಿಯೊಬ್ಬಳಿಗೆ ಎಸ್ ಎಂ ಎಸ್ ಕಳುಹಿಸಿ, ಮೊಬೈಲ್ ತೆಗೆದು ನನ್ನ ಬ್ಯಾಗ್ನಲ್ಲಿ ಹಾಕಿ ತಲೆ ಎತ್ತಿದಾಗೆ ನನ್ನ ಮುಂದೆ ಸುಮಾರು ೧೮ - ೧೯ ವರ್ಷದ ಹುಡುಗಿ ನಿ೦ತಿದ್ದಳು. ಗುಲಾಬಿ ಬಣ್ಣದ ಚೂಡಿಧಾರ ತೊಟ್ಟು ಕೈನಲ್ಲಿ ಪ್ಲಾಸ್ಟಿಕ್ ತೊಟ್ಟೆಯೊ೦ದನ್ನು ಹಿಡಿದಿದ್ದಳು.ಅದರಲ್ಲಿರೋದೇನು ಅಂತ ಒಮ್ಮೆ ಮನ ಪುಳುಕಿತ ಗೊಂಡರೂ , ನೋಡಲೇನು ಕ್ರೂರಿಯಾಗಿ ಅತವ ಯಾವುದೇ ಭಯ ತರುವಂತಹ ಮುಖದವಳಾಗಿರಲಿಲ್ಲ ಆ ಕಂದು ಬಣ್ಣದ ಕುಳ್ಳಿ. ಆದರು ಒಮ್ಮೆಲೇ ಮುಂದೆ ಬಂದು ನಿ೦ತಾಗ ಬೆರಗಾಗಿ ಹಿಂಜರಿದೆ. ನಾನು ಗಡಿಬಿಡಿಯಲಿದ್ದರಿ೦ದ, ಅವಳೇನೋ ಮಾರಲಿಕ್ಕೆ ಯತ್ನಿಸುತ್ತಿರುವ ಹಾಗನ್ನಿಸಿತು. ನನಗೇನು ಬೆಡವೆ೦ದು ಥಟ್ಟನೆ ಹೇಳಿ ಮು೦ದೆ ಹೊರಟೆ.

ಆಕೆ "ನಾನೇನು ಮಾಡೋದಿಲ್ಲ ಅಕ್ಕ. ಹೂವು ತೊಗೊಳ್ಳಿ,ನನ್ನ ತ೦ಗಿ ಸ್ಕೂಲಿಗೆ ಫೀಸ್ ಕಟ್ಟಬೇಕು. ನಾಳೆನೇ ಕೊನೆ ದಿನ. ೧೦೦ ರೂಪಾಯಿ ಕಡಿಮೆ ಇದೆ" ಅಂತ ತನ್ನ ಕಥೆಯನ್ನು ಹೇಳಿಕೊಂಡಳು. ನಾನು ಒಂದು ಕ್ಷಣ ಹಾಗೆ ಸುಮ್ಮನೆ ನಿ೦ತೆ. ಅವಳ ಕಣ್ಣಲ್ಲಿ ಸತ್ಯ ಕ೦ಡಿತು. ದ್ವನಿ ರೋಧನೆಯ ಸ್ವರ. ಪಾಪ ಅನ್ನಿಸಿತು. ಮತ್ತೆ ಹಿ೦ದಕ್ಕೆ ಹೋದೆ. ಕೈನಲ್ಲಿದ್ದ ೨೦ ರೂಪಾಯಿ ಅವಳಿಗೆ ಕೊಟ್ಟು, ಹೂವು ನನಗೆ ಬೇಡಾಮ್ಮ, ನೀನು ಬೇರೆಯವರಿಗೆ ಮಾರಿ ಅದ್ರಲ್ಲಿ ಬರುವ ದುಡ್ಡನ್ನು ಸೇರಿಸಿ ತಂಗಿ ಫೀಸ್ ಕಟ್ಟು ಅ೦ದೆ. ಪಾಪ ಮತ್ತೊಮ್ಮೆ ಆ ಮುಗ್ಧ ಹುಡುಗಿ " ನಮ್ಮ ಅಪ್ಪ ದುಡ್ಡು ಕೇಳಿದ್ರೆ ಹೊಡಿತಾನೆ. ಮನೆಯಲ್ಲಿ ಇರೋ ದುಡ್ಡೆಲ್ಲ ಕುಡಿದು ಹಾಕಿ ಬಿಡ್ತಾನೆ. ತ೦ಗಿ ಓದಿಗೆ ಸಹಾಯ ಬೇಕಿತ್ತು , ಅದ್ದರಿ೦ದ ನಿಮಗೆ ಹೂವು ಮಾರೋದಕ್ಕೆ ಬ೦ದೆ " ಎ೦ದು ಹೇಳಿ ಅಲ್ಲಿ೦ದ ಹೊರಟಳು.

ಏಟಿಎಂ ಗೆ ಹೋಗಿ ಹಣ ತೆಗೆದು ಮಾರುಕಟ್ಟೆಯಲ್ಲಿ ಬೇಕಾದ ಪದಾರ್ಥಗಳನೆಲ್ಲ ಖರೀದಿ ಮಾಡಿ, ಗಾಡಿಯತ್ತ ಬರುವಾಗ ನನ್ನ ಮನದ ಕೆಲಸ ಮತ್ತೆ ಪ್ರಾರಂಭವಾಯಿತು. ಆ ಹುಡುಗಿ ಸತ್ಯವಾಗಿಯೂ ದುಡ್ಡು ತನ್ನ ತ೦ಗಿಯ ಓದಿಗೆ ಗ್ರಹಿಸಿದ್ದಾದರೆ ಸರಿ, ಇಲ್ಲ ಇದು ಏನಾದರು ಈಗಿನ ಕಾಲದ ಚಾಲಾಕಿತನದ ಒ೦ದು ಮ೦ತ್ರವೊ ? ಎ೦ದೆನಿಸಿತು. ಇವಳ ಕಥೆ ಏನೇ ಆಗಲಿ, ಈ ಹುಡುಗಿಯಂತೆ , ಇವಳ ತಂಗಿಯಂತೆ, ಇನ್ನೆಷ್ಟು ಚಿಕ್ಕ ಮಕ್ಕಳ ಕನಸು ಅರಳದೆ ಹಾಗೆ ಮುದುರಿ ಹೋಗಿದೆಯೋ, ಮತ್ತೆಷ್ಟು ಪ್ರತಿಭೆಗಳಿಗೆ ಅವಕಾಶವೇ ಸಿಗದೇ ಅವರ ಆಸೆಗಳಲ್ಲ ಮುಚ್ಚಿ ಹೋಗಿದೆಯೋ ಅನ್ನೋ ಆಲೋಚನೆ ತಲೆ ಕೆಡಿಸಿತು.

ಇ೦ತಹ ನೂರಾರು ವ್ಯಥೆಯ ಕಥೆಗಳಿಗೆ ಕಾರಣವಾದರು ಏನು ? ದಾರಿಧ್ರ್ಯತೆ ಒ೦ದೆ ಕಾರಣವೇ? ಮಧ್ಯಪಾನ , ಅಲಾಸಿತನ, ನಿರುದ್ಯೋಗ , ಕಡು ಬಡತನ ವೆ ಇ೦ತಹದೊ೦ದು ಪರಿಸ್ಥಿತಿ ತಲುಪಿಸಿದೆಯೇ ಎನ್ನುವುದು ಪ್ರಶ್ನೆ.

ನಾ ಆ ಹುಡುಗಿಗೆ ೨೦ ರುಪಾಯಿ ಕೊಟ್ಟಿದ್ದಕ್ಕೆ ಮನಸು ಸರಿ ಎ೦ದರೆ, ಬುದ್ಧಿ ತಪ್ಪೆಂದಿತು.(ಹಣದ ವೆಚ್ಚಕ್ಕಾಗಿ ಮನಕೆ ಕಷ್ಟವಲ್ಲ ಆದರದರ ಸರಿಯಾದ ಉಪಯೋಗವಾದೀತೇ? ಅನ್ನುವುದೇ ಕಳವಳ) ಸರಿ ಯಾವುದು ತಪ್ಪು ಯಾವುದು ಅನ್ನುವುದಿಲ್ಲಿ ಮುಖ್ಯವಲ್ಲ , ಅಕ್ಷರ ಜ್ಯೋತಿ ಎಲ್ಲ ಮಕ್ಕಳ ಹಕ್ಕು. ಈ ಪುಟಾಣಿಗಳೆಲ್ಲರ ಕನಸು ನಿಜವಾಗುವುದೆ೦ದೊ? ನಿಮ್ಮ ಅನಸಿಕೆ.

-ಅಶ್ವಿನಿ

Comments

Sahana Rao said…
ಅಯ್ಯೋ ಅಶ್ವಿನಿ.. ನೀವು ಮೋಸ ಹೋದಿರಾ? ನಾನು ಇದೆ ತರಹದ ಕಥೆ ಕೇಳಿ ೫೦ ರುಪಾಯನ್ನು ಕೈಯಲ್ಲಿ ಇತ್ತು.. "ಓದಿಕೋ ಕಂದ.. ಓದಲು ಏನು ಸಹಾಯ ಬೇಕಿದ್ದರೂ ಬಂದು ನನ್ನ ಕೇಳು" ಎಂದೆಲ್ಲ ಹೇಳಿ ಬಂದೆ.. ಮುಂದಿನ ಅದೇ ಜಾಗದಲ್ಲಿ ಅದೇ ಹುಡುಗ ಅದೇ ಕಾರಣ ಹೇಳಿ ಹಣ ಪಡೆಯುತ್ತಿದ್ದಾಗ. "ಹೇ.. ಮರಿ.. ಬಾರೋ ಇಲ್ಲಿ ಎಂದೊಡನೆ ಕಾಲಿಗೆ ಬುದ್ಧಿ ಹೇಳಿದ.. "
ಇದೆಲ್ಲ ಒಂದು ವ್ಯವಸ್ತಿತ ದಂದೆ.. ಮತ್ತೊಮ್ಮೆ ಬಲಿಯಾಗದಿರಿ..
@Spicy Sweet:ಹೌದು ಇಂತಹ ದ೦ದೆ ಗೆ ಬಲಿಯಾಗ ಬಾರದು ಆದರೆ ಬಂದು ಯಾಚುವವರು ನಿಜವಾಗಿಯೂ ಕಷ್ಟದಲ್ಲಿದ್ದರೋ ಇಲ್ಲವೋ ಅಂತ ಹೇಗೆ ಒಮ್ಮೆಲೇ ತಿಳಿಯುವುದು ? ನನಗಾದ ಕಳವಳವು ಅದೇ ಆಗಿತ್ತು ಅಂದು. ಇಲ್ಲಿ ಮೋಸ ಹೋಗೋ ಪ್ರಶ್ನೆ ಬೇರೆ , ಇವರು ಸುಳ್ಳು ಹೇಳಿದರು ಪ್ರಾಯ ಇನ್ನು ಓದುವಂತಹದಲ್ಲವೇ ? ಏಕೆ ಈ ತರಹ ಬೇಡುತ್ತಿರುವರು?
Sahana Rao said…
ನಿನ್ನ ತಂಗಿಯ ಶಾಲೆ ಎಲ್ಲಿದೆ ಹೇಳು.. ನಾನೇ ಬಂದು ಪೂರ್ತಿ ಹಣ ಕತ್ತುತ್ತೀನಿ ಅಂತ ಹೇಳಿ ನೋಡಿ.. ಓಡಿ ಹೋಗುತ್ತಾರೆ.. ಅವರು ಹೇಳುವ ಕಾರಣ ನಿಜ ಅವರ ಸಮಸ್ಯೆಗೆ ಪರಿಹಾರ ಆಗಬೇಕಲ್ಲವೇ? ಇಲ್ಲ.. ಒಪ್ಪುವುದಿಲ್ಲ ಅವರುಗಳು.. ಏನೇನೊ ಕಾರಣ ಹೇಳುತ್ತಾರೆ.. ನಾನು ಪ್ರಯತ್ನ ಪಟ್ಟಿದ್ದೀನಿ..
ವಿದ್ಯೆ ಹೆಸರಿಗೆ ಮರೀಚಿಕೆ.. ಎಲೆ ವಯಸ್ಸಿನಲ್ಲಿ ಮೋಸ ಮಾಡಿ, ಸುಳ್ಳು ಹೇಳಿ ಹೊಟ್ಟೆ ತುಂಬಿಸಿಕೊಳ್ಳುವುದನ್ನ ಹೇಳಿಕೊಡುತ್ತಾರಲ್ಲ ಅವರ ತಂದೆ ತಾಯಿ.. ಮುಂದೆ ಅವರೆಂತ ಸಮಾಜ ಘಾತಕ ಶಕ್ತಿಗಳು ಆಗಬಹುದು ಎಂಬ ಪರಿವು ಇರುತ್ತದ? ಬಿಡಿ.. ಅದನ್ನ ಅವರು ಯೋಚಿಸುವ ಮಟ್ಟದ ಸಮಾಜ ಪ್ರಜ್ಞೆ ಇದ್ದಿದ್ದರೆ.. ನಮ್ಮ ದೇಶ ಎಲ್ಲೊ ಇರುತಿತ್ತು...

Popular Posts