ಮಳೆ ಬಂದ ರಾತ್ರಿ ... ಭಾಗ ೧
ಕರಾಳವಾದ ಒಂದು ರಾತ್ರಿಯದು. ಎಲ್ಲೆಡೆ ಕತ್ತಲು ಬರಿ ಕತ್ತಲು. ವಾತಾವರಣ ಹೊರಗೆ ಹೀಗಿದ್ದಾಗ ಆಕೆ ಕೆಲಸ ಮುಗಿಸಿ , ತನ್ನ ಒಂದು ಕೈನಲ್ಲಿ ಕೆಂಪು ಬಣ್ಣದ ಬ್ಯಾಗ್ ಹಿಡಿದು ಇನ್ನೊಂದರಲ್ಲಿ ಮೊಬೈಲಿನ ಗುಂಡಿಗಳನ್ನು ಸರ ಸರನೆ ಒತ್ತುತ್ತಾ ಒಂದು ಸಂದೇಶ ಕಳುಹಿಸಿದಳು. ಹೊತ್ತು ಹೆಚ್ಚಾಗಿರಲಿಲ್ಲ, ಆದರೆ ಮಳೆ ಬಂದಿದ್ದರಿಂದ ವಿದ್ಯುತ್ ಸರಬರಾಜಿನಲ್ಲಿ ಏನೋ ಎಡವಟ್ಟಾಗಿ ಅವಳು ಕೆಲಸ ಮಾಡುತಿದ್ದ ಕಂಪನಿಯಲ್ಲಿ ದೀಪವಿರಲಿಲ್ಲ. ಜೆನರೇಟರನ್ನು ೧ ತಾಸಿನಿ೦ದ ಬರ್ರೋ ಎ೦ದು ಓಡಿಸುತ್ತಾ ಕೆಲವು ಚಿಕ್ಕ ಪ್ರಮಾಣದ ದೀಪವನ್ನು ಮಾತ್ರ ಉರಿಸಲಾಗಿತ್ತು.
ಆಫೀಸ್ ನ ರಿಸೆಪ್ಶನ್ ನಲ್ಲಿ ಕುಳಿತಿದ್ದ ಸೆಕ್ಯೂರಿಟಿ ಡಿಪಾರ್ಟ್ಮೆಂಟ್ ನ ರಾಜು ಅವಳನ್ನು ಗಮನಿಸಿದ.ಎಂದಿನಂತೆ ಅವಳ ಮುಖದಲ್ಲಿ ನಗು ಇರಲಿಲ್ಲ. ಯಾವುದೋ ಚಿಂತೆ, ಭಯಭರಿತ ಕೈಯ ಕಂಪನವನ್ನು ಕಂಡ. ಅವನು "ಮೇಡಂ ಒಂದ್ ನಿಮಿಷ ..." ಅನ್ನೋಷ್ಟರಲ್ಲಿ ಅವಳು ಯೋಚನಾಮಗ್ನಳಾಗಿ ಶರವೇಗದಿ ಬಾಗಿಲು ತೆಗೆದು ನಡೆದಳು. ದಿನವು ಮನೆಗೆ ಮರಳುತಿದ್ದ ವಾಹನಕ್ಕಾಗಿ ಅಂದು ಅವಳು ಕಾಯಲಿಲ್ಲ. ಚಳಿಯಲ್ಲೂ ಹಣೆಯ ಮೇಲೆ ಬೆವರಿದ್ದದ್ದು ರಾಜು ಕಣ್ಣಿಗೆ ಬಿದ್ದಿತ್ತು.ಅವನು ಆಸನ ಬಿಟ್ಟು ಹೋಗಿ ವಿಚಾರಿಸೋದು ಉತ್ತಮ ಎಂದು ಮನದಲ್ಲಿ ಅಂದುಕೊಳ್ಳೋಷ್ಟರಲ್ಲಿ ಮೇಜಿನ ಮೇಲಿದ್ದ ಫೋನ್ ಟ್ರಿನ್ ಟ್ರಿನ್ ಎಂದು ಶಬ್ದ ಮಾಡಲಾರ೦ಭಿಸಿತು. ಗೊಂದಲದಲ್ಲೇ ಫೋನ್ ಎತ್ತಿ "ಹಲೋ" ಎಂದ..
ಆಕಡೆಇ೦ದ ಬಂದ ಧ್ವನಿ ಗಾರ್ಗಿಯದು. ಗಾರ್ಗಿ ಕೃಪಾಳ ಸಹೋದ್ಯೋಗಿ, ಅವಳ ಜೊತೆಯಲ್ಲೇ ಸಾಧಾರಣ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದಳು. ಗಾರ್ಗಿಯ ಧ್ವನಿಯಲ್ಲಿ ಆತಂಕದ ಸುಳಿವಿತ್ತು. ರಾಜು ಸಂಧರ್ಭದ ಗಾಂಭೀರ್ಯತೆಯನ್ನರಿತು ಮೆಲುದನಿಯಲಿ "ಮೇಡಂ ಎನಾಯಿತು ? ಯಾಕೆ ಸಪ್ಪೆಯಾಗಿದ್ದೀರ ? ಕೃಪಾ ಮೇಡಂ ಕೂಡ ಗಡಿಬಿಡಿಯಲ್ಲೇ ಓಡುತಿದ್ದರು? ಸಮಾಚಾರವೇನು?" ಎಂದು ಪ್ರಶ್ನೆಗಳ ಸರಮಾಲೆಯನ್ನೇ ಕೇಳಲಾರಂಭಿಸಿದ.
ಗಾರ್ಗಿ ಏನು ಉತ್ತರಿಸುವ ಪರಿಸ್ಥಿತಿಯಲ್ಲಿ ಇರಲಿಲ್ಲ. ರಾಜುವಿಗೆ ಒಂದೂ ಅರ್ಥವಾಗಲಿಲ್ಲ. ಫೋನ್ ಕೆಳಗೆ ಇಟ್ಟು, ಅದೇ ಕೊಠಡಿಯ ಮೂಲೆಯಲ್ಲಿದ್ದ ಲಿಫ್ಟ್ ಬಟ್ಟನನ್ನು ಒತ್ತಿ ಕಾಯುತ್ತಿದ್ದ. ಮತ್ತೆ ಫೋನ್ ಟ್ರಿನ್ ಟ್ರಿನ್ ಶಬ್ದ ಕೇಳಿಸಿತು.. ರಾಜು ಫೋನ್ ನೆಡೆಗೆ ಓಡಿ ಬಂದ. ಇನ್ನೇನು ಫೋನ್ ರೆಸೀವೆರ್ ಎತ್ತಬೇಕೆ೦ದಿದ್ದಾಗ ಶಬ್ದ ನಿಂತಿತ್ತು. ಕಾಲರ್ ಐ.ಡಿ. ನಲ್ಲಿ ನೋಡಿದಾಗ ನಂಬರ್ ಗಾರ್ಗಿಯದಾಗಿತ್ತು.ಈ ಭಾರಿ ಅವನು ತಡಮಾಡದೆ ಸೀದಾ ಮೆಟ್ಟಿಲುಗಳನ್ನೇರುತ್ತ ೩ ನೆ ಮಹಡಿ ತಲುಪಿದ.
ಮುಂದೆ ಆದದ್ದು ??

Comments
ಬರಹದ ಶೈಲಿ ಸೂಪರ್!
ಟುಸ್ ಅನ್ನಿಸೋ Forward ಗಳ ತರಹ ಮಾತ್ರ ಬೇಡ ಅಶ್ವಿನಿ ಅಂತ್ಯ ..
Sakathhagi story baritiya kane bega next epidoe release madu..........waiting for the next episode
Roopa
- Geetha
@ Geetha: Mundina sanchike publish aitu .. check maadi :D