ಅ೦ದು ಸಂಜೆ ..

Disclaimer: For Non Kannada readers this post is about an evening travel back home in a city bus and the experience with a little imagination. However a gist is at the bottom of this post on popular demand.


ಅಂದು ಸಂಜೆ ಬಸ್ಸಿನಲ್ಲಿ ಮನೆಗೆ ತೆರಳುವ ಸಂಭವ ಮೂಡಿ ಬಂದಿದ್ದು ಒಂದು ತರಹ ಒಳ್ಳೇದೆ ಆಯಿತು ಅಂತ ಈಗ ಅನಿಸುತ್ತಾ ಇದೆ. ಹೋಗಿರಲಿಲ್ಲ ನಿಮಗೆ ಈಗ ಈ ಲೇಖನವನ್ನು ಓದುವ ಅವಕಾಶವಿರುತ್ತಿರಲಿಲ್ಲವಲ್ಲ :)

ಅದ್ರಲ್ಲಿ ಹೊಸದು ಏನಿದ್ಯಪ್ಪಾ ಅಂತ ಕೇಳ್ತಾ ಇದ್ದೀರಾ?

ಆಫೀಸ್ ಮುಗಿಸಿ ಬಸ್ ಸ್ಟಾಪ್ ಗೆ ಬರೋಷ್ಟರಲ್ಲಿ ನನ್ನ ಕಣ್ಣ ಮುಂದೇನೆ ೩ ಕೆಂಪು ವಜ್ರ AC ಗಾಡಿಗಳು ವ್ರೂಂ ವ್ರೂಂ ಅಂತ ಹೋಗಿಯೇ ಬಿಟ್ಟವು. ರೋಡಿನ ಈ ಬದಿಯಿಂದ ಆ ಬದಿಗೆ ದಾಟುವಷ್ಟರಲ್ಲಿ ನನ್ನ ಅವಸ್ಥೆ ಕೇಳಬೇಡಿ. ಆಗ ತಾನೇ ಹೈದು ಹೋದ ಬಸ್ಸಿನ ಕೊನೆಯ ಸೀಟ್ನಲ್ಲಿ ಕೂತಿದ್ದ ಮಗು ನನ್ನ ಅವಸ್ತೆಯನ್ನ ನೋಡಿ ನಗುತಿದ್ದಂತೆ ಇತ್ತು. ಹಾಗೋ ಹೀಗೋ ರೋಡ್ ದಾಟಿ ಮುಂದಿನ ಬಸ್ಸಿಗಾಗಿ ಕಾದೆ. ಎದುರಿಗೆ ಬಂದಿದ್ದು ಮಾರ್ಕೆಟ್ ಗೆ ಹೋಗೋ ಒಂದು ಸಾಧಾರಣ ಬಸ್. ಅದ್ರಲ್ಲಿ AC ಇಲ್ದೆ ಇದ್ರೂ ಕೂರಲು ಸೀಟ್ ಇದ್ದಿದ್ದು ನನಗೆ ಕುಷಿ ತಂದಿತು.

ಬಸ್ ಹತ್ತಿ ಎರಡನೇ ಸೀಟಿನ ಕಿಟಕಿಯ ಪಕ್ಕ ಕೂತೆ. ಒಮ್ಮೆ ಹಾಗೆ ನನ್ನ ಕತ್ತನ್ನು ಸುತ್ತ ಗೂಬೆಯಂತೆ ತಿರುಗಿಸಿ ಜೊತೆ ಪಯಣಿಸುತ್ತಿರುವ ಪ್ರಯಾಣಿಕರನ್ನು ವೀಕ್ಷಿಸಿದೆ. ಮುಂದೆ ಕುಳಿತಿದ್ದ ಯುವತಿಯರಿಬ್ಬರು ಕಿವಿಗೆ ಇಅರ್ ಫೋನ್ಸನ್ನು ಹಾಕಿ ಹಾಡಿನಲ್ಲಿ ಮಗ್ನರಾಗಿದ್ದರು. ಹಣ್ಣು ತಲೆಯ ಅಜ್ಜಿಯೊಬ್ಬರು ನಿದ್ರೆಯಲ್ಲಿ ತಲ್ಲೀನ ರಾಗಿದ್ದರು. ಹದಿನಾರು ರುಪಾಯಿ ಚಿಲ್ಲರೆ ಹುಡುಕಿ ಟಿಕೆಟ್ ಖರೀದಿಸಿ ಆಯಿತು. ಸುಮಾರು ಒಂದೂವರೆ ಘಂಟೆಯ ಪ್ರಯಾಣ. ಸುಮ್ನೆ ಕೂರೋದ್ಕಿ೦ತ ಮಲಗಿದರೆ ಹೇಗೆ ಅಂತ ಯೋಚಿಸಿ ಹಾಗೆ ಕಣ್ಣು ಮುಚ್ಚಿದ್ದೆ ಅಷ್ಟೇ ...


"ಲೇ ತಮ್ಮ ಎಲ್ಲಿದ್ಯಪ್ಪ ನೀನ್? ನಾ ಬಂಡ್ಯಾಗೆ ಹತ್ತೀನಿ ನೋಡ್ ಈಗ. ೫ ನಿಮಿಷ ಆಗತ್ ನೋಡ್ ಲೇ. ಅಲ್ಲೇ ಇರ್ ನೀನು. ಬರಲಿಕ್ಕೆ ಹತ್ತೀನಿ."

... ಅಂತ ಇಡಿ ಬಸ್ನಲ್ಲಿ ಕೂತಿರೋರಿಗೆಲ್ಲ ಕಿವಿ ಮಂದ ಆಗೋ ಹಾಗೆ ಕಿರುಚುತಿದ್ದ. ನಿದ್ದೆ ಮನೆ ಹಾಳಾಯಿತು. ಆ ಮನುಷ್ಯ ಇಳಿದಮೇಲೆ ಸ್ವಲ್ಪ ಶಾಂತಿ ಸಿಗ್ತು ಉಳಿದ ಪ್ರಯಾಣಿಕರಿಗೆಲ್ಲ.

ಸಂಚರಿಸುತ್ತಾ ಊರಿನಲ್ಲಿರೋ ಎಲ್ಲ ಗಾಡಿಗಳ ಜೊತೆಗೆ ಅರ್ಧ ದಾರಿ ಬಂದದ್ದಾಯಿತು. ಒಂದು ಕಡೆ ವಾಹನಗಳೆಲ್ಲ ನಿಂತಲ್ಲೇ ನಿಂತು ಬಿಟ್ಟವು. ಸುಗಮವಾಗಿ ಸಾಗುತಿದ್ದ ಚಾಲಕರು ಸ್ಥಗಿಥವಾದರು. ಜೊತೆಗೆ ನಾವುಗಳು ಸಹ ಇದ್ದಲ್ಲೇ ಇದ್ದದ್ದಾಯಿತು. ಪಕ್ಕದಲ್ಲಿ ಒಂದು ದೊಡ್ಡ ಕಟ್ಟಡ ಅಂದ್ರೆ - ಈ ನಮ್ಮ ಹೈಟೆಕ್ ಮಾಲ್ಸ್ನಲ್ಲೊಂದು ಇತ್ತು. ಮಾಲ್ಸ್ ಅಂದ್ರೆ ಬರಿ ಯುವಕ ಯುವತಿಯರು ಕೆಲವು ಸಮಯ ಕಳೆಯುವ ಒಂದು ನಿಲ್ದಾಣವೆಂದು ಅಂದು ಕೊಂಡಿದ್ದೆ. ಅಯ್ಯೋ ನನ್ನ ಕಲ್ಪನೆ ಅರ್ಧ ಸತ್ಯ ಅರ್ಧ ತಪ್ಪಾಗಿತ್ತು. ಒಂದು ಮೂಲೆಯಲ್ಲಿ ಜೋಡಿಯೊಂದು ನಗುತ್ತ ಮನದ ಮಾತುಗಳನ್ನ ಹಂಚಿಕೊಳ್ಳುತ್ತಿದ್ದರು, ಇನ್ನೊಂದೆಡೆ ಜೋಳ ಸುಡುತ್ತಿದ್ದವನಿಗೆ ವ್ಯಾಪಾರ ಜೋರಾಗೆ ನಡಿತಾ ಇತ್ತು, ಕಬ್ಬಿನ ಹಾಲು ತೆಗೆಯುವ ಯಂತ್ರ ತಿರುಗುತ್ತಲೇ ಇತ್ತು..ಹಸಿದ ಹೊಟ್ಟೆಗಳು ಕಾತುರದಿಂದ ಕಾಯುತ್ತಿದ್ದವು. ರೊಕ್ಕ ಹೆಚ್ಚಿದ್ದವರು ಖರೀದಿ ಮಾಡಿ ಕೈ ತುಂಬಾ ಚೀಲಗಳನ್ನು ಹಿಡಿದು ಹೊರಟಿದ್ದರು.

ನೀಲಿ ಶರ್ಟ್ ಧರಿಸಿ ಲೆದರ್ ಜಾಕೆಟ್ ಕೈನಲ್ಲಿ ಹಿಡಿದು ಮೊಬೈಲ್ ಫೋನಿಗೆ (ಸರಾಸರಿಯಾಗಿ ಬಸ್ ಅಲ್ಲಿ ನಿಂತಿದ್ದಷ್ಟು ಹೊತ್ತು) ವದರುತಿದ್ದ.

ನಿದ್ದೆಗೆ ಸೋತಿದ್ದ ಕಣ್ಣುಗಳು ಈಗ ಚುರುಕಾಗಿ ಅತ್ತಿಂದಿತ್ತ ನೋಡುತ್ತಿದ್ದವು.

ಇದೆಲ್ಲದರ ಮಧ್ಯೆ ನಿವೃತ್ತಿ ಜೀವನದ ಸೊಬಗನ್ನು ಅನುಭವಿಸುತ್ತ ಕುಳಿತಿದ್ದ ತಾತಾ ಅಜ್ಜಿಯ ಹುರುಪು ನನ್ನ ಮುಖದಲ್ಲಿ ಕಿರು ಮಂದಹಾಸ ಮೂಡಿಸಿತ್ತು. ಇನ್ನುಳಿದ ಮೂಲೆಗಳನ್ನು ವೀಕ್ಷಿಸೋದ್ರೊಳಗೆ ಬಸ್ ಅಲ್ಲಿಂದ ಮುಂದಕ್ಕೆ ಸಾಗಲಾರಂಭಿಸಿತು. ತಾತ ಅಜ್ಜಿಯ ಕೈ ಹಿಡಿದು ಏನೋ ಕಿವಿ ಹತ್ತಿರ ಹೋಗಿ ಮೆಲು ದನಿಯಲ್ಲಿ ಏನೋ ಹೇಳೋ ಹಾಗೆ ಇತ್ತು ದೃಶ್ಯ. ಅಜ್ಜಿ ನಾಚಿಕೊಂಡು ಕೈನಲ್ಲಿ ತಾತಾಗೆ ಮೊಟಕಿದರು.

ಏನ್ ಹೇಳಿರಬಹುದು ಅಂತ ನನ್ನ ಮೂರ್ಖ ಮನಸು ಯೋಚಿಸಲು ....

೧) ತಾತಾ: "ಹೇಯ್ .. ಅಲ್ಲಿ ಬರುತ್ತಿದ್ದಾಳಲ್ಲಾ ಲಲನಾಮಣಿ,ನೀನು ಈಗಲೂ ಅವಳಿಗಿಂತ ಚೆನ್ನಾಗಿ ಕಾಣ್ತಾ ಇದ್ದೀಯ"
ಅಜ್ಜಿ:" ಅಯ್ಯೋ ಹೂಗೀಪ್ಪ..."

೨) ತಾತಾ: "ಆ ಹುಡುಗಿಯ ಲಂಗ ಎಷ್ಟು ಚಿಕ್ಕದಾಗಿದೆ ನೋಡು"
ಅಜ್ಜಿ: "ನಿಮ್ಮದ್ಯಾವಾಗ್ಲೂ ಇದ್ದಿದ್ದೆ.ಸುಮ್ನಿರಿ ಅವಳ ಬೊಯ್ಫ್ರೆ೦ಡ್ ಬಂದು ಹೊಡಿದಾನು :)"

೩) ತಾತಾ: "ಕ್ಯಾಂಡಲ್ ಲೈಟ್ ಡಿನ್ನರ್ ಗೆ ಹೋಗೋಣ್ವಾ ಅಥವಾ ಫಿಲಂ ನೋಡೋಕೆ ಹೋಗೋಣ್ವಾ?"
ಅಜ್ಜಿ: "ಸುಮ್ನೆ ಮನೆಗೆ ಹೋಗೋಣ.ಅಲ್ಲೇ ಪಿಕ್ಚರ್ ತೋರಿಸ್ತೀನಿ, ಊಟಾನೂ ಹಾಕ್ತೀನಿ"

.... ಈ ಸಂದರ್ಶನಗಳನ್ನು ಮನದಲ್ಲೇ ರೂಪಿಸಿಕೊಳ್ಳುತ್ತಿದ್ದಂತೆ ಬಸ್ ಇನ್ನೂ ಸ್ವಲ್ಪ ದೂರ ಸಾಗಿತ್ತು. ಸದ್ದು ಗದ್ದಲಗಳ ನಡುವೆ ಆ ಕಿಟಕಿಯ ಪಕ್ಕದ ಸೀಟ್ನಲ್ಲೇ ಕುಳಿತು ಕಳೆದ - ಜೀವನದ ಒಂದು ಸಂಜೆಯ ಕಥೆ ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ..


Gist:
One evening there was a slight change in the routine, I had to take the city bus ride instead of the car.As I rush to the bus stop nearby I saw 3 air conditioned buses pass by while I stand on the other side of the road waiting for the chain of vehicles come to a halt allowing me to cross.

As I managed to get to the bus stop I got a normal city bus , though it was not an air conditioned one I was happy to find a seat to rest my tired self.

As the bus breezed through the peak hour traffic I take some time out watching the happenings outside. I saw an old couple spending their retired time sitting in front of a hitech mall. A small conversation is what I see as an episode and my wild imagination goes really wild and start thinking what they might have talked about.

Maybe 1:
Grandpa: "Hey dear you look still fresh and beautiful than the lady walking down there"
Granny: Sparkle on her face with a sweet smile."Oh noooooo"

Maybe 2:
Grandpa: "Candle light dinner or a movie :)"
Granny: "Come home will show you the movie and give a bowlful of meal:)"

Maybe 3:
Grandpa: "Oh god look at that girl's skirt. Isn't it a little short?"
Granny: "Sshhh! Please stop it. Her boyfriend might come and beat you up..Careful :)"


With some more such lovely expressions on the faces of people made that evening a beautiful one.

Comments

Bikram said…
Well now put a post in english version too please :)


Bikram's
chitrasjewelart said…
Cannot read Kannada.....now you made me curious , post one in English too.
KParthasarathi said…
Pl write at least the gist to know what you have written
Amrit said…
Sorry cannot read it
Anonymous said…
Thumbha chennagide. Naanu antaha sanje ondheradu saari kaLedhidhene:)
Rachna said…
Sweet conversation :).
@Bikram: @Chitra: @KParthasarathi @A: As I've said before some feelings run through my mind and the thoughts flow very easily in Kannada and so this post was one of them.. However on popular demand I have the english version out there at the bottom of the post. Soooo sorry guys I forgot to have it up along with the Kannada version before...:) Enjoy the reading...

@Anonymous: hmmm This is a beautiful experience in itself... Neevu kooda nanna taraha oohisteera en maatadta iddaare horage jana anta ????

@ Rachna: Thank you!
Sujatha Sathya said…
sakattagittu ajja - ajji harate :)

and thanks for the english version. i can read Kannada but i am very slow when it comes to reading it on a system. english is easier to read & faster too
Sujatha Sathya said…
hey where's my comment? boo hooo :((

ok will write again. here goes:

ajja-ajji du imaginary harate sakkathagittu

btw, thanks for the English version. i can read Kannada but i am too slow in reading it on system. english is easier & faster to read
Sujatha: I've got the moderation activated on my comments as I was flooded with some unwanted stuff. However dear thanks for writing your thoughts not once, twice :)). English version - yes its quick and easy to read. But some thoughts are better felt when its in your own mother tongue. Enanteera...
KParthasarathi said…
Thanks for complying readily with a gist.
I could see your imagination running riot
It is nicely written
Sujatha Sathya said…
correct.pakka. the dialogue part i read in Kannada only. for the flavor :)
Neeraj Kumar said…
wonderful imagination!!!!!!
@KParthasarathi: Welcome... I should have done that beforehand. However am glad you loved it.

@Sujatha: :) he he he .. maja bantalla...

@Neeraj: Welcome to my space..
Chandana said…
:) I do that a lot too! people watching and letting my imagination wander are my favorite pass times!
@TheGirlAtFirstAvenue: Are you a Gemini? I ask this out of curiosity.. Well definitely thats the best time pass: People watching:)
Pal said…
I am fan of your blog...excellent blogs from both Kannada and English. keep posting
Pal said…
Hi Ashwini, I am fan of your blogs both kannada and english, excellent writing.. keep posting :-)
@Pal: Welcome to my space and am happy to know that you love to read my scribbles and rants. Welcome again and happy reading..

Popular Posts