ಜೀವ‌ನ -2

ಜೀವ‌ನ

ಮ‌ಲೆನಾಡ‌ ಹ‌ಸಿರ‌ಲಿ
ಅಡಿಕೆಯ‌ ಹಾಸಿನ‌ಲಿ
ಅಲೆದಾಡುತ‌
ಸುಖ‌ವ‌ ನಾ ಕ‌0ಡೆ

ಏಲ‌ಕ್ಕಿಯ‌ ಪ‌ರಿಮ‌ಳ‌ದ‌
ಅರಶಿನ‌ದೆಲೆಯ‌ ಪಾಯ‌ಸ‌ವ‌
ಸ‌ವಿಯುತ‌
ರುಚಿಯ‌ ಅರ್ಥ‌ವ‌ ನಾ ಕ‌0ಡೆ

ಸ0ಜೆಯ‌ ಹೊತ್ತಿನ‌ಲಿ
ದೇವ‌ರ‌ ಮ‌0ದಿರ‌ದಿ
ಜ‌ಪ‌ತ‌ಪ‌ದ‌ ಕ‌ಲ‌ರ‌ವ‌ ಕೇಳುತ‌
ಭ‌ಕ್ತಿಯ‌ ಪ‌ರಿ ನಾ ಕ‌0ಡೆ

ರಾತ್ರಿಯ‌ ಆಗ‌ಸ‌ದಿ
ಶುಭ್ರ‌ ಚ‌0ದಿರ‌ನ‌ ಬೆಳ‌ದಿ0ಗ‌ಳ‌
ನೋಡುತ‌
ಜೀವ‌ನ‌ದ‌ ದುಖ‌ಗ‌ಳ‌ನೆಲ್ಲಾ ನಾ ಮ‌ರೆತೆ

Comments

Popular Posts