*!ಬಾನಾಡಿ!*
- ಹಕ್ಕಿ ಮರಿಯ ರೆಕ್ಕೆ ಬಲಿತು
- ಚಿತ್ತ ಬ೦ದೆಡೆ ಹಾರ ಹೊರಟು
- ಬಾನಲ್ಲಿ ತಾನೇ ಒಡೆಯನೆ೦ದು ಅರಿತು
- ಸ೦ಭ್ರಮ ಸ೦ತಸ ತನ್ನ ಪಾಲಾಗಿಸಿಕೊಂಡಿತು
- ಅನಿರೀಕ್ಷಿತ ಮಳೆಯ ಆರ್ಭಟ
- ಮರಿ ಹಕ್ಕಿಗೆ ಎಲ್ಲಿಲ್ಲದ ಸ೦ಕಟ
- ಗೊ೦ದಲದಿ ಮನವು ಸಿಲುಕಿ
- ಭಯದ ಸ್ವರದಿ ಜೋರಾಗಿ ಕಿರುಚಿ
- ಹುಸಿ ಧೈರ್ಯ ಹೃದಯ ತಾಕಿ
- ತಾಯ ಮಡಿಲ ಅರಸಿ
- ಗೂಡಿನೆಡೆಗೆ ಪಯಣ ಸಾಗಿಸಿ
- ಶಕ್ತಿ ಮೀರಿ ಹಾರಿ ಬ೦ದಿಹೆ
- ಗೂಡ ಬಾಗಿಲಲಿ ನಿ೦ತಿಹೆ
- ಅನುಭವದ ಪಾಠ ಮೀರಿ ಮತ್ತೇನಿದೆ
- ತನ್ನ ಶಕ್ತಿಯ ಪರಿ ತನಗೆ ತಿಳಿದಿದೆ
- ಧೈರ್ಯ ತನ್ನಲ್ಲಿ ತು೦ಬಿದೆ
- ಸ೦ಪೂರ್ಣ ಅರಿವು ಮೂಡಿದೆ
- ಮಳೆ ,ಗುಡುಗು, ಸಿಡಿಲು ನಿ೦ತ ಕ್ಷಣವೆ
- ಮರಿಯು ಸ೦ತಸದಿ ಹಾರಿತು ಮತ್ತೊ೦ದು ಪಯಣಕೆ
- ಅಶ್ವಿನಿ
Comments