ಹೊಸಬೆಳಕು - ನಾಟಕ! Yes ನಾಟಕ ...
ಈ ಕನ್ನಡ ಚಲನ ಚಿತ್ರ ನೋಡಿರಬೇಕಲ್ವಾ? ಹೌದ್ರಿ ಅದೇ ನಮ್ಮರಾಜಕುಮಾರ್ -ಸರಿತಾ ಜೋಡಿ ಅಭಿನಯದ್ದು. ಈಗ್ಯಾಕೆ ಇವ್ಳು ಆ ಹಳೇ ಚಿತ್ರದ ಬಗ್ಗೆ ಕೇಳ್ತಾ ಇದ್ದಾಳೆ ಅಂತ ಯೋಚಿಸ್ತಾ ಇದ್ರೆ ಅಲ್ಲೇ ಇರೋದು ಒಂದು ಟ್ವಿಸ್ಟ್. ಹಳೇ ರೆಕಾರ್ಡ್ ನ ಹೊಸ ರಾಗದಲ್ಲಿ ಹಾಡಿದ್ದೆ ಆದ್ರೆ ಮಜಾ ಸಿಗೋದು ಡಬಲ್ ಅಲ್ವಾ? ನಂಗೆ ಆಗಿದ್ದು ಅದೇ. ಜಾಸ್ತಿ ಏನ್ ಆಂಟಿಸಿಪೇಶನನ್ನ ಇಟ್ಕೊಂಡು ಹೋಗಿರಲಿಲ್ಲ ನಾನು. ನಾಟಕ ಅಂದ್ರೆ ಹಿಂದೆ ನೋಡಿರುವಂತ ಸೀರಿಯಸ್ ಟೈಪ್ ನಲ್ಲೆ ಇದು ಇರುತ್ತೆ ಅಂತ ಅರೆ ಮನಸ್ಸಿನಿಂದಾನೆ ಕಲಾಸೌಧದೊಳಗೆ ಕಾಲಿಟ್ಟೆ. ನನ್ನ ತಂಗಿ ಹಾಗೂ ಪಕ್ಕದ ಮನೆ ಹುಡುಗಿ ಇಬ್ಬರು ಇದ್ರೂ ನೋಡ್ರಿ ಬಲ್ಲಿ ಕ ಬಕ್ರಾ ಆಗೋಕೆ ನನ್ ಜೊತೆಗೆ. ಆದರಲ್ಲಿ ಆದದ್ದು ಏನು ಎ೦ದು ತಿಳಿಯಲು ಕಾತುರವಿದ್ದರೆ ಮುಂದೆ ಓದಿ. . .
ಕಲಾಸೌಧವನ್ನು ಹುಡುಕಿದ ಪ್ರಸಂಗ ಮೊದಲು ನಿಮಗೆ ತಿಳಿಸಬೇಕು. ಅಂದು ಶನಿವಾರ - ಮೊದಲೇ ಆಲಸ್ಯ. ಮಧ್ಯಾಹ್ನದ ಬಿಸಿಲು, ಏನ್ ಮಾಡೋದು - ಮನೆಯಲ್ಲಿ ಬೇಜಾರು, ಹಾಗೆ ಸೋಫಾ ಮೇಲೆ ಕೂತ್ಕೊಂಡು ಚಾನೆಲ್ ಬದಲಾಯಿಸುತ್ತಿರುವಾಗ ಈ ಟೀವಿಯಲ್ಲಿ ದೇವಸ್ಥಾನಗಳನ್ನ ತೋರಿಸ್ತಾರಲ್ಲ ಆ ಕಾರ್ಯಕ್ರಮ ಕಣ್ಣಿಗೆ ಬಿತ್ತು. ಅವತ್ತು ರಾಗಿ ಗುಡ್ಡದ ಹನುಮಂತಪ್ಪ ನಮ್ಮ ಮನೆ ಅತಿಥಿಯಾಗಿದ್ದ. ನನ್ನ ತಂಗಿ ಹೇಳಿದ್ಲು - "ನಾನು ರಾಗಿ ಗುಡ್ಡಾನೆ ನೋಡಿಲ್ಲ ಕಣೆ , ಬೆ೦ಗಳೂರಿನಲ್ಲಿ ಇಷ್ಟು ವರ್ಷದಿಂದ ಇದ್ದರೂನು " ಅ೦ತ . ಸರಿ ಹಾಗಿದ್ರೆ ಸಂಜೆ ೭ ಕೆ ಹನುಮಂತನಗರಕ್ಕೆ ಬಂದರೆ ಸಾಕು ತಾನೇ, ಕಾಫಿ ಕುಡಿದು ರಾಗಿ ಗುಡ್ಡಕ್ಕೆ ಹೋಗೋಣ . ಅಲ್ಲಿಂದ ನೇರವಾಗಿ ಕಲಾಸೌಧಾಗೆ ನಾಟಕದ ಟೈಮ್ ಗೆ ಸೇರೋಣ ಅಂತ ಪ್ಲಾನ್ ಮಾಡಿದ್ವಿ.
ನಾಲ್ಕು ಕಾಲಿರಬೇಕು ಸಮಯ ನಾವು ಮೂವರು ಹೊರಟ್ವಿ ಮಾರುತಿರಾಯನ ನೋಡಲಿಕ್ಕೆ. ನಮ್ಮೀ ಬೆಂಗಳೂರಿನ ಟ್ರಾಫಿಕ್ ಬಗ್ಗೆ ನಿಮಗೇನು ಹೊಸದಾಗಿ ತಿಳಿಸಬೇಕಾಗಿಲ್ಲ. ದಿನಬೆಳಗಾದ್ರೆ ತಪ್ಪದೆ ಇರೋ ಗೋಳು ಅಂದ್ರೆ ಇದೊಂದೇ ಅಂತ ಆಗ್ಬಿಟ್ಟಿದೆ ನಮ್ಮ ಜೀವನದಲ್ಲಿ. ಅದರಲ್ಲೂ ಶನಿವಾರ ಸಾಯಂಕಾಲ, ಇಮಾಜಿನ್ ಮಾಡಿ , ಕಾರ್ ನಲ್ಲಿ ಬೇರೆ ಹೊರಟಿದ್ವಿ . ಹೇಗೋ ನಮ್ಮ ಸೂಪರ್ ಲೇಡಿ ಎಕ್ಸ್ಪರ್ಟ್ ಇದ್ದಿದ್ರಿ೦ದ ಐದು ಇಪತ್ತಕ್ಕೆಲ್ಲಾ ರಾಗಿ ಗುಡ್ಡದಲ್ಲಿ ಹಾಜರ್. ನಾನು ರೆಗ್ಯುಲರ್ ಆಗಿ ಇಲ್ಲಿಗೆ ಬರೋದ್ರಿಂದ ದೇವಸ್ಥಾನದಲ್ಲಿ ಯಾವ ಕೌಂಟರಿನಲ್ಲಿ ಅರ್ಚನೆ ಟಿಕೆಟ್ ತೊಗೋಬೇಕು, ಯಾವ ಕಡೆ ಎಂಟ್ರಿ ಕೊಡ್ಬೇಕು ಅ೦ತೆಲ್ಲಾ ತಿಳಿದಿತ್ತು . ಹನುಮ೦ತಪ್ಪನ ದರ್ಶನವ೦ತು ಆಯಿತು. ಟೈಮ್ ನೋಡಿದ್ವಿ ೬ ಕಾಲು ಹೊಡ್ದಿತ್ತು. ಈಗ ಹೊರಟರೆ ಸರಿ ಹೋಗತ್ತೆ ಅ೦ತ ನಾನು ನೆನಪಿಸಿದೆ. ಚಿತ್ರಾನ್ನ ಪ್ರಸಾದ ತಿನ್ಕೊಂಡು ಹಾಗೆ ನಡೆದುಕೊಂಡು ಬಂದು ಕಾರ್ ಹತ್ತಿದ್ವಿ. ಈಗ ಮಜಾ ಇದ್ದಿದ್ದು. ಹನುಮ೦ತನಗರಕ್ಕೆ ದಾರಿ ? ಅಯ್ಯೋ ಗೊತ್ತು ಆದ್ರೆ ಗೊತ್ತಿಲ್ಲ ಅನ್ನೋ ಪರಿಸ್ಥಿತಿ. ಬಾಯಿ ಇದ್ರೆ ಬೊ೦ಬಾಯಿನೆ ಸುತ್ತಬಹುದೂ ಅನ್ನೋ ಧರ್ಯ ದಿಂದ ಒಂದು ದಿಕ್ಕಿನಲ್ಲಿ ಪ್ರಯಾಣ ಶುರು ಆಯಿತು. ಗಾಂಧಿ ಬಜಾರ್ ಕಡೆಗೆ ದಾರಿ ತೋರಿಸೋ ಫಲಕ ಕಾಣಿಸ್ತು , ಸರಿ ದಿಕ್ಕಿನಲ್ಲಿರೋದು ಖಚಿತವಾಯಿತು. ಆದ್ರೆ ಅಲ್ಲಿ೦ದ ರಾಮಾ೦ಜನೇಯ ದೇವಸ್ಥಾನದೆಡೆಗೆ ಹೋಗೋದಾದ್ರೂ ಹೇಗೆ. ನೋಡೋಣ ಅನ್ಕೊಳ್ತಾ ಒಂದು ಕಡೆ ನಿಲ್ಸಿ ಒಬ್ರು ಆಂಟಿ ಗೆ ಕೇಳಿದ್ವಿ - "ಹೀಗೆ ಸ್ಟ್ರೈಟ್ ಹೋಗ್ರಮ್ಮ .. ದೊಡ್ಡ ರೋಡ್ ಒಂದು ಸಿಗತ್ತೆ ಅಲ್ಲಿ ಲೆಫ್ಟ್ ಹೋಗಬೇಕು , ಯಾರನ್ನಾದ್ರು ಅಲ್ಲಿ ಗೆ ಹೋಗಿ ಕೇಳಿ" ಅಂತಂದ್ರು.
ಅಷ್ಟು ಡೈರೆಕ್ಶನನ್ನು ಚಾಚು ತಪ್ಪದೆ ಪಾಲಿಸಿದ್ದಾಯಿತು.. ೭ ಆಗ್ತಾ ಬಂತು ಬೇಗ ತಲುಪಬೇಕು ಅನ್ನೋದು ತಲೆಯಲ್ಲಿ ಓಡೋಕೆ ಸ್ಟಾರ್ಟ್ ಆಯಿತು. ಈಗ ಆಪರೇಷನ್ ರಾಮಾ೦ಜನೆಯ ಫುಲ್ ಫಾರಂ ನಲ್ಲಿ ಪ್ರಾರಂಭ. ಪ್ರತಿಯೊಂದು ರಸ್ತೆ ಕೊನೆಯಲ್ಲಿ ಕಾರ್ ನಿಲ್ಲಿಸಿ ಕೇಳೋಕ್ಕೆ ಶುರು ಮಡ್ಕೊಂಡ್ವಿ ಹೇಗೆ ಹೋಗಬೇಕು ಅ೦ತ . ಒಬ್ರು ರೈಟ್ ಅಂದ್ರೆ ,ಇನ್ನೊಬ್ರು ಹೀಗೂ ಹೋಗಬಹುದು. . ಹಾಗು ಹೋಗಬಹುದು. . . ನಾವೇನಾದ್ರು ಟ್ರೈಯಲ್ ಅಂಡ್ ಎರರ್ ಪ್ರೋಗ್ರಾಮ್ ಮಾಡ್ತಿದ್ದಿವೇನೋ ಅಂತ ಅನ್ಸೋಕ್ಕೆ ಆರಂಭವಾಯಿತು. ಒಂದು ಹಣ್ಣು ತಲೆ ತಾತಂಗೆ ಕೇಳಿದ್ರೆ "ನೋಡಮ್ಮ ಹೀಗೇ ಹೋಗಿ ಸ್ಟ್ರೈಟಾಗಿ, ಅಲ್ಲಿ ವಿಜಯ ಬ್ಯಾಂಕ್ ಬರತ್ತೆ , ಅಲ್ಲೇ ಲೆಫ್ಟ್ ತೊಗೋಬೇಕು" ಸರಿ ಥ್ಯಾಂಕ್ಸ್ ಅಂತ ಅಕ್ನಾಲೆಡ್ಜ್ ಮಾಡಿದ್ದೆ ತಡ ನಾವು ಮು೦ದೆ ಹೋಗೋಕ್ಕೆ ಸ್ಟಾರ್ಟ್ ಮಾಡಿದ್ವಿ. ಕಾರ್ ಹತ್ತಡಿ ಮುಂದೆ ಹೋಗೋಷ್ಟ್ರಲ್ಲಿ , ತಾತನ ಜೊತೆಗಿದ್ದ ಮತ್ತೊಬ್ಬ ವೃದ್ಧರು " ಅಯ್ಯೋ ಅದೇ ತಬ್ಕೊಂಡಿರೋ ರಮಾ೦ಜನೆಯ ದೇವಸ್ಥಾನ ಆದ್ರೆ ನಂಗು ಅಲ್ಲೇ ಹೋಗಬೇಕಿತ್ತು" ಅಂತ ಹೇಳೋದು ಕೇಳಿಸ್ತು . ಆದ್ರೆ ನಾವು ಟ್ರಾಫ್ಫಿಕಿನಲ್ಲಿ ಆಗಲೇ ಮುಂದೆ ಬಂದ್ಬಿಟ್ಟಿದ್ವಿ ಪಾಪ. ಹತ್ತು ನಿಮಿಷ ಇದೆ ಅನ್ನೋವಾಗ ರಮಾ೦ಜನೆಯನ ದರ್ಶನವಾಯಿತು. ಅಬ್ಬಾ ಫೈನಲ್ಲಿ ಕಲಾಸೌಧದ ಮೆಟ್ಟಿಲನ್ನು ಹತ್ತುತ್ತಾ ಗಡಿಯಾರ ನೋಡಿದೆ. ಇನ್ನು ೫ ನಿಮಿಷ ಇದೆ ಅಂತ ಡಿಕ್ಲೇರ್ ಮಾಡಿದೆ. ನನ್ನ ತಂಗಿ ಮುಖ ಕೆಂಪಾಗಿತ್ತು. ಹೌದೂ ಕೋಪಾನೆ. ದಾರಿ ಗೊತ್ತು ಅಂತ ಹೇಳಿ ಕರ್ಕೊಂಡು ಹೊರಟಿದ್ದು ನಾನಲ್ವ. ಇಷ್ಟು ಸರ್ಕಸ್ ಮಾಡಬೇಕಾಯಿತು. ನಾವಿಬ್ಬರು ದಾರಿ ಹುಡೋಕ್ದ್ರಲ್ಲಿ ಸ್ವಲ್ಪ ವೀಕ್ ಅಂತ ಇಬ್ರಿಗೂ ಗೊತ್ತು . ಹಾಗಾಗಿ ಏನೂ ಹೆಚ್ಚು ಮಾತಾಡದೆ ಟಿಕೆಟ್ ಕೌಂಟರ್ ಕಡೆಗೆ ಹೊರಟ್ವಿ.
ಟಿಕೆಟ್ ತೊಗೊಂಡು ಬಾಲ್ಕನಿ ಸೀಟ್ಸ್ಗೆ ಹೋಗಿ ಸೆಟಲ್ ಆದ್ವಿ. ಸುಮಾರು ವರ್ಷಗಳೇ ಆಗಿತ್ತು ನಾನು ನಾಟಕ ನೋಡಿ. ಶಾರ್ಪ್ ಏಳು ಮೊವತ್ತಕ್ಕೆ ನಾಟಕ ಪ್ರಾರಂಭ ಆಗತ್ತೆ ಅಂತ ಮೊದಲೇ ತಿಳಿಸಿದ್ಲು ನನ್ನ ಕಸಿನ್. ಹೊಸಬೆಳಕು ಚಿತ್ರದಲ್ಲಿ ರಾಜಕುಮಾರ್ ದು ಗಯ್ಯಾಳಿ ಅಕ್ಕ ಇದ್ದಾಳಲ್ಲ .. ಹೂನ್ರಿ ಅದೇ ಸರಿತಾನ ಯಾವಾಗಲು ಗೋಳು ಹೊಯಿಕೊಳ್ತಾಳಲ್ಲ, ಆ ಪಾತ್ರ ವಹಿಸ್ತಾ ಇದ್ಲು ನನ್ನ ಕಸಿನ್. ನೆನಪಾಗಲಿಲ್ವಾ? ಅಶ್ವತ್ದು ಎರಡನೇ ಹೆಂಡ್ತಿ , ಅವಳಿಗೆ ಇನ್ನೊಂದು ಮಗಳು... ಈಗ ಗೊತ್ತಾಯಿತು ತಾನೇ. ಮೊದಲನೇ ದ್ರುಶ್ಯ - ಇವ್ಳು ಹಾಗು ಅಶ್ವತ್ ಪಾತ್ರ ವಹಿಸುತ್ತಿದ್ದ ಮತ್ತೊಬ್ಬ ನಟ ಸ್ಟೇಜ್ ಮೇಲೆ ಕಂಡರು. ಮಾಮೂಲಿ ತರಹ ಸರಿತಾಗೆ ಬೈತಾ ಇರೋ ಸೀನು ನಡಿಯಿತು . ರವಿ(ರಾಜಕುಮಾರ್) ಎಂಟ್ರಿ ತೊಗೊಂಡ. ಪ೦ಚ್ ಲೈನ್ಸ್ ಮಾತ್ರ ಸೂಪೆರೋ ಸೂಪರ್. ಒಬ್ರಿಗಿಂತ ಒಬ್ರ ಡೈಲಾಗ್ಸ್ ಮಸ್ತಾಗಿತ್ತು, ಸ್ಕ್ರೀನ್ಪ್ಲೇಯ್ ತುಂಬಾ ಚೆನ್ನಾಗಿದೆ. ಅಯ್ಯೋ "ಹೊಸಬೆಳಕು ಮೂಡುತಿದೆ.." ಹಾಡಿಗೆ ಡಾನ್ಸ್ ಎಲ್ಲಾ ಇತ್ರಿ. ಅದೇ ಸ್ಟೆಪ್ಸ್ ಅದೇ ನಗು .. ಸ್ಲೋ ಮೋಶನ್ ಅಬ್ಬಬ್ಬಾ.. ನಗು ಅಂತು ಎಲ್ಲೆಡೆ ತುಂಬಿತ್ತು.
ಚಲನಚಿತ್ರಾನಾ ನಾನು ಏನಿಲ್ಲ ಅಂದ್ರು ಒಂದು ೨೦ ಸರ್ತಿ ನೋಡಿರಬಹುದು. ನೆನಪಿದ್ಯಾ ಮಮತಾ ರಾವ್ ದೆಹಲಿನಲ್ಲಿ ರಾಜಕುಮಾರ್ ಗೆ ಸಿಕಿದ್ದು. ಆ ಸನ್ನಿವೇಶಾನೂ ಅಳವಡಿಸಿಕೊಂಡಿದ್ದಾರೆ. ರವಿಗೆ ಒಬ್ಬ ಗೆಳೆಯ ನಮ್ಮ ಶ್ರೀನಿವಾಸಮೂರ್ತಿ ಕಣ್ರೀ... ಅದೇ ತರಾ ಇರೋ ಒಬ್ರನ್ನ ಇಲ್ಲಿ ತಗಲು ಹಾಕಿಕೊಂಡಿದ್ದಾರೆ. ಸಕತ್ತಾಗಿ ನಟಿಸ್ತಾರೆ. ಏನೇ ಬರಿಯೋದನ್ನ ಮರೆತರೂ ನಂಗೆ ಫೈಟ್ ಸೀನ್ ಮಾತ್ರ ವರ್ಣನೆ ಮಾಡದೆ ಇರೋಕೆ ಆಗೋಲ್ಲ. ಆ ಜುಟ್ಟು ಪೈಲ್ವಾನ್ ಏನ್ರೀ ಅವ್ನ ಗ೦ಟಲೂ? ಅವನ ಶಿಷ್ಯರೋ ಅವ್ರ ಫೈಟಿ೦ಗೋ - ಹಳೇಕಾಲದ ಸ್ಲೋ ಮೋಶನ್ ಫೈಟ್ ಸೀಕ್ವೆನ್ಸನ ಹೇಗ್ರಿ ಮರೆಯೋಕೆ ಆಗತ್ತೆ . ಅದನ್ನ ಮತ್ತೆ ನಮ್ಮ ಕಣ್ಮುಂದೆ ತಂದಿಡುವ ಪ್ರಯತ್ನ ಮಾಡಿದ್ದಾರೆ. ನಿಜವಾಗ್ಲೂ ಪ್ರಶಂಸೆ ಗೆ ಪಾತ್ರವಾಗಿದೆ ಪೂರ್ಣ ಸನ್ನಿವೇಶ.
ಇದೆಲ್ಲಾ ಹಾಗಿರಲಿ ನಮ್ಮ ರವಿ ಅಂಡ್ ವತ್ಸಲದು ಡ್ಯುಯೆಟ ಸಾಂಗ್ "ರವಿ ನೀನು ಆಗಸದಿ೦ದ ಮರೆಯಾಗಿ . . " , ವತ್ಸಲ ಸಂಗೀತ ಪಾಠದ "ತೆರೆದಿದೆ ಮನೆ ಓ ಬಾ ಅತಿಥಿ" ನನ್ನನ್ನು ಸಿನಿಮಾ ಲೋಕಕ್ಕೆ ಕರೆದೊಯ್ದಿತು . ವಾಸು ಬಗ್ಗೆ ಏನು ಹೇಳಲೇ ಇಲ್ಲ ಅಲ್ವಾ ನಾನು. ಈ ಸಾಫ್ಟ್ವೇರ್ ಇಂಜಿನಿಯರ್ ವತ್ಸಲನ್ನ ಮದುವೆ ಆಗೋಕ್ಕೆ ನೋಡಲು ಬಂದ ವರ. ಇಂಜಿನಿಯರ್ ಲಕ್ಷಣ ಕಡಿಮೆ ಇದ್ರೂ ವತ್ಸಲನ್ನ ಮೆಚ್ಚಿ ಹೋದ ಹುಡುಗ ಇವ್ನು. ರವಿಯ ಅಕ್ಕ ರಾಜಿ ಮಾಡಿದ್ದ ಉಪ್ಪಿಟ್ಟು ತಿಂದು ಪೊಂಗಲ್ ಚೆನ್ನಾಗಿದೆ ಅಂತ ಫ್ರಾಂಕ್ ಆಗಿ ಹೇಳಿ ಹೋದವ ಇವ್ನು. ರಾಜಿಗೂ ಅದೇ ಬೇಕಾಗಿದ್ದುದ್ದು. ವತ್ಸಲನ್ನ ಮನೆಯಿ೦ದ ಸಾಗಹಾಕಿದ್ರೆ ಸಾಕು ಅ೦ತಿದ್ದವ್ಳು ಇವ್ಳು. ಯಾಕೆ ಹೇಳಿ ? ಹೌದ್ರಿ ತನ್ನ ಮಗಳನ್ನ ರವಿಗೆ ಕೊಟ್ಟು ಮದುವೆ ಮಾಡಬಹುದಲ್ವಾ ಅದಕ್ಕೇನೆ. ಆದ್ರೆ ರವಿ ಮತ್ತು ವತ್ಸಲ ನಡುವೆ ಇದ್ದ ಪ್ರೀತಿ ಇದಕ್ಕೆ ಅವಕಾಶ ಕೊಡ್ತಾ ಇರ್ಲಿಲ್ಲ . ಮಾತಿನ ಚಕಮಕಿ ನಡೆಯಿತು. ರವಿ ಜೋರಾಗಿ ಕಿರುಚಿ ಹೊರಕ್ಕೆ ಹೋದ . ಹಿ೦ದೆನೇ ವತ್ಸಲ ಸ್ಟೇಜಿ೦ದ ಹೊರಕ್ಕೆ ಓಡಿ ಹೋದಳು.
ನಮ್ಮ ಸಿನಿಮಾದಲ್ಲಿ ರವಿಗೆ ಅಲ್ವೆ ಕಣ್ಣು ಹೋಗೋದು ಆಕ್ಸಿಡೆ೦ಟಾಗಿ . ಇಲ್ಲಿ ರೆವೆರ್ಸ್ ರೀ ಕಣ್ಣು ಹೋಗಿ ಕುರುಡಿ ಆಗೋದು ವತ್ಸಲ.
ಹಾಸ್ಪಿಟಲ್ ದೃಶ್ಯ :ವತ್ಸಲಳ ತಾಯಿ ಅವಳಿಗಾಗಿಟ್ಟಿರುವ ಹತ್ತು ಲಕ್ಷ ರೂಪಾಯಿ ಹಣವನ್ನು ತಾನು ದಾನ ಮಾಡುವುದಾಗಿ ಒಬ್ಬಬ್ಬರಿಗೂ ತಿಳಿಸುವಳು, ವಾಸುಗೆ ತನ್ನ ಸಾಫ್ಟ್ವೇರ್ ಕಂಪನಿ ಉದ್ದಾರಕ್ಕೆ ಸಾಲವಾಗಿ ಹಣ ಸಹಾಯ ಮಾಡುವಳೆ೦ದು, ಚಿಕಮ್ಮ೦ಗೆ ತನ್ನ ತ೦ಗಿಯ ಮದುವೆಗೆ ಉಪಯೋಗವಾಗಲೆಂದು, ರವಿ ಗೆ ಸಂಗೀತ ಶಾಲೆ ಪ್ರಾರ೦ಭಿಸಲೆ೦ದು. ಇದನೆಲ್ಲಾ ಕೇಳಿ ಎಲ್ಲರ ಮನ ಕರಗುವುದು. ವತ್ಸಲನ ತ೦ದೆ ಎಲ್ಲರಿಗೂ ವತ್ಸಲ ಹಾಗು ತಾನು ರೂಪಿಸಿದ ನಾಟಕ ಇದು ಅಂತ ತಿಳಿಸುವನು.
ಅವಳು ಹಾಗೆ ನಟನೆ ಮಾಡಿ ಅ೦ತು ಎಲ್ಲರ ಕಣ್ಣು ತೆರೆಸಿದಳು ಅ೦ತ ಒ೦ದು ದಯಾಲೋಗ್ ಹೊಡಿತಾರೆ.
ಒಟ್ಟಿನಲ್ಲಿ ನಮ್ಮ ಸರ್ಕಸ್ಗೆ ಪೂರ್ತಿ ಪೈಸಾ ವಸೂಲ್ ಆಯಿತು ನೋಡ್ರಿ ಈ ಒ೦ದೂವರೆ ಘ೦ಟೆಯ ನಾಟಕ. ರೆಕಮ್ಮೆಂಡ್ ಮಾಡ್ತಿದ್ದೀನಿ ಮುಂದೆನಾದ್ರು ಇದರ ಪ್ರದರ್ಶನ ಮತ್ತೆ ಇರುವಲ್ಲಿ ನೀವು ಖಂಡಿತ ಹೋಗಿ ನೋಡಿ.
ನೆಕ್ಸ್ಟ್ ತಲೆ ಬಿಸಿ ಆಗಿದ್ದು ವಾಪಾಸ್ ಮನೆಗೆ ಹೇಗೆ ಹೋಗೋದು ಅ೦ತ. ಅಗೈನ್ ಡೈರೆಕ್ಶನ್ ಪ್ರಾಬ್ಲಮ್. ಬಟ್ ಈ ಸರ್ತಿ ಒಂದು ಕಡೆ ಮಾತ್ರ ಮಿಸ್ ಆಗಿದ್ದು , ಹೇಗೋ ಗಾಂಧಿ ಬಜಾರ್ ತಲುಪಿದ್ವಿ , ಅಲ್ಲಿ೦ದ ನಮ್ಮ ಮಾಮೂಲಿನ ರೂಟ್ ಹಿಡಿದ್ವಿ.
ಹೀಗಿರತ್ತೆ ನಮ್ಮ ಸಾಟರ್ಡೇಸ್ ಮತ್ತು ಸ೦ಡೇಸ್ ಒನ್ಸ್ ಇನ್ ಅ ವೈಲ್ - ಅ ಲಿಟಲ್ ಅಡ್ವೆಂಚರ್ ಅಂಡ್ ಅ ಲಿಟಲ್ ಲೈಟ್ ಮೊಮೆಂಟ್ಸ್ ಟು ಶೇರ್ ವಿಥ್ .ಅದಕ್ಕಾಗೆ ಈ ಅ೦ಕಣಕ್ಕೆ ಆಗಾಗ್ಗೆ ಭೇಟಿ ಮಾಡ್ತಾ ಇರಿ. ಇನ್ನೊಂದು ಹೊಸ ಪುಟ ದೊ೦ದಿಗೆ ಮತ್ತೆ ಬರ್ತೀನಿ.
ಅಲ್ಲಿಯವರೆಗೂ ಹ್ಯಾಪಿ ರೀಡಿ೦ಗ್!
ಅಶ್ವಿನಿ

Comments