ನನ್ನ ಪುಟಗಳ ಇಣುಕು ನೋಟ ..

ನೆನ್ನೆ ರಾತ್ರಿ ೧೨ ಆದರು ಕಣ್ಣಿಗೆ ನಿದ್ದೆ ಹತ್ತಿರಲಿಲ್ಲ. ಏನು ಮಾಡೋದು ಅಂತ ಯೋಚಿಸುತ್ತಾ ಹಾಗೆ ನನ್ನ ಕಪಾಟಿನಲ್ಲಿಟ್ಟ ಹಳೆಯದೊ೦ದು ಪುಸ್ತಕ ಕಣ್ಣಿಗೆ ಬಿತ್ತು. ಪುಟಗಳನ್ನ ತಿರುಗಿಸಲಾರಂಭಿಸಿದೆ. ಸುಮಾರು ೧೩ - ೧೪ ವರ್ಷಗಳ ಹಿಂದೆ ಒ೦ಬತ್ತನೆ ತರಗತಿಯಲ್ಲಿದ್ದ ಸಮಯ, ನವೆ೦ಬರ್ ಮಾಸ - ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಕ್ಕೆ ಸ೦ಭ೦ಧಿಸಿದ ಹಾಗೆ ಕಾರ್ಯಕ್ರಮಗಳನ್ನ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಕನ್ನಡ ರಸಪ್ರಶ್ನೆ, ಪ್ರಬ೦ದ, ಜನಪದ ಹಾಡುಗಾರಿಕೆ, ಭಾವಗೀತೆ , ಭಾಷಣ ಸ್ಪರ್ಧೆ ಹೀಗೆ.. ಕನ್ನಡದಲ್ಲಿ ಕವನ ಬರಿಯಲು ಅವಕಾಶವೂ ಇತ್ತು.ಅ೦ದಿನವರೆಗು ನನ್ನೊಳಗೆ ಅವಿತು ಕುಳಿತಿದ್ದ ಕವಿ ಇರುವ ವಿಷಯ ನನಗೇ ತಿಳಿದಿರಲಿಲ್ಲ. ಸುಮ್ನನೆ ಸ್ನೇಹಿತರ ಜೊತೆಗೆ ನಾನು ಬರೆಯಲಾರಂಭಿಸಿದೆ. ಆಗ ನನ್ನ ರಚನೆ ಮೂಡಿ ಬಂದ ರೀತಿ ಹೀಗಿದೆ:

ಕನ್ನಡ ನಾಡು ನುಡಿ
ಕನ್ನಡ ನಾಡು ಬಲು ಚೆಂದ
ಕನ್ನಡ ನುಡಿಯು ಶ್ರೀಗಂಧ
ಕೇಳು ನೀನು ನನ್ನ ಮುದ್ದಿನ ಕಂದ

ಇದೊಂದು ಪುಣ್ಯದ ನಾಡು
ಹಸಿರಿನ ಸಿರಿಯ ಬೀಡು
ಇಲ್ಲಿ ಜನ್ಮ ತಾಳುವುದು ಪುಣ್ಯ
ಪಾಪಗಳೆಲ್ಲವೂ ಆಗುವವಿಲ್ಲಿ ಶೂನ್ಯ

ಚಿನ್ನದ ನಾಡು ಗಂಧದ ಬೀಡು
ಈ ಚೆಲುವ ಕನ್ನಡ ನಾಡು
ಕೇಳು ನೀನು ನನ್ನ ಮುದ್ದಿನ ಕಂದ

ವೀರಸಾಹಸಿ ಕಿತ್ತೂರಿನ ಚೆನ್ನಮ್ಮ,
ಹೈದರಾಲಿ ಸೈನ್ಯವನ್ನು ನಡುಗಿಸಿದ ಧೀರಮಹಿಳೆ ಓಬವ್ವ
ಧೈರ್ಯಶಾಲಿ ಟಿಪು ಸುಲ್ತಾನ
ಮಾಡಿದರು ಈ ನಾಡಿಗಾಗಿ ತಮ್ಮ ಜೀವದಾನ
ತಂದರು ನಾಡಿಗೆ ಕೀರ್ತಿಯನು
ಹೆಚ್ಚಿಸಿದರಿದರ ಹಿರಿಮೆಯನು

ಕನ್ನಡ ನಾಡು ಬಲು ಚೆಂದ
ಕನ್ನಡ ನುಡಿಯು ಶ್ರೀಗಂಧ
ಕೇಳು ನೀನು ನನ್ನ ಮುದ್ದಿನ ಕಂದ

ಜನಿಸಿದರಿಲ್ಲಿ ಮಹಾಕವಿ ಕುವೆ೦ಪು
ಮತ್ತಿತರ ಕವಿಗಳಾದ ದ ರಾ ಬೇ೦ದ್ರೆ
ಮಾಸ್ತಿ , ಶಿವರಾಮ ಕಾರ೦ತರು
ತಮ್ಮ ರಚನೆಯಿಂದ ಯಶಸ್ಸನ್ನು ತಂದರು

ಓ ನನ್ನ ಕಂದ
ಕೇಳು ನೀನು ನನ್ನ ಮುದ್ದಿನ ಕಂದ
ಕನ್ನಡ ನಾಡು ನುಡಿಯ ಹಿರಿಮೆಯ ಕಥೆಯ!!
- ಅಶ್ವಿನಿ

ಈ ಘಟನೆಯ ನ೦ತರ ನಾನು ಹಾಗೆ ಮನಸ್ಸಿಗೆ ಹೊಳೆದ ಸಾಲುಗಳನೆಲ್ಲ ಬರೆಯಲಾರಂಬಿಸಿದೆ. ಕೆಲವು ನನ್ನ ಈ ಗ್ರಂಥದಲ್ಲಿ ಉಳಿದಿವೆ, ಇನ್ನು ಕೆಲವು ಖಾಲಿ ಪೇಪರ್ ಸೀಸ ಗಾಡಿಯ ಪಾಲಾಗಿದೆ. ನನ್ನ ಬರವಣಿಗೆಯ ಬಗ್ಗೆ ನನಗೇನು ಅಂತಹ ವಿಶೇಷವಾದ ಆಕರ್ಷಣೆ ಇಲ್ಲ. ಇದೊ೦ದೆರಡು ಮನಸಿಗೆ ಹಿಡಿಸಿದ ಪುಟ್ಟ ಕವಿತೆಗಳನ್ನ ನಿಮ್ಮ ಜೊತೆ ಹ೦ಚಿಕೊಳ್ಳುವ ಪ್ರಯತ್ನ.

ಓ ದೇವನೇ!
ನ೦ಬುವೆಯ ಇಲ್ಲಾ ನ೦ಬಿಸುವೆಯಾ?
ಓ ದೇವನೇ ಎಲ್ಲಾ ನಿನ್ನ ಮಾಯೆ
ನಿನ್ನಿನ೦ದಲೇ ಈ ಜಗತ್ತು
ಈ ವಿಸ್ಮಯ ಈ ಸಂಪತ್ತು
ನ೦ಬಲು ಸಾಧ್ಯವೇ?
ಅಸಾಧ್ಯ ಎನ್ನಲು ಸಾಧ್ಯವೇ ?
ಎಲ್ಲಾ ನಿನ್ನ ಮಾಯೆ
ಹಗಲು ನಿನ್ನಿ೦ದಲೇ
ಇರುಳ ಕತ್ತಲು ನಿನ್ನಿ೦ದಲೇ
ಹಗಲು ಇರುಳುಗಳ ನಡುವೆ
ನೀ ಇರುವೆ ಎ೦ದರೆ
ನ೦ಬಲು ಸಾಧ್ಯವೇ ?
ಅಸಾಧ್ಯ ಎನ್ನಲು ಸಾಧ್ಯವೇ ?
ಎಲ್ಲಾ ನಿನ್ನ ಮಾಯೆ
ನನ್ನೊಳಗೆ ನೀ ಕುಳಿತು
ನನ್ನ ಮನದೊಳಗೆ ನೀ ನಲಿದು
ಹಾಡುತ ಕುಣಿಯುತ
ಹರುಷದಲಿ ಬಾಳುತ
ನೀ ಇರುವೆ ಎ೦ದರೆ
ನ೦ಬಲು ಸಾಧ್ಯವೇ?
ಅಸಾಧ್ಯ ಎನ್ನಲು ಸಾಧ್ಯವೇ ?
ಎಲ್ಲಾ ನಿನ್ನ ಮಾಯೆ


ತಾಯಿಯೇ ನಿನಗೆ ನಮನ !

ತಾಯಿಯೇ ನಿನಗೆ ನಮನ
ಬೇಡುವೆ ನಾ ಆ ಹರನ
ಸದಾ ಇರಲು ನಿನ್ನ ಜೊತೆ ನಾ

ಒ೦ಬತ್ತು ತಿ೦ಗಳು ಹೊತ್ತು
ನನಗೆ ಜನುಮವನಿತ್ತು
ನಿನ್ನ ಮಗಳಾದೆ ನನ್ನ ಪುಣ್ಯ
ಆದೆ ನಾ ಧನ್ಯ

ಲಾಲಿಸಿ ಪಾಲಿಸಿ ಮುದ್ದಾಡಿಸಿ
ಅಳಿಸಿ ನಗಿಸಿ
ನನ್ನ ಗೆಳತಿಯಾಗಿ ಸಲಹೆ ನೀಡಿದೆ
ಸರಿ ತಪ್ಪು ಕಲಿಸಿ
ಸದಾ ನನ್ನ ಹರಸಿ
ಒಳ್ಳೆಯ ದಾರಿಯ ತೋರಿದೆ
ತಾಯಿಯೇ ನಿನಗೆ ನನ್ನ ಕೋಟಿ ನಮನ

ಅಶ್ವಿನಿ

ನೆರಳ ಜೊತೆ..

ನನ್ನೊಳಗೆ ನೀನಿರಲು
ನಿನ್ನೊಳಗೆ ನಾನಿರಲು
ಎಲ್ಲಿದೆ ಅ೦ತರಕೆ ಸ್ಥಳ

ನೀನೆ ನಾನಾಗಿ
ನಾನೇ ನೀನಾಗಿ
ಹಾಡುತ ನಲಿಯುತ
ಸಾಗುವ ಬಾಳ ಸ೦ತಸದಲಿ
ನಾ ನೀ ಎ೦ಬ ಬೇಧವಿಲ್ಲದೆ
"ನಾವು" ಇರುವ ಸದಾ ಜೊತೆಗೆ
ಈ ಜೀವನದ ಪಯಣದಲಿ

ಇನ್ಯಾವಾಗ ತಲೆ ಕೆಡುತ್ತೋ ಆಗ ಮೂಡುವ ಮತ್ತೊಂದು ರಚನೆ ನಿಮ್ಮೆದುರು ಇಡುವುದು ಗ್ಯಾರ೦ಟಿ!

ಅಲ್ಲಿಯವರೆಗೆ ನಮಸ್ಕಾರ.

ಅಶ್ವಿನಿ

Comments

Popular Posts