Skip to main content

Posts

Valley of beauty - A flash back.

I was cleaning up my hard-disk yesterday night and accidentally found a folder which had bloom of flowers. 2009 April is when we clicked them. Skagit valley was the destination. Okay let me drop in more details as I recall. It was early spring of 2009. The year I was in the states , Seattle to be precise. Having heard of the various attractions in and around Seattle what got me hooked was the famous Tulip festival.This festival has been around from about 30 years now. It definitely inspired me. As soon as I got to know that, we, a group of 5 friends would head out to these fields of tulips over the weekend, I was filled with joy.[Actually I would be overly enthu on any of the trips we have made during the stay in US]. It was a plan for the Sunday. I was the most excited of the lot. A friend had it all planned - the route, the rented car, the festival timings etc. I typed in the "Skagit Valley + Tulip festival" on my laptop. As I hit enter there were thousands of results...

@ the Dental Clinic.

Couple of weeks ago I drank some cold cola and felt a nerve killing sensation in one of my left upper molar teeth. Had been neglecting this dental condition for quite some time and I could not resist it anymore. So I decided walking upto the dental clinic nearby which I often visited while I underwent the RCT[For those who don't know what an RCT is - Its root canal treatment. They drill into your decayed tooth , fill it with a binding cement and in some cases place a cap of silver or gold or enamel.] The dentist there, gets her job done very smoothly and before you could realize she is finished with her job of cleansing, drilling, filling and polishing. That particular day, doctor was already attending a patient and there was another lady waiting in the queue. I chose to sit near the entrance next to a pile of books. I picked one and started enhancing my knowledge on oral hygiene. A kid walked in with its mother. I pushed myself to the corner providing him some space to sit. He ...

ಒಂದು ಜೋಡಿ - ಆಸೆಯೋ ನಿರಾಸೆಯೋ ! ಅ೦ತಿಮ ಭಾಗ ೮

ಈ ಧಾರಾವಾಹಿಯ ಎಲ್ಲಾ ಕಂತುಗಳು ಕೇವಲ ಕಾಲ್ಪನಿಕ.ಇದರಲ್ಲಿ ಬರುವ ಪಾತ್ರಗಳು ಸನ್ನಿವೇಶಗಳು ಕೇವಲ ಕಾಲ್ಪನಿಕ. ಪ್ರಭವ್ ಸ್ವಾತಿ ಮತ್ತು ಕ್ರಿಶನ್ ರನ್ನು ಪ್ರಿಯ ಇದ್ದ ವಾರ್ಡಿಗೆ ಕರೆದುಕೊಂಡು ಬಂದನು . ಅಲ್ಲಿ ಪ್ರಿಯಾಳಿಗೆ ಆಕ್ಸಿಜೆನ್ ಮಾಸ್ಕ್ ಹಾಕಿದ್ದರು . ಅವಳು ಜೋರಾಗಿ ಉಸಿರಾಡುತಿದ್ದಳು. ಅವಳ ತಂದೆ ಪಕ್ಕದಲ್ಲೇ ನಿಂತಿದ್ದರು .ಡಾಕ್ಟರ್ ಹಾರ್ಟ್ ಬೀಟ್ ಚೆಕ್ ಮಾಡ್ತಾ ಇದ್ರು. ಕ್ರಿಶನ್ ಗೆ ಪ್ರಿಯಾಳನ್ನು ಈ ಸ್ಥಿತಿಯಲ್ಲಿ ನೋಡಿ ಕಣ್ಣಲ್ಲಿ ನೀರು ತುಂಬಿತು. ಸದಾ ನಗುಮುಖದಿಂದ ಹಾರಡಿಕೊಂಡಿದ್ದವಳು ಇವತ್ತು ಈ ರೀತಿಯಲ್ಲಿ ಶಾಂತವಾಗಿ ಹಾಸಿಗೆಯಲ್ಲಿ ನೋಡಲು ಕ್ರಿಶನ್ ನ ಹೃದಯ ತುಂಬಿ ಬಂತು. ಸ್ವಾತಿ ಅವನ ಕೈ ಹಿಡಿದು ಸಮಾಧಾನಿಸಿದಳು. ಪ್ರಿಯಾಳ ಹತ್ತಿರ ಹೋಗಿ ಕ್ರಿಶನ್ ಒಮ್ಮೆ ಅವಳೊಡನೆ ಮಾತಾಡಬೇಕೆಂದು ಬಯಸಿದ. ಕ್ರಿಶನ್: "ಪ್ರಭವ್ ಏನಾಯಿತು ಪ್ರಿಯಾಳಿಗೆ?" ಎಂದು ಅಳುತ್ತಲೇ ಕೇಳಿದ ಪ್ರಭವ್: "ಕ್ರಿಶನ್ ಸಾರೀ, ನಂಗೆ ವಿಷ್ಯ ಮೊದಲಿಂದಲೂ ತಿಳಿದಿತ್ತು. ಆದ್ರೆ ಪ್ರಿಯಾ ನನ್ನ ಹತ್ರ ಮಾತು ತೊಗೊಂಡಿದ್ಲು, ನಿನಗೆ ಏನೂ ಹೇಳಬಾರದು ಅಂತ ..." ಕ್ರಿಶನ್ : "ಏನು ಅಂತ ಈಗಲಾದರು ಹೇಳೋ . ಪ್ಲೀಸ್ ..." ಪ್ರಭವ್ : "ಏಕ್ಷಾಮ್ಸಿನ ಕಡೇ ಪೇಪರ್ ಹಿಂದಿನ ದಿನ .. ಅವತ್ತು ಪ್ರಿಯಾ ಹಾಸ್ಟೆಲ್ ನಲ್ಲಿ ಓದ್ತಾ ಕೂತಿದ್ದಾಗ ಇದ್ದಿಕಿದ್ದಹಾಗೆ ಎದೆ ನೋವು ಸ್ಟಾರ್ಟ್ ಆಯಿತು . ಏನೋ ಗಾಸ್ಟ್ರಿಕ್ ಇರಬೇಕ...

ಒಂದು ಜೋಡಿ - ಕೊನೆಯಲ್ಲಿ ! ಭಾಗ ೭

ಈ ಫ್ಲಾಶ್ ಬ್ಯಾಕ್ ನೆನಪಾಗುವಷ್ಟರಲ್ಲಿ ಸ್ವಾತಿಯ ಕೈಯನ್ನು ಚಿಕ್ಕ ಮಗುವಿನ ಹಾಗೆ ಹಿಡಿದು ತನ್ನ ತಲೆಯನ್ನು ಅವಳ ಮೇಲೆ ಇಟ್ಟು ಮಲಗಿದ್ದ ಕ್ರಿಶ್. ರಾತ್ರಿ ಬಹಳ ಆಗಿತ್ತು, ನಿದಿರೆ ಕಣ್ಣಿಗೆ ಹತ್ತಿತ್ತು  ಅವಳು ಅಲ್ಲೇ ಮುದುಡಿ ಮಲಗಿದಳು. ಮರುದಿನ ಬೆಳಿಗ್ಗೆ ಎಂದಿನಂತೆ ಇಬ್ಬರು ಆಫೀಸಿಗೆ ಹೊರಡಲು ತಯಾರಿ ನಡೆಸುತಿದ್ದರೂ, ಆಗ ಮೇಜಿನ ಮೇಲಿದ್ದ ಕ್ರಿಶನ್ ಫೋನಿಗೆ ಒಂದು ಎಸ್.ಎಂ.ಎಸ್ ಬಂತು . ಕ್ರಿಶನ್ : "ಸ್ವಾತಿ ನೋಡು ನನ್ನ ಮೊಬೈಲಿಗೆ ಯಾರು ಮೆಸೇಜ್ ಮಾಡಿದ್ದು ಅಂತ ." ಸ್ವಾತಿ : "ಒಹ್  ಪ್ರಭವ್   ಮೆಸೇಜ್ ಮಾಡಿರೋದು . "ಪ್ರಿಯ ಇಸ್ ಹೋಸ್ಪಿಟಲೈಸಡ್ . ಶೀ ಇಸ್ ಸೀರಿಯಸ್. ಪ್ಲೀಸ್ ಕಂ ಟು ಸಾನ್ವಿ ಹೋಸ್ಪಿಟಲ್ ." ಎಂದು ಓದುತ್ತ ನಡುಗಿದಳು . ಕ್ರಿಶನ್ : "ವಾಟ್ ? ಪ್ರಿಯ .. ಹೋಸ್ಪಿಟಲ್ .. ಸೀರಿಯಸ್ . ಏನ್ ಹೇಳ್ತಾ ಇದ್ದೀಯ ?" ಸ್ವಾತಿ : " ಕ್ರಿಶ್ ಗಾಡಿ ತೆಗಿರಿ ಮೊದಲು ಅಲ್ಲಿಗೆ ಹೋಗೋಣ .. ಆಮೇಲೆ ಏನು ಅಂತ ವಿಚಾರಿಸೋಣ ." ಕ್ರಿಶನ್ : " ಸರಿ ನಡಿ ". ........... ಆಸ್ಪತ್ರೆಯಲ್ಲಿ : ಪ್ರಭವ್: " ಸ್ವಾತಿ ನೀವು ? ಕ್ರಿಶನ್ .." ಸ್ವಾತಿ : " ಪ್ರಿಯ ಎಲ್ಲಿದ್ದಾಳೆ ? ವಾಟ್ ಹಪ್ಪೆಂಡ್?" ಕ್ರಿಶನ್ ಮಾತಾಡುವ ಸ್ತಿತಿಯಲ್ಲಿರಲಿಲ್ಲ .

ಒಂದು ಜೋಡಿ - ಫ್ಲಾಶ್ ಬ್ಯಾಕ್ ! ಭಾಗ ೬

ಕ್ರಿಶನ್ : ನೋಡು ನಿನಗೆ ನನ್ನ ಬಗ್ಗೆ ಏನ್ ಅಭಿಪ್ರಾಯ ಇದ್ಯೋ ನಂಗೆ ಗೊತ್ತಿಲ್ಲ . ನನಗೆ ನೀನು ತುಂಬಾ ಇಷ್ಟ ಆಗಿದ್ಯ . ಐ ಫೀಲ್ ಗುಡ್ ವಿಥ್ ಯೂ. ನಿಮ್ಮ ತಂದೆ ತಾಯಿಗೆ ನನ್ನ ಒಪ್ಪಿಗೆ ತಿಳಿಸುವ ಮೊದಲು ನಾನು ನಿನ್ನ ಹತ್ರ ಒಂದು ವಿಷ್ಯ ಹಂಚಿಕೊಳ್ಳಲು ಇಷ್ಟ ಪಡ್ತೀನಿ . ನಾನು ಕಾಲೇಜಿನಲ್ಲಿ ಇದ್ದಾಗ ಪ್ರಿಯ ಅಂತ  ಒಂದು ಹುಡುಗಿಯನ್ನ ತುಂಬಾ ಪ್ರೀತಿಸಿದ್ದೆ .ಅದು ಪ್ರೀತಿಯೋ ಆಕರ್ಷಣೆಯೋ .. ಅವ್ಳು ಸಹ ನನ್ನ ಭಾವನೆಗೆ  ಸ್ಪಂದಿಸುತ್ತಾ ಹೊರಟಳು . ಕಾಲೇಜ್ ಮುಗಿಯಲು ಅವಳು ನನ್ನಿಂದ ದೂರವಗುತ್ತಾಳೇನೋ ಅನ್ನೋ ಭಯ ಕಾಡುತಿತ್ತು. ಅಂದು ಕಾಲೇಜಿನ ಕಡೇ ದಿನ . ಪರೀಕ್ಷೆ ಮುಗಿದಿತ್ತು . ಅವಳಿಗೆ ಬೇರೊಂದು ಊರಿನಲ್ಲಿ ನೌಕರಿ ಖಾತ್ರಿಯಾಗಿತ್ತು. ಓದಿನಲ್ಲಿ ಎಲ್ಲರಿಗಿಂತ ಚುರುಕಾಗಿದ್ದಳು, ನಮ್ಮ ಕ್ಲಾಸ್ನಲ್ಲಿ ಅವಳದ್ದೇ ಲೀಡಿಂಗ್ ಸ್ಕೋರ್ ಪ್ರತಿ ಸೆಮಿಸ್ಟರಿನಲ್ಲು ..ಅವತ್ತು ನಾನು ಪರೀಕ್ಷೆ ಮುಗಿಸಿ ಹೊರಕ್ಕೆ ಬಂದವನೇ ಪ್ರಿಯಾಳನ್ನು ಹುಡುಕುತ್ತಾ ಹೊರಟೆ . ಆದರೆ ಅವಳು ಆಗಲೇ ಮನೆಗಿ ಹಿಂತಿರುಗಿ ಹೋಗಿದ್ದ ವಿಷಯ ತಿಳಿದು ಬಂದಿತು.  ಮೊಬೈಲ್ ಫೋನ್ ಕರೆಗಳು ದುಬಾರಿ ಇದ್ದ ಸಮಯ ಅದು. ನನ್ನ ಕೈನಲ್ಲಿ ಫೋನ್ ಇರಲಿಲ್ಲ ಆದರೆ ಪ್ರಿಯಾಳ ತಂದೆ ಮಲೆನಾಡಲ್ಲಿ ಶ್ರೀಮಂತ ಮನೆತನದವರು . ಅವಳೊಂದಿಗೆ ದಿನಕ್ಕೊಮ್ಮೆ ಮಾತಾಡಲು ಮೊಬೈಲ್ ಕೊಡಿಸಿದ್ದರು . ಸರಿ ಕಾಲೇಜ್ ಪಕ್ಕದಲ್ಲೇ ಇದ್ದ ಕಾಯಿನ್ ಬೂತ್ ಒಂದರಿಂದ ನಂಬರ್ ಡಯಲ್ ...

ಒಂದು ಜೋಡಿ - ಸಮಾಗಮ! ಭಾಗ ೫

ಗೋಪಿನಾಥ್: "ಎಲ್ಲಿ ನಿಮ್ಮ ಮಗಳು ಸ್ವಾತಿ.ಮನೆಯಲ್ಲೇ ಇದ್ದಾಳೆ ಅಲ್ವ.ಕರೀರಿ. ಫಾರ್ಮಾಲಿಟೀಸ್ ಎಲ್ಲಾ ಏನೂ ಬೇಡ." ಸಂಪತ್ ರಾವ್: "ಒಹ್ ಮನೆಯಲ್ಲೇ ಇದ್ದಾಳೆ. ಕೌಸಲ್ಯ ಸ್ವಾತಿನ ಕರ್ಕೊಂಡು ಬಾ." ಕೌಸಲ್ಯ ಸ್ವಾತಿಯ ಕೋಣೆಗೆ ಹೋಗಿ "ಬಾರೆ, ಹೊರಗೆ ಗೋಪಿ ಮಾವ, ಕ್ರಿಶನ್ ಬಂದಿದ್ದಾರೆ. ಹುಚ್ಚುಚ್ಚಾಗಿ ಆಡಬೇಡ" ಅಂತ ಬುದ್ದಿ ಹೇಳುತ್ತಾ ಸ್ವತಿಯನ್ನ ನಡುಮನೆಯಲ್ಲಿದ್ದ ಸೋಫಾದ ಮೇಲೆ ಕೂರಿಸಿದರು . ನವಿಲಿನ ಬಣ್ಣದ ನೀಲಿಯ ಸೀರೆ ಅವಳ ಬಿಳಿ ಮೈ ಬಣ್ಣಕ್ಕೆ ಒಪ್ಪುವಂತೆ , ಉದ್ದ ಜಡೆಯ ತುಂಬಾ ಮಲ್ಲಿಗೆ ಸುತ್ತಿರಲು ಆಗಲೇ ಮದುವೆಗೆ ಸಿದ್ದವಾಗಿ ಕುಳಿತಂತಿತ್ತು . ಕ್ರಿಶನ್ ಅವಳ ಸೌಂದರ್ಯಕ್ಕೆ ಮರುಳಾಗಿ ಕುಳಿತಿದ್ದ . ಪ್ರಿಯಾಳ ಕಥೆಯ ನಂತರ  ಅವನ ಜೀವನದಲ್ಲಿ ಒಂದು ಹುಡುಗಿಯ ಬಗ್ಗೆ ಈ ರೀತಿಯ ಭಾವನೆ ಮನಸಲ್ಲಿ ಹುಟ್ಟಿದ್ದು ಇದೆ ಮೊದಲಾಗಿತ್ತು . ೫ ವರ್ಷ ಕಳೆದರು ಪ್ರಿಯಾಳ ಛಾಯೆ ಅವನ ಹೃದಯದಿಂದ ಬಿಚ್ಚಿ ಎಸೆಯಲಾಗಿರಲಿಲ್ಲ . ಆದರೆ ಆ ಕಹಿಯು ಅವನ ಮುಂದಿನ ಸಿಹಿ ಗೆ ಅಡ್ಡಿಯಾಗಲು ಅವಕಾಶ ಕೊಡಬಾರದೆಂದು ನಿರ್ಧರಿಸಿದ್ದನು . ಗೋಪಿನಾಥ್ : "ನೋಡೋ ಕ್ರಿಶನ್ ಇವಳೇ ಸ್ವಾತಿ . ಸಂಪತ್ ರಾಯರ ಒಬ್ಬಳೇ ಪುತ್ರಿ . ನೀನು ಶೋಲಾಪುರ್ ಗೆ ಬಂದಾಗ ಇವಳು  ನಾಲ್ಕೋ ಐದನೆಯೋ ತರಗತಿಯಲ್ಲಿ ಓದುತ್ತಿದ್ದಳು . ಪುಟ ಪುಟ ಅಂತ ನಮ್ಮ ಮನೆಗೆ ಬೆಳಿಗ್ಗೆ ಹಾಲು ತೆಗೆದುಕೊಂಡು ಹೋಗಲು ಬರುತಿದ್ದಳು . ನೆನಪಾಯಿತಾ ಯಾರು ಅಂತ ....

ಒಂದು ಜೋಡಿ - ಮೊದಲ ನೋಟ! - ಭಾಗ ೪

ಅಂದು ಭಾನುವಾರ. ಮುಂಜಾನೆ ಎದ್ದೊಡನೆ ಮನೆಯೆಲ್ಲಾ ಸುಳಿದಾಡುವಂತೆ ಅಗರಬತ್ತಿಯ ಸುವಾಸನೆ ಹರಡಿತ್ತು. ದೇವರ ಕೋಣೆಯಲ್ಲಿ ಮಲ್ಲಿಗೆಯ ಕಂಪು ಸೂಸುತಿತ್ತು. ಬಾಗಿಲನ್ನು ಮಾವಿನ ತೋರಣ ಅಲಂಕರಿಸಿತ್ತು, ಅಡುಗೆ ಮನೆ ವಿವಿಧ ಭಕ್ಷ್ಯಗಳಿಂದ ತುಂಬಿತ್ತು. " ವರನ ಕಡೆಯವರು ೧೧ ಘಂಟೆ ಹೊತ್ತಿಗೆ ಬರ್ತಾರಂತೆ. ಎಲ್ಲಾ ಸಿದ್ಧ ಆಯಿತೇನೆ ಕೌಸಲ್ಯಾ?" ಅಂತ ಹಣ್ಣು ತರಲು ಮಾರುಕಟ್ಟೆಗೆ ಹೋಗಿದ್ದ ಸಂಪತ್ ರಾಯರು ಕೇಳುತ್ತಲೇ ಮನೆಯೊಳಕ್ಕೆ ಕಾಲಿಟ್ಟರು. "ಹ್ಞೂ ರೀ ಎಲ್ಲಾ ರೆಡಿ ಆಗಿದೆ. ನಿಮ್ಮ ಮುದ್ದಿನ ಮಗಳು ಸ್ವಾತಿ ತಯಾರಾಗಿದ್ದಾಳಾ ಅಂತ ನೋಡಿ ಸ್ವಲ್ಪ." - ಎಣ್ಣೆ ಬಾಂಡ್ಲೆಯಿಂದ ಜಿಲೇಬಿ ತೆಗೆಯುತ್ತಿದ್ದ ಕೌಸಲ್ಯ ಉತ್ತರಿಸಿದರು. ಕೋಣೆಯಲ್ಲಿ ಕಷ್ಟ ಪಟ್ಟು ಸೀರೆ ಉಡುತಿದ್ದ ಸ್ವಾತಿಗೆ ಇದು ಮೊದಲ ವಧು ಪರೀಕ್ಷೆ. ಸಮಯ ೧೦:೩೦ ಆಗಿತ್ತು. ಚಿನ್ನದಲ್ಲಿ ಮುಳುಗಿದ್ದ ಸ್ವಾತಿ ತನ್ನನ್ನು ಕನ್ನಡಿಯಲ್ಲಿ ನೋಡಿಕೊಂಡಾಗ "ನಾನು ಇಷ್ಟು ಸುಂದರವಾಗಿದ್ದೀನಿ ಅಂತ ಈ ದಿನವೇ ನನಗೆ ತಿಳಿದಿದ್ದು" ಎಂದು ಮನದಲ್ಲಿ ಅಂದುಕೊಂಡಳು. ತನ್ನ ಸೌಂದರ್ಯವನ್ನು ಹೊಗಳುತ್ತಾ ಹಣೆ ಮೇಲಿದ್ದ ಬೈತಲೆ ಬೊಟ್ಟನ್ನು ಸರಿಪಡಿಸುತಿದ್ದಳು. ಮನೆಯ ಬಾಗಿಲಲ್ಲಿ ನಿಂತು ಯಾರೋ "ಸಂಪತ್ ರಾಯರೇ .. ಸಂಪತ್ ರಾಯರೇ .. ಮನೆಯಲ್ಲಿ ಇದ್ದೀರಾ ?? " ಅಂತ ಕರೆದ ದ್ವನಿ ಸ್ವಾತಿಯ ಕಿವಿಗೆ ಬಿತ್ತು. ರಾಯರು ಬಾಗಿಲ ತೆಗೆದು ಬಂದ ಅತಿಥಿಯರನ್ನು ಮನೆಯೊ...