Skip to main content

Posts

ಮಳೆ ಬಂದ ರಾತ್ರಿ .. ಭಾಗ ೫ (ಅಂತಿಮ ಭಾಗ )

ಪಟ್ಟಿಯನ್ನು ಹಿಡಿದು ಮೇಲಿಂದ ಕೆಳಗಿನ ವರೆಗೂ ಒಂದೊಂದೇ ಹೆಸರನ್ನು ಓದುತ್ತ ಬಂದಾಗ "ಆರ್.ಜೆ. ಫಾರ್ ಅಫೀಷಿಯಲ್ ಪರ್ಪಸ್ " ಅಂತ ಇದ್ದದ್ದನ್ನು ನೋಡಿದಳು. ಉಳಿದಿದ್ದ ಎಲ್ಲಾ ಹೆಸರುಗಳು ಇವಳಿಗೆ ತಿಳಿದದ್ದಾಗಿತ್ತು, ಆದರೆ ಇದೊಂದು ಹೆಸರು ಯಾರದ್ದು ಎಂದು ಗೊತ್ತಾಗಲಿಲ್ಲ, ಹಾಗಾಗಿ , ರಾಜು ನಿಂಗೆ ಇದು ಯಾರು ಅಂತ ಗೊತ್ತ ಅಂತ ಆರ್.ಜೆ. ಹೆಸರ ಮೇಲೆ ಬೆರಳಿಟ್ಟು ಕೇಳಿದಳು. ರಾಜು ಸ್ವಲ್ಪ ಯೋಚಿಸಿ " ಮೇಡಂ ಇವ್ರು ಪಾಲ್ ಸರ್ ಜೊತೆಗೆ ಹೊರದೇಶಕ್ಕೆ ಹೋದವರು , ಅವರು ಬೆಳಿಗ್ಗೆ ಟಿವಿ ನಲ್ಲಿ ಪಾಲ್ ಸರ್ ಬಗ್ಗೆ ಮತಾಡುತಿದ್ರಲ್ಲ ರೋಶನ್ ಜತಿಂದ್ರ .. ಅವ್ರೆ ಮೇಡಂ ಬಂದಿದ್ದಿದ್ದು." ಕೃಪಾ ಗೆ ಅರ್ಧ ಸತ್ಯ ತಿಳಿಯಿತು ಆದರೆ ರೋಶನ್ ಯಾಕೆ ಹೀಗೆ ಮಾಡಿಯಾರು? ಅನ್ನೋ ಪ್ರಶ್ನೆ ಕಾಡಿತು. ರೋಶನ್ ಇಲ್ಲಿ ಯಾರಿಗೆ ಫಾಕ್ಸ್ ಮಾಡಿದ್ದು ನೆನ್ನೆ ರಾತ್ರಿ? "ಜೀವನ ಇಸ್ ನೋ ಮೋರ್ ಹುರ್ರೇ - ಆರ್.ಜೆ." ಅಂತ ಫಾಕ್ಸ್ ಮಾಡಿದ್ದು ಯಾರಿಗೆ ? ಕೃಪಾ ತನ್ನ ಒಂದು ಡಾಕ್ಯುಮೆಂಟನ್ನು ಪ್ರಿಂಟ್ ಗೆ ಕೊಟ್ಟು, ಪ್ರಿಂಟರ್ ಹತ್ರ ಹೋಗೋವಾಗ ಫಾಕ್ಸ್ ಮಶಿನಿನ ಸದ್ದನ್ನು ಕೇಳಿ ಅಲ್ಲೇ ನಿಂತು ಅದನ್ನು ಓದಿದೊಡನೆ ಅವಳಿಗೆ ಕೈ ಕಾಲೇ ಆಡಲಿಲ್ಲ. ಅದೇ ಗಾಬರಿಯಲ್ಲಿ , ಬೇಜಾರಿನಲ್ಲಿ ಆಕೆ ನೆನ್ನೆಯ ರಾತ್ರಿ ಬೇಗ ಬೇಗ ಮನೆಗೆ ಹೊರಟು ಹೋಗಿದ್ದಳು. ಕೃಪಾ ಪೋಲಿಸ್ ಹತ್ರ ಹೋಗಿ ತನಗೆ ಗೊತ್ತಿರುವ ವಿಷಯವನೆಲ್ಲಾ ತಿಳಿಸುವುದು ಉತ್ತಮ ಅಂತ ಪೋಲಿಸ್ ಸ...

ಮಳೆ ಬಂದ ರಾತ್ರಿ ... ಭಾಗ ೪

ಘಂಟೆ ೧೦:೩೦ ಕ್ಕೆ ಸರಿಯಾಗಿ ಆಟೋ ಇಂದ ಇಳಿದು, ಆಫೀಸ್ ಮೇನ್ ಎನ್ಟ್ರ೦ನ್ಸಿನ ಕಡೆ ನಡೆಯುತ್ತಾ ಬಂದಳು ಕೃಪಾ. ಕಣ್ಣುಗಳು ಅತ್ತಂತೆ ಕಾಣುತಿತ್ತು. ಮುಖ ಚಿಕ್ಕದಾಗಿತ್ತು. ಯಾವಾಗಲು ಚಿನುಕುರುಳಿಯಂತೆ ಪಟಪಟನೆ ಮಾತನಾಡುತಿದ್ದ ಕೃಪಾಳ ಬಾಯಿಗೆ ಅಂದು ಬೀಗ ಬಿದ್ದಂತಿತ್ತು. ರಾಜು, ಪ್ರೀಥಮ್ , ಗಾರ್ಗಿ - ಮೂವರು ಇದನ್ನು ಗಮನಿಸಿದರು. ಗಾರ್ಗಿ ಓಡಿ ಹೋಗಿ ಕೃಪಾಳ ಭುಜ ಹಿಡಿದು ಕರೆದಾಗಲೇ ಅವಳು ವಾಸ್ತವಕ್ಕೆ ಬಂದದ್ದು. "ಆರ್ ಯೂ ಆಲ್ರೈಟ್ ? ಏನಾಯಿತು ?" ಎಂದಾಗ ಕೃಪಾಳ ಕಣ್ಣಲ್ಲಿ ನೀರು ತುಂಬಿತ್ತು. ಏನೆಂದು ವಿಚಾರಿಸುವಷ್ಟರಲ್ಲಿ ಪೋಲಿಸ್ ಜೀಪ್ ಒಂದು ಬಂದು ಬರ್ರ್ ಎಂದು ಬ್ರೇಕ್ ಹಾಕಿತು. ಕಮಿಷನರ್ ವಿಜಯ್ ಇಳಿದು ಬಂದು ಎಲ್ಲರನ್ನು ಕುರಿತು ಕೇಳಿದರು "ನಿಮಗೆ ಈ ಕೊಲೆಯ ಬಗ್ಗೆ ಏನಾದರು ಗೊತ್ತೇ ? ಯಾರ ಮೇಲಾದರೂ ಅನುಮಾನವಿದೆಯೇ ?". ಎಲ್ಲಾ ತಲೆಯಾಡಿಸುತ್ತಾ "ಇಲ್ಲಾ ನಮಗೆ ಇದು ಶಾಕಿ೦ಗ್ ನ್ಯೂಸ್. ನಮಗೇನು ಗೊತ್ತಿಲ್ಲ , ಪಾಲ್ ಸರ್ ಗೆ ಹೀಗೆ ಕೊನೆ ಬರುತ್ತೆ ಅಂತ ನಾವು ಕನಸಿನಲ್ಲೂ ತಿಳಿದಿರಲಿಲ್ಲ. ಅವರು ತುಂಬಾ ಒಳ್ಳೆಯವರು " ಎಂದು ಉತ್ತರ ನೀಡಿದರು. ಸರಿ ನೀವೆಲ್ಲ ಇಂದು ಮನೆಗೆ ಹೋಗಿ, ಬೇಕಾದಲ್ಲಿ ನಾವು ನಿಮ್ಮನ್ನು ಕರೆಸುತ್ತೇವೆ. ವಿಚಾರಣೆ ಮುಗಿಯುವ ವರೆಗೆ ನೀವ್ಯಾರು ಊರು ಬಿಡುವ ಹಾಗಿಲ್ಲ ಅಂತ ಖಡಕ್ಕಾಗಿ ಹೇಳಿದರು ಕಮಿಷನರ್ ಸಾಹೇಬರು. ಎಲ್ಲರೂ ಹೊರಟ ಮೇಲೆ ಸೆಕ್ಯೂರಿಟಿ ರಾಜುನನ್ನು , ಅನುಮಾನ ...

ಮಳೆ ಬಂದ ರಾತ್ರಿ ... ಭಾಗ ೩

ರಾಜು ಬೆಳಿಗ್ಗೆ ಆಫೀಸಿಗೆ ಬಂದೊಡನೆ ಪ್ರತಿಯೊ೦ದು ಕೊಠಡಿಗೆ ಒಮ್ಮೆ ಭೇಟಿ ಕೊಟ್ಟು ಎ.ಸಿ. ಯ ತಾಪ ಸರಿಯಾಗಿದೆಯೇ ಎಂದು ಪರಿಶೀಲಿಸಿ, ಕಮ್ಪ್ಯೂಟರ್ಗಳನೆಲ್ಲ ಜೋಡಿಸಿ ರಿಸೆಪ್ಶನ್ ಗೆ ಬಂದು ಕುಳಿತುಕೊಳ್ಳುವುದು ಅವನ ಕೆಲಸವಾಗಿತ್ತು. ಎಂದಿನಂತೆ ಆ ದಿನವು ಬೆಳಿಗ್ಗೆ ೯ ಕ್ಕೆ ಅವನು ತನ್ನ ಕೆಲಸವನ್ನು ಪ್ರಾರಂಭಿಸಿದ . ೧ ಹಾಗು ೨ ನೆ ಮಹಡಿಯ ಎಲ್ಲಾ ಕೊಠಡಿಯನ್ನು ಸ್ವಚ್ಚಗೊಳಿಸಿ ಅಲ್ಲಿಂದ ೩ ನೆ ಮಹಡಿ ಗೆ ಹೋದಾಗ ಮತ್ತೆ ಹಿಂದಿನ ದಿನದ ದೃಶ್ಯ ಕಣ್ಣ ಮುಂದೆ ಮರುಕಳಿಸಿತು. ಗಾರ್ಗಿ ಕ್ಯಾಬ್ ಹತ್ತಿ ಹೋದ ಘಟನೆಯನ್ನು ಮೆಲುಕು ಹಾಕುತ್ತಿದ್ದಾಗ ಅವನ ದೃಷ್ಟಿ ಮ್ಯಾನೇಜರ್ ಜೀವನ್ ಪಾಲ್ ಅವರ ಕೋಣೆಯತ್ತ ಸಾಗಿತು. ರಾಜು ನಿಧಾನವಾಗಿ ಕೋಣೆಯ ಬಾಗಿಲಿನತ್ತ ಹೆಜ್ಜೆ ಹಾಕುತ್ತಿದ್ದಂತೆಯೇ "ರಾಜು ಗುಡ್ ಮಾರ್ನಿಂಗ್.." ಎಂದು ಹಿಂದಿನಿಂದ ಕರೆ ಬಂದಿತು. ರಾಜು ಕ್ಷಣದಲ್ಲೇ ಹಿಂದಿರುಗಿ ನೋಡಿದಾಗ ಗಾರ್ಗಿಯನ್ನು ಕಂಡನು. ತನ್ನ ಕೈ ಗಡಿಯಾರ ನೋಡಿ ಅವಳನ್ನು ಪ್ರಶ್ನಿಸಿದನು " ಮೇಡಂ ನೀವು ಇಷ್ಟು ಬೇಗ ಇವತ್ತು, ಘಂಟೆ ಇನ್ನು ೯:೧೫ ಅಷ್ಟೇ" . ಗಾರ್ಗಿ ಗಂಟಲನ್ನು ಸರಿ ಮಾಡಿಕೊಳ್ಳುತ್ತ " ರಾಜು ನೆನ್ನೆ ಪೂರ್ಣ ಕೆಲಸ ಮುಗಿಯಲಿಲ್ಲ , ಇವತ್ತು ೧೧ ಘಂಟೆಗೆ ಸರಿಯಾಗಿ ಮೀಟಿಂಗ್ ಇದೆ. ಅಷ್ಟರೊಳಗೆ ನಾನು ಕೋಡನ್ನು ರೆಡಿ ಮಾಡಬೇಕು" ಅಂತ ಅವಸರದಲ್ಲೇ ಉತ್ತರಿಸಿದಳು. ರಾಜುವಿಗೆ ಇಲ್ಲೇನೋ ನಡೆಯುತ್ತಿದೆ , ಆದರೆ ನನಗರಿವಾಗುತ್ತಿಲ್ಲ ಎಂದು ...

Matrimonial laugh.....

A friend of mine has been a keen observer when it comes to computers and technology. Today afternoon he told me something about his observations, which usually goes unnoticed by majority of us, but indeed he was cent percent true - so is this post up here in my blog. This funny friend turns around states aloud : " When they can't find a right suitable match for this girl for more than a year now, how can they find one for me????". We were all as confused as you are at this point of time. How many of us give attention to those tiny pop ups that pops up on our computer screen when we open up a browser for searching a piece of code, or to watch something online, or to connect with the social friends or something different. Everyone would have come across the advertisement sections in most of the pages we browse, but we give little or negative attention to these details. However this Gentleman, a friend of mine , about an year ago opened up Yahoo homepage and guess wha...

ಮಳೆ ಬಂದ ರಾತ್ರಿ ... ಭಾಗ ೨

ರಾಜು ೩ ನೆ ಮಹಡಿಗೆ ಬಂದಾಗ ... ಅಲ್ಲಿ ಕುರ್ಚಿಯಮೇಲೆ ಗಾರ್ಗಿ ಕುಳಿತು ಕೆಲಸ ಮಾಡುತ್ತಿದ್ದದನ್ನು ರಾಜು ನೋಡಿದನು. ಒಮ್ಮೆ "ಗಾರ್ಗಿ ಮೇಡಂ" ಎಂದು ಕರೆದನು. ಅವಳು ಹಿಂದೆ ತಿರುಗಿ "ರಾಜು ಬಂದ್ಯಾ? ನೋಡು ನಂಗೆ ತುಂಬಾ ಕೆಲಸ ಇರೋದ್ರಿಂದ ಇವತ್ತು ಲೇಟ್ ಆಗಬಹುದು ನಾನು ಹೊರಡೋದು . ದಯವಿಟ್ಟು ಗಾಡಿ ವ್ಯವಸ್ಥೆ ಮಾಡ್ತೀಯ ರಾತ್ರಿ ೯:೩೦ ಕ್ಕೆ ಹೊರೊಡೋ ಹಾಗೆ " ಅಂತ ಕೇಳಿದಳು. ರಾಜು ಮನಸಲ್ಲೇ 'ಇಷ್ಟೇ ಆಗಿದ್ದರೆ ಆಗಲೇ ಇವರು ಭಯ ಮೂಡಿಸುವಂತೆ, ಆತಂಕ ಉಂಟಾಗುವಂತೆ ಏಕೆ ಎದುಸಿರು ಬಿಡುತ್ತಾ ಫೋನಿನಲ್ಲಿ ಮಾತನಾಡುತ್ತಿದ್ದರು' ಎಂದು ತನ್ನನ್ನು ತಾನೇ ಪ್ರಶ್ನಿಸುತ್ತ ಸುಮ್ಮನೆ ಹಾಗೆ ಆಗಲಿ ಎನ್ನುವಂತೆ ತಲೆಯನ್ನಾಡಿಸಿ ಸನ್ನೆಯಿ೦ದ ತಿಳಿಸಿ, ಕೆಳಗೆ ಬಂದು ಅವನ ಜಾಗದಲ್ಲಿ ಕುಳಿತ. ಕ್ಯಾಬ್ ಡ್ರೈವರ್ ಮೋಹನನಿಗೆ ೯ :೩೦ ಸರಿಯಾಗಿ ಆಫೀಸ್ ಇಂದ ಪಿಕ್ ಅಪ್ ಇದೆ, ಗಾರ್ಗಿ ಮೇಡಂ ದು ಅಂತ ಹೇಳಿ, ಕ್ಯಾಬ್ ಬುಕ್ ಮಾಡಿದ, ಬೂಕಿಂಗ್ ರೆಜಿಸ್ಟರ್ ನಲ್ಲಿ ಎಂಟ್ರಿ ಮಾಡಿದ. ಮನಸು ತಡೆಯದೆ ಅವನು ಮತ್ತೆ ಗಾರ್ಗಿ ಮೇಡಂ ಗೆ ಫೋನ್ ಹಚ್ಚಿದ. ಅವಳು ರಿಸೀವರ್ ಎತ್ತಿದೊಡನೆ " ಮೇಡಂ ನಿಮ್ಮ ಕ್ಯಾಬ್ ಅರೇಂಜ್ ಆಗಿದೆ.ಯೋಚನೆ ಮಾಡಬೇಡಿ" ಅಂತ ನುಡಿದ. "ಹಾಗೆ ಮೇಡಂ ಆಗಲೇ ನೀವೇಕೆ ಭಯದಿಂದ ಮಾತನಾಡುತ್ತಿದ್ದಿರಿ ? ಏನಾದರು ಗಾಭರಿ ಆಯ್ತಾ? ಅಂತ ಕೇಳಿದ" ಮತ್ತೆ ಆಕಡೆ ಇಂದ ಉತ್ತರವಿಲ್ಲ. ಬರಿ ಎದುಸಿರು ಬಿಡುವ ಹಾಗ...

ಮಳೆ ಬಂದ ರಾತ್ರಿ ... ಭಾಗ ೧

ಕರಾಳವಾದ ಒಂದು ರಾತ್ರಿಯದು. ಎಲ್ಲೆಡೆ ಕತ್ತಲು ಬರಿ ಕತ್ತಲು. ವಾತಾವರಣ ಹೊರಗೆ ಹೀಗಿದ್ದಾಗ ಆಕೆ ಕೆಲಸ ಮುಗಿಸಿ , ತನ್ನ ಒಂದು ಕೈನಲ್ಲಿ ಕೆಂಪು ಬಣ್ಣದ ಬ್ಯಾಗ್ ಹಿಡಿದು ಇನ್ನೊಂದರಲ್ಲಿ ಮೊಬೈಲಿನ ಗುಂಡಿಗಳನ್ನು ಸರ ಸರನೆ ಒತ್ತುತ್ತಾ ಒಂದು ಸಂದೇಶ ಕಳುಹಿಸಿದಳು. ಹೊತ್ತು ಹೆಚ್ಚಾಗಿರಲಿಲ್ಲ, ಆದರೆ ಮಳೆ ಬಂದಿದ್ದರಿಂದ ವಿದ್ಯುತ್ ಸರಬರಾಜಿನಲ್ಲಿ ಏನೋ ಎಡವಟ್ಟಾಗಿ ಅವಳು ಕೆಲಸ ಮಾಡುತಿದ್ದ ಕಂಪನಿಯಲ್ಲಿ ದೀಪವಿರಲಿಲ್ಲ. ಜೆನರೇಟರನ್ನು ೧ ತಾಸಿನಿ೦ದ ಬರ್ರೋ ಎ೦ದು ಓಡಿಸುತ್ತಾ ಕೆಲವು ಚಿಕ್ಕ ಪ್ರಮಾಣದ ದೀಪವನ್ನು ಮಾತ್ರ ಉರಿಸಲಾಗಿತ್ತು. ಆಫೀಸ್ ನ ರಿಸೆಪ್ಶನ್ ನಲ್ಲಿ ಕುಳಿತಿದ್ದ ಸೆಕ್ಯೂರಿಟಿ ಡಿಪಾರ್ಟ್ಮೆಂಟ್ ನ ರಾಜು ಅವಳನ್ನು ಗಮನಿಸಿದ.ಎಂದಿನಂತೆ ಅವಳ ಮುಖದಲ್ಲಿ ನಗು ಇರಲಿಲ್ಲ. ಯಾವುದೋ ಚಿಂತೆ, ಭಯಭರಿತ ಕೈಯ ಕಂಪನವನ್ನು ಕಂಡ. ಅವನು "ಮೇಡಂ ಒಂದ್ ನಿಮಿಷ ..." ಅನ್ನೋಷ್ಟರಲ್ಲಿ ಅವಳು ಯೋಚನಾಮಗ್ನಳಾಗಿ ಶರವೇಗದಿ ಬಾಗಿಲು ತೆಗೆದು ನಡೆದಳು. ದಿನವು ಮನೆಗೆ ಮರಳುತಿದ್ದ ವಾಹನಕ್ಕಾಗಿ ಅಂದು ಅವಳು ಕಾಯಲಿಲ್ಲ. ಚಳಿಯಲ್ಲೂ ಹಣೆಯ ಮೇಲೆ ಬೆವರಿದ್ದದ್ದು ರಾಜು ಕಣ್ಣಿಗೆ ಬಿದ್ದಿತ್ತು.ಅವನು ಆಸನ ಬಿಟ್ಟು ಹೋಗಿ ವಿಚಾರಿಸೋದು ಉತ್ತಮ ಎಂದು ಮನದಲ್ಲಿ ಅಂದುಕೊಳ್ಳೋಷ್ಟರಲ್ಲಿ ಮೇಜಿನ ಮೇಲಿದ್ದ ಫೋನ್ ಟ್ರಿನ್ ಟ್ರಿನ್ ಎಂದು ಶಬ್ದ ಮಾಡಲಾರ೦ಭಿಸಿತು. ಗೊಂದಲದಲ್ಲೇ ಫೋನ್ ಎತ್ತಿ "ಹಲೋ" ಎಂದ.. ಆಕಡೆಇ೦ದ ಬಂದ ಧ್ವನಿ ಗಾರ್ಗಿಯದು. ...

Fancy with Cards, Face the music one day!

This happened yesterday afternoon when a colleague sitting next to my desk dialled a number on the landline AND.... ( I could hear what this Colleague XYZ was speaking of, however the dialogues from the other end is assumption thats been made based on the context. My intent was not to overhear the conversation. I had just then returned from the pantry with a cup of hot cappuccino in my hand and while sipping it away,each word delicately slipped into my ears. It wasn't intentional at all! ) The conversation started off like this. Colleague : "Hello , this is XYZ calling and I hold a credit card from your bank" Bank rep: "Hi XYZ, This is MNP , how could I help you with that?" Colleague : "Actually I have this card with me from about 2 years now and I have not used it at all. I want to close this card" Bank rep: "Sure sir, could you please hold on for a minute ?" Colleague : "yeah!" : His face goes straight when the music ...