ಅಂದು ಭಾನುವಾರ, ಮ0ಡ್ಯದಲ್ಲೊ0ದು ಮದುವೆ ಸಂಭ್ರಮವಿತ್ತು. ಅದರಲ್ಲಿ ಪಾಲ್ಗೊಳ್ಳಲು ಹೊರಟ ನಾವು ತಲುಪಿದ್ದು ಮೇಲುಕೋಟೆ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಇರೋ ಎಲ್ಲ ಕಲ್ಯಾಣ ಮಂಟಪದಲ್ಲೂ ಒಂದಲ್ಲ ಒಂದು ಮದುವೆ ಅಥವಾ ಮುಂಜಿ ಕಾರ್ಯ ನಡೆಯುತ್ತಿತ್ತು. ಎಲ್ಲೆಡೆ ಸಡಗರ ತುಂಬಿತ್ತು. ರೋಡಿನುದ್ದಕ್ಕೂ ವಾಹನಗಳಲ್ಲಿ ಕುಳಿತ ರಮಣಿಯರು ಮೈತುಂಬ ಒಡವೆ , ಜರತಾರಿ ಸೀರೆ ಧರಿಸಿದ್ದರು. ಆ ಹನ್ನೊಂದು ಘಂಟೆಯ ಉರಿಬಿಸಿಲನ್ನೂ ಕಡೆಗಣಿಸಿ ಇಂತಹ ಭಾರಿ ಸೀರೆಗಳನ್ನ ಉಟ್ಟಿದ್ದಾದರು ಹೇಗೆ ಎಂಬ ಪ್ರಶ್ನೆ ನನ್ನ ಮನದಲ್ಲಿ. ಇನ್ನು ಅವರ ಸಾರಥಿಗಳೋ (ಅಂದ್ರೆ ಅವರ ಗಂಡಂದಿರು) ಯಾವ ಎಂ. ಪಿ , ಎಂ ಎಲ್ ಎ ಗೇನು ಕಡಿಮೆ ಇರ್ಲಿಲ್ಲ . ಏನು ಇಲ್ಲ ಅ೦ದ್ರೂನು ಕೈನಲ್ಲಿ ೬ -೭ ಗಟ್ಟಿ ಚಿನ್ನದ ಉಂಗುರ, ೧-೨ ಸವರನಿನ ಬ್ರೇಸ್ಲೇಟ್ , ದಪ್ಪದಾದ ಕತ್ತಿನ ಚಿನ್ನದ ಚೈನ್ ಪಳ ಪಳ ಅಂತ ಹೊಳೆಯುತ್ತ ಇದ್ದವು. ಹಾಗು ಹೀಗೂ ಮಂಡ್ಯ ತಲುಪೋ ಹೊತ್ತಿಗೆ 12:00 ಘಂಟೆ ದಾಟಿತ್ತು. ಇನ್ನೂ ಮಂಟಪಕ್ಕೆ ಹೋಗಿ ವಧು ವರರಿಗೆ ಹರಸಿ ನಂತರಾ ಪಂಕ್ತಿ ಊಟಕ್ಕೆ ಕಾದು ... ಅಯ್ಯೋ ಅಷ್ಟೋಂಡು ತಾಳ್ಮೆ ನಮಗಿರಲಿಲ್ಲ. ಅದು ಆ ಉರಿಬಿಸಿಲಿನಲ್ಲಿ. ಸರಿ, ಎಲ್ಲಾ ಪಯಣಿಗರ ಒಮ್ಮತ ಪಡೆದು ಬಂಡಿ ಬಲಕ್ಕೆ ತಿರುಗಿಸಿಯೇಬಿಟ್ಟರು ನಮ್ಮ ಸಾರಥಿ ಭಾವಮೈದ. ಸುಮಾರು ೪೦ ಕಿ. ಮೀ ದೂರದಿಲ್ಲಿತ್ತು ಯೋಗನರಸಿಂಹನ ಗುಡಿ - ಅದು ಬೆಟ್ಟದ ಮೇಲೆ, ಬೆಟ್ಟದ ಕೆಳಗ...
Lot of Inspiration and a childhood dream has turned into this piece of web content that helps me share my mind to all of those who crave to read and fantasize, learn and factuate, study and enhance. I guarantee that my ramblings cater to all age groups, if anyone finds a miss please do drop your thought which would inspire me yet again and something nice would blossom for sure :-)