ರಂಗೋಲಿ!


ತಂಪಾದ ಮುಂಜಾನೆ
ಮಂಜು ಬೀಳೋ ಸದ್ದಿನಲಿ
ಕೇಳಿಸಿದೆ ನನ್ನಯ ಹೆಸರು
ನಿನ್ನದೇ ದನಿಯಲಿ

ಪಿಸುಗುಡುತ ಮಾತೊಂದ
ಕಿವಿಯ ಮೇಲೆ ಇಟ್ಟ ಹಾಗೆ
ಇಬ್ಬನಿಯ ಒಂದು ಹನಿ
ಎಲೆಯ ಮಡಿಲ ಸೇರಿದೆ

ಮಲ್ಲಿಗೆಯ ಗಿಡದಲ್ಲಿ
ಬಿಳಿ ಹಾಸಿಗೆ ಚೆಲ್ಲಿದ ಹಾಗೆ
ಮನವು ಶುಬ್ರ
ಬಿಳಿಯ ಹಾಳೆಯಾಗಿದೆ

ರಂಗು ರಂಗಿನ ರಂಗೋಲಿ
ದಿನಕರನಿಗೆ ಉದಯ ಹಾಡಿರಲು
ಹಕ್ಕಿಯ ಗುನುಗಿನ ಚಿಲಿಪಿಲಿಯಲಿ
ಹೊಸ ರಾಗ ಹುಟ್ಟಿದೆ

ಭತ್ತದ ತೆನೆ ಮೇಲೆ
ಚಿನ್ನದ ಕಿರಣ ನಲಿಯುತಿರಲು
ನನ್ನ ಕಣ್ಣು ತೆರೆದಾಗ
ಸಂತೋಷದ ಸಾಗರ ಹರಿದಿದೆ

- ಅಶ್ವಿನಿ

Comments

ತುಂಬಾ ಚೆನ್ನಾಗಿದೆ

Popular Posts