ಕಡಲರವಿ!
ಕನ್ಯಾಕುಮಾರಿ! ಭಾರತ ದೇಶದ ತುತ್ತ ತುದಿಯಲ್ಲಿ ನಿಂತು ಸೂರ್ಯಾಸ್ತ ಅಥವಾ ಸೂರ್ಯೋದಯವನ್ನು ನೋಡುವುದು ಒಂದು ಅನರ್ಘ್ಯ ಅನುಭವ. ಈ ಅವಕಾಶ ೨೦೧೧ ರ ಕಡೆಯ ವಾರ ನನಗೆ ದೊರೆಯಿತು. ಆ ಕಡಲ ತೀರದಲಿ ನಿಂತು ನನ್ನ ನಾ ಮರೆತಿದ್ದಾಗ ಮನದಲಿ ಮೂಡಿದ ನಾಲ್ಕು ಸಾಲುಗಳು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಕೆಂಪಾದ ಆಗಸದಿ ತಕದಿಮಿ ಕೇಳುತಿರಲು
ಕಲ್ಲು-ನೀರ ಸ್ಪರ್ಶದಿ, ಸಂಗೀತ ಸ್ವರವು ಮೂಡಿ
ಕಡಲ ಅಲೆಯ ನಾದಕೆ ಸಂಜೆಯ ರವಿ ನಲಿಯುತಿರಲು
ಬಲು ಚೆಂದ ನೋಡಲು ಮುತ್ತಿಟ್ಟ ಆ ಕಡಲರವಿಯ ಜೋಡಿ
- ಅಶ್ವಿನಿ
Note: I have described the lines that lingered in my mind as I stood watching the sunset at Kanyakumari.
ಕೆಂಪಾದ ಆಗಸದಿ ತಕದಿಮಿ ಕೇಳುತಿರಲು
ಕಲ್ಲು-ನೀರ ಸ್ಪರ್ಶದಿ, ಸಂಗೀತ ಸ್ವರವು ಮೂಡಿ
ಕಡಲ ಅಲೆಯ ನಾದಕೆ ಸಂಜೆಯ ರವಿ ನಲಿಯುತಿರಲು
ಬಲು ಚೆಂದ ನೋಡಲು ಮುತ್ತಿಟ್ಟ ಆ ಕಡಲರವಿಯ ಜೋಡಿ
- ಅಶ್ವಿನಿ
Note: I have described the lines that lingered in my mind as I stood watching the sunset at Kanyakumari.
Comments
@Prathi: Thanks:)
@Sahana: dhanyavaadagaLu! nijavaagiyu adondu sundaraanubhava.