ಮನದ ಮಾತು !

ಉಸಿರಲಿ ಬಿಗಿ ಹಿಡಿದೆ ಮನದ ಕಾತುರವ
ಕಣ್ಣಂಚಲಿ ಕಾಣ ಬಯಸಿದೆ ನಿನ್ನಯ ಮೊಗವ
ಹೃದಯ ಕರೆದಿದೆ ನಿನ್ನೆಡೆಗೆ
ಹೇಗೆ ಬರಲೆಂದು ನಾ ಚಡಪಡಿಸಿರಲು
ಮನದ ಕದ ಬಡಿದು ನಿಂತಿಹೆ
ನೀ ನನ್ನ ಮುಂದೆ

ಹುಚ್ಚಾದ ಮಾತೆರಡು ಗುಟ್ಟಾಗಿ ಚುಚ್ಚಿರಲು
ಬೆತ್ತಲೆಯಾಗಿ ನಿಲ್ಲಲು ಹೊರಟಿದೆ ಈ ಹೃದಯ
ಸಂತೃಪ್ತಿ ಸಂಪ್ರಾಪ್ತಿ ಬಯಕೆ ಹೆಚ್ಚಿರಲು
ಮನದಂಗಳದಿ ಬಿತ್ತಿದೆ ಒಲವೆಂಬ ಬೀಜವ

ಸಂಕೋಚವಿಲ್ಲದೆ ಗೆಲುವನರಸಿ
ಭಯ ಬಿಂಕವನು ಬಿಟ್ಟು
ನಿರಾಳವಾಗಿ ಸೇರಲು ಹಂಬಲಿಸಿ
ಕಥಾನಯಕಿಯಂತೆ ಬಂದಿರಲು

ಛಲವು ಧೈರ್ಯದ ಜೊತೆಯಾಗಿ
ಹಿಡಿದ ಗ್ರಹಣ ದೂರಾಗಿ
ಬೆಳಕು ಸದಾ ಕುಣಿಯಲಿ
ಕಪ್ಪು ಬಿಳಿಯ ಅಂತರದಲಿ

- ಅಶ್ವಿನಿ

No comments:

Check!

LinkWithin

Related Posts Plugin for WordPress, Blogger...