ಮಳೆ ಬಂದ ರಾತ್ರಿ ... ಭಾಗ ೩

ರಾಜು ಬೆಳಿಗ್ಗೆ ಆಫೀಸಿಗೆ ಬಂದೊಡನೆ ಪ್ರತಿಯೊ೦ದು ಕೊಠಡಿಗೆ ಒಮ್ಮೆ ಭೇಟಿ ಕೊಟ್ಟು ಎ.ಸಿ. ಯ ತಾಪ ಸರಿಯಾಗಿದೆಯೇ ಎಂದು ಪರಿಶೀಲಿಸಿ, ಕಮ್ಪ್ಯೂಟರ್ಗಳನೆಲ್ಲ ಜೋಡಿಸಿ ರಿಸೆಪ್ಶನ್ ಗೆ ಬಂದು ಕುಳಿತುಕೊಳ್ಳುವುದು ಅವನ ಕೆಲಸವಾಗಿತ್ತು. ಎಂದಿನಂತೆ ಆ ದಿನವು ಬೆಳಿಗ್ಗೆ ೯ ಕ್ಕೆ ಅವನು ತನ್ನ ಕೆಲಸವನ್ನು ಪ್ರಾರಂಭಿಸಿದ . ೧ ಹಾಗು ೨ ನೆ ಮಹಡಿಯ ಎಲ್ಲಾ ಕೊಠಡಿಯನ್ನು ಸ್ವಚ್ಚಗೊಳಿಸಿ ಅಲ್ಲಿಂದ ೩ ನೆ ಮಹಡಿ ಗೆ ಹೋದಾಗ ಮತ್ತೆ ಹಿಂದಿನ ದಿನದ ದೃಶ್ಯ ಕಣ್ಣ ಮುಂದೆ ಮರುಕಳಿಸಿತು. ಗಾರ್ಗಿ ಕ್ಯಾಬ್ ಹತ್ತಿ ಹೋದ ಘಟನೆಯನ್ನು ಮೆಲುಕು ಹಾಕುತ್ತಿದ್ದಾಗ ಅವನ ದೃಷ್ಟಿ ಮ್ಯಾನೇಜರ್ ಜೀವನ್ ಪಾಲ್ ಅವರ ಕೋಣೆಯತ್ತ ಸಾಗಿತು.

ರಾಜು ನಿಧಾನವಾಗಿ ಕೋಣೆಯ ಬಾಗಿಲಿನತ್ತ ಹೆಜ್ಜೆ ಹಾಕುತ್ತಿದ್ದಂತೆಯೇ "ರಾಜು ಗುಡ್ ಮಾರ್ನಿಂಗ್.." ಎಂದು ಹಿಂದಿನಿಂದ ಕರೆ ಬಂದಿತು. ರಾಜು ಕ್ಷಣದಲ್ಲೇ ಹಿಂದಿರುಗಿ ನೋಡಿದಾಗ ಗಾರ್ಗಿಯನ್ನು ಕಂಡನು. ತನ್ನ ಕೈ ಗಡಿಯಾರ ನೋಡಿ ಅವಳನ್ನು ಪ್ರಶ್ನಿಸಿದನು " ಮೇಡಂ ನೀವು ಇಷ್ಟು ಬೇಗ ಇವತ್ತು, ಘಂಟೆ ಇನ್ನು ೯:೧೫ ಅಷ್ಟೇ" . ಗಾರ್ಗಿ ಗಂಟಲನ್ನು ಸರಿ ಮಾಡಿಕೊಳ್ಳುತ್ತ " ರಾಜು ನೆನ್ನೆ ಪೂರ್ಣ ಕೆಲಸ ಮುಗಿಯಲಿಲ್ಲ , ಇವತ್ತು ೧೧ ಘಂಟೆಗೆ ಸರಿಯಾಗಿ ಮೀಟಿಂಗ್ ಇದೆ. ಅಷ್ಟರೊಳಗೆ ನಾನು ಕೋಡನ್ನು ರೆಡಿ ಮಾಡಬೇಕು" ಅಂತ ಅವಸರದಲ್ಲೇ ಉತ್ತರಿಸಿದಳು.

ರಾಜುವಿಗೆ ಇಲ್ಲೇನೋ ನಡೆಯುತ್ತಿದೆ , ಆದರೆ ನನಗರಿವಾಗುತ್ತಿಲ್ಲ ಎಂದು ಮನದಲ್ಲೇ ನುಡಿದನು. ಈಗ ಮೊದಲು ಧೂಳು ಹೊಡೆದು, ಬೇಗ ನಾನು ರಿಸೆಪ್ಶನ್ ಗೆ ಹೋಗಬೇಕೆಂದು ಎಲ್ಲಾ ಕಂಪ್ಯೂಟರನ್ನು ಸರಿಯಾಗಿ ಜೋಡಿಸಿ ಮೆಟ್ಟಿಲುಗಳನ್ನು ಇಳಿಯಲಾರ೦ಭಿಸಿದ.

ಪುಟ್ಟ ತಲೆಯಲ್ಲಿ ಎಲ್ಲಿಲ್ಲದ ಯೋಚನೆ - ವಿಚಾರಿಸಲು ಕೃಪಾ ಮೇಡಂ ಬರಲಿ ಎಂದು ಕಾಯತೊಡಗಿದ.

ಒಂದು ಕಪ್ ಕಾಫಿ ಕುಡಿಯುತ್ತಾ ಅಂದಿನ ದಿನ ಪತ್ರಿಕೆಯನ್ನು ಕೈಲ್ಲಿಟ್ಟುಕೊಂಡು ಪುಟ ಒಂದನ್ನು ಓದಲು ಹೊರಟಾಗ - ಹೆಡ್ಲೈನ್ಸ ನಲ್ಲಿ "ಜೀವನ್ ಪಾಲ್ , ದೊಡ್ಡ ಬಿಸಿನೆಸ್ ಉದ್ಯಮಿಯೂ ಇನ್ನಿಲ್ಲ" ಎನ್ನುವ ಸುದ್ದಿ ಕಂಡು ಜೋರಾಗಿ ಅಯ್ಯೋ ಅಯ್ಯೋ ಎಂದು ಕಿರುಚಿದ. ವಿವರದಲ್ಲಿ ಇದ್ದದ್ದು "ಒಂದು ವಾರದ ಹಿಂದೆ ಜೀವನ್ ಪಾಲ್ ಬಿಸಿನೆಸ್ ಟೂರಿಗಾಗಿ ವಿದೇಶಕ್ಕೆ ಹೋಗಿದ್ದರು. ಅಲ್ಲಿಯ ಆಫಿಶಿಯಲ್ ಬಂಗ್ಲಾದಲ್ಲಿ ಸಂಜೆ ಕಾಫಿ ಕುಡಿದ ನಂತರ, ಅವರ ಬೆಡ್ ರೂಂ ನಲ್ಲಿ ಆದ ಕೊಲೆ. ಪ್ರಕರಣ ಹೊರಬಿದ್ದದ್ದು ಸುಮಾರು ೨ ತಾಸುಗಳ ನಂತರ. "

ಘಂಟೆ ೧೦ ಆಗಿತ್ತು , ಒಬ್ಬೊಬ್ಬರಾಗಿ ಉದ್ಯೋಗಿಗಳು ಆಫೀಸಿಗೆ ಬರತೊಡಗಿದರು. ಮಾಮೂಲಿನಂತೆ "ಗುಡ್ ಮಾರ್ನಿಂಗ್ ರಾಜು" ಎಂದು ಪ್ರೀಥಮ್ ಶುಭೋದಯ ಹೇಳುತ್ತಾ ಲಿಫ್ಟ್ ನೆಡೆಗೆ ಹೊರಟಾಗ, "ಪ್ರೀಥಮ್ ಸರ್, ಪಾಲ್ ಸರ್ ದು ಕೊಲೆಯಾಗಿದೆ " ನಡುಗುತಿದ್ದ ದನಿಯಲ್ಲೇ ಹೇಳಿದ. "ವಾಟ್ ?? ಯಾವಾಗ ಎಲ್ಲಿ ಏನಾಯಿತು, ನಿಂಗೆ ಹೇಗೆ ಗೊತ್ತು ? ಏನ್ ಹೇಳ್ತಾ ಇದ್ಯಾ" ಅಂತ ವಿಚಾರಿಸಿದ ಪ್ರೀಥಮ್ . ರಾಜು ಕೈನಲ್ಲಿದ್ದ ನ್ಯೂಸ್ ಪೇಪರ್ ಅವನ ಕಡೆಗೆ ತಿರುಗಿಸಿ ಗೊತ್ತಿದ್ದ ಸಂಗತಿಗಳನೆಲ್ಲಹೇಳಿದ. ಪ್ರೀಥಮ್ ಗೆ ನ೦ಬಲಾಗದೆ, ಸುದ್ದಿಯನ್ನು ಎರಡು ಸಾರಿ ಓದಿದ ಮೇಲೂ, ಮತ್ತೊಮ್ಮೆ ಖಚಿತಗೊಳಿಸಿಕೊಳ್ಳಲು ರಿಸೆಪ್ಶನ್ನಲ್ಲಿದ್ದ ದೂರದರ್ಶನವನ್ನು ಆನ್ ಮಾಡಿ ನ್ಯೂಸ್ ಚಾನೆಲ್ ಹಾಕಿದ. ಹೌದು "ಪಾಲ್ , ಪ್ರಸಿದ್ದ ಬಿಸಿನೆಸ್ ಐಕಾನ ಇಂದು ಕಣ್ಮರೆಯಾಗಿದ್ದಾರೆ" ಅನ್ನೋ ಸುದ್ದಿ ಪ್ರಕಟವಾಗುತಿತ್ತು. ಇದರ ಹಿಂದಿದ್ದ ಉದ್ದೇಶ ಏನು ಅನ್ನೋದು ಇನ್ನು ತಿಳಿದು ಬಂದಿಲ್ಲ ಅಂತ ನ್ಯೂಸ್ ರೀಡರ್ ರಾಧಾ ಮಿತ್ತಲ್ ಹೇಳಿದಳು.

ಈಗಾಗಲೇ ಆಫೀಸ್ ಗೆ ಬಂದವೆರೆಲ್ಲರ ಬಾಯಿನಲ್ಲೂ ಬರುತಿದ್ದ ಮಾತು ಪಾಲ್ ಪಾಲ್ ಮತ್ತು ಪಾಲ್ದಾಗಿತ್ತು. ಪ್ರೀಥಮ್ ಗಾರ್ಗಿ ಗೆ ಫೋನ್ ಮಾಡಿದ . "ಹೇಯ್ ಗಾರ್ಗಿ ವಿಷ್ಯ ಗೊತ್ತೈತಾ ?" , ಕೆಲಸ ಮಾದುತಿದ್ದವಳು " ಏನು ಪ್ರೀಥಮ್ ?" ಎಂದಳು. " ಪಾಲ್ ಇಸ್ ಡೆಡ್ . ಅವರ ಕೊಲೆ ಆಗಿದೆ :/" ಅಂತ ಹೇಳಿದ. ಅವಳು ಒಮ್ಮೆಲೇ ಕುರ್ಚಿಯಿಂದ ಎದ್ದು ಓಡುತ್ತಾ ಕೆಳಗೆ ಬಂದಳು.

ಗಾರ್ಗಿ ಕೆಳಗೆ ಇಳಿದು ಬಂದವಳೇ ಪ್ರೀಥಮ್ ಹತ್ರ ಬಂದು ಕೃಪಾ ಗೆ ತಿಳಿಸ್ದ್ಯಾ ಅಂತ ಕೇಳಿದಳು. ಕೃಪಾ ಗೆ ಪಾಲ್ ಮೇಲಿದ್ದ ಪ್ರೀತಿಯ ಕುರಿತು ಗಾರ್ಗಿಗೆ ತಿಳಿದಿತ್ತು. ಕೃಪಾ ಕೆಲವು ದಿನಗಳ ಹಿಂದೆ ಅಷ್ಟೇ ಅವಳ ಮನದ ಮಾತನ್ನು ಗಾರ್ಗಿಯೊಂದಿಗೆ ಹಂಚಿಕೊಂಡಿದ್ದಳು. ಪ್ರೀಥಮ್ "ಇಲ್ಲ ಗಾರ್ಗಿ , ರಾಜು ನೀನ್ ಆಫೀಸ್ ಗೆ ಬೇಗ ಬಂದಿದ್ಯ ಅಂತ ಹೇಳ್ದ ಅದಕ್ಕೆ ನಿಂಗೆ ಮೊದಲು ಕಾಲ್ ಮಾಡಿದೆ. ತಡಿ ಈಗ ಮಾಡ್ತೀನಿ ಅವಳಿಗೆ " ಅಂತ ಹೇಳಿ ಫೋನ್ ಲಿಸ್ಟ್ ಇಂದ ಕೃಪಾಳ ಹೆಸರು ಹುಡುಕಿ ಕಾಲ್ ಬಟ್ಟನ್ ಒತ್ತಿದ. ರಿಂಗ್ ಟೋನ್ ಕೇಳಿತೆ ಹೊರತು ಕೃಪಾ ಫೋನ್ ಎತ್ತಲಿಲ್ಲ.

ಅಲ್ಲೇ ನಿಂತಿದ್ದ ರಾಜು ಆಗುತ್ತಿದ್ದುದನ್ನು ಗಮನಿಸಿದ. ಕೃಪಾ ಹಿಂದಿನ ರಾತ್ರಿ ಭಯದಿಂದ ನಡುಗುತ್ತ ಬೆವರುತ್ತ ಹೊದ್ದದ್ದು ನೆನಪಾಯಿತು.ಕೃಪಾ ಎಲ್ಲಿ ?

7 comments:

Rajalakshmi said...

This is too good. Curiosity is building up. The story si going realy well. waiting eagerly for the 4th part.

ಪ್ರದೀಪ್ said...

nice story.. expecting big twists and turns !!

ಅಶ್ವಿನಿ/Ashwini said...

@ Rajalakshmi: Thank you.. Hope I meet the expectation..

@ಪ್ರದೀಪ್ : Thx.. first attempt at this. Let me wait and see all reactions when I complete it.

Spicy Sweet said...

Which high school did you study in Ashwini? I feel that you have a very very familiar face.

ಅಶ್ವಿನಿ/Ashwini said...

@Spicy Sweet: High School from Sri Vani education center , Rajajinagar, Bangalore. Have we met???

Spicy Sweet said...

Nope! I knew a girl called Ashwini who looked so much like you. I really thought you were her!
I studied in Vijaya High School, Jayanagar.
So, don't see a chance. :)

ಅಶ್ವಿನಿ/Ashwini said...

@Spicy sweet: May be my face resembles the Ashwini you know of... Well its nice to have met you in this space... Lets keep meeting here and if possible a day out in the city of Bangalore..

Check!

LinkWithin

Related Posts Plugin for WordPress, Blogger...