ಮಳೆ ಬಂದ ರಾತ್ರಿ ... ಭಾಗ ೨

ರಾಜು ೩ ನೆ ಮಹಡಿಗೆ ಬಂದಾಗ ...

ಅಲ್ಲಿ ಕುರ್ಚಿಯಮೇಲೆ ಗಾರ್ಗಿ ಕುಳಿತು ಕೆಲಸ ಮಾಡುತ್ತಿದ್ದದನ್ನು ರಾಜು ನೋಡಿದನು. ಒಮ್ಮೆ "ಗಾರ್ಗಿ ಮೇಡಂ" ಎಂದು ಕರೆದನು. ಅವಳು ಹಿಂದೆ ತಿರುಗಿ "ರಾಜು ಬಂದ್ಯಾ? ನೋಡು ನಂಗೆ ತುಂಬಾ ಕೆಲಸ ಇರೋದ್ರಿಂದ ಇವತ್ತು ಲೇಟ್ ಆಗಬಹುದು ನಾನು ಹೊರಡೋದು . ದಯವಿಟ್ಟು ಗಾಡಿ ವ್ಯವಸ್ಥೆ ಮಾಡ್ತೀಯ ರಾತ್ರಿ ೯:೩೦ ಕ್ಕೆ ಹೊರೊಡೋ ಹಾಗೆ " ಅಂತ ಕೇಳಿದಳು. ರಾಜು ಮನಸಲ್ಲೇ 'ಇಷ್ಟೇ ಆಗಿದ್ದರೆ ಆಗಲೇ ಇವರು ಭಯ ಮೂಡಿಸುವಂತೆ, ಆತಂಕ ಉಂಟಾಗುವಂತೆ ಏಕೆ ಎದುಸಿರು ಬಿಡುತ್ತಾ ಫೋನಿನಲ್ಲಿ ಮಾತನಾಡುತ್ತಿದ್ದರು' ಎಂದು ತನ್ನನ್ನು ತಾನೇ ಪ್ರಶ್ನಿಸುತ್ತ ಸುಮ್ಮನೆ ಹಾಗೆ ಆಗಲಿ ಎನ್ನುವಂತೆ ತಲೆಯನ್ನಾಡಿಸಿ ಸನ್ನೆಯಿ೦ದ ತಿಳಿಸಿ, ಕೆಳಗೆ ಬಂದು ಅವನ ಜಾಗದಲ್ಲಿ ಕುಳಿತ.

ಕ್ಯಾಬ್ ಡ್ರೈವರ್ ಮೋಹನನಿಗೆ ೯ :೩೦ ಸರಿಯಾಗಿ ಆಫೀಸ್ ಇಂದ ಪಿಕ್ ಅಪ್ ಇದೆ, ಗಾರ್ಗಿ ಮೇಡಂ ದು ಅಂತ ಹೇಳಿ, ಕ್ಯಾಬ್ ಬುಕ್ ಮಾಡಿದ, ಬೂಕಿಂಗ್ ರೆಜಿಸ್ಟರ್ ನಲ್ಲಿ ಎಂಟ್ರಿ ಮಾಡಿದ. ಮನಸು ತಡೆಯದೆ ಅವನು ಮತ್ತೆ ಗಾರ್ಗಿ ಮೇಡಂ ಗೆ ಫೋನ್ ಹಚ್ಚಿದ. ಅವಳು ರಿಸೀವರ್ ಎತ್ತಿದೊಡನೆ " ಮೇಡಂ ನಿಮ್ಮ ಕ್ಯಾಬ್ ಅರೇಂಜ್ ಆಗಿದೆ.ಯೋಚನೆ ಮಾಡಬೇಡಿ" ಅಂತ ನುಡಿದ. "ಹಾಗೆ ಮೇಡಂ ಆಗಲೇ ನೀವೇಕೆ ಭಯದಿಂದ ಮಾತನಾಡುತ್ತಿದ್ದಿರಿ ? ಏನಾದರು ಗಾಭರಿ ಆಯ್ತಾ? ಅಂತ ಕೇಳಿದ" ಮತ್ತೆ ಆಕಡೆ ಇಂದ ಉತ್ತರವಿಲ್ಲ. ಬರಿ ಎದುಸಿರು ಬಿಡುವ ಹಾಗೆ ಧ್ವನಿ. ರಾಜುವಿಗೆ ಮತ್ತೆ ಯೋಚನೆ ಕಾಡಿತು.

ಈ ಭಾರಿ ರಾಜು ಅಲ್ಲೇ ಇದ್ದ ಒಂದು ರೆಜಿಸ್ಟರ್ ತೆಗೆದು, ಮೇಲಿಂದ ಕೆಳಗೆ ಒಂದೊಂದೇ ಹೆಸರನ್ನ ಓದುತ್ತ ಬಂದ. ಗಾರ್ಗಿಯ ಹೆಸರು ಬಂದಂತೆ ಬೆರಳನ್ನು ಎಡದಿಂದ ಬಲಕ್ಕೆ ಚಲಿಸಿದ. ಸೆಲ್ ಫೋನ್ ನಂಬರ್ ನೋಡಿ, ಅದಕ್ಕೆ ಕಾಲ್ ಮಾಡಿದ. "ಗಾರ್ಗಿ ಮೇಡಂ ನಾನು ರಾಜು" , " ಹೇಳು ರಾಜು ಆಯಿತಾ ಕ್ಯಾಬ್ ಬುಕ್ ಮಾಡಿ ? " ಅಂತ ಗಾರ್ಗಿ ಮಾಮೂಲಿನಂತೆ ಅರಾಮದಲ್ಲೇ ಕೇಳಿದಳು.

ರಾಜುವಿಗೆ ಸಮಾಧಾನವೇನೋ ಆಯಿತು ಆದ್ರೆ ಒಂದು ಕ್ಷಣ ಗಾರ್ಗಿ ಏಕೆ ಆಗಲೇ ಗಾಭರಿಯಲ್ಲಿದ್ದಂತೆ ನನಗೆ ಅನಿಸಿತು. ಈ ಪ್ರಶ್ನೆಯ ಸರಪಳಿಯಲ್ಲಿ ಕೃಪಾಳ ಬಗ್ಗೆ ಯೋಚಿಸುವುದನ್ನೇ ಮರೆತಿದ್ದ.

ಇದೆಲ್ಲ ಆಗುವಷ್ಟರಲ್ಲಿ ಘಂಟೆ ೯:೩೦ ಹೊಡೆದಿತ್ತು. ಗಾರ್ಗಿ ಬಂದು ಕ್ಯಾಬ್ ಹತ್ತಿ ಮನೆಗೆ ಹೊರಟಳು. ರಾಜುವಿಗೆ ತನ್ನ ದೈನಂದಿನ ಕಾರ್ಯಗಳ ಅರಿವಾಯಿತು. ಅದನ್ನೆಲ್ಲಾ ಮಾಡುತ್ತಾ ಸಮಯ ೧೦ ಆಯಿತು. ಅವನ ಅಂದಿನ ಕೆಲಸ ಮುಕ್ತಾಯಗೊಳಿಸಿ ಮನೆಗೆ ಹೊರಟ. ಮನೆ ಹತ್ತಿರವೇ ಇದ್ದಿದ್ದರಿಂದ ನಡೆದು ಹೋಗುವುದು ಸಹಜ. ಅಂದು ರಾಜುವಿನ ೧೦ ನಿಮಿಷದ ನಡೆಯುವ ದಾರಿಯುದ್ದಕ್ಕೂ ಅವನು ನೂರಾರು ಯೋಚನೆಗಳನ್ನು ಹೊತ್ತಿದ್ದ. ಮಾಮೂಲಿನಂತೆ ರಸ್ತೆ ಬದಿಯ ಮಂಜಪ್ಪನ ಗಾಡಿಯಲ್ಲಿ ಸಿಂಪಲ್ ಬಿಸಿ ಊಟ ಒಂದನ್ನು ಪಾರ್ಸೆಲ್ ಮಾಡಿಸಿಕೊಂಡು ಹೊರಟ.

ಇಡಿ ದಿನ ದುಡಿದ ಜೀವ, ಮನೆ ತಲುಪಿದ ನಂತರ ಊಟ ಮಾಡಿ ಮಲಗಿದವನಿಗೆ ಮರುದಿನ ಮುಂಜಾನೆ ೫ ಕ್ಕೆ ಎಚ್ಚರ. ಕಣ್ಣು ಬಿಡುತ್ತಿದ್ದಂತೆಯೇ ಯೋಚನೆಗಳು - ನೆನ್ನೆ ರಾತ್ರಿ ಏನಾಯಿತು ? ಕೃಪಾ ಮೇಡಂ , ಗಾರ್ಗಿ ಮೇಡಂ ಯಾಕೆ ಗಾಭರಿಯಲ್ಲಿದರು ?


ಮಳೆ ಇನ್ನು ನಿಂತಿರಲಿಲ್ಲ. ಜಡಿ ಮಳೆ ಅಂತಾರಲ್ಲ ಅದೇ ಹಿಡ್ಕೊ೦ಡಿತ್ತು. ಏಳೋ ಮನಸಿಲ್ಲದಿದ್ದರು ಎದ್ದು ಆಫೀಸ್ ಗೆ ಹೊರೊಡೋ ತಯಾರಿ ಮಾಡಿದ.


ಆಫೀಸ್ನಲ್ಲಿ ಏನಾಯಿತು ?

No comments:

Check!

LinkWithin

Related Posts Plugin for WordPress, Blogger...