ಮಳೆ ಬಂದ ರಾತ್ರಿ ... ಭಾಗ ೪

ಘಂಟೆ ೧೦:೩೦ ಕ್ಕೆ ಸರಿಯಾಗಿ ಆಟೋ ಇಂದ ಇಳಿದು, ಆಫೀಸ್ ಮೇನ್ ಎನ್ಟ್ರ೦ನ್ಸಿನ ಕಡೆ ನಡೆಯುತ್ತಾ ಬಂದಳು ಕೃಪಾ. ಕಣ್ಣುಗಳು ಅತ್ತಂತೆ ಕಾಣುತಿತ್ತು. ಮುಖ ಚಿಕ್ಕದಾಗಿತ್ತು. ಯಾವಾಗಲು ಚಿನುಕುರುಳಿಯಂತೆ ಪಟಪಟನೆ ಮಾತನಾಡುತಿದ್ದ ಕೃಪಾಳ ಬಾಯಿಗೆ ಅಂದು ಬೀಗ ಬಿದ್ದಂತಿತ್ತು. ರಾಜು, ಪ್ರೀಥಮ್ , ಗಾರ್ಗಿ - ಮೂವರು ಇದನ್ನು ಗಮನಿಸಿದರು. ಗಾರ್ಗಿ ಓಡಿ ಹೋಗಿ ಕೃಪಾಳ ಭುಜ ಹಿಡಿದು ಕರೆದಾಗಲೇ ಅವಳು ವಾಸ್ತವಕ್ಕೆ ಬಂದದ್ದು. "ಆರ್ ಯೂ ಆಲ್ರೈಟ್ ? ಏನಾಯಿತು ?" ಎಂದಾಗ ಕೃಪಾಳ ಕಣ್ಣಲ್ಲಿ ನೀರು ತುಂಬಿತ್ತು. ಏನೆಂದು ವಿಚಾರಿಸುವಷ್ಟರಲ್ಲಿ ಪೋಲಿಸ್ ಜೀಪ್ ಒಂದು ಬಂದು ಬರ್ರ್ ಎಂದು ಬ್ರೇಕ್ ಹಾಕಿತು.

ಕಮಿಷನರ್ ವಿಜಯ್ ಇಳಿದು ಬಂದು ಎಲ್ಲರನ್ನು ಕುರಿತು ಕೇಳಿದರು "ನಿಮಗೆ ಈ ಕೊಲೆಯ ಬಗ್ಗೆ ಏನಾದರು ಗೊತ್ತೇ ? ಯಾರ ಮೇಲಾದರೂ ಅನುಮಾನವಿದೆಯೇ ?". ಎಲ್ಲಾ ತಲೆಯಾಡಿಸುತ್ತಾ "ಇಲ್ಲಾ ನಮಗೆ ಇದು ಶಾಕಿ೦ಗ್ ನ್ಯೂಸ್. ನಮಗೇನು ಗೊತ್ತಿಲ್ಲ , ಪಾಲ್ ಸರ್ ಗೆ ಹೀಗೆ ಕೊನೆ ಬರುತ್ತೆ ಅಂತ ನಾವು ಕನಸಿನಲ್ಲೂ ತಿಳಿದಿರಲಿಲ್ಲ. ಅವರು ತುಂಬಾ ಒಳ್ಳೆಯವರು " ಎಂದು ಉತ್ತರ ನೀಡಿದರು. ಸರಿ ನೀವೆಲ್ಲ ಇಂದು ಮನೆಗೆ ಹೋಗಿ, ಬೇಕಾದಲ್ಲಿ ನಾವು ನಿಮ್ಮನ್ನು ಕರೆಸುತ್ತೇವೆ. ವಿಚಾರಣೆ ಮುಗಿಯುವ ವರೆಗೆ ನೀವ್ಯಾರು ಊರು ಬಿಡುವ ಹಾಗಿಲ್ಲ ಅಂತ ಖಡಕ್ಕಾಗಿ ಹೇಳಿದರು ಕಮಿಷನರ್ ಸಾಹೇಬರು.

ಎಲ್ಲರೂ ಹೊರಟ ಮೇಲೆ ಸೆಕ್ಯೂರಿಟಿ ರಾಜುನನ್ನು , ಅನುಮಾನ ಸಂದೇಹ ಸಂಶಯ ಮೂಡಿಸುವಂತ ವ್ಯಕ್ತಿಯ ಸುಳಿವು ಇದೆಯೇ ಎಂದು ಪ್ರಶ್ನಿಸಿದರು. ರಾಜು ತುಸು ಯೋಚಿಸುತ್ತಾ .. ನನಗೆ ಯಾರ ಮೇಲೂ ಸಂಶಯ ಇಲ್ಲ ಸರ್ ಎಂದು ಹೇಳಿದ. ಪೋಲಿಸ್ ನವರು ಪಾಲ್ ಅವರ ಕೋಣೆಯಲ್ಲಿ ಸ್ವಲ್ಪ ಹುಡುಕಾಟ ಮಾಡಿ ಏನಾದರು ಸಾಕ್ಷಿ ಸಿಗತ್ತಾ ಅಂತ ನೋಡಿದರು. ಏನೂ ಸಿಗದೇ ಇದ್ದ ಕಾರಣ ಹಾಗೆ ಹೊರಟರು. ಇಡಿ ಬಿಲ್ದಿಂಗನ್ನು ಒಂದು ಸರ್ತಿ ಸುತ್ತು ವರೆದು ಎಲ್ಲಾ ಕಡೆ ವೀಕ್ಷಿಸಿದರು. ರಾಜುವಿಗೆ ಹುಷಾರಾಗಿ ಇರಲು ಹೇಳಿ ಏನಾದರು ತಿಳಿದಲ್ಲಿ ನಮಗೆ ಕರೆ ಮಾಡು ಅಂತ ಹೇಳಿ ಹೊರಟರು ಕಮಿಷನರ್ ವಿಜಯ್.

ರಾಜುವಿಗೆ ಕೃಪಾ ಮತ್ತು ಗಾರ್ಗಿಯ ಮೇಲೆ ಅನುಮಾನವಿದ್ದರೂ, ಅವರು ಹೇಗೆ ಹೊರದೆಶದಲ್ಲಿದ್ದ ನಮ್ಮ ಪಾಲ್ ಸರ್ ನ ಕೊಲೆ ಮಾಡೋಕ್ಕೆ ಸಾಧ್ಯ ಅಂತ ಅನ್ಕೊಳ್ತಾ, ನಾನು ಸುಮ್ನೆ ಅವರ ಮೇಲೆ ಸಂದೇಹ ಪಡುತ್ತಿದ್ದೇನೆ, ಪಾಪ ಅವರಿಗೆ ಏನ್ ಚಿಂತೆನೋ ಏನೋ ?? ಹೀಗೆ ಯೋಚಿಸುತ್ತಾ ಕುಳಿತಿದ್ದಾಗ ಕೃಪಾ ಮತ್ತೆ ಆಫೀಸ್ ಗೆ ಬಂದಳು. ರಾಜು ಹತ್ತಿರ ಬಂದು "ಪಾಲ್ ಸರ್ ನ ನೋಡೋಕೆ ಒಂದು ತಿಂಗಳಿಂದ ಬಂದಿದ್ದ ಗೆಸ್ಟ್ ಲಿಸ್ಟ್ ಕೊಡೋಕೆ ಆಗುತ್ತಾ" ಅಂತ ಕೇಳಿದಳು. ರಾಜು " ಯಾಕೆ ಮೇಡಂ? ನೋಡ್ತೀನಿ ರೆಜಿಸ್ಟರ್ ನಲ್ಲಿ ಸಿಗಬಹುದು. ಆದರೆ ನಿಮಗ್ಯಾಕೆ ಬೇಕು ಮೇಡಂ? ಹೌದು ನೆನ್ನೆ ನೀವ್ಯಾಕೆ ಭಯದಿಂದ ನಡುಗುತ್ತಾ ಹೋದ್ರಿ? ಏನಾದ್ರೂ ಪ್ರಾಬ್ಲೆಮ್ಮಾ ಮೇಡಂ?". "ಇಲ್ಲ ರಾಜು ಏನ್ ಪ್ರಾಬ್ಲಮ್ ಇಲ್ಲ, ಮನೆಗೆ ಬೇಗ ಹೋಗಬೇಕಿತ್ತು ..ಅದು ಹಾಗಿರಲಿ, ನಂಗೆ ಲಿಸ್ಟ್ ಹುಡುಕಿಕೊಡು ಬೇಗ." ಅಂದಳು. ರಾಜು ರೆಜಿಸ್ಟರ್ ತೆಗೆದು ಒಂದು ಪಟ್ಟಿಯನ್ನು ರೆಡಿ ಮಾಡಿ ಅವಳಿಗೆ ಕೊಟ್ಟ.

ಪಾಲ್ ನ ನೋಡಲು ಬಂದವರು ಯಾರು ?

(ಅಂತಿಮ ಭಾಗ ನಾಳೆ ಪ್ರಕಟವಾಗಲಿದೆ , ನಿಮ್ಮ ಅನಸಿಕೆಪ್ರೋತ್ಸಾಹವೇ ನನಗೆ ಸ್ಪೂರ್ತಿ)

3 comments:

Shanth said...

Fluent read and an nteresting story line and ..waiting for the next part.. my guess:her boy friend :) ?

Rags said...

sakat thrillingu.. :)

ಅಶ್ವಿನಿ/Ashwini said...

@Shanth: Thank you.. and wait to know if you hav guessed it right!

@Rags: hmmm loved your comment. Thx..

Check!

LinkWithin

Related Posts Plugin for WordPress, Blogger...