ಒಂದು ಜೋಡಿ - ಕಾರ್ಪೋರೇಟ್ ದುನಿಯಾ! - ಭಾಗ ೧

ಈ ಧಾರಾವಾಹಿಯ ಎಲ್ಲಾ ಕಂತುಗಳು ಕೇವಲ ಕಾಲ್ಪನಿಕ.ಇದರಲ್ಲಿ ಬರುವ ಪಾತ್ರಗಳು ಸನ್ನಿವೇಶಗಳು ಕೇವಲ ಕಾಲ್ಪನಿಕ.

ಅಂದು ಮಾಮೂಲಿನಂತೆ ಕ್ರಿಶನ್ ನೊಂದಿಗೆ ಸ್ವಾತಿ ಕೆಲಸ ಮುಗಿಸಿ ಹೊರಟಿದ್ದಳು. ಸಂಜೆ  7 ಆಗಿತ್ತು. ಕಾರ್ನಲ್ಲಿ  ಸ್ಟೇರಿಂಗ್  ಹಿಡಿದು  ಇಂಜಿನ್ ಸ್ಟಾರ್ಟ್ ಮಾಡಿ ಒಂದೆರಡು ಕಿಲೋಮೀಟರು ಹೋಗಿದ್ದರು. ರೇಡಿಯೋದಲ್ಲಿ ಅದ್ಯಾವನೋ ಒಬ್ಬಕೇಳುಗಾರಕ ನಿದ್ದೆ ಬರೋ ಹಾಡನ್ನು ರಿಕ್ವೆಸ್ಟ್ ಮಾಡಿದ್ದ. ವೂಯ್  ವೂಯ್ ಅಂತ ಹಾಡು ಪ್ರಾರಂಭ ಆಯಿತು. ಸ್ವಾತಿ  ರೇಡಿಯೋ  ಸೌಂಡನ್ನು  ಕಡಿಮೆ ಮಾಡಿ ಕ್ರಿಶನ್ ಕಡೆ ತಿರುಗಿದಳು.

ಸ್ವಾತಿ: ಕ್ರಿಶನ್ ಇವತ್ತು ಪೂರ್ತಿ ದಿನ ಬೋರಿಂಗ್ ಆಗಿತ್ತು. ಅದೇ ಮೊನೋಟನಸ್ ಕೆಲಸ ಮಾಡಿ ಮಾಡಿ ಸಾಕಾಗಿದೆ ನಂಗೆ.

ಕ್ರಿಶನ್: ಹೇ ಅದೇನು ಹೊಸದಲ್ಲ ಬಿಡು. ನೀನು ಒಂದು ತಿಂಗಳಿಂದ ಹೀಗೆ ಹೇಳ್ತಾ ಇದ್ದೀಯ. ಐ.ಟಿ. ಇಂಡಸ್ಟ್ರಿ ಅಲ್ಲಿ ಇರುವವರ ಹಣೆ ಬರಹನೇ ಇದು. ಅದೇ ರಾಗ ಅದೇ ತಾಳ .

ಸ್ವಾತಿ: ಹ್ಞೂ ಕಣೋ. ನೀನು ಹೇಳ್ತಾ ಇರೋದ್ರಲ್ಲೂ ಸತ್ಯ ಇದೆ. ಆದ್ರೆ ಇವತ್ತು ಸ್ವಲ್ಪ ವಿಪರೀತಾನೆ ಅಂತಿಟ್ಕೋ.

ಕ್ರಿಶನ್: ಅಯ್ಯೋ ಡಿಯರ್.. ಎನಾಯಿತು .. ಚಿಯರ್ ಅಪ್! ಇದು ಈ ಕಾರ್ಪೋರೇಟ್ ಲೈಫ್ ನಲ್ಲಿ ಸಹಜ ಕಣೆ. ಯಾವಾಗ್ಲೂ ಒಳ್ಳೆ ಕೆಲಸ ಮಾಡೋಕ್ಕೆ ಸಿಗೋದಿಲ್ಲ. ನಂದೇ ನೋಡು ಒ೦ದೂವರೆ ವರ್ಷದಿಂದ ಒಂದು ಪ್ರೊಮೋಷನ್ ಸಿಕ್ಕಿಲ್ಲ. ಕತ್ತೆ ತರಹ ದುಡೀತಾ ಇದ್ದೀನಿ. ಯಾರಿಗೆ ಬೇಕು ಅನ್ಸತ್ತೆ, ಆದರು ಗತಿ ಇಲ್ಲ. ಮಾಡ್ತಾ ಇದ್ದೀನಿ.

ಸ್ವಾತಿ: ಹ್ಞೂ!

ರೇಡಿಯೋ ದಲ್ಲಿ ಹೊಸ ಚಲನಚಿತ್ರದ ಒಂದು ಗೀತೆ "ರೋಡಿಗಿಳಿ ರಾಧಿಕ" ಬರೋಕೆ ಶುರು ಆಯಿತು.  ಕ್ರಿಶನ್ ಸ್ವಾತಿ ಇಬ್ಬರು ಒಮ್ಮೆಲೆ ಒಬ್ಬರನೊಬ್ಬರು ನೋಡಿ ನಕ್ಕರು .

ಕ್ರಿಶನ್: ಸ್ವಲ್ಪ ದಿನ ಹೋದ್ರೆ ಎಲ್ಲರೂ ರೋಡಿಗೆ ಇಳಿಯೋದು ಗ್ಯಾರಂಟೀ.

ಸ್ವಾತಿ: ಹ ಹ ಹಾ. ರೈಟ್. ಹೇ ಕ್ರಿಶನ್ ಅಡಿಗೆ ಮಾಡೋ ಮೂಡಿಲ್ಲ. ಊಟಕ್ಕೆ ಹೊರಗೆ ಎಲ್ಲಾದರು ಹೋಗೋಣ್ವಾ ?

ಕ್ರಿಶನ್: ಮನೆಯ ಫ್ರಿಡ್ಜ್ ನಲ್ಲಿ ಬೆಳಿಗ್ಗೆ ಮಾಡಿಟ್ಟಿರೋ ಸಾಂಬಾರ್ ಇದ್ಯಲ್ಲ, ಅದನ್ನ ಏನ್ ಮಾಡೋಣ. ಸುಮ್ನೆ ವೇಸ್ಟ್ ಆಗತ್ತಲ್ಲಾ?.

ಸ್ವಾತಿ: ನಾಳೆ ಅದನ್ನ ಬೆಳಿಗ್ಗೆ ಬ್ರೇಕ್ ಫಾಸ್ಟ್ ಗೆ ಉಪಯೋಗಿಸೋಣ. ಹಾಳೇನು ಆಗೋದಿಲ್ಲ ಅದು.

ಕ್ರಿಶನ್: ಓಕೆ ಸರಿ ಯಾವ ರೆಸ್ಟೋರಂಟ್? "ಕಪ್ಪಾನೂಡಲ್ಸ್" ಗೆ ಹೋಗೋಣ್ವಾ?

ಸ್ವಾತಿ: ಅಯ್ಯೋ ಚೈನೀಸ್ ಈ ರಾತ್ರಿಗೆ? ಹೌ ಅಬೌಟ್ "ಲೋಫ್ ಆಫ್ ಕ್ರಿಸ್ಪ್ಸ್"?

ಕ್ರಿಶನ್: ಹ್ಞೂ ಓಕೆ, ಇಟಾಲಿಯನ್ ಅಲ್ವ ಅಲ್ಲಿ. ಐ ಅಂ ಫೈನ್ ವಿಥ್ ಇಟ್.

ಕ್ರಿಶನ್ ಗಾಡಿಯನ್ನ ಬೆಟ್ಟದಹಳ್ಳಿ ಕಡೆ ತಿರುಗಿಸಿದ. ಪೊಂ ಪೊಂ ಕಾರುಗಳ ಹೊರ್ನ್, ವ್ರೂಂ ಅಂತ ಹೋಗುತಿದ್ದ ಬೈಕ್ ಗಳ ಸದ್ದು, ಗಡ ಗಡ ಅಂತಿದ್ದ ಆಟೋ ರಿಕ್ಷಾಗಳು, ಇವುಗಳನೆಲ್ಲಾ ದಾಟಿಕೊಂಡು ಲೋಫ್ ಆಫ್ ಕ್ರಿಸ್ಪ್ಸ್ ಮುಟ್ಟುವಷ್ಟರಲ್ಲಿ 8:25 pm ಆಗಿತ್ತು.

ಮುಂದಿನ ಸ೦ಚಿಕೆಯಲ್ಲಿ ...

3 comments:

Ranjana's craft blog said...

waiting for the next part

Jack said...

Ashwini,

Unfair. Translation please.

Take care

ಅಶ್ವಿನಿ/ Ashwini said...

@Ranjana : Next part is out.. Thanks for stopping by,.

@jack: OOps this time its a serial story in Kannada. You will have to bear with me for a set of posts till I come back with something in English. Soooo Sorry can't translate the entire serial. Its a story about a couple.

Journey of Love: Chapter 8: Love in Full Bloom

As the train neared Bangalore, Arjun and Latha found themselves lost in each other's gaze, their hearts overflowing with love and gratit...