ಒಂದು ಜೋಡಿ - ಕೊನೆಯಲ್ಲಿ ! ಭಾಗ ೭

ಈ ಫ್ಲಾಶ್ ಬ್ಯಾಕ್ ನೆನಪಾಗುವಷ್ಟರಲ್ಲಿ ಸ್ವಾತಿಯ ಕೈಯನ್ನು ಚಿಕ್ಕ ಮಗುವಿನ ಹಾಗೆ ಹಿಡಿದು ತನ್ನ ತಲೆಯನ್ನು ಅವಳ ಮೇಲೆ ಇಟ್ಟು ಮಲಗಿದ್ದ ಕ್ರಿಶ್. ರಾತ್ರಿ ಬಹಳ ಆಗಿತ್ತು, ನಿದಿರೆ ಕಣ್ಣಿಗೆ ಹತ್ತಿತ್ತು  ಅವಳು ಅಲ್ಲೇ ಮುದುಡಿ ಮಲಗಿದಳು. ಮರುದಿನ ಬೆಳಿಗ್ಗೆ ಎಂದಿನಂತೆ ಇಬ್ಬರು ಆಫೀಸಿಗೆ ಹೊರಡಲು ತಯಾರಿ ನಡೆಸುತಿದ್ದರೂ, ಆಗ ಮೇಜಿನ ಮೇಲಿದ್ದ ಕ್ರಿಶನ್ ಫೋನಿಗೆ ಒಂದು ಎಸ್.ಎಂ.ಎಸ್ ಬಂತು .

ಕ್ರಿಶನ್ : "ಸ್ವಾತಿ ನೋಡು ನನ್ನ ಮೊಬೈಲಿಗೆ ಯಾರು ಮೆಸೇಜ್ ಮಾಡಿದ್ದು ಅಂತ ."

ಸ್ವಾತಿ : "ಒಹ್  ಪ್ರಭವ್  ಮೆಸೇಜ್ ಮಾಡಿರೋದು . "ಪ್ರಿಯ ಇಸ್ ಹೋಸ್ಪಿಟಲೈಸಡ್ . ಶೀ ಇಸ್ ಸೀರಿಯಸ್. ಪ್ಲೀಸ್ ಕಂ ಟು ಸಾನ್ವಿ ಹೋಸ್ಪಿಟಲ್ ." ಎಂದು ಓದುತ್ತ ನಡುಗಿದಳು .

ಕ್ರಿಶನ್ : "ವಾಟ್ ? ಪ್ರಿಯ .. ಹೋಸ್ಪಿಟಲ್ .. ಸೀರಿಯಸ್ . ಏನ್ ಹೇಳ್ತಾ ಇದ್ದೀಯ ?"

ಸ್ವಾತಿ : " ಕ್ರಿಶ್ ಗಾಡಿ ತೆಗಿರಿ ಮೊದಲು ಅಲ್ಲಿಗೆ ಹೋಗೋಣ .. ಆಮೇಲೆ ಏನು ಅಂತ ವಿಚಾರಿಸೋಣ ."

ಕ್ರಿಶನ್ : " ಸರಿ ನಡಿ ".

...........
ಆಸ್ಪತ್ರೆಯಲ್ಲಿ :

ಪ್ರಭವ್: " ಸ್ವಾತಿ ನೀವು ? ಕ್ರಿಶನ್ .."

ಸ್ವಾತಿ : " ಪ್ರಿಯ ಎಲ್ಲಿದ್ದಾಳೆ ? ವಾಟ್ ಹಪ್ಪೆಂಡ್?"

ಕ್ರಿಶನ್ ಮಾತಾಡುವ ಸ್ತಿತಿಯಲ್ಲಿರಲಿಲ್ಲ .

2 comments:

Anonymous said...

too many consecutive posts in kannada :(

ಅಶ್ವಿನಿ/ Ashwini said...

@Anonymous: I know.. But this is a story - series. I finish it up with the final post today. So you can wait for something fresh in the upcoming posts.

LinkWithin

Related Posts Plugin for WordPress, Blogger...