ರಕ್ತ ಕಥೆ !

ರಕ್ತ ತುಂಬಿದ ಕೈಯ ಕಂಡು
ಹೆದರಿ ಬೆವರಿ ನಿಂತುಕೊಂಡು
ಮಾಡಲೇನ೦ದು ತೋಚದೆ
ಕುಸಿದು ಜಾರಿ ಬಿದ್ದೆ

ಪಣವ ಗೆಲ್ಲಲು ಹೊರಟು
ಮಾರ್ಗದ ಮಧ್ಯದಲಿ ಬೆರಗಾಗಿ ನಿಂತು
ಒಲ್ಲೆ ಇದ ನಾ ಮಾಡಲೊಲ್ಲೆ
ಎಂದು ಕಿರುಚಿದೆ

ಕೇಳಲು ಕಿವಿ ಇದ್ದರೂ
ಕೇಳಿಸದ೦ತೆ ಮರೆಯಾಗಿವೆ
ಪರಿಚಿತ ಆದರೂ
ಅಪರಿಚತನಾಗಿ ನಿ೦ತಿಹೆ

ವರ್ಷಗಳುರುಡಿ
ಹೊಸ ಎಲೆ ಚಿಗುರಿ
ಪ್ರಸಿದ್ದಿ ನನ್ನರಸಿ ಬಂದಿದೆ
ವೈದ್ಯ ವೃತ್ತಿ ಜೀವನ ಹುಟ್ಟಿದೆ

( ಒಬ್ಬ ವೈದ್ಯನಾಗುವ ಹಾದಿಯಲ್ಲಿ ಅನುಭವಿಸಿದ ಪರಿಸ್ಥಿತಿಯ ವರ್ಣಿಸಲು ಯತಿನಿಸಿರುವೆ )

- ಅಶ್ವಿನಿ

No comments:

Check!

LinkWithin

Related Posts Plugin for WordPress, Blogger...