ಆಸೆಯ ಭರವಸೆ!

ಆಸೆಯ ಭರವಸೆ ...

ಅದೊಂದು ದಿನ ಕಚೇರಿಗೆ ಬಂದವಳೇ ಎಂದಿನಂತೆ ನನ್ನ ಸೀಟಿನಲ್ಲಿರೋ ಕ೦ಪ್ಯುಟರ್ಗೆ ಲಾಗಿನ್ ಆದೆ. ಏನಪ್ಪಾ ಇವತ್ತು ಕೆಲಸ ಎಂದು ಯೋಚಿಸುತ್ತಾ, ಹಾಗೆ ಮೇಲ್ ಬಾಕ್ಸ್ ನಲ್ಲಿ ಸ್ಕ್ರೋಲ್ ಮಾಡೋಕ್ಕೆ ಶುರು ಮಾಡ್ದೆ. ನಮ್ಮ ಆನ್ ಶೋರ್ ಲೀಡ್ ಏನ್ ಕೆಲಸ ಕಳ್ಸಿದ್ದಾರಪ್ಪ ಅಂತ ಅವ್ರ ಹೆಸರಿಂದ ಬಂದ ಮೇಲ್ ಗಳನೆಲ್ಲ ಹುಡುಕಿ ಓದಿ ಆಯಿತು. ಇನ್ನು ಕೆಲಸ ಪ್ರಾರಂಭ ಮಾಡಬೇಕು ಅನ್ನೋಷ್ಟರಲ್ಲಿ ಸಹ ಉದ್ಯೋಗಿ ಒಬ್ಬರಿಂದ ಬಂತು ನೋಡ್ರಿ ಒಂದು ಪುಟ್ಟ ಕವನದ ಸಾಲುಗಳು. ಈ - ಮೇಲ್ಸನ ಯುಗದ ಕವಿ ಘೋಷ್ಠಿ ಅಂದ್ರೆ ಇದೆ ಇರ್ಬೇಕು ನೋಡ್ರಿ :). ಈಕಡೆ ಇಂದ ನನ್ನ ಉತ್ತರ , ಆಕಡೆ ಇಂದ ಅವರ ಲೌಕಿಕ ಜ್ಞಾನ ಭಂಡಾರದ ಮಹಾಪೂರ .

ಸಹೋದ್ಯೋಗಿಕವಿ ಸಾಹೇಬರು:
ಮುಸ್ಸಂಜೆ ಯಾಗಿರಲು ಕಾರ್ಮೋಡ ಕವಿದಿರಲು ಅಲಲ್ಲಿ ಇಣುಕುತಿತ್ತು ಮಳೆಯ ಹನಿಯು
ಬೀಸೋ ಗಾಳಿ ತಂಗಾಳಿಯಾಗಿ ಹೊತ್ತು ತರಲು ಹಳೆಯ ನೆನಪ, ಮೌನದಿ ಪುಳಕಿತ ನನ್ನೀ ಮನ
ಮಾತು ಮೌನಗಳ ನಡುವೆ ಎದುಸಿರು ಬಿಡುವ ಬದುಕ ಪಯಣದಲಿ.. ಬಣ್ಣ
ಕಳೆದುಕೊಂಡು ಹಣ್ಣಾದ ಬಿಸಿಲಿಗೂ ಸಿಕ್ಕಿದೆ ಮುಗಿಲನೋಕುಳಿಯ ಈ ಮಳೆಯ ತಂಪು
ಭೂಮಿ ಸ್ಪರ್ಶದಿ ಬರುವ ಕಂಪು ಕುಣಿವ ಹನಿಯ ಗೆಜ್ಜೆಯ ಇ೦ಪು
ಬಿಸಿಲ ಮಳೆಯು ನಗುವ ಅಳುವು ಹನಿಯ ಸ್ಪರ್ಶದಿ ಮೊಳಕೆ ಒಡೆದು ಬೆಳೆಯುವ ಎಳೆಯ ಚಿಗುರು ಕೀಳಲೆತ್ನಿಸಿದೆ ನೋವಿನ ಮುಳು ಆಗಸದಲಿ ಮೂಡಿಸುತ ಕಾಮನಬಿಲ್ಲು

ನನ್ನುತ್ತರ:
ಮುತ್ತು ರತ್ನಗಳ೦ತಿರುವ ಈ ನಿನ್ನ ಸಾಲುಗಳು ಅದೆಷ್ಟು ಸತ್ಯ ಎಂದು ಯೋಚಿಸಲು ಹೊರಟೆ
ಸುಳಿಯಿತು ಅದೇ ಕಾರ್ಮೋಡದ ಕತ್ತಲು ನನ್ನ ಕಣ್ಣ ಮುಂದೆ
ಎಲ್ಲ ಬರಿ ತೊದಲು, ಸವಿ ಸವಿ ನೆನಪುಗಳು ಕಾಣಿಸಿತೆ ಹೊರತು
ಈಗ ಸಧ್ಯಕ್ಕೆ ಉತ್ತರ ಬದುಕು ತಿಳಿಸಿದ್ದು -- ಶೂನ್ಯ ಬರಿ ಶೂನ್ಯ ಈ ಜಗತ್ತು :-)

ಸಹೋದ್ಯೋಗಿಕವಿ ಸಾಹೇಬರು:
ಸತ್ಯ ಸತ್ಯ ನೀ ಹೇಳೋ ಮಾತು ಸತ್ಯ ....
ಮಿಥ್ಯ ಮಿಥ್ಯ ನಾವು ಕಾಣೋ ಕನಸು ಮಿಥ್ಯ ....
ಆದರೆ ಬದುಕಲು ಕಲಿಸುವುದು ಈ ಕನಸುಗಳು - ನಿನಗಿದು ಗೊತ್ತ ?

ನನ್ನುತ್ತರ:
ಸತ್ಯವೋ ಮಿಥ್ಯವೋ ನಾನರಿಯೇನೋ ಸ್ವಾಮಿ
ರೆಪ್ಪೆ ಬಿಚ್ಚಿ ಹುಡುಕಿದರೂ ಸಿಗುವುದಿಲ್ಲ ಈ ಭೂಮಿಯಲಿ ಒಬ್ಬ ಒಳ್ಳೆ ಅಸಾಮಿ,
ಆಕಡೆ ಈಕಡೆ ಎಲ್ಲಾ ಕಡೆ ತುಂಬಿ ತುಳುಕಾಡುತ್ತಿದ್ದಾರೆ ಲೋಕದ ಹರಾಮಿ
ಇದಕ್ಕೇನು ಹೇಳುವೆ ನೀ ಮಹಾ ಸ್ವಾಮೀ ?

ಸಹೋದ್ಯೋಗಿಕವಿ ಸಾಹೇಬರು:
ಹುಡುಕುವೆ ಏಕೆ ಅಲ್ಲಿ ಇಲ್ಲಿ
ಇರಲೊಳನೆ ಒಳ್ಳೆ ಮನಸ್ಸು ನಿನ್ನಲ್ಲಿ
ಕೊಚ್ಚು ನೀ ನಿನ್ನ ಕೆಲಸದಲ್ಲಿ ಅಡಗಿರುವ ಆ ಹರಾಮಿ
ಇದನರಿತರೆ ಸೊಗಸಾಗುವುದಿಲ್ಲವೇ ಈ ನಮ್ಮ ಭೂಮಿ
ಇದೆ ನನ್ನ ಉತ್ತರ ಮಹಾ ಸ್ವಾಮೀ

ನನ್ನುತ್ತರ:
ಅದೇನೋ ಸರಿ ಗುರುವೆ
ಒಮ್ಮೆ ಇಣುಕಿ ನೋಡುವೆ
ನನ್ನ ಮನದಾಳದಲ್ಲಿ ಬಚ್ಚಿಟ್ಟಿರೋ ನನ್ನ ಪುಟ್ಟ ಮನದೊಳಗೆ
ಕಹಿ ನೆನಪನೆಲ್ಲ ಹಿಂದೆ ಬಿಟ್ಟು ಚಿತ್ತದ ಆಸೆಯೆಡೆಗೆ ಹಾರುವೆ,
ಕಾದು ನೋಡುವೆ ... ಸಂಭ್ರಮವೆಲ್ಲಿದೆ..ಅಲ್ಲಿಗೇ ಸಾಗುವೆ..
ಓ ದೇವನೇ ಸುರಿಸುವೆಯ ನೀ ಅಲ್ಲಿ ಸಂತಸದ ಮಹಾಪೂರವೇ ???
................... ಕಾಯುತಿರವೆ ಆ ದಿನಕೆ ...

ಸಹೋದ್ಯೋಗಿಕವಿ ಸಾಹೇಬರು:
ಏನೇ ಆಗಲಿ ಸಾಗು ನೀ ಮು೦ದೆ
ಉಳಿಯಲಿ ಕಹಿ ನೆನಪು ನಿನ್ನ ಹಿಂದೆ
ಮರಿಯಬೇಡ ಕಲಿತ ಅನುಭವ ಅ೦ದೆ
ತೋರಿಸುವುದು ಜೀವನ ದಾರಿ ನಿನ್ನ ಮುಂದೆ


... ಅಂದಿನಿಂದ ಯೋಚನಾಮಗ್ನಳಾಗಿರುವೆ... ಅರ್ಥ ಹುಡುಕುತ
ಇನ್ನೆಷ್ಟು ದಿನಗಳುರುಡಬೇಕೋ ತಿಳಿಯದಾಗಿದೆ ನನ್ನ ಮನಕೆ....
ಸದಾ ಕಾಯುವೆ ಆ ಬೆಳಕ ಕಿರಣದ ಒಂದು ರೆಖೆಗಾಗಿ
ರೆಕ್ಕೆಯ ಗರಿಯ ಬಿಚ್ಚಿ ನನ್ನ ಕನಸ ಲೋಕಕೆ ಹಾರಲು
ನನ್ನ ಮನದಾಸೆಯನು ಮುಟ್ಟಲು..

ರಕ್ಷಿಸೆಂದು ಬೆಡುವೆ
ದಾರಿದೀಪವಾಗೆಂದು ಕೇಳಿಕೊ೦ಬುವೆ
ಹರಿಸು ನೀ ನನ್ನ
ಕೈಯ ಮುಗಿಯುವೆ ನಾ ನನ್ನ
ಓ ! ದೇವ ಇಗೋ ನಿನಗೆ ನನ್ನರ್ಪಣೆ.


ದೈನಿಕ ಕೆಲಸದ ಮಧ್ಯದಲ್ಲಿ ಇಂತಹದೊಂದು ಪುಟ್ಟ ಕವಿತೆಯ ಚಕಮಿಕಿ ನನ್ನ ಸ್ಪೂರ್ಥಿಯನೆತ್ತಿ ಹಿಡಿಯಿತು. ನಿಮ್ಮ ಮಧ್ಯೆ ಕೂಡ ಈ ತರಹದ ಜ್ಞಾನಿಯೋಬ್ಬರಿರಬಹುದು.ನಿಮ್ಮ ಚಿಂತೆಯ ದೂರ ಮಾಡಲು ಕಾಯುತ್ತಿರಬಹುದು. ಸರಿ ಹಾದಿಯೆಡೆಗೆ ನಡೆಸಬಹುದು. ಹುಡುಕುವಿರ ಆ ಆಸೆಯ ಭರವಸೆಯ?

No comments:

Journey of Love: Chapter 8: Love in Full Bloom

As the train neared Bangalore, Arjun and Latha found themselves lost in each other's gaze, their hearts overflowing with love and gratit...