ಮಳೆ ಹನಿ...

ಉರಿಬಿಸಿಲ ಬೇಗೆಯನು ತಡೆಯಲು
ಮಳೆ ಹನಿಯು ಚೆಲ್ಲಿದೆ
ಕಾದಿರುವ ಭೂಮಿಯ ಸ್ಪರ್ಶಿಸಲು
ಮಣ್ಣ ಸುವಾಸನೆಯು ಎಲ್ಲೆಲ್ಲೂ ಬೀರಿದೆ

ಇಂತಹ ಮೈತಣಿಸುವ ಸಮಯ
ಕದ ತೆರೆದು ಹೊರ ಹೋಗುವ ಹಂಬಲ
ಓಕುಳಿಯ ಪನ್ನೀರಲಿ ಮೈಮರೆತು ಕುಣಿದಾಡಿ
ಜಿಗಿದು ನನ್ನದೇ ರಾಗದಿ ಹಾಡಿ

ಕೈಯಲ್ಲೊಂದು ಪುಸ್ತಕ ಹಿಡಿದು
ಪಕ್ಕದಿ ಬಿಸಿ ಬಿಸಿ ತಿನಿಸು ಸವಿಯಲು
ಪ್ರಪಂಚವೇ ನನ್ನದೆ೦ದು ಭಾವಿಸಿ
ಕಥೆಯಲ್ಲಿ ಸ೦ಪೂರ್ಣ ತಲ್ಲೀನವಾಗಿ........

ಒಂದು ಮಳೆ ಹನಿ ಕಂಡಾಗ ಮನದಿ
ಹರಿದ ಸಾಲುಗಳ
ಹಾಗೆ ಇಲ್ಲಿ ಅಚ್ಚಿಳಿಸಿರುವೆ.

ಬಯಕೆ ಹಲವಾರು ಮೂಡಿಸಿದೆ ಈ ಪುಟ್ಟ ಮಳೆ ಹನಿ.

-ಅಶ್ವಿನಿ

No comments:

Check!

LinkWithin

Related Posts Plugin for WordPress, Blogger...