ಏನ್ಮಾಡಲಿ?

ಮುತ್ತು ರತ್ನ ವಜ್ರ ವೈಢೂರ್ಯ
ನಾಚಿದವು ಕಂಡು ನಿನ್ನೀ ಸರಳ ಸೌಂದರ್ಯ
ಚೆಂದದ ಗೆಳತಿ ತಿಳಿಸುವೆಯಾ
ಏನಿದರ ಗುಟ್ಟಿನ ಒಳ ರಹಸ್ಯ

ಕನ್ನಡಿಯೇ ಬಾಗಿಲ೦ಚಲಿ ಮರೆಯಾಗಿ ನಿಂತಿದೆ
ಪ್ರಜ್ವಲಿಸುತ್ತಿರುವ ನಿನ್ನೀ ಮಿ೦ಚಿನ ನೋಟದಿಂದ
ಅದರಲ್ಲೇನಿದೆ ಆಶ್ಚರ್ಯವೆಂದು ಕೇಳುವೆಯ ಗೆಳೆಯ
ತಿಳಿಯದಾಗಿದೆ ಹೇಗೆ ಪಾಡಲಿ ಮೆಚ್ಚುಗೆಯ ಸಾಲ

ಅರಳಿದೀ ಸೊಗಸಾದ ಮೊಗದಿ
ಏಕೋ ಹುಸಿ ಮುನಿಸು ಮೂಡಿ ಬಂದಿದೆ
ಅರಿಯಲಾಗದೆ ಒಗಟಾಗೆ ಉಳಿದಿದೆ
ಎಲ್ಲಾ ಪ್ರಶ್ನೆಗಳಾಗಿ ಮನದಲಿ

ಆದರೇನಂತೆ, ತುಟಿಯಂಚಿನ ಅ ತುಂಟ ಕಿರುನಗೆ
ಕರೆಯುತಿದೆ ನಿನ್ನೆಡೆಗೆ
ಬರಲೇ? ಇಲ್ಲೇ ಬೆರಗಾಗಿ ನಿಲ್ಲಲೇ?
ಏನ್ಮಾಡಲಿ ಏನ್ಮಾಡಲಿ ಏನ್ಮಾಡಲಿ?

- ಅಶ್ವಿನಿ

No comments:

Check!

LinkWithin

Related Posts Plugin for WordPress, Blogger...