ಕಾದಿರುವೆ!

ಹಾಡಿನ ಪದದಲಿ ಮೂಡಿದೆ ಒಲವು
ಇಣುಕಿದೆ ಮನದಲಿ ತಿಳಿಯದೆ ಛಲವು

ಬರಲೇ ಎಂದೆ ಧೈರ್ಯದಿ ನಾನು
ಬೇಡ ಎನುತ ಸರಿದಳು ಬಾನು

ಹಾಡು ನಿಂತಿತು, ಸ್ಫೂರ್ತಿ ಇಂಗಿತು
ಆದರು ಮನ ಕರಗಲಿಲ್ಲವೇ ಚೆಲುವೆ ?

ಹಗಲಿರುಳು ನಿನದೆ ಚಿಂತೆ
ನಿನಗಾಗಿ ಕಾಯುವ ಕೆಲಸವಾಗಿದೆ ನನಗೆ

ಮಳೆ ಹನಿಯ ಅರಿವಿಲ್ಲ
ಸುಡುಬಿಸಿಲ ಪರಿವಿಲ್ಲ

ಹಸಿರು ಮರದ ಮೇಲೊಂದು ಚಿನ್ನದ ಗರಿ ಕಂಡ ಹಾಗೆ
ನೀ ನಿಂತೆ ನನ್ನ ಎದೆಯ ಬಾಗಿಲ ಮೇಲೆ

ಕಾರ್ಮೋಡ ಸುರಿದು ನೀರಾದ ಹಾಗೆ
ಇಂಪಿನ ಕಂಪನು ಸೂಸಿದ ಹಾಗೆ

ಎಲ್ಲವ ಮರೆತು ನೀ ಬರುವೆಯಾ ?
ಗೆಳತಿ ನೀ ಬಂದು, ಇನಿಯ ಎಂದು ಹಾಡುವೆಯಾ?


Gist: An attempt to describe a man's wait for his loved one through these few lines.
Just a random thought..

5 comments:

Sahana Rao said...

Wonderful poem Ashwini. How well the feelings are depicted! Loved reading it :)

Rags said...

Beautiful.. :) loved this part "ಹಸಿರು ಮರದ ಮೇಲೊಂದು ಚಿನ್ನದ ಗರಿ ಕಂಡ ಹಾಗೆ
ನೀ ನಿಂತೆ ನನ್ನ ಎದೆಯ ಬಾಗಿಲ ಮೇಲೆ"
na yargadruve heege baribeku ansdaaga bartini nin hatra.. ;-)

ಗಿರೀಶ್.ಎಸ್ said...

Superb !!!

ಕನಸು ಕಂಗಳ ಹುಡುಗ said...

ಚನ್ನಾಗಿದೇರಿ ಕವನ....

ಚಿನ್ನದ ಗರಿ ಕಂಡ ಹಾಗೆ..!!!!

ಚಂದದ ಕಲ್ಪನೆ...

ಅಶ್ವಿನಿ/ Ashwini said...

@Sahana: Thanks so much! I just gave a try. It turned out well I guess.

@Rags:Thank you Thank you:) Sure I'd help out.. ha ha ha ha.

@ ಗಿರೀಶ್.ಎಸ್ :)

@ಕನಸು ಕಂಗಳ ಹುಡುಗ : Welcome to my space! and glad you liked these lines.Keep visiting.

Rain or shine ~ Poem

  In rain or shine, through every test, A bird of courage, it does its best. With feathers wet or under sun's shine, It never falters, a...