Skip to main content

Posts

Showing posts from December, 2009
ನನಗನ್ನಿಸಿದ್ದು ! ೧೦ - ೧೫ ವರ್ಷಗಳ ಹಿಂದೆ ಒಮ್ಮೆ ಇಣುಕಿ ನೋಡಿ, ಹಬ್ಬ ಹರೆದಿನ ಬಂದರೆ ಸಾಕು ಎಲ್ಲಿಲ್ಲದ ಸಂತಸ ಸಂಭ್ರಮ ನಮ್ಮಲ್ಲಿ ಇರುತ್ತಿತ್ತು , ಹೊಸ ಬಟ್ಟೆ , ಬಗೆ ಬಗೆಯಾದ ತಿಂಡಿ ತಿನಿಸುಗಳು .. ಅಹಾ! ಒಂದು ಕ್ಷಣದಲ್ಲಿ ಶಾಲೆಗೆ ಹೋಗುತ್ತಿದ್ದ ದಿನಗಳು ನೆನಪಿಗೆ ಬಂತು , ಹಬ್ಬ ಅಂದ್ರೆ ಶಾಲೆಗೆ ರಜ , ಹೋಂ ವರ್ಕ್ ಇಲ್ಲ ಅನ್ನೋ ಖುಷಿ ,ದಿನವಿಡಿ ಮಜಾ ಮಾಡಬಹುದಿತ್ತು ..ಎಲ್ಲಿಗೆ ಹೋಗ್ಬಿಟ್ರಿ? ವಾಸ್ತವಕ್ಕೆ ಬನ್ನಿ .. ಈಗೆಲ್ಲಿದೆ ಅದಕ್ಕೆಲ್ಲ ಸಮಯ , ಬೆಳಿಗ್ಗೆ ಆದ್ರೆ ಮನೆಯಿಂದ ಕಚೇರಿಗೆ ತಲ್ಪೋಷ್ಟರಲ್ಲಿ ಸಾಕ್ಬೇಕಾಗಿರುತ್ತೆ , ದಿನ ಪೂರ್ತಿ ಕಚೇರಿ ಕೆಲಸ, ಮತ್ತೆ ಮನೆಗೆ ಬಂದು ಬಿದ್ಕೊಂಡ್ರೆ ಸಾಕು ಅನ್ನೋ ಪರಿಸ್ಥಿತಿ , ರಜೆ ಬಂದರೂ ಪ್ರೊಡಕ್ಷನ್ ಪ್ರಾಬ್ಲಮ್ ಅಂತ ಕೂರಬೇಕು! ಕನ್ನಡ ರಾಜ್ಯೋತ್ಸವ ಬಂದ್ರೆ ಶಾಲೆಯಲ್ಲಿ ಕನಿಷ್ಠ ಪಕ್ಷ ಒಂದು ತಿಂಗಳು ಕನ್ನಡಕ್ಕೆ ,ಕರ್ನಾಟಕಕ್ಕೆ ಸಂಬಂಧಿಸಿದ ಹಾಗೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು ..ಈಗೆಲ್ಲ ಶಾಲೆಯಲ್ಲಿ ಮಕ್ಕಳಿಗೆ ಕನ್ನಡದಲ್ಲಿ ಮಾತನಾಡಿದರೆ ಪುನಿಷ್ಮೆಂಟ್ ಕೊಡ್ತೀವಿ ಅಂತ ಶಿಕ್ಷಕರು ಹೆದರಿಸಿ ಕೂರಿಸ್ತಾರೆ .. ಪಾಪ ಮಕ್ಕಳು ತಾನೆ ಏನ್ ಮಾಡ್ತಾವೆ ಹೇಳಿ ಇಂಗ್ಲಿಷ್ ನಲ್ಲೆ ಸಂಭಾಷಣೆ , ಮನೆಗೆ ಬಂದ್ರೆ ಇಂಗ್ಲಿಷ್ ಕಾರ್ಯಕ್ರಮಗಳನ್ನ ದೂರದರ್ಶನದಲ್ಲಿ ನೋಡ್ತಾವೆ. ಬೇರೆ ಹಲವಾರು ಮಾಧ್ಯಮಗಳಿಂದ ಮಕ್ಕಳು ಪ್ರಭಾವಿತರಾಗಿದ್ದಾರೆ . ಹೀಗೆ ಮುಂದುವರಿದರೆ ಕನ್ನಡದ ಸವಿ ನುಡಿಗಳನ್ನ ಕ...